ಧಾರವಾಡ-ಬೆಂಗಳೂರು ವಂದೇ ಭಾರತ್‌ ರೈಲಿನ ಮೇಲೆ ಯುವಕರಿಗೆ ಬಲು ಪ್ರೀತಿ, ಯಾಕೆ ಗೊತ್ತಾ?

ಹುಬ್ಬಳ್ಳಿ, ಅಕ್ಟೋಬರ್‌, 27: ವಂದೇ ಭಾರತ್‌ ರೈಲು ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಪಡೆಯುತ್ತಲೇ ಇದೆ. ಹಾಗೆಯೇ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಐಷಾರಾಮಿ ರೈಲಿಗೆ ಬೇಡಿಕೆ ಸಹ ಹೆಚ್ಚಾಗಿದೆ.

ಈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಯುವಕರ ಅಚ್ಚುಮೆಚ್ಚಿನ ಆಯ್ಕೆಯಾಗಿ ಹೊರ ಹೊಮ್ಮಿದ್ದು, ಅದರಲ್ಲೂ ಐಟಿ ಬಿಟಿ ಹಾಗೂ ಸರ್ಕಾರಿ, ಅರೆ ಸರ್ಕಾರಿ ನೌಕರಸ್ಥ ಯುವಕರಿಂದ ಬಹುಬೇಡಿಕೆ ಬಂದಿದೆ. ಧಾರವಾಡ-ಬೆಂಗಳೂರು ವಂದೇ ಭಾರತ್‌ ರೈಲಿನಲ್ಲಿ 18-24 ವಯೋಮಿತಿಯ ಯುವಕರು ಶೇಕಡಾ 20ರಷ್ಟು, 25-34 ವರ್ಷ ವಯಸ್ಸಿನ ಯುವಕರು ಶೇಕಡಾ 20ರಷ್ಟು ಹಾಗೂ 35-49 ವರ್ಷ ವಯಸ್ಸಿನ ಪ್ರಯಾಣಿಕರು ಶೇಕಡಾ 30 ರಷ್ಟು ಸಂಚರಿಸುತ್ತಿದ್ದಾರೆ ಎಂಬುದು ಸಮೀಕ್ಷೆಯಲ್ಲಿ ಕಂಡುಬಂದಿದೆ.

vande-bharat-express

ಇದನ್ನು ಗಮನಿಸಿದರೆ ಯುವಕರ ಆದ್ಯತೆಯ ಆಯ್ಕೆಯಾಗಿದೆ ಎಂದು ಸ್ಪಷ್ಟವಾಗುತ್ತದೆ. ಇನ್ನು 25 ರಿಂದ 59 ವಯೋಮಿತಿ ಪ್ರಯಾಣಿಕರು ಶೇಕಡಾ 62ರಷ್ಟು ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರತಿ ಸೀಟ್‌ಗೆ ಟಚ್‌ ಆಧಾರಿತ ರೀಡಿಂಗ್‌ ಲೈಟ್‌ಗಳು, ಸ್ವಯಂಚಾಲಿತ ಪ್ಲಗ್‌ ಬಾಗಿಲುಗಳು, ಪ್ರತಿ ಸೀಟಿಗೆ ಮೊಬೈಲ್‌ ಚಾರ್ಜಿಂಗ್‌ ಸಾಕೆಟ್‌ಗಳು, ಜಿಪಿಎಸ್‌ ಆಧಾರಿತ ಆಡಿಯೋ ವಿಶುವಲ್‌ ವ್ಯವಸ್ಥೆ, ಮನರಂಜನೆಗಾಗಿ ಆನ್ಬೋರ್ಡ್‌ ವೈ-ಫೈ, ಆರಾಮದಾಯಕ ಸೀಟುಗಳನ್ನು ಅಳವಡಿಸಲಾಗಿದೆ.

ಈ ಎಲ್ಲಉತ್ಕೃಷ್ಟ ಸಾರಿಗೆ ಗುಣಮಟ್ಟ ಮತ್ತು ಇತರ ಸೌಕರ್ಯಗಳಿಂದಾಗಿ ಜನಪ್ರಿಯವಾಗಿದೆ. ಇದಲ್ಲದೇ ತ್ವರಿತ ಪ್ರಯಾಣ ಹಾಗೂ ಸಮಯ ಉಳಿತಾಯ ಕೂಡ ಆಗಿದೆ ಎಂದು ವಂದೇ ಭಾರತ್‌ ರೈಲು ಪ್ರಯಾಣಿಕರಾದ ವೈಷ್ಣವಿ, ಚೇತನಾ, ಸಿದ್ದು ಹಾಗೂ ದೇವು ಅಭಿಪ್ರಾಯ ಹಂಚಿಕೆಕೊಂಡರು.

ಇನ್ನು ಇದೇ ಸಮಯದಲ್ಲಿ ಕುಂದಗೋಳ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಆರ್.ಪಾಟೀಲ್ ಅವರು ಸಹ ಸಂತಸ ವ್ಯಕ್ತಪಡಿಸಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಶ್ರಮ ಹಾಗೂ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಹಾಗೂ ರೈಲು ಸಚಿವರ ಪರಿಶ್ರಮದ ಫಲವಾಗಿ ಇಂತಹ ಪ್ರಯಾಣಿಕರ ಸ್ನೇಹಿ ಟ್ರೈನ್ ಆರಂಭ ಮಾಡಲಾಯಿತು ಎಂದರು.

ಐಟಿ ರಾಜಧಾನಿ ಬೆಂಗಳೂರಿಗೆ ತ್ವರಿತವಾಗಿ ಸಂಪರ್ಕಿಸಲು ಈ ರೈಲು ಅವಕಾಶವಾಗಿ ಮಾರ್ಪಟ್ಟಿದೆ. ಇತರ ರೈಲುಗಳಿಗೆ ಹೋಲಿಸಿದರೆ ವಂದೇ ಭಾರತ್‌ ರೈಲು ವೇಗವಾಗಿ ಚಲಿಸಲಿದ್ದು, ದೈನಂದಿನ ಪ್ರಯಾಣಕ್ಕೆ ಸೂಕ್ತವಾಗಿದೆ. ಪ್ರಯಾಣಿಕರಿಗೆ ದಕ್ಷ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣದ ಆಯ್ಕೆಗಳನ್ನು ಒದಗಿಸಲು ನೈರುತ್ಯ ರೈಲ್ವೆ ಬದ್ಧವಾಗಿದೆ ಎಂದು ನೈರುತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಆನೀಶ ಹೆಗಡೆ ತಿಳಿಸಿದರು.

ರೈಲು ಧಾರವಾಡದಿಂದ ಮಧ್ಯಾಹ್ನ 1:15ಕ್ಕೆ ಹೊರಡುತ್ತದೆ. ಹುಬ್ಬಳ್ಳಿ, ದಾವಣಗೆರೆ, ಯಶವಂತಪುರ ನಿಲುಗಡೆಯಾಗುತ್ತದೆ. ಬೆಂಗಳೂರು ನಿಲ್ದಾಣದಿಂದ ಬೆಳಗ್ಗೆ 74:5ಕ್ಕೆ ಸಂಚಾರ ಆರಂಭಿಸುತ್ತದೆ. ಇನ್ನು ಸಹ ಹೆಚ್ಚು ಹೆಚ್ಚು ವಂದೇ ಭಾರತ್ ಟ್ರೇನ್ ಸಹ ಓಡಿಸಬೇಕು ಎಂಬುದು ಸಹ ಪ್ರಯಾಣಿಕರಿಂದ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+