Vande Bharat Train: ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ವೇಳಾಪಟ್ಟಿ ಪರಿಷ್ಕರಣೆ

ಬೆಂಗಳೂರು, ಸೆಪ್ಟೆಂಬರ್ 25: ನೈಋತ್ಯ ರೈಲ್ವೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ ಮತ್ತು ಮಹಾರಾಷ್ಟ್ರ ರಾಜ್ಯದ ಪುಣೆ ನಡುವೆ ಸಂಚಾರ ನಡೆಸುವ ವಂದೇ ಭಾರತ್ ರೈಲು ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಕೆಲವು ದಿನಗಳ ಹಿಂದೆ ಈ ರೈಲು ಸಂಚಾರಕ್ಕೆ ಚಾಲನೆ ಸಿಕ್ಕಿದ್ದು, ವಾರದಲ್ಲಿ ಮೂರು ದಿನಗಳ ಕಾಲ ಈ ರೈಲು ಸಂಚಾರ ನಡೆಸುತ್ತಿದೆ. ಹುಬ್ಬಳ್ಳಿಯಿಂದ ಸಂಚಾರ ನಡೆಸುವ 2ನೇ ವಂದೇ ಭಾರತ್ ರೈಲು ಸೇವೆ ಇದಾಗಿದೆ.

ನೈಋತ್ಯ ರೈಲ್ವೆ ಪ್ರಕಟಣೆ ಮೂಲಕ ಈ ಕುರಿತು ಮಾಹಿತಿ ನೀಡಿದೆ. ಭಾರತೀಯ ರೈಲ್ವೆಯು ಹುಬ್ಬಳ್ಳಿ-ಪುಣೆ ನಡುವೆ ಕೇಸರಿ ಬಣ್ಣದ ರೈಲು ಸಂಚಾರವನ್ನು ನಡೆಸುತ್ತಿದೆ. ಈಗ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ.

Vande Bharat Express Train Between Hubballi And Pune Schedule Revised

ವೇಳಾಪಟ್ಟಿ ಪರಿಷ್ಕರಣೆ: ಬೆಳಗಾವಿ ಮತ್ತು ಧಾರವಾಡದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದೆ.

* ರೈಲು ಸಂಖ್ಯೆ 20670 ಪುಣೆ-ಎಸ್‌ಎಸ್‌ಎಸ್‌ ಹುಬ್ಬಳ್ಳಿ ಟ್ರೈ-ವೀಕ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬೆಳಗಾವಿ ಮತ್ತು ಧಾರವಾಡ ನಿಲ್ದಾಣಗಳಲ್ಲಿ ಅಕ್ಟೋಬರ್ 3 ರಿಂದ ಜಾರಿಗೆ ಬರುವಂತೆ ಪರಿಷ್ಕರಣೆ ಮಾಡಲಾಗಿದೆ. ಪರಿಷ್ಕೃತ ಸಮಯಗಳು ಕೆಳಗಿನಂತಿವೆ.

* ಈ ರೈಲು ಬೆಳಗಾವಿಗೆ ರಾತ್ರಿ 8:35/ 8:40 ಗಂಟೆಯ ಬದಲು ರಾತ್ರಿ 8:15/ 8:20 ಗಂಟೆಗೆ ಆಗಮಿಸಿ/ ನಿರ್ಗಮಿಸಲಿದೆ. ಮತ್ತು ಧಾರವಾಡ ನಿಲ್ದಾಣಕ್ಕೆ ರಾತ್ರಿ 10:20/ 10:22 ಗಂಟೆಯ ಬದಲು ರಾತ್ರಿ 10:13/ 10:15 ಗಂಟೆಗೆ ಆಗಮಿಸಿ/ ನಿರ್ಗಮಿಸುತ್ತದೆ ಎಂದು ಮಾಹಿತಿ ನೀಡಲಾಗಿದೆ.

ಸದ್ಯ ಸಂಚಾರ ನಡೆಸುತ್ತಿರುವ ಹುಬ್ಬಳ್ಳಿ-ಪುಣೆ ನಡುವಿನ ವಂದೇ ಭಾರತ್ ರೈಲು ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ, ಸತಾರಾ ಮತ್ತು ಪುಣೆಯಲ್ಲಿ ನಿಲುಗಡೆ ಹೊಂದಿದೆ. ರೈಲಿನ ವೇಳಾಪಟ್ಟಿ ಮತ್ತು ಇತರ ನಿಲ್ದಾಣಗಳ ಆಗಮನ/ ನಿರ್ಗಮನದಲ್ಲಿ ಯಾವುದೇ ಬದಲಾವಣೆ ಇಲ್ಲ.

ರೈಲಿನ ವೇಳಾಪಟ್ಟಿ ಪ್ರಕಾರ ಹುಬ್ಬಳ್ಳಿ-ಪುಣೆ (ರೈಲು ನಂಬರ್ 20669) ವಾರದಲ್ಲಿ 3 ಬಾರಿ (ಬುಧವಾರ, ಶುಕ್ರವಾರ ಹಾಗೂ ರವಿವಾರ) ಮತ್ತು ಪುಣೆ-ಹುಬ್ಬಳ್ಳಿ (ರೈಲು ನಂಬರ್ 20670) ಮೂರು ಬಾರಿ (ಗುರುವಾರ, ಶನಿವಾರ ಮತ್ತು ಸೋಮವಾರ) ಸಂಚಾರವನ್ನು ನಡೆಸುತ್ತಿದೆ.

ವಿಶೇಷ ರೈಲು ಸೇವೆ ರದ್ದು: ಎರ್ನಾಕುಲಂ-ಯಲಹಂಕ ನಡುವೆ ವಿಶೇಷ ರೈಲು ಸೇವೆ ರದ್ದು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ. ಪ್ರಯಾಣಿಕರ ಕೊರತೆಯ ಸಲುವಾಗಿ ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ಹೇಳಿದೆ.

ರೈಲು ಸಂಖ್ಯೆ 06101/ 06102 ಎರ್ನಾಕುಲಂ-ಯಲಹಂಕ-ಎರ್ನಾಕುಲಂ ಟೈ-ವೀಕ್ಲಿ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲುಗಳ ಮೂರು ಟ್ರಿಪ್‌ಗಳನ್ನು ರದ್ದುಪಡಿಸಲಾಗಿದೆ.

* ರೈಲು ಸಂಖ್ಯೆ 06101 ಎರ್ನಾಕುಲಂ-ಯಲಹಂಕ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್‌ ಸ್ಪೆಷಲ್ ರೈಲನ್ನು ಸೆಪ್ಟೆಂಬರ್ 25, 27 ಮತ್ತು 29, 2024ರಂದು ಓಡಿಸಲು ಮೊದಲೇ ಸೂಚಿಸಲಾಗಿತ್ತು. ಈಗ ಅದನ್ನು ರದ್ದುಗೊಳಿಸಲಾಗಿದೆ.

* ರೈಲು ಸಂಖ್ಯೆ 06102 ಯಲಹಂಕ-ಎರ್ನಾಕುಲಂ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್‌ ಸ್ಪೆಷಲ್ ರೈಲನ್ನು ಸೆಪ್ಟೆಂಬರ್ 26, 28 ಮತ್ತು 30, 2024ರಂದು ಓಡಿಸಲು ಮೊದಲೇ ಸೂಚಿಸಲಾಗಿತ್ತು, ಇದನ್ನು ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+