Vande Bharat; ಧಾರವಾಡ-ಬೆಳಗಾವಿ ಸಂಪರ್ಕಕ್ಕೆ ಬಸ್, ವೇಳಾಪಟ್ಟಿ, ದರ

ಧಾರವಾಡ, ಜುಲೈ 04; ಕರ್ನಾಟಕದ 2ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ಸಂಚಾರ ಆರಂಭಿಸಿದೆ. ಈ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿದೆ. ಆದರೆ ಈ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಈ ರೈಲು ವಿಸ್ತರಣೆ ನಿರೀಕ್ಷೆ ಮಾಡಬಹುದು.

ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (NWKRTC) ಸಂಸ್ಥೆ ಧಾರವಾಡ-ಬೆಳಗಾವಿ ಸಂಪರ್ಕಿಸಲು ಐಷಾರಾಮಿ ರಾಜಹಂಸ ಬಸ್‌ ಓಡಿಸಲಿದೆ. ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲಿನಲ್ಲಿ ಸಂಚಾರ ನಡೆಸಯವ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ಬಸ್‌ ಸಂಚಾರ ಆರಂಭಿಸಲಾಗಿದೆ.

Vande Bharat NWKRTC Rajahamsa Bus To Connect Dharwad Belagavi Schedule Fare

ಜೂನ್ 30ರಿಂದ ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಹುಬ್ಬಳ್ಳಿ ರೈಲು ನಿಲ್ದಾಣ ಮತ್ತು ಬೆಳಗಾವಿ ನಡುವೆ ಐಷಾರಾಮಿ ಬಸ್ ಸೇವೆಯನ್ನು ಆರಂಭಿಸಿತ್ತು. ಈ ನೂತನ ವೋಲ್ವೊ ಬಸ್‌ನ ಪ್ರಯಾಣ ದರ 180 ರೂ.ಗಳು. ಈಗ ಇದೇ ಮಾದರಿಯಲ್ಲಿ ಧಾರವಾಡ ಮತ್ತು ಬೆಳಗಾವಿ ನಡುವೆ ಬಸ್ ಸಂಚಾರ ಆರಂಭಿಸಿದೆ.

ವೇಳಾಪಟ್ಟಿ ಮತ್ತು ದರದ ಮಾಹಿತಿ; ಧಾರವಾಡ ರೈಲು ನಿಲ್ದಾಣ ಮತ್ತು ಬೆಳಗಾವಿ ಸಂಪರ್ಕಿಸುವ ರಾಜಹಂಸ ಬಸ್ ಬೆಳಗಾವಿಯಿಂದ ಬೆಳಗ್ಗೆ 11.20ಕ್ಕೆ ಹೊರಟು, 12.50ಕ್ಕೆ ಧಾರವಾಡ ತಲುಪಲಿದೆ. ಧಾರವಾಡ ರೈಲು ನಿಲ್ದಾಣದಿಂದ ಮಧ್ಯಾಹ್ನ 12.25ಕ್ಕೆ ಹೊರಟು, 1.55ಕ್ಕೆ ಬೆಳಗಾವಿಗೆ ತಲುಪಲಿದೆ. ಈ ಬಸ್‌ನ ಪ್ರಯಾಣ ದರ 135 ರೂ.ಗಳು ಎಂದು ನಿಗದಿ ಮಾಡಲಾಗಿದೆ.

ಹುಬ್ಬಳ್ಳಿ ರೈಲು ನಿಲ್ದಾಣ ಮತ್ತು ಬೆಳಗಾವಿ ನಡುವಿನ ವೋಲ್ವೊ ಬಸ್ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಮಧ್ಯಾಹ್ನ 12.30ಕ್ಕೆ ಹೊರಟು 2.20ಕ್ಕೆ ಬೆಳಗಾವಿಗೆ ತಲುಪಲಿದೆ. ಬೆಳಗಾವಿಯಿಂದ 11.15ಕ್ಕೆ ಹೊರಡುವ ಬಸ್, 1.15ಕ್ಕೆ ಹುಬ್ಬಳ್ಳಿಗೆ ತಲುಪಲಿದೆ. ಈ ಮೂಲಕ ಬಸ್ ಹುಬ್ಬಳ್ಳಿ ರೈಲು ನಿಲ್ದಾಣ ಮತ್ತು ಬೆಳಗಾವಿಯನ್ನು ಸಂಪರ್ಕಿಸಲಿದೆ.

ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ವಂದೇ ಭಾರತ್ ರೈಲು ಕೇವಲ 5 ಗಂಟೆ 45 ನಿಮಿಷದಲ್ಲಿ ಹುಬ್ಬಳ್ಳಿಗೆ ತಲುಪಲಿದೆ. ಬೆಂಗಳೂರಿನ ಕೆಎಸ್ಆರ್‌ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲಿಗೆ ಯಶವಂತಪುರ, ದಾವಣಗೆರೆ, ಹುಬ್ಬಳ್ಳಿಯಲ್ಲಿ ಮಾತ್ರ ನಿಲುಗಡೆ ಇದೆ.

ಬೆಂಗಳೂರು-ಧಾರವಾಡ ನಡುವೆ ರೈಲು ನಂಬರ್ 20661 ಸಂಚಾರ ನಡೆಸುತ್ತದೆ. ಮಂಗಳವಾರ ಹೊರತುಪಡಿಸಿ ವಾರದ ಉಳಿದ ದಿನ ರೈಲು ಓಡಲಿದೆ. ಕೆಎಸ್ಆರ್‌ ಬೆಂಗಳೂರು ರೈಲು ನಿಲ್ದಾಣದಿಂದ ಬೆಳಗ್ಗೆ 5.45ಕ್ಕೆ ಹೊರಡುವ ರೈಲು, 5.55ಕ್ಕೆ ಯಶವಂತಪುರ ತಲುಪಲಿದೆ. ದಾವಣಗೆರೆಗೆ 9.15ಕ್ಕೆ ತಲುಪಿ, 11.30ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ. 12.10ಕ್ಕೆ ಧಾರವಾಡ ರೈಲು ನಿಲ್ದಾಣ ತಲುಪಲಿದೆ.

ಧಾರವಾಡ-ಬೆಂಗಳೂರು ನಡುವಿನ ವಂದೇ ಭಾರತ್ ರೈಲು ಧಾರವಾಡ ನಿಲ್ದಾಣದಿಂದ ಮಧ್ಯಾಹ್ನ 1.15ಕ್ಕೆ ಹೊರಡಲಿದೆ. 1.35ಕ್ಕೆ ಹುಬ್ಬಳ್ಳಿ, 3.38ಕ್ಕೆ ದಾವಣಗೆರೆ ಮತ್ತು ರಾತ್ರಿ 7.13ಕ್ಕೆ ಯಶವಂತಪುರಕ್ಕೆ ಆಗಮಿಸಲಿದೆ. 7.45ಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ.

ಧಾರವಾಡ ರೈಲು ನಿಲ್ದಾಣ ಮತ್ತು ಬೆಳಗಾವಿ ನಡುವಿನ ರಾಜಹಂಸ ಬಸ್. ಬೆಳಗಾವಿಯಿಂದ ಬೆಳಗ್ಗೆ 11.20ಕ್ಕೆ ಹೊರಟು, 12.50ಕ್ಕೆ ಧಾರವಾಡ ತಲುಪಲಿದೆ. ಬೆಂಗಳೂರಿಗೆ ಹೋಗುವ ಪ್ರಯಾಣಿಕರು 1.15ಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹಿಡಿಯಲು ಇದು ಸಹಾಯಕವಾಗಿದೆ. ಧಾರವಾಡ ರೈಲು ನಿಲ್ದಾಣದಿಂದ ಮಧ್ಯಾಹ್ನ 12.25ಕ್ಕೆ ಹೊರಡುವ ರಾಜಹಂಸ ಬಸ್ 1.55ಕ್ಕೆ ಬೆಳಗಾವಿಗೆ ತಲುಪಲಿದೆ. 12.10ಕ್ಕೆ ಧಾರವಾಡಕ್ಕೆ ಬರುವ ಪ್ರಯಾಣಿಕರು ಬೆಳಗಾವಿಗೆ ಹೋಗಲು ರಾಜಹಂಸ ಬಸ್ ಏರಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+