ದೇವರಮನೆಯಲ್ಲಿ ಎಣ್ಣೆ, ಧಮ್, ಡ್ಯಾನ್ಸ್: ಪ್ರವಾಸಿಗರ ಹುಚ್ಚಾಟ, ಭಕ್ತರಿಗೆ ಮುಜುಗರ

ಚಿಕ್ಕಮಗಳೂರು, ಜುಲೈ 01: ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣವಾದ ದೇವರಮನೆ ಮೋಜು, ಮಸ್ತಿಯ ಅಡ್ಡವಾಗಿದೆ. ಇದರಿಂದಾಗಿ ಶ್ರೀ ಕ್ಷೇತ್ರ ಕಾಲಭೈರವೇಶ್ವರನ ಸನ್ನಿಧಿಗೆ ಆಗಮಿಸುವ ಭಕ್ತರಿಗೆ ಮುಜುಗರ ಉಂಟಾಗಿದೆ.

ದೇವರಮನೆಗೆ ಸದಾ ಪ್ರವಾಸಿಗರು ಆಗಮಿಸುತ್ತಾರೆ. ಈಗ ನೈಋತ್ಯ ಮುಂಗಾರು ಮಳೆ ಸುರಿಯುವ ಅವಧಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ ಪ್ರವಾಸಿಗರ ಹುಚ್ಚು ಕುಣಿತ ಮಲೆನಾಡ ಪ್ರಕೃತಿ ಮಡಿಲಿನ ಸೌಂದರ್ಯ ನೋಡಲು ಬರುವ ಪ್ರವಾಸಿಗರಿಗೆ ಮುಜುಗರ ತಂದಿದೆ.

Tourist Dance In Devaramane Chikkamagaluru Trouble For Devotees

ದೇವರಮನೆಯಲ್ಲಿ ಹೊಯ್ಸಳರ ಕಾಲದ ಇತಿಹಾಸ ಪ್ರಸಿದ್ಧ ಕಾಲಭೈರವೇಶ್ವರನ ದೇವಾಲಯವಿದೆ. ಈ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಮದ್ಯ ಕುಡಿದು, ಧಮ್ ಹೊಡೆದುಕೊಂಡು, ರಸ್ತೆ ಮಧ್ಯೆ ಮೋಜು, ಮಸ್ತಿ ಮಾಡುವ ಪ್ರವಾಸಿಗರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ, ಓಡಾಡಲು ಜಾಗವಿಲ್ಲದಂತೆ ಆಗಿದೆ.

ಕೆಲವು ಪ್ರವಾಸಿಗರು ರಸ್ತೆ ಮಧ್ಯೆ ಕಾರು ನಿಲ್ಲಿಸಿಕೊಂಡು ಡ್ಯಾನ್ಸ್ ಮಾಡುತ್ತಿದ್ದಾರೆ. ಜೋರಾಗಿ ಕಿರುಚಾಡಿ ಗದ್ದಲವನ್ನು ಎಬ್ಬಿಸುತ್ತಿದ್ದಾರೆ. ರಸ್ತೆ ಮಧ್ಯೆ ಕಾರು ನಿಲ್ಲಿಸಿಕೊಂಡು ಕುಣಿದ ಕುಪ್ಪಳಿಸುತ್ತಿರುವ ಪ್ರವಾಸಿಗರು ಯಾರ ಮಾತನ್ನೂ ಸಹ ಕೇಳುತ್ತಿಲ್ಲ.

ಯಾರಿಗೂ ಪೊಲೀಸರ ಭಯವಿಲ್ಲ. ಸ್ಥಳೀಯರ ಮಾತನ್ನು ಕೇಳುತ್ತಿಲ್ಲ. ದೇವರಮನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದೆ. ಆದರೆ ಬೆರಳೆಣಿಕೆಯಷ್ಟು ಪೊಲೀಸರು ದೇವರಮನೆಯಲ್ಲಿ ಭದ್ರತೆಗೆ ನಿಯೋಜನೆಗೊಂಡರೆ ಉಳಿದ ಕೆಲಸ ಯಾರು ಮಾಡಬೇಕು? ಎಂಬುದು ಪ್ರಶ್ನೆಯಾಗಿದೆ.

ಮುಂಗಾರು ಮಳೆ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿದೆ. ಅದರಲ್ಲೂ ಸರಣಿ ರಜೆ, ವಾರಾಂತ್ಯದಲ್ಲಿ ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಪ್ರವಾಸಕ್ಕೆ ಬರುವವರು ಪ್ರಕೃತಿ ಸೌಂದರ್ಯವನ್ನು ಸವಿದು ಮರಳಿದರೆ ಯಾವುದೇ ತೊಂದರೆ ಇಲ್ಲ. ಆದರೆ ಅವರು ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ತ್ಯಾಜ್ಯಗಳನ್ನು ಸುರಿಯುತ್ತಾರೆ. ಅಲ್ಲದೇ ಮದ್ಯ ಕುಡಿದು, ಧಮ್ ಹೊಡೆದುಕೊಂಡು, ರಸ್ತೆ ಮಧ್ಯೆ ಮೋಜು, ಮಸ್ತಿ ಮಾಡುತ್ತಾ ಉಳಿದ ಪ್ರವಾಸಿಗರಿಗೂ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.

ದೇವರಮನೆ ಶ್ರೀ ಕ್ಷೇತ್ರ ಕಾಲಭೈರವೇಶ್ವರ ದೇವಾಲಯದ ಮುಂದೆ ಪಾರ್ಕಿಂಗ್ ನೋಡಿಕೊಳ್ಳುವ ಸಿಬ್ಬಂದಿ ಇದ್ದಾರೆ. ಆದರೆ ಇಲ್ಲಿಗೆ ಆಗಮಿಸುವ ಜಾಗ, ವ್ಯೂ ಪಾಯಿಂಟ್ ಮುಂತಾದ ಕಡೆಗಳಲ್ಲಿ ಹೆಚ್ಚಿನ ಸಿಬ್ಬಂದಿಗಳಿಲ್ಲ. ಸ್ಥಳೀಯರ ಮಾತುಗಳನ್ನು ಪ್ರವಾಸಿಗರು ಕೇಳುತ್ತಿಲ್ಲ.

ಕೆಲವು ಪ್ರವಾಸಿಗರ ಹುಚ್ಚಾಟದಿಂದಾಗಿ ಇಲ್ಲಿಗೆ ಆಗಮಿಸುವ ಇತರ ಪ್ರವಾಸಿಗರೂ ಕಿರಿಕಿರಿ ಅನುಭವಿಸುವಂತಾಗಿದೆ. ಕಡಿದಾದ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಡ್ಯಾನ್ಸ್ ಮಾಡುತ್ತಾ, ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.

ಚಿಕ್ಕ ಪೊಲೀಸ್ ಠಾಣೆಯಲ್ಲಿ ಇರುವ ಸಿಬ್ಬಂದಿ ಬಳಕೆ ಮಾಡಿಕೊಂಡು ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಹುಚ್ಚಾಟಕ್ಕೆ ತಡೆ ಹಾಕುವುದು ಕಷ್ಟದ ಕೆಲಸ. ಪ್ರವಾಸ ಹೋಗುವವರು ತಾವು ಇತರರಿಗೆ ತೊಂದರೆ ಉಂಟು ಮಾಡಬಾರದು ಎಂಬ ಸಾಮಾನ್ಯ ಜ್ಞಾನವನ್ನು ಅರಿತು ನಡೆದುಕೊಂಡರೆ ಎಲ್ಲರಿಗೂ ಅನುಕೂಲವಾಗಲಿದೆ.

ಪ್ರವಾಸಿಗರ ವರ್ತನೆಗೆ ಕಡಿವಾಣ ಹಾಕಬೇಕಿದೆ. ಇದಕ್ಕಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+