Travel Guide: ಬೆಂಗಳೂರು ಸಮೀಪದಲ್ಲಿವೆ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ತಾಣಗಳು
Travel Guide: ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ಊರ ತುಂಬಾ ತುಪ್ಪ ಹುಡುಕುತ್ತಿದ್ದ ಎಂಬ ಗಾದೆಯ ರೀತಿ ನಮ್ಮ ಬದುಕಾಗಬಾರದು. ಹಾಗೆಯೇ ಪ್ರವಾಸದ ವಿಚಾರದಲ್ಲಿ, ಅದರಲ್ಲೂ ಬೆಂಗಳೂರಿನಿಂದ ಪ್ರವಾಸ ಕೈಗೊಳ್ಳಲು ಕೆಲವರು ತಾಣಗಳ ಹುಡುಕಾಟದಲ್ಲೇ ಕಾಲ ಕಳೆದುಬಿಡುತ್ತಾರೆ. ಹಾಗಾದ್ರೆ ಸಮಯ ಏಕೆ ವ್ಯರ್ಥ ಮಾಡುತ್ತೀರಾ.. ನಗರದ ಸಮೀಪವಿರುವ ಅತ್ಯದ್ಭುತ ತಾಣಗಳ ವಿವರವನ್ನು ನಾವು ನಿಮಗೆ ಪರಿಚಯಿಸುತ್ತಿದ್ದೇವೆ.
ಬೆಂಗಳೂರಿನ ಬಹುತೇಕ ಮಂದಿ ಬಿಡುವು ಸಿಕ್ಕರೆ ಸಾಕು ಪ್ರವಾಸ ಕೈಗೊಳ್ಳುವ ಯೋಜನೆಯಲ್ಲಿರುತ್ತಾರೆ. ನೀವು ಒಂದು ವೇಳೆ ವಾರಾಂತ್ಯದಲ್ಲಿ ಟ್ರಕ್ಕಿಂಗ್‌ಗಾಗಿಯೇ ಪ್ರವಾಸ ಹೋಗಬೇಕೆಂದರೆ ಬೆಂಗಳೂರಿನ ಸುತ್ತಮುತ್ತನಲ್ಲಿರುವ ಈ ಅತ್ಯದ್ಭುತ ತಾಣಗಳಿಗೆ ಭೇಟಿ ನೀಡಬಹುದಾಗಿದೆ. ಒಂದು ದಿನದ ಟ್ರಕ್ಕಿಂಗ್ ಪ್ರವಾಸಕ್ಕೆ ಹೇಳಿ ಮಾಡಿಸಿದ ಅತ್ಯದ್ಭುತ ತಾಣಗಳು ಇವಾಗಿವೆ

1. ಸಾವನದುರ್ಗ: ಬೆಂಗಳೂರಿನಿಂದ 67.5 ಕಿಲೋ ಮೀಟರ್ ದೂರದಲ್ಲಿ ಸಮವಣದುರ್ಗ ಗಿರಿಧಾಮವುವಿದೆ. ಟ್ರಕ್ಕಿಂಗ್, ರಾಕ್ ಕ್ಲೈಂಬಿಂಗ್, ಕ್ಯಾಂಪಿಂಗ್ ಕೂಡ ಇಲ್ಲಿ ಮಾಡಬಹುದಾಗಿದೆ. ಅದರಲ್ಲೂ ಟ್ರಕ್ಕಿಂಗ್ ಮಾಡುವವರಿಗೆ ಹೇಳಿ ಮಾಡಿಸಿದ ತಾಣ ಇದಾಗಿದೆ. ಸಮುದ್ರ ಮಟ್ಟದಿಂದ 4,460 ಅಡಿ ಎತ್ತರದ ಬೆಟ್ಟ ಇದಾಗಿದೆ.
ಇದು ಏಷ್ಯಾದಲ್ಲೇ ಅತ್ಯಂದ ದೊಡ್ಡ ಏಕಶಿಲಾ ಬೆಟ್ಟವಾಗಿದೆ. ಹತ್ತಿರದಲ್ಲಿ ಅರ್ಕಾವತಿ ನದಿಯು ತಿಪ್ಪಗೊಂಡನಹಳ್ಳಿ ಜಲಾಶಯದ ಮೂಲಕ ಮತ್ತು ಮಂಚನಬೆಲೆ ಅಣೆಕಟ್ಟಿನಲ್ಲಿ ನೀಡುವ ಹರಿಯುವುದನ್ನು ಕೂಡ ನೋಡಬಹುದಾಗಿದೆ. ಅಷ್ಟೇ ಅಲ್ಲದೆ, ಇಲ್ಲಿ ಹಲವಾರು ಪ್ರಾಣಿಗಳು ಹಾಗೂ ಸಸ್ಯ ಸಂಪತ್ತನ್ನು ಕಾಣಬಹುದಾಗಿದೆ.
ತಲುಪುವುದು ಹೇಗೆ?: ಬಸ್‌ನಲ್ಲಿ ಇಲ್ಲಿಗೆ ತೆರಳಬೇಕೆಂದರೆ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮಾಗಡಿ ರಸ್ತೆಗೆ ಹೋಗುವ ಬಸ್ ಹತ್ತಬೇಕಾಗುತ್ತದೆ. ಬಳಿಕ ನೀವು ಮಾಗಡಿ ರಸ್ತೆ ಜಂಕ್ಷನ್‌ಗೆ ಮತ್ತೊಂದು ಬಸ್ ಹತ್ತಬೇಕಾಗುತ್ತದೆ. ಅಲ್ಲಿಂದ ನೀವು ಸಾವನದುರ್ಗಕ್ಕೆ ಹೋಗಲು ಎಡಕ್ಕೆ ತಿರುಗಬೇಕು. ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿಯೂ ಹೋಗಬಹುದಾಗಿದೆ. ಬೆಂಗಳೂರಿನಿಂದ ಇಲ್ಲಿಗೆ ಹೋಗಲು ಒಟ್ಟು ಪ್ರಯಾಣ ಸಮಯ ಸುಮಾರು 2 ಗಂಟೆ 15 ನಿಮಿಷ ಬೇಕಾಗುತ್ತದೆ.
2. ಶಿವಗಂಗೆ: ಶಿವಗಂಗೆ ಗಿರಿಧಾಮವು ಬೆಂಗಳೂರಿನಿಂದ 51.8 ಕಿಲೋ ಮೀಟರ್ ದೂರದಲ್ಲಿದೆ. ಕರ್ನಾಟಕದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದ್ದು, ಚಾರಣಿಗರಿಗೆ ಹೇಳಿ ಮಾಡಿಸಿದ ಅತ್ಯದ್ಭುತ ತಾಣವಾಗಿದೆ. ಇದು ಸಮುದ್ರ ಮಟ್ಟದಿಂದ 1,380 ಮೀಟರ್ ಎತ್ತರದಲ್ಲಿ. ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ದಾಬಸ್ ಪೇಟೆಯಿಂದ ಸುಮಾರು 6 ಕಿ.ಮೀ ಹಾಗೂ ತುಮಕೂರಿನಿನಿಂದ 20 ಕಿಲೋ ಮಿಟರ್ ದೂರದಲ್ಲಿದೆ.
ಬೆಟ್ಟದ ಆರಂಭದಲ್ಲಿಯೇ ಶಿವನ ದೇವಾಲಯ, ಬಳಿಕ ಗಂಗಾಧರೇಶ್ವರ ದೇವಾಲಯವನ್ನು ಕಾಣಬಹುದಾಗಿದೆ. ಇಲ್ಲಿ ಶಿವ ಲಿಂಗದ ಮೇಲೆ ತುಪ್ಪವನ್ನು ಹಾಕಿದರೆ ಬೆಣ್ಣೆಯಾಗಿ ಪರಿವರ್ತನೆ ಆಗುತ್ತದೆ ಎನ್ನುವ ಪ್ರತೀತಿ ಇದೆ. ಹಾಗೆಯೇ ಒಂದು ಸಣ್ಣ ಸುರಂಗವಿದ್ದು, ಇದರ ಮೂಲದ ಶ್ರೀರಂಗಪಟ್ಟಣವನ್ನು ತಲುಪಬಹುದು ಎಂಬ ನಂಬಿಕೆಯಿದೆ. ಇನ್ನೂ ಸ್ವಲ್ಪ ಮೇಲೆ ಏರಿದರೆ ಒಳಕಲ್ಲು ತೀರ್ಥ ಎಂಬ ಮತ್ತೊಂದು ಸ್ಥಳವಿದೆ. ಈ ಒಳಕಲ್ಲಿನಲ್ಲಿ ವರ್ಷದ 365 ದಿನಗಳೂ ನೀರು ಸಿಗುತ್ತದೆಯಂತೆ.
ಮೇಲೆ ಏರುತ್ತಾ ಹೋದರೆ, ಒಂದು ಶಿವಪಾರ್ವತಿಯ ದೇವಸ್ಥಾನ, ನಂದಿ ವಿಗ್ರಹವಿದೆ. ಇದನ್ನು ಪ್ರದಕ್ಷಿಣೆ ಹಾಕುವುದೇ ಒಂದು ಸಾಹಸದ ಕೆಲಸವಾಗಿದೆ. ನಂತರ ಬೆಟ್ಟದ ತುತ್ತ ತುದಿಯಲ್ಲಿ ಗಂಗಾಧರೇಶ್ವರ ದೇವಾಲಯವನ್ನು ಕಾಣಬಹುದು. ಇಲ್ಲಿರುವ ಮತ್ತೊಂದು ಆಕರ್ಷಣೆ ಎಂದರೆ ಬೆಟ್ಟದ ತುದಿಯಲ್ಲಿ ಕಟ್ಟಿರುವ ಪುರಾತನ ಕಾಲದ ಬೆಳ್ಳಿ ಗಂಟೆಗಳು.
3. ಸ್ಕಂದಗಿರಿ: ಬೆಂಗಳೂರಿನಿಂದ 60.9 ಕಿ.ಮೀ. ದೂರದಲ್ಲಿ ಸ್ಕಂದಗಿರಿ ಬೆಟ್ಟವಿದೆ. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಕೃತಿ ಮಡಿಲಿನಲ್ಲಿರುವ ಒಂದು ಐತಿಹಾಸಿಕ ಸ್ಥಳವಾಗಿದ್ದು, ಈ ಬೆಟ್ಟ ಸಮುದ್ರ ಮಟ್ಟದಿಂದ 4,429 ಮೀಟರ್ ಎತ್ತರದಲ್ಲಿದೆ. ಇಲ್ಲಿ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಲು ನಿರ್ಮಿಸಿದ ಕೋಟೆ ಸಹ ಇದ್ದು, ಪ್ರಕೃತಿ ಪ್ರಿಯರು ಹಾಗೂ ಸ್ಮಾರಕಗಳ ಬಗ್ಗೆ ವಿಶೇಷ ಆಸಕ್ತಿ ಇರುವವರಿಗೆ ಈ ಜಾಗ ಇಷ್ಟ ಆಗುವುದರಲ್ಲಿ ಅನುಮಾನವಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ ಬಳಿ ಬಳ್ಳಾರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 7ರ ಬಳಿ ಇದು ಬರುತ್ತದೆ.
4. ಮಂದಾರಗಿರಿ ಬೆಟ್ಟ: ತುಮಕೂರು ಜಿಲ್ಲೆಯಲ್ಲಿರುವ ಮಂದಾರಗಿರಿ ಬೆಟ್ಟವು ಬೆಂಗಳೂರಿನಿಂದ 62 ಕಿಲೋ ಮೀಟರ್ ಆಗುತ್ತದೆ. ಇಲ್ಲಿ ನವಿಲಿನ ಆಕಾರದಲ್ಲಿನ ಮಂದಿರವೂ ಇದೆ, ಸುತ್ತಲು ಹಸಿರು, ನೀರು ಎಲ್ಲವನ್ನೂ ಕಾಣಬಹುದಾಗಿದೆ.
5. ಅಂತರಗಂಗೆ: ಕೋಲಾರ ಜಿಲ್ಲೆಯಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಅಂತರಗಂಗೆ ಬೆಟ್ಟವು ಬೆಂಗಳೂರಿನಿಂದ 68.4 ಕಿಲೋ ಮೀಟರ್ ದೂರದಲ್ಲಿದೆ. ಇನ್ನೂ ಜಿಲ್ಲೆಯಲ್ಲಿ ಅಂತರಗಂಗೆ ಸೇರಿದಂತೆ ಕೋಲಾರಮ್ಮ ದೇವಸ್ಥಾನ, ಸೋಮೇಶ್ವರ ದೇವಸ್ಥಾನ, ಮಾರ್ಕಂಡೇಯ ದೇವಸ್ಥಾನ, ತೇರಹಳ್ಳಿ. ಕೋಟಿಲಿಂಗೇಶ್ವರ ಸೇರಿದಂತೆ ಇತ್ಯಾದಿ ಆಧ್ಯಾತ್ಮಿಕ ತಾಣಗಳನ್ನು ಕಾಣಬಹುದಾಗಿದೆ. ಈ ಬೆಟ್ಟವು ಕೋಲಾರದಿಂದ 3 ಕಿ.ಮೀ. ದೂರದಲ್ಲಿದ್ದು, ಇದು ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ.
6. ದೇವರಾಯನದುರ್ಗ: ದೇವರಾಯನದುರ್ಗ ಬೆಂಗಳೂರಿನಿಂದ 73.4 ಕಿ.ಮೀ. ದೂರದಲ್ಲಿದೆ. ತುಮಕೂರಿನಿಂದ 16 ಕಿ.ಮೀ. ಇದ್ದು, ಪ್ರತಿನಿತ್ಯ ಪ್ರವಾಸಿಗರ ದಂಡೇ ಈ ಬೆಟ್ಟವನ್ನು ಏರಲು ಹಾಗೂ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯನ್ನು ಆಗಮಿಸುತ್ತದೆ. ಇಲ್ಲಿಗೆ ಬೆಂಗಳೂರಿನಿಂದ ಒಂದು ದಿನದ ಪ್ರವಾಸ ಕೈಗೊಳ್ಳಬಹುದಾಗಿದೆ. ಇಲ್ಲಿ ಭೋಗ ನರಸಿಂಹ, ಯೋಗ ನರಸಿಂಹ ಹಾಗೂ ಲಕ್ಷ್ಮೀ ನರಸಿಂಹ ಎನ್ನುವ ಮೂರು ದೇವಾಲಯಗಳನ್ನು ಕಾಣಬಹುದು.
7. ಮಧುಗಿರಿ: ಮಧುಗಿರಿ ತುಮಕೂರು ಜಿಲ್ಲೆಯಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇದು ಬೆಂಗಳೂರಿನಿಂದ 105.5 ಕಿಲೋ ಮೀಟರ್ ಆಗಲಿದೆ. ಇದು ಪಾವಗಡದಿಂದ ಬಳ್ಳಾರಿಯವರೆಗೆ ಹರಡಿರುವ ಪರ್ವತವಾಗಿದೆ. ಇದರ ಸುತ್ತಮುತ್ತ ಗಣಿಗಾರಿಕೆಯ ಪ್ರದೇಶವನ್ನು ಕಾಣಬಹುದಾಗಿದೆ. ಇಲ್ಲಿನ ದೃಶ್ಯವನ್ನು ಸವಿಯಲು ಪ್ರತಿನಿತ್ಯ ಪ್ರವಾಸಿಗರ ದಂಡೇ ಹರಿದುಬರುತ್ತದೆ.












Click it and Unblock the Notifications