Vande Bharat Express: ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ಆರಂಭ ಯಾವಾಗ.?

Vande Bharat Express Train: ಬಹುನಿರೀಕ್ಷಿತ ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಯಾವಾಗಿನಿಂದ ಆರಂಭ ಆಗಲಿದೆ ಎಂದು ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ.

ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಎರಡು ತಿಂಗಳೊಳಗೆ ಕಾರ್ಯಾಚರಣೆ ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ನೈಋತ್ಯ ರೈಲ್ವೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ವ್ಯವಸ್ಥಾಪಕ ನೈನಿ ಶ್ರೀ ರಂಗನಾಥ ರೆಡ್ಡಿ ಅವರು ಕರ್ನಾಟಕ-ಕೇರಳ ಟ್ರಾವೆಲರ್ಸ್ ಫೋರಂನೊಂದಿಗಿನ ಸಭೆಯಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ಎಂದು ತಿಳಿದುಬಂದಿದೆ.

When will Ernakulam-Bengaluru Vande Bharat Express train operation

ಇನ್ನು ಯಶವಂತಪುರ ರೈಲು ನಿಲ್ದಾಣದಲ್ಲಿ ಮುಂಬರುವ ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆ ಯಶವಂತಪುರ-ಕೊಚುವೇಲಿ ನಡುವೆ ಗರೀಬ್ ರಥ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಇದಕ್ಕೆ ಪ್ರಯಾಣಿಕರಿಂದ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಶ್ರೀ ರಂಗನಾಥ ರೆಡ್ಡಿ ಅವರು, ಚಿಕ್ಕಬಾಣಾವರ ಅಥವಾ ಬಾಣಸವಾಡಿಯಿಂದ ಈ ರೈಲು ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ವಾರದ ಆರಂಭದಲ್ಲಿ ಸಂಸದ ಈಡನ್ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಎರ್ನಾಕುಲಂ-ಬೆಂಗಳೂರು ಮಾರ್ಗದಲ್ಲಿ ಬಹುಕಾಲದ ಬೇಡಿಕೆಯ ವಂದೇ ಭಾರತ್ ರೈಲು ಸೇವೆ ಮತ್ತು ಪೊನ್ನುರುನ್ನಿಯಲ್ಲಿ 100 ಹೆಕ್ಟೇರ್‌ನಲ್ಲಿ ಉಳಿದಿರುವ ರೈಲ್ವೆ ಭೂಮಿಯಲ್ಲಿ ಬೃಹತ್‌ ರೈಲ್ವೆ ಟರ್ಮಿನಲ್ ಸ್ಥಾಪನೆಯ ಕುರಿತು ಚರ್ಚೆ ನಡೆಸಿದರು.

ಬೆಂಗಳೂರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಪರಿಚಯವು ಕೇರಳದ ಪ್ರಯಾಣಿಕರಿಗೆ ಪ್ರಯಾಣದ ಸವಾಲುಗಳನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ಕಳೆದ ವರ್ಷ ಕೇರಳಕ್ಕೆ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ರವಾನಿಸಿದ್ದರೂ, ಈ ರೈಲುಗಳು ಪ್ರಸ್ತುತ ರಾಜ್ಯದ ಹೊರಗಡೆ ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ, ಎರ್ನಾಕುಲಂ ಜಂಕ್ಷನ್-ಎರ್ನಾಕುಲಂ ಟೌನ್ ರೈಲು ನಿಲ್ದಾಣಗಳಲ್ಲಿ ದಟ್ಟಣೆಯನ್ನು ನಿಯಂತ್ರಿಸಲು ಟರ್ಮಿನಲ್ ಅತ್ಯಗತ್ಯವಾಗಿದೆ.

ರೈಲು ಮಾರ್ಗ ಬದಲಾವಣೆ: ಸಾಮಾನ್ಯವಾಗಳಿ ಹಳಿ ಅಳವಡಿಕೆ ಸೇರಿದಂತೆ ರೈಲ್ವೆಗೆ ಸಂಬಂಧಿಸಿದ ಇನ್ನಿತರೆ ಕಾಮಗಾರಿಗಳು ನಡೆಯುವ ಮಾರ್ಗಗಳಲ್ಲಿ ರೈಲು ಸಂಚಾರ ಕೆಲವು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತದೆ ಅಥವಾ ಮಾರ್ಗಗಳನ್ನು ಬದಲಾಯಿಸಲಾಗುತ್ತದೆ. ಹಾಗೆಯೇ ಇದೀಗ ರೈಲ್ವೆ ಕಾಮಗಾರಿ ಹಿನ್ನೆಲೆ ಎರ್ಕಾಕುಲಂ-ಬೆಂಗಳೂರು ನಡುವೆ ಸಂಚಾರ ನಡೆಸುವ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲಿನ ಮಾರ್ಗ ಬದಲಾವಣೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಂಪೂರ್ಣ ವಿವರ ಇಲ್ಲಿದೆ ತಿಳಿಯಿರಿ.

ಇನ್ನು ಈ ಕುರಿತುಮಾ ಹಿತಿ ನೀಡಿರುವ ನೈರುತ್ಯ ರೈಲ್ವೆ ವಲಯ, ಸೇಲಂ ವಿಭಾಗದಲ್ಲಿ ಸುರಕ್ಷತೆ ಸಂಬಂಧಿತ ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆ ದಕ್ಷಿಣ ರೈಲ್ವೇ ಇಂಟರ್‌ಸಿಟಿ ಮಾರ್ಗ ಬದಲಾವಣೆ ಮಾಡಿ ಬದಲಿ ಮಾರ್ಗ ಹಾಗೂ ವೇಳಾಪಟ್ಟಿಯನ್ನು ನೀಡಿದೆ ಎಂದು ತಿಳಿಸಿದೆ.

ಎರ್ನಾಕುಲಂ-ಬೆಂಗಳೂರು ಇಂಟರ್‌ಸಿಟಿ: ರೈಲು ಸಂಖ್ಯೆ 12678 ಎರ್ನಾಕುಲಂ-ಕೆಎಸ್‌ಆರ್ ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಜುಲೈ 4, 6, 7, 9, 10, 11, 13, 14, 15, 16, 17, 18, 20, 21, 22, 23, 24, 25, 27, 28 ಹಾಗೂ 30ರಂದು ಎರ್ನಾಕುಲಂನಿಂದ ಬಿಡಲಿದ್ದು, ಪೊದನೂರು ಜಂಕ್ಷನ್, ಇರುಗೂರ್ ಮತ್ತು ಸುರತ್ಕಲ್ ನಿಲ್ದಾಣಗಳ ಮೂಲಕ ಹೋಗುತ್ತದೆ. ಈ ಮಾರ್ಗದಲ್ಲಿ ಕೊಯಮತ್ತೂರು ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ. ಪೋದನೂರು ಜಂಕ್ಷನ್‌ನಲ್ಲಿ ಹೆಚ್ಚುವರಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ರೈಲು ಸಂಖ್ಯೆ 12677 ಕೆಎಸ್‌ಆರ್‌ ಬೆಂಗಳೂರು-ಎರ್ನಾಕುಲಂ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಜುಲೈ 7, 8, 10, 14, 15, 17, 21, 22, 24 ಹಾಗೂ 28ರಂದು ಕೆಎಸ್‌ಆರ್‌ ಬೆಂಗಳೂರಿನಿಂದ ಹೊರಡಲಿದ್ದು, ಇರುಗೂರ್, ಪೊದನೂರ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಕೊಯಮತ್ತೂರು ನಿಲ್ದಾಣಕ್ಕೆ ಹೋಗುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+