ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸವರ್ಷ ಆಚರಣೆಗೆ ಬೆಂಗಳೂರಿನ ಸುತ್ತಮುತ್ತ ಇರುವ ಟಾಪ್‌ ಪ್ರವಾಸಿ ತಾಣಗಳು, ತಲುಪುವ ಮಾರ್ಗಗಳ ವಿವರ ಇಲ್ಲಿದೆ

|
Google Oneindia Kannada News

ಬೆಂಗಳೂರು, ಡಿಸೆಂಬರ್‌, 19: 2022ರ ಕಾಲಘಟ್ಟ ಮುಗಿಯುವ ಹಂತದಲ್ಲಿದ್ದು, ಇದೀಗ ಎಲ್ಲರ ಚಿತ್ತ 2023ರ ಹೊಸವರ್ಷದ ಕಡೆಗೆ ನೆಟ್ಟಿದೆ. ಹೊಸವರ್ಷ ಸಂಭ್ರಮಾಚರಣೆಗೆ ಇನ್ನು 12 ದಿನ ಬಾಕಿ ಇದೆ. ಆದರೆ ಬೆಂಗಳೂರಿಗರು ಮಾತ್ರ ಈಗಿನಿಂದಲೇ ಪ್ರವಾಸ ಕೈಗೊಳ್ಳಲು ತಯಾರಿ ನಡೆಸುತ್ತಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಸಾಲು ರಜೆಗಳಿರುವ ಕಾರಣ ತಮ್ಮ ಕುಟುಂಬಗಳ ಜೊತೆಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ಲಾನ್‌ ಹಾಕಿಕೊಂಡಿರುತ್ತಾರೆ. ಅಲ್ಲದೇ ಪ್ರವಾಸಿ ತಾಣಗಳಲ್ಲಿ ಹೊಸವರ್ಷ ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಖಾಸಗಿ ಕಂಪನಿಗಳ ಸಿಬ್ಬಂದಿಗಳಿಗೆ ಸಾಲು ರಜೆಗಳಿರುವುದರಿಂದ ಅವರು ಹೊಸವರ್ಷಕ್ಕೆ ಯಾವ ಪ್ರವಾಸಿ ತಾಣಗಳಿಗೆ ಹೋಗುವುದು ಎನ್ನುವ ಗೊಂದಲದಲ್ಲಿ ಇರುತ್ತಾರೆ. ಮತ್ತೊಂದೆಡೆ ಇನ್ನು ಕೆಲವರು ಒಂದು ದಿನದ ಮಟ್ಟಿಗೆ ಪ್ರವಾಸ ಮಾಡಲು ಯಾವ ತಾಣಗಳು ಸೂಕ್ತ ಎನ್ನುವ ಗೊಂದಲದಲ್ಲಿದ್ದಾರೆ.

ಬೆಂಗಳೂರಿನ ಸುತ್ತಮುತ್ತ ಅತ್ಯುತ್ತಮ ಪ್ರವಾಸಿ ತಾಣಗಳು ಇವೆ. ವಾರಾಂತ್ಯದಲ್ಲಿ ಪ್ರವಾಸ ಕೈಗೊಳ್ಳಲು ಉತ್ತಮವಾದ ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ. ಅದರಲ್ಲೂ ಈಗ ಚಳಿ ವಾತಾವರಣ ಇರುವುದರಿಂದ, ಈ ಕಾಲಕ್ಕೆ ಸೂಕ್ತವಾಸ ತಾಣಗಳನ್ನು ಕೂಡ ಬೆಂಗಳೂರಿನ ಸಮೀಪದಲ್ಲಿಯೇ ಕಾಣಬಹುದಾಗಿದೆ. ಕೆಲಸದ ಒತ್ತಡದ ಜಂಜಾಟದ ನಡುವೆ ನೊಂದು ಬೆಂದು ಸಿಬ್ಬಂದಿಗಳು ಸಾಕಾಗಿ ಹೋಗಿರುತ್ತಾರೆ. ಈ ಒತ್ತಡವನ್ನು ನಿವಾರಿಸಲು ಇದು ಒಂದು ಉತ್ತಮ ಅವಕಾಶವಾಗಿದೆ. ಅದರಲ್ಲಿಯೂ ಹೊಸವರ್ಷ ಸಮೀಪಿಸುತ್ತಿರುವಾಗಲೇ ಸಾಲು ರಜೆಗಳು ಬಂದಿವೆ. ಬೆಂಗಳೂರಿಗರಿಗೆ ಇದು ಉತ್ತಮ ಅವಕಾಶವಾಗಿದ್ದು, ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಹೊಸವರ್ಷ ಆಚರಿಸಲು ಕಾತರದಿಂದ ಕಾಯುತ್ತಿದ್ದಾರೆ. ಹಾಗೆಯೇ ಬೆಂಗಳೂರಿನ ಸಮೀಪವಿರುವ ಪ್ರಮುಖ ಪ್ರವಾಸಿ ತಾಣಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ. ಅಲ್ಲದೇ ಬೆಂಗಳೂರಿನಲ್ಲಿಯೇ ಇರುವ ಕೆಲವು ಪ್ರಮುಖ ಪ್ರವಾಸಿ ತಾಣಗಳಲ್ಲಿಯೂ ಹೊಸವರ್ಷವನ್ನು ಆಚರಣೆ ಮಾಡಬಹುದಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿವೆ ಚಳಿಗಾಲಕ್ಕೆ ಸೂಕ್ತ ಪ್ರವಾಸಿ ತಾಣಗಳು, ತಲುಪುವ ಮಾರ್ಗಗಳ ವಿವರ ಇಲ್ಲಿದೆಚಾಮರಾಜನಗರ ಜಿಲ್ಲೆಯಲ್ಲಿವೆ ಚಳಿಗಾಲಕ್ಕೆ ಸೂಕ್ತ ಪ್ರವಾಸಿ ತಾಣಗಳು, ತಲುಪುವ ಮಾರ್ಗಗಳ ವಿವರ ಇಲ್ಲಿದೆ

 ಬೆಂಗಳೂರಿಗರನ್ನು ತನ್ನತ್ತ ಸೆಳೆಯುವ ತಾಣಗಳು

ಬೆಂಗಳೂರಿಗರನ್ನು ತನ್ನತ್ತ ಸೆಳೆಯುವ ತಾಣಗಳು

ಬೆಂಗಳೂರಿನ ಸಮೀಪದಲ್ಲಿ ಪ್ರಸಿದ್ಧ ಗಿರಿಧಾಮಗಳು, ಐತಿಹಾಸಿಕ ಮತ್ತು ಪಾರಂಪರಿಕ ತಾಣಗಳು, ವನ್ಯಜೀವಿ ಅಭಯಾರಣ್ಯಗಳು ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತಲೇ ಇರುತ್ತವೆ. ಇಲ್ಲಿ ಪ್ರವಾಸಿಗರು ವಾರಾಂತ್ಯದ ವಿಹಾರಕ್ಕೆ, ಸುದೀರ್ಘ ರಜೆಗೆ ಸೂಕ್ತವಾದ ಪ್ರವಾಸಿ ತಾಣಗಳನ್ನು ಕಾಣಬಹುದಾಗಿದೆ.
ಪ್ರವಾಸಿಗರು ಭೇಟಿ ನೀಡಬಹುದಾದ ನಗರದ ಸಮೀಪದಲ್ಲಿರುವ ಸ್ಥಳಗಳ ಪಟ್ಟಿ ಇಲ್ಲಿದೆ.

 ಬೆಂಗಳೂರಿನಿಂದ ನಂದಿ ಬೆಟ್ಟಕ್ಕಿರುವ ದೂರ ಎಷ್ಟು?

ಬೆಂಗಳೂರಿನಿಂದ ನಂದಿ ಬೆಟ್ಟಕ್ಕಿರುವ ದೂರ ಎಷ್ಟು?

ಬೆಂಗಳೂರಿನಿಂದ 61 ಕಿಲೋ ಮೀಟರ್‌ ದೂರದಲ್ಲಿರುವ ನಂದಿ ಬೆಟ್ಟ ವಾರಾಂತ್ಯದ ಜನಪ್ರಿಯ ತಾಣವಾಗಿದೆ. ನಂದಿದುರ್ಗ ಎಂದು ಕರೆಯಲ್ಪಡುವ ನಂದಿ ಬೆಟ್ಟವು ಸಮುದ್ರ ಮಟ್ಟದಿಂದ 1,478 ಮೀಟರ್ ಅಂದರೆ 4,850 ಅಡಿಗಳಷ್ಟು ಎತ್ತರದಲ್ಲಿದೆ. ಬೆಂಗಳೂರಿನ ಸಮೀಪದಲ್ಲಿರುವ ಈ ಬೆಟ್ಟವು ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತಲೇ ಇರುತ್ತದೆ. ಯೋಗ ನಂದೀಶ್ವರ ದೇವಾಲಯದ ಹೊರಭಾಗವನ್ನು ಕಾವಲು ಕಾಯುತ್ತಿರುವ ಗೂಳಿ ನಂದಿಯ ಅದ್ಭುತ ಪ್ರತಿಮೆಯಿದೆ. ಆದ್ದರಿಂದ ಈ ಸ್ಥಳಕ್ಕೆ ನಂದಿ ಬೆಟ್ಟ ಎಂದು ಹೆಸರಿಸಲಾಗಿದೆ. ಯೋಗ ನಂದೀಶ್ವರ ದೇವಾಲಯವು ಬೆಟ್ಟಗಳ ಮೇಲೆ ನೆಲೆಗೊಂಡಿದೆ ಮತ್ತು ಶಿವನ ವಾಸಸ್ಥಾನವಾಗಿದೆ.

 ಮಜಾ ನೀಡುವ ದ್ವೀಚಕ್ರ ವಾಹನದ ಪ್ರಯಾಣ

ಮಜಾ ನೀಡುವ ದ್ವೀಚಕ್ರ ವಾಹನದ ಪ್ರಯಾಣ

ನಂದಿ ಬೆಟ್ಟ ಬಳಿ ಯಾವಾಗಲೂ ತಂಪು ಗಾಳಿ ಮತ್ತು ಶಾಂತವಾದ ವಾತವರಣದಿಂದ ಕೂಡಿರುತ್ತದೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರತಿನಿತ್ಯ ಪ್ರವಾಸಿಗರು ಕಿಕ್ಕಿರಿದು ಆಗಮಿಸುತ್ತಲೇ ಇರುತ್ತಾರೆ. ನಂದಿ ಬೆಟ್ಟದಲ್ಲಿನ ಹವಾಮಾನವು ವರ್ಷದುದ್ದಕ್ಕೂ ಮನಸಿಗೆ ನೆಮ್ಮದಿ ನೀಡುವಂತಿರುತ್ತದೆ. ಬೆಳಗ್ಗೆ 5ರಿಂದ 9 ಗಂಟೆಯವರೆಗೂ ಮಂಜು ಮುಸುಕಿದ ವಾತಾವರಣದಿಂದ ಕೂಡಿರುತ್ತದೆ. ಈ ದೃಶ್ಯವನ್ನು ಸವಿಯಲು ಪ್ರತಿನಿತ್ಯ ಸಾವಿರಾರು ಜನ ಭೇಟಿ ನೀಡುತ್ತಲೇ ಇರುತ್ತಾರೆ. ಅದರಲ್ಲೂ ಇಲ್ಲಿಗೆ ದೊಡ್ಡ ವಾಹನಗಳಲ್ಲಿ ಬರುವ ಬದಲಾಗಿ, ದ್ವೀಚಕ್ರ ವಾಹನಗಳಲ್ಲಿ ಪ್ರಯಾಣ ಬೆಳೆಸಿದರೆ ಇನ್ನು ಉತ್ತಮವಾದ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ನಂದಿ ಬೆಟ್ಟದ ವಾಯುವ್ಯದಲ್ಲಿ 4762 ಅಡಿ ಎತ್ತರದ ಚನ್ನಕೇಶವ ಬೆಟ್ಟ, ನೈರುತ್ಯದಲ್ಲಿ 4657 ಅಡಿ ಎತ್ತರದ ಬ್ರಹ್ಮಗಿರಿ, ಉತ್ತರದಲ್ಲಿ 4749 ಅಡಿ ಎತ್ತರದ ಸ್ಕಂದಗಿರಿ ಹೊಸವರ್ಷ ಆಚರಣೆ ಮಾಡಲು ಪ್ರಮುಖ ತಾಣಗಳಾಗಿವೆ.

 ಯೋಗನಂದೀಶ್ವರ ದೇವಸ್ಥಾನಕ್ಕೆ ಹೋಗುವ ಮಾರ್ಗ

ಯೋಗನಂದೀಶ್ವರ ದೇವಸ್ಥಾನಕ್ಕೆ ಹೋಗುವ ಮಾರ್ಗ

ನಂದಿ ಬೆಟ್ಟದೆ ಮೇಲಿರುವ ಯೋಗನಂದೀಶ್ವರ ದೇವಸ್ಥಾನವು ಚೋಳರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಈ ದೇವಾಲಯದ ಗರ್ಭಗೃಹ ಪ್ರವೇಶದ್ವಾರದಲ್ಲಿ ಅಲಂಕಾರಿಕ ಹಿತ್ತಾಳೆಯಿಂದ ಆವೃತವಾದ ಬಾಗಿಲುಗಳು ಮತ್ತು ದ್ವಾರಪಾಲಕರ ಮೂರ್ತಿಗಳು ಎರಡೂ ಬದಿಯಲ್ಲಿವೆ. ಇನ್ನು ಭೋಗನಂದೀಶ್ವರ ದೇವಸ್ಥಾನ ನಂದಿ ಬೆಟ್ಟದ ಸಮೀಪವಿರುವ ನಂದಿ ಗ್ರಾಮ ಎಂಬ ಗ್ರಾಮದಲ್ಲಿದೆ. ಹಾಗೆಯೇ ಟಿಪ್ಪು ಸುಲ್ತಾನ್ ಬಳಸಿದ ಎರಡು ಅಂತಸ್ತಿನ ಸಣ್ಣ ಕಟ್ಟಡದ ಅವಶೇಷಗಳನ್ನು ನಂದಿ ಬೆಟ್ಟದ ಮೇಲೆ ಕಾಣಬಹುದಾಗಿದೆ. ಒಂದು ಕೊಳ ಮತ್ತು ಉದ್ಯಾನವು ಇದ್ದು, ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಕಾತರದಿಂದ ಕಾಯುತ್ತಿರುತ್ತಾರೆ.

 ಫೋಟೋಗ್ರಾಫಿಗೆ ಹೇಳಿ ಮಾಡಿಸಿದ ಪ್ರವಾಸಿ ತಾಣ

ಫೋಟೋಗ್ರಾಫಿಗೆ ಹೇಳಿ ಮಾಡಿಸಿದ ಪ್ರವಾಸಿ ತಾಣ

ವಿಶ್ರಾಂತಿ ಪಡೆಯಲು ಮತ್ತು ಮಕ್ಕಳು ಆಟವಾಡಲು ಉದ್ಯಾನದ ವ್ಯವಸ್ಥೆಯೂ ಇಲ್ಲಿವೆ. ನಂದಿ ಬೆಟ್ಟದ ಮೇಲೆ ಸೂರ್ಯೋದಯವು ಆಕರ್ಷಕವಾಗಿರುತ್ತದೆ. ಪ್ರವಾಸಿಗರು ಬೆಳಗ್ಗೆ 5 ಗಂಟೆ ಸಮಯಕ್ಕೆ ಬಂದರೆ ಸೂರ್ಯೋದಯದ ದೃಶ್ಯವನ್ನು ಸವಿಯಬಹುದಾಗಿದೆ. ನಂದಿ ಬೆಟ್ಟದ ಮೇಲೆ ತಿಂಡಿ ತಿನಿಸುಗಳು ಲಭ್ಯವಿದೆ. ಮತ್ತು ಪ್ರವಾಸಿಗರ ರುಚಿಯ ಅಗತ್ಯಗಳನ್ನು ಪೂರೈಸುತ್ತಾರೆ. ಪ್ರವಾಸಿಗರು ಬೆಟ್ಟದ ಕೆಳಗಡೆ ವಾಹನಗಳ ನಿಲುಗಡೆ ಮಾಡಬೇಕಾಗುತ್ತದೆ. ಕೆಳಗಿನಿಂದ ಬೆಟ್ಟವನ್ನು ತಲುಪಲು ಶಟಲ್ ಬಸ್ಸುಗಳನ್ನು ಪಡೆಯಬಹುದು. ಇಲ್ಲದಿದ್ದರೆ ಮೆಟ್ಟಿಲುಗಳನ್ನು ಏರಿ ಮೇಲಕ್ಕೆ ಸಾಗಬಹುದಾಗಿದೆ. ಬೆಂಗಳೂರಿನಿಂದ ಖಾಸಗಿ ವಾಹನ ಅಥವಾ ಟ್ಯಾಕ್ಸಿಯಲ್ಲಿ ತಲುಪಬಹುದಾಗಿದೆ. ಹಾಗೆಯೇ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನಂದಿ ಬೆಟ್ಟದಿಂದ ಕೇವಲ 34 ಕಿಲೋ ಮೀಟರ್‌ ದೂರದಲ್ಲಿದೆ. ನಂದಿ ಬೆಟ್ಟದಿಂದ 20 ಕಿ.ಮೀ. ದೂರಲ್ಲಿ ಸರ್.ಎಂ.ವಿಶ್ವವೇಶ್ವರಯ್ಯ ಅವರ ಜನ್ಮಸ್ಥಳ ಮುದ್ದೇನಹಳ್ಳಿ, 25 ಕಿ.ಮೀ. ವ್ಯಾಪ್ತಿಯಲ್ಲಿ ದೇವನಹಳ್ಳಿ ಕೋಟೆ, 30 ಕಿ.ಮೀ. ದೂರಲ್ಲಿ ಘಾಟಿ ಸುಬ್ರಮಣ್ಯ ದೇವಸ್ಥಾನ, ಮತ್ತು 15 ಕಿ.ಮೀ. ದೂರದಲ್ಲಿ ಭೋಗನಂದೀಶ್ವರ ದೇವಸ್ಥಾನಕ್ಕೂ ಭೇಟಿ ನೀಡಬಹುದುದಾಗಿದೆ.

 ಜಕ್ಕೂರಿಗೆ ತಲುಪುವ ಮಾರ್ಗದ ವಿವರ

ಜಕ್ಕೂರಿಗೆ ತಲುಪುವ ಮಾರ್ಗದ ವಿವರ

ಬೆಂಗಳೂರಿನಿಂದ ಸುಮಾರು 17 ಕಿಲೋ ಮೀಟರ್‌ ದೂರದಲ್ಲಿರುವ ಜಕ್ಕೂರಿನಲ್ಲಿ ಮೈಕ್ರೋಲೈಟ್ ಹಾರಾಟವನ್ನು ಪ್ರವಾಸಿಗರು ಆನಂದಿಸಬಹುದು. 40,000 ಅಡಿ ಎತ್ತರಕ್ಕೆ ಕರೆದೊಯ್ಯುವ ಮೂಲಕ ಇಡೀ ಬೆಂಗಳೂರು ನಗರದ ವೈಮಾನಿಕ ನೋಟವನ್ನು ತೋರಿಸಲಾಗುತ್ತದೆ. ರೋಮಾಂಚನಕಾರಿ ಸ್ಥಳಗಳಲ್ಲಿ ಜಕ್ಕೂರು ಕೂಡ ಒಂದಾಗಿದೆ. ಎತ್ತರಕ್ಕೆ ಹಾರುವ ನಿಮ್ಮ ಕನಸನ್ನು ಇಲ್ಲಿ ಪೂರೈಸಿಕೊಳ್ಳಬಹುದು. ಪ್ರವಾಸಿರ ಪಕ್ಕದಲ್ಲಿ ಒಬ್ಬ ಅನುಭವಿ ಪೈಲಟ್ ಇರುತ್ತಾರೆ. ಪ್ರವಾಸಿಗರ ಬೆಂಬಲಕ್ಕೆ ನೀತು ಮೇಲಕ್ಕೆ ಕರೆದೊಯ್ದು ಬೆಂಗಳೂರಿನ ವೈಮಾನಿಕ ದೃಶ್ಯವನ್ನು ತೋರಿಸುತ್ತಾರೆ.

 ಬೆಂಗಳೂರಿನಿಂದ ತುರಹಳ್ಳಿ ಅರಣ್ಯಕ್ಕಿರುವ ದೂರ

ಬೆಂಗಳೂರಿನಿಂದ ತುರಹಳ್ಳಿ ಅರಣ್ಯಕ್ಕಿರುವ ದೂರ

ತುರಹಳ್ಳಿ ಅರಣ್ಯವು ಸಾಹಸ ಪ್ರಿಯರಿಗೆ ಬೆಂಗಳೂರಿಗೆ ಸಮೀಪವಿರುವ ಮತ್ತೊಂದು ಪ್ರಸಿದ್ಧ ತಾಣವಾಗಿದೆ. ಇದು ಬೆಂಗಳೂರಿನಿಂದ 17 ಕಿಲೋ ಮೀಟರ್‌ ದೂರದಲ್ಲಿದೆ. ಟ್ರೆಕ್ಕಿಂಗ್, ಸೈಕ್ಲಿಂಗ್ ಮತ್ತು ಪಕ್ಷಿ ವೀಕ್ಷಣೆಯನ್ನು ಸಹ ಮಾಡಬಹುದಾಗಿದೆ. ಎತ್ತರದ ನೀಲಗಿರಿ ಮರಗಳನ್ನು ಈ ಅರಣ್ಯ ಒಳಗೊಂಡಿದೆ.
ಜಿಂಕೆಗಳು, ಮೊಲಗಳು, ನರಿಗಳು ಮತ್ತು ಪಕ್ಷಿಗಳಾದ ಹದ್ದು, ಗೂಬೆ ಪ್ರಾಣಿಗಳು ಪ್ರವಾಸಿಗರ ಮನಸಿಗೆ ಮುದ ನೀಡುತ್ತವೆ. ಇಲ್ಲಿನ ಪ್ರಕೃತಿಯ ಸೊಬಗಿನ ನಡುವೆ ಸೂರ್ಯೋದಯವನ್ನು ವೀಕ್ಷಿಸಲು ಬೆಳಗ್ಗೆ 5 ಗಂಟೆ ಸೂಕ್ತವಾದ ಸಮಯವಾಗಿದೆ. ಅಲ್ಲದೇ ಈ ಸುಂದರವಾದ ಅರಣ್ಯದೊಳಗೆ ಸೈಕಲ್‌ ಹೊರತುಪಡಿಸಿ ಬೇರೆ ವಾಹನಗಳನ್ನು ನಿಷೇಧಿಸಲಾಗಿದೆ.

 ಪ್ರವಾಸಿಗರನ್ನು ಮನಸನ್ನು ಮುದಗೊಳಿಸಿವ ತಾಣ

ಪ್ರವಾಸಿಗರನ್ನು ಮನಸನ್ನು ಮುದಗೊಳಿಸಿವ ತಾಣ

ತಟ್ಟೆಕೆರೆ ಬೆಂಗಳೂರಿನಿಂದ 44.5 ಕಿಮೀ ದೂರದಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಈ ಸರೋವರವು ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತಲೇ ಇರುತ್ತದೆ. ಇದು ಫೋಟೋಗ್ರಫಿಗೆ ಹೇಳಿ ಮಾಡಿಸಿದ ಜಾಗವಾಗಿದೆ. ಆದ್ದರಿಂದ ಇಲ್ಲಿಗೆ ಬರುವ ಮುನ್ನ, ಹಾಗೂ ಇಲ್ಲಿ ಹೊಸವರ್ಷವನ್ನು ಆಚರಣೆ ಮಾಡಲು ಆಗಮಿಸುವವರು ಕೈಯಲ್ಲಿ ಕ್ಯಾಮೆರಾ ಹಿಡಿದುಕೊಂಡು ಬರುವುದು ಸೂಕ್ತವಾಗಿದೆ. ಪ್ರಕೃತಿಯ ಮನಮೋಹಕ ದೃಶ್ಯಗಳನ್ನು ಸೆರೆಹಿಡಿಯುವ ಮೂಲಕ ಆನಂದಿಸಬಹುದು. ಸೂರ್ಯೋದಯ ಮತ್ತು ಸೂರ್ಯಾಸ್ತದ ಅದ್ಭುತ ದೃಶ್ಯಗಳು ಸಹ ಪ್ರವಾಸಿಗರನ್ನು ಮನಸೋರೆಗೊಳ್ಳುವಂತೆ ಮಾಡುತ್ತದೆ. ಈ ಕೆರೆಯು ಬೆಂಗಳೂರಿನ ಸಮೀಪದಲ್ಲಿರುವ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದ್ದು, ಕುಟುಂಬ ಸಮೇತ ಭೇಟಿ ನೀಡಿ ಹೊಸವರ್ಷವನ್ನು ಆಚರಿಸಬಹದಾಗಿದೆ.
ತಟ್ಟೆಕೆರೆ ಕೆರೆಯು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಆನೆ ಕಾರಿಡಾರ್‌ನಲ್ಲಿದೆ. ಆದ್ದರಿಂದ ಇಲ್ಲಿ ಆನೆಗಳ ದೃಶ್ಯಗಳನ್ನು ಸಮಿಯಬಹುದಾಗಿದೆ.

 ಸ್ಕಂದಗಿರಿಯ ಒಟ್ಟು ಎತ್ತರ ಎಷ್ಟು?

ಸ್ಕಂದಗಿರಿಯ ಒಟ್ಟು ಎತ್ತರ ಎಷ್ಟು?

ಬೆಂಗಳೂರಿನಿಂದ 60 ಕಿ.ಮೀ. ಮತ್ತು ಚಿಕ್ಕಬಳ್ಳಾಪುರದಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ಸ್ಕಂದಗಿರಿ ಬೆಟ್ಟವಿದೆ. ಇದು ಸುಮಾರು 1,350 ಮೀಟರ್ ಎತ್ತರದಲ್ಲಿದೆ. ಇನ್ನು ಟ್ರೆಕ್ಕಿಂಗ್‌ ಪ್ರಯರಿಗೆ ಇದು ಹೇಳಿ ಮಾಡಿಸಿದ ತಾಣವಾಗಿದೆ. ರಾತ್ರಿ ಚಾರಣ, ಕ್ಯಾಂಪಿಂಗ್ ಮತ್ತು ಪಕ್ಷಿ ವೀಕ್ಷಣೆಯನ್ನು ಸಹ ಮಾಡಬಹುದಾಗಿದೆ. ಇಲ್ಲಿ ಸೂರ್ಯೋದಯವನ್ನು ವೀಕ್ಷಿಸಲು ಮತ್ತು ಆ ಸುಂದರ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಬೆಳಗಿನ ಜಾವ 6 ಗಂಟೆ ಸೂಕ್ತ ಸಮಯವಾಗಿದೆ. ಛಾಯಾಗ್ರಹಣಕ್ಕೆ ಅವಕಾಶ ನೀಡಿದ್ದು, ಇಲ್ಲಿನ ದೃಶ್ಯಗಳನ್ನು ಸೆರೆಹಿಡಿಯಲು ಫೋಟೋಗ್ರಾಫರ್ಸ್‌ ಕಾತರದಿಂದ ಕಾಯುತ್ತಿರುತ್ತಾರೆ. ಫೋಟೋಗ್ರಫಿಗಾಗಿಯೇ ಸುತ್ತಮುತ್ತಲಿನ ಜಿಲ್ಲೆಯ ನೂರಾರು ಜನರು ಇಲ್ಲಿಗೆ ಪ್ರತಿನಿತ್ಯ ಭೇಟಿ ನೀಡುತ್ತಿರುತ್ತಾರೆ.

 ಹೊಸವರ್ಷ ಆಚರಣೆಗೆ ಸೂಕ್ತ ಪ್ರವಾಸಿ ತಾಣ

ಹೊಸವರ್ಷ ಆಚರಣೆಗೆ ಸೂಕ್ತ ಪ್ರವಾಸಿ ತಾಣ

ಬೆಂಗಳೂರಿನಿಂದ ಕೇವಲ 20 ಕಿಲೋ ಮೀಟರ್‌ ದೂರದಲ್ಲಿ ಹೆಣ್ಣೂರು ಬಿದಿರಿನ ಅರಣ್ಯವಿದೆ. ಪ್ರವಾಸಿಗರು ಅದರಲ್ಲೂ ಯುವಕರು ಈ ತಾಣಕ್ಕೆ ಹೊಸವರ್ಷದಂದು ಭೇಟಿ ನೀಡಬಹುದಾಗಿದೆ. ಇದೊಂದು ದಟ್ಟವಾದ ಬಿದಿರಿನ ಕಾಡಾಗಿದ್ದು, ಸುಸಜ್ಜಿತವಾದ ದಾರಿಗಳನ್ನು ಹೊಂದಿದೆ. ಅಲ್ಲದೆ, ಸೈಕ್ಲಿಂಗ್‌ ಮಾಡುವ ಉತ್ಸಾಹಿಗಳು ಈ ತಾಣಕ್ಕೆ ಭೇಟಿ ನೀಡಬಹುದು. ಸ್ನೇಹಿತರೊಂದಿಗೆ ಸುಂದರವಾದ ಚಾರಣ ಮಾಡಲು ಬಯಸಿದರೆ ಈ ಅರಣ್ಯವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಬೆಂಗಳೂರಿನಿಂದ 38 ಕಿಲೋ ಮೀಟರ್‌ ದೂರದಲ್ಲಿರುವ ಮಂಚನಬೆಲೆ ಅಣೆಕಟ್ಟು ಒಂದು ಪಿಕ್ನಿಕ್‌ ಸ್ಪಾಟ್‌ ಆಗಿದೆ. ಪ್ರಶಾಂತವಾದ ಅರ್ಕಾವತಿ ನದಿಯ ನೀರಿನ ಮೇಲೆ ಅಣೆಕಟ್ಟನ್ನು ನಿರ್ಮಿಸಲಾಗಿದ್ದು, ಹಚ್ಚಹಸಿತಿನ ಪ್ರಕೃತಿಯ ನೋಟವನ್ನು ಪ್ರವಾಸಿಗರು ಕಾಣಬಹುದಾಗಿದೆ. ಅಣೆಕಟ್ಟಿನ ಸುತ್ತಮುತ್ತಲಿನ ಪ್ರಶಾಂತವಾದ ಸೌಂದರ್ಯವನ್ನು ಸವಿಯಲು ಬೆಂಗಳೂರಿಗರು ವಾರಾಂತ್ಯಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಇನ್ನು ಅಣೆಕಟ್ಟಿನ ಸುತ್ತ ಚಿಕ್ಕ ಬೆಟ್ಟಗಳಲ್ಲಿ ಹಚ್ಚ ಹಸಿರಿನಿಂದ ಕೂಡಿದ ವೃಕ್ಷಗಳನ್ನು ಕಾಣಬಹುದು. ಸುಂದರವಾದ ಸೂರ್ಯಸ್ತ ಮತ್ತು ಸೂರ್ಯೋದಯಗಳನ್ನು ವೀಕ್ಷಿಸಬಹುದು.

 ತೊಟ್ಟಿಕಲ್ಲು ಫಾಲ್ಸ್‌ನ ಮತ್ತೊಂದು ಹೆಸರೇನು?

ತೊಟ್ಟಿಕಲ್ಲು ಫಾಲ್ಸ್‌ನ ಮತ್ತೊಂದು ಹೆಸರೇನು?

ಇನ್ನು ಬೆಂಗಳೂರಿನಿಂದ 28.1 ಕಿಲೋ ಮೀಟರ್ ದೂರದಲ್ಲಿ ತೊಟ್ಟಿಕಲ್ಲು ಫಾಲ್ಸ್ ಇದೆ. ಇದನ್ನು ಟಿಕೆ ಫಾಲ್ಸ್ ಅಂತಲೂ ಕರೆಯುತ್ತಾರೆ. ಇದು ಕನಕಪುರ ಮುಖ್ಯ ರಸ್ತೆಯ ಕಗ್ಗಲಿಪುರ ಹತ್ತಿರ ಇದೆ. ಬೆಂಗಳೂರು-ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ ಬ್ಯಾಲೆಮರದದೊಡ್ಡಿಗೆ ಹೋಗು ಮಾರ್ಗದಲ್ಲಿ ಟರ್ನ್ ತೆಗೆದುಕೊಂಡರೆ ಮಣ್ಣಿನ ರಸ್ತೆ ಸಿಗುತ್ತದೆ. ಆ ಮಾರ್ಗವಾಗಿ ಹೋದರೆ ಜಲಪಾತ ಸಿಗುತ್ತದೆ. ಅಲ್ಲೊಂದು ಸಣ್ಣ ಮುನೇಶ್ವರ ದೇವಸ್ಥಾನ ಕೂಡ ಇದೆ. ಇಲ್ಲಿನ ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ನಮ್ಮ ಜೀವನದ ದುಃಖ ಮತ್ತು ಪಾಪವೆಲ್ಲಾ ಬಗೆಹರಿದು ಇಷ್ಟಾರ್ಥ ಸಿದ್ದಿಸುತ್ತದೆ ಎನ್ನುವ ನಂಬಿಕೆ ಇಲ್ಲಿನ ಸ್ಥಳೀಯರದ್ದಾಗಿದೆ.

 ರಾಷ್ಟೀಯ ಉದ್ಯಾನವನವನ್ನ ತಲುಪುವ ದಾರಿಗಳು

ರಾಷ್ಟೀಯ ಉದ್ಯಾನವನವನ್ನ ತಲುಪುವ ದಾರಿಗಳು

ಬೆಂಗಳೂರಿನಿಂದ 20 ಕಿ.ಮೀಟರ್‌ ದೂರದಲ್ಲಿ ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನ ಇದೆ. ಈ ಉದ್ಯಾನವನ 260.51 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿ ಸಿಂಹ ಮತ್ತು ಹುಲಿಗಳ ಸಫಾರಿಯನ್ನು ನಡೆಸುತ್ತಾರೆ. ಇಲ್ಲಿ ಪ್ರವಾಸಿಗರು ದೈತ್ಯ ಬೆಕ್ಕುಗಳು ವಿವಿಧ ಬಗೆಯ ಪ್ರಾಣಿಗಳನ್ನು ಹತ್ತಿರದಿಂದ ಕಾಣಬಹುದು. ಅಲ್ಲದೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಹಾವು ಉದ್ಯಾನವನ, ಚಿಟ್ಟೆ ಉದ್ಯಾನವನ, ಮೃಗಾಲಯ ಮತ್ತು ಮಕ್ಕಳಿಗಾಗಿ ಪ್ರಕೃತಿ ಶಿಬಿರವಿದೆ. ಉದ್ಯಾನವನದ ಪಕ್ಕದಲ್ಲಿ ಬನ್ನೇರುಘಟ್ಟ ನೇಚರ್ ಕ್ಯಾಂಪ್ ಕೂಡ ಇದೆ. ಇಲ್ಲಿಗೆ ಬರುವ ಪ್ರವಾಸಿಗರು ಗುಡಾರಗಳು, ಗುಡಿಸಲುಗಳು ಮತ್ತು ವಸತಿ ನಿಲಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

 ಪ್ರಯಾಣಕ್ಕೆ ಯಾವ ಸಮಯ ಸೂಕ್ತ?

ಪ್ರಯಾಣಕ್ಕೆ ಯಾವ ಸಮಯ ಸೂಕ್ತ?

ಬನ್ನೇರುಘಟ್ಟ ಉದ್ಯಾನವನದ ಮೃಗಾಲಯದಲ್ಲಿ ನಾಗರಹಾವು , ಪ್ಯಾಂಥರ್ಸ್, ಮೊಸಳೆಗಳು, ಕರಡಿಗಳು, ಜಿಂಕೆ ಮತ್ತು ಪಕ್ಷಿಗಳಂತಹ ಹಲವಾರು ಕಾಡು ಪ್ರಾಣಿಗಳನ್ನು ಕಾಣಬಹದು. ಸಿಂಹದ ಸಫಾರಿಯ ಸಮಯದಲ್ಲಿ ನಾವು ಸಿಂಹಗಳನ್ನು ಹತ್ತಿರದಿಂದಲೇ ನೋಡಬಹುದು. ಕರಡಿ ಹಾಗೂ ಸಿಂಹ ಇಷ್ಟೇ ಅಲ್ಲದೆ ಹುಲಿಗಳನ್ನು ಸಹ ಇಲ್ಲಿ ಸಾಕಲಾಗುತ್ತದೆ. ಸಾಮಾನ್ಯ ಹುಲಿಗಳ ಜೊತಗೆ ಬಿಳಿ ಹುಲಿಗಳನ್ನು ನೋಡಬಹುದಾಗಿದೆ. ಈ ಮೃಗಾಲಯವು ಕೇವಲ ಭಯಂಕರವಾದ ಪ್ರಾಣಿಗಳಿಗೆ ಮಾತ್ರ ಮೀಸಲಿಲ್ಲ. ಹಲವಾರು ರೀತಿಯ ಬಣ್ಣ ಬಣ್ಣದ ಚಿಟ್ಟೆಗಳನ್ನು ಹೊಂದಿರುವ ಚಿಟ್ಟೆಗಳ ಪಾರ್ಕ್ ಕೂಡ ಇದೆ. 7.5 ಹೆಕ್ಟೇರ್‌ ಪ್ರದೇಶ ವಿಶಿಷ್ಟ ಜಾತಿಯ ಚಿಟ್ಟೆಗಳಿಗಾಗಿ ಮೀಸಲಾಗಿರುತ್ತದೆ. ಚಿಟ್ಟೆ ಉದ್ಯಾನವನದಲ್ಲಿ 48 ಜಾತಿಯ ಚಿಟ್ಟೆಗಳು ಇವೆ ಗುರುತಿಸಲಾಗಿದೆ. ಆದ್ದರಿಂದ ಈ ಉದ್ಯಾನವನವು ಚಿಕ್ಕ ಮಕ್ಕಳಿಗೆ ಹೆಚ್ಚು ಸಂತೋಷವನ್ನು ನೀಡುತ್ತದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಮಂಗಳವಾರ ಬಿಟ್ಟು ಮಿಕ್ಕ ಎಲ್ಲಾ ದಿನವೂ ತೆರೆದಿರುತ್ತದೆ. ಮಂಗಳವಾರ ವೀಕ್ಷಣೆಗೆ ಅವಕಾಶವಿಲ್ಲ. ಮತ್ತು ಅದು ರಜೆಯ ದಿನವಾಗಿರುತ್ತದೆ. ಪ್ರವಾಸಿಗರು ಒಂದೆ ವೇಳೆ ಪ್ರಾಣಿ ಪ್ರಿಯರಾಗಿದ್ದರೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಾಣಿಗಳನ್ನು ದತ್ತು ಪಡೆಯಲು ಅವಕಾಶವಿದೆ. ಬೆಳಗ್ಗೆ 9:30 ರಿಂದ ಸಂಜೆ 5 ರವರೆಗೆ ಉದ್ಯಾನವನ ತೆರೆದಿರುತ್ತದೆ. ಬೆಳಗ್ಗೆ 10 ರಿಂದ ಸಂಜೆ 4:30 ರವರೆಗೆ ಸಫಾರಿ ಸಮಯವಾಗಿದೆ. ಇನ್ನು ಇಲ್ಲಿ ದೋಣಿ ವಿಹಾರದ ವ್ಯವಸ್ಥೆಯನ್ನು ಸಹ ಪ್ರವಾಸಿಗರು ಪಡೆಯಬಹುದಾಗಿದೆ.

 ಪ್ರವಾಸಿಗರನ್ನ ಕೈಬಿಸಿ ಕರೆಯುತ್ತಿದೆ ಅರಮನೆ

ಪ್ರವಾಸಿಗರನ್ನ ಕೈಬಿಸಿ ಕರೆಯುತ್ತಿದೆ ಅರಮನೆ

ತಿರುಚಿದ ಪ್ಯಾರಪೆಟ್‌ಗಳು, ಬ್ಯಾಟ್‌ಮೆಂಟ್‌ಗಳು, ಕೋಟೆಯ ಗೋಪುರಗಳು ಮತ್ತು ಕಮಾನುಗಳು ಇಂಗ್ಲೆಂಡ್‌ನ ವಿಂಡ್ಸರ್ ಕ್ಯಾಸಲ್ ಮಾದರಿಯಲ್ಲಿ ಬೆಂಗಳೂರಿನಲ್ಲಿರುಬ ಅರಮನೆ ಮೈದಾನವನ್ನು ನಿರ್ಮಿಸಲಾಗಿದೆ. ತೆರೆದ ಪ್ರಾಂಗಣದಲ್ಲಿ ಸಂಗೀತ ಕಚೇರಿಗಳು, ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಥಳಾವಕಾಶ ಕಲ್ಪಿಸಿಕೊಡಲಾಗುತ್ತದೆ. ಇಲ್ಲಿ ಸೊಗಸಾದ ಕೆತ್ತನೆಗಳು, ವರ್ಣಚಿತ್ರಗಳು ಮತ್ತು ವೈಸ್‌ರಾಯ್‌ಗಳು, ಮಹಾರಾಜರು ಸೇರದಂತೆ ಇತರ ಪ್ರಸಿದ್ಧ ವ್ಯಕ್ತಿಗಳ ಛಾಯಾಚಿತ್ರಗಳು ಅರಮನೆ ಕಟ್ಟಡದೊಳಗೆ ಕಾಣಬಹುದಾಗಿದೆ. ಹಾಗೆಯೇ ಅರಮನೆ ಸಂಕೀರ್ಣದ ಒಳಗೆ ಫನ್ ವರ್ಲ್ಡ್ ಎಂದು ಕರೆಯಲ್ಪಡುವ ಮನೋರಂಜನಾ ಉದ್ಯಾನವನವೂ ಇದೆ.

 ಕುಟುಂಬದ ಜೊತೆ ಕಾಲ ಕಳೆಯಲು ನೆಚ್ಚಿನ ತಾಣ

ಕುಟುಂಬದ ಜೊತೆ ಕಾಲ ಕಳೆಯಲು ನೆಚ್ಚಿನ ತಾಣ

300 ಹೆಕ್ಟೇರ್‌ ಪ್ರದೇಶದಲ್ಲಿ ವ್ಯಾಪಿಸಿರುವ ಕಬ್ಬನ್ ಪಾರ್ಕ್ ಬೆಂಗಳೂರು ನಗರದ ಮಧ್ಯಭಾಗದಲ್ಲಿದೆ. ಇಲ್ಲಿ ತಾಜಾ ಗಾಳಿ ಮತ್ತು ಹಚ್ಚ ಹಸಿರು ಹೊದಿಕೆ ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತದೆ. ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ನಗರದ ಎರಡು ಅತ್ಯುತ್ತಮ ಸ್ಥಳಗಳಾಗಿವೆ.
ಕಬ್ಬನ್ ಪಾರ್ಕ್ ಕೇಂದ್ರ ಗ್ರಂಥಾಲಯವನ್ನು ಹೊಂದಿದೆ. ಈ ಲೈಬ್ರರಿಯು ಸೋಮವಾರ, ಸಾರ್ವಜನಿಕ ರಜಾದಿನಗಳು ಮತ್ತು ತಿಂಗಳ ಎರಡನೇ ಮಂಗಳವಾರವನ್ನು ಹೊರತುಪಡಿಸಿ ಬೆಳಗ್ಗೆ 8:30 ರಿಂದ ಸಂಜೆ 7:30 ರವರೆಗೆ ತೆರೆದಿರುತ್ತದೆ. ಸರ್ಕಾರಿ ಅಕ್ವೇರಿಯಮ್‌ನಲ್ಲಿ ಪ್ರವಾಸಿಗರು 3 ಕ್ಕೂ ಹೆಚ್ಚು ಮಹಡಿಗಳಲ್ಲಿ ಪ್ರದರ್ಶನದಲ್ಲಿರುವ ಜಲಚರಗಳನ್ನು ನೋಡಬಹುದು. ಸೋಮವಾರ ಮತ್ತು ಪರ್ಯಾಯ ಮಂಗಳವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ. ಕಬ್ಬನ್ ಪಾರ್ಕ್‌ಗೆ ಉಚಿತವಾಗಿ ಪ್ರವೇಶ ಇರುತ್ತದೆ. ಮೆಟ್ರೊ, ಬಸ್ ಅಥವಾ ಟ್ಯಾಕ್ಸಿಯನ್ನು ಬಳಸಿಕೊಂಡು ಬೆಂಗಳೂರು ನಗರದ ಯಾವುದೇ ಭಾಗದಿಂದ ಕಬ್ಬನ್ ಪಾರ್ಕ್ ಅನ್ನು ತಲುಪಬಹುದು. ಕಬ್ಬನ್ ಪಾರ್ಕ್ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ 3 ಕಿ.ಮೀ. ಅಂತರದಲ್ಲಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ 35 ಕಿಮೀಗಳ ದೂರದಲ್ಲಿದೆ.

 ಲಾಲ್‌ ಬಾಗ್‌ನ ಪ್ರಮುಖ ಆಕರ್ಷಣೆ ಗಾಜಿನ ಮನೆ

ಲಾಲ್‌ ಬಾಗ್‌ನ ಪ್ರಮುಖ ಆಕರ್ಷಣೆ ಗಾಜಿನ ಮನೆ

ಇನ್ನು ಬೆಂಗಳೂರಿನಲ್ಲಿರುವ ಲಾಲ್‌ಬಾಗ್‌ 240 ಹರಕ್ಟೇರ್‌ ಪ್ರದೇಶವನ್ನು ಆವರಿಸಿದೆ. ಇಲ್ಲಿ ವರ್ಷಪೂರ್ತಿ ಅರಳುವ ಕೆಂಪು ಗುಲಾಬಿಗಳನ್ನು ಕಾಣಬಹುದಾಗಿದೆ. ಈ ಉದ್ಯಾನವು ವಿಶ್ವದ ಅತ್ಯಂತ ವೈವಿಧ್ಯಮಯ ಸಸ್ಯಗಳನ್ನು ಹೊಂದಿದೆ. ಇದರ ಕೇಂದ್ರ ಬಿಂದು ಭವ್ಯವಾದ ಗಾಜಿನ ಮನೆಯಾಗಿದೆ. ಇದನ್ನು ಲಂಡನ್‌ನ ಕ್ರಿಸ್ಟಲ್ ಪ್ಯಾಲೇಸ್‌ನಂತೆ ವಿನ್ಯಾಸಗೊಳಿಸಲಾಗಿದೆ. ಇದನ್ನು ಕೆಂಪು ತೋಟ, ಸಸ್ಯೋದ್ಯಾನವನ ಅಂತಲೂ ಕರೆಯುತ್ತಾರೆ. ಇಲ್ಲಿ ಪ್ರಸಿದ್ಧ ಗಾಜಿನ ಮನೆ ಇದ್ದು, ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಸಮಯದಲ್ಲಿ ಫಲ ಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ಅಲ್ಲದೇ ಇಲ್ಲಿ ಬೆಂಗಳೂರಿಗರು ಕುಟುಂಬ ಸಮೇತ ಬಂದು ಎಂಜಾಯ್‌ ಮಾಡಲು ತುದಿಗಾಲ್ಲಿ ಕಾಯುತ್ತಿರುತ್ತಾರೆ.

English summary
Top Best Tourist Places near Bengaluru for celebrate New Year 2023. Here see complete details of Tourist Places,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X