Independence Day: ಸ್ವಾತಂತ್ರ್ಯ ದಿನದ ದೀರ್ಘ ವಾರಾಂತ್ಯ - ಬೆಂಗಳೂರಿಗೆ ಸಮೀಪದ ಈ ಸುಂದರ ಸ್ಥಳಗಳಿಗೆ ಭೇಟಿ ನೀಡಿ

ಈ ಬಾರಿಯ ಸ್ವಾತಂತ್ರ ದಿನವು ದೀರ್ಘ ವಾರಾಂತ್ಯದೊಂದಿಗೆ ಬಂದಿದೆ. ಆಗಸ್ಟ್‌ 14ರ ಸೋಮವಾರದಂದು ರಜೆ ತೆಗೆದುಕೊಂಡರೆ, ಒಟ್ಟು ನಾಲ್ಕು ರಜಾದಿನಗಳಾಗುತ್ತವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ವಾರಾಂತ್ಯದ ವಿಹಾರಕ್ಕೆ ಭೇಟಿ ನೀಡಲು ಕೆಲವು ಅತ್ಯುತ್ತಮ ಸ್ಥಳಗಳು ಇಲ್ಲಿವೆ.

ನಂದಿ ಬೆಟ್ಟ ( ನಂದಿ ಹಿಲ್ಸ್‌ )

ನೀವು ಬೆಂಗಳೂರಿನಿಂದ ವಾರಾಂತ್ಯದ ವಿಹಾರಕ್ಕೆ ಯೋಜಿಸುತ್ತಿದ್ದರೆ, ನಂದಿ ಹಿಲ್ಸ್ ಅತ್ಯತ್ತಮ ಸ್ಥಳವಾಗಿದೆ. ಈ ತಾಣವು ಪ್ರವಾಸಿಗರು ಮತ್ತು ನಗರದ ನಿವಾಸಿಗಳಿಗೆ ಅಚ್ಚುಮೆಚ್ಚಿನ ಜಾಗವಾಗಿದೆ. ಇಲ್ಲಿ ನೀವು ಅತ್ಯುತ್ತಮ ಜಾಗಗಳನ್ನು ನೀಡಬಹುದು. ಪಕ್ಷಿಗಳನ್ನು ವೀಕ್ಷಿಸಬಹುದು. ಕ್ಯಾಂಪಿಂಗ್ ಮತ್ತು ಟ್ರೆಕ್ಕಿಂಗ್‌ ಆಯ್ಕೆಗಳು ಇಲ್ಲಿವೆ.

Weekend Getaways: Independence Day Long Weekend- Visit These Beautiful Places Near Bangalore

ಶಿವನಸಮುದ್ರ ಜಲಪಾತ

ನೀವು ವಾರಾಂತ್ಯದ ವಿಹಾರವನ್ನು ಆನಂದಿಸಲು ಬಯಸಿದರೆ ಇದು ಭೇಟಿ ನೀಡಲೇಬೇಕಾದ ಸ್ಥಳಗಳಲ್ಲಿ ಒಂದಾಗಿದೆ. ಇದರ ಶಾಂತಿಯುತ ವಾತಾವರಣ ಮತ್ತು ಸಂಪೂರ್ಣ ಸೌಂದರ್ಯವು ನಿಮ್ಮನ್ನು ಖಂಡಿತವಾಗಿಯೂ ಸೆಳೆಯುತ್ತದೆ. ಇದು 320 ಅಡಿ ಎತ್ತರದಿಂದ ಧುಮ್ಮಿಕ್ಕುವ ದೇಶದ ಎರಡನೇ ಅತಿ ದೊಡ್ಡ ಜಲಪಾತವಾಗಿದೆ. ಇಲ್ಲಿ ಭೋರ್ಗರೆದು ದುಮ್ಮಿಕ್ಕಿವ ಜಲಪಾತವನ್ನು ನೋಡಬಹುದು.

ಕಬಿನಿ ಜಲಾಶಯ

ನೀವು ವನ್ಯಜೀವಿ ಪ್ರೇಮಿಯಾಗಿದ್ದರೆ, ಪ್ರಕೃತಿಯ ನಡುವೆ ಸ್ವಲ್ಪ ಸಮಯವನ್ನು ಕಳೆಯಲು ಬಯಸಿದರೆ, ಕಬಿನಿಯು ನಿಮ್ಮ ಸುಲಭವಾದ ಆಯ್ಕೆಯಾಗಿದೆ. ಕಬಿನಿಯು ಕರ್ನಾಟಕದ ಜನಪ್ರಿಯ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಈ ಸ್ಥಳವು ಬೆಂಗಳೂರಿಗೆ ಸಮೀಪದಲ್ಲಿದೆ. ಆದ್ದರಿಂದ, ಇದು ವಾರಾಂತ್ಯಕ್ಕೆ ಭೇಟಿ ನೀಡಬೇಕಾದ ಅತ್ಯುತ್ತಮ ಸ್ಥಳವಾಗಿದೆ. ಅಲ್ಲಿ ಸೂರ್ಯಾಸ್ತ, ಹಿನ್ನೀರಿನ ವೀಕ್ಷಣೆ ಮತ್ತು ಕಪಿಲಾ ನದಿಯಲ್ಲಿ ಬೋಟಿಂಗ್ ಮಾಡಬಹುದು.

Weekend Getaways: Independence Day Long Weekend- Visit These Beautiful Places Near Bangalore

ಚಿಕ್ಕಮಗಳೂರು

ಇದು ಕರ್ನಾಟಕದ ಜನಪ್ರಿಯ ಗಿರಿಧಾಮವಾಗಿದೆ. ಇದು ಮುಳ್ಳಯ್ಯನಗಿರಿ ಶಿಖರದ ತಪ್ಪಲಿನಲ್ಲಿದೆ. ಉಷ್ಣವಲಯದ ಕಾಡುಗಳಿಂದ ಆವೃತವಾಗಿರುವ ಚಿಕ್ಕಮಗಳೂರಿನಲ್ಲಿ ವರ್ಷಪೂರ್ತಿ ಆಹ್ಲಾದಕರ ಹವಾಮಾನ ಇರುತ್ತದೆ. ಇದರ ಹೊರತಾಗಿ, ನೀವು ಅನೇಕ ಸೌಂದರ್ಯಯುತ ಜಾಗಗಳನ್ನು ಇಲ್ಲಿ ವೀಕ್ಷಿಸಬಹುದು. ಉತ್ತಮ ತಿಂಡಿ ತಿನಿಸುಗಳು, ನಿಮ್ಮನ್ನು ರಿಫ್ರೆಶ್ ಮಾಡುತ್ತವೆ.

ಮಡಿಕೇರಿ ( ಕೊಡಗು )

ಇದು ದಕ್ಷಿಣ ಭಾರತದ ಅತ್ಯಂತ ಸುಂದರವಾದ ಗಿರಿಧಾಮಗಳಲ್ಲಿ ಒಂದಾಗಿದೆ. ಇದು ಪಶ್ಚಿಮ ಘಟ್ಟಗಳಿಂದ ಕೂಡಿದೆ. ಇದು ಆಹ್ಲಾದಕರ ಹವಾಮಾನಕ್ಕೆ ಹೆಸರುವಾಸಿಯಾಗಿದೆ. ವಾರಾಂತ್ಯದಲ್ಲಿ ನಿಮ್ಮ ಸ್ನೇಹಿತರು ಅಥವಾ ಕುಟುಂಬದೊಂದಿಗೆ ವಿಶ್ರಾಂತಿ ಪಡೆಯಲು ಮಡಿಕೇರಿ ಸೂಕ್ತ ಸ್ಥಳವಾಗಿದೆ. ಇದನ್ನು ಭಾರತದ ಸ್ಕಾಟ್ಲೆಂಡ್ ಎಂದು ಕರೆಯುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+