IRCTC ಕಾಶ್ಮೀರ ಟೂರ್ ಪ್ಯಾಕೇಜ್: ಬೇಸಿಗೆಯಲ್ಲಿ ಕಾಶ್ಮೀರಕ್ಕೆ ಹೋಗಿ ಬನ್ನಿ
ಐಆರ್‌ಸಿಟಿಸಿಯ ಕಾಶ್ಮೀರ ಪ್ರವಾಸವು ಕೈಗೆಟುಕುವ ದರದಲ್ಲಿ 6 ದಿನಗಳ ಕಾಶ್ಮೀರ ಪ್ರವಾಸದ ಪ್ಯಾಕೇಜ್ ಇರುತ್ತದೆ.
ಶ್ರೀನಗರ, ಮಾರ್ಚ್ 16: ಈ ಬೇಸಿಗೆಯನ್ನು ತಂಪಾದ ಸ್ಥಳಕ್ಕೆ ಪ್ರವಾಸ ಮಾಡಬೇಕು ಎಂದುಕೊಳ್ಳುತ್ತಿದ್ದರೆ ಇದೋ ನಿಮಗೆ ಇಲ್ಲಿ ಉತ್ತಮ ಅವಕಾಶವಿದೆ.
ಐಆರ್‌ಸಿಟಿಸಿಯಿಂದ ಕಾಶ್ಮೀರ ಟೂರ್ ಪ್ಯಾಕೇಜ್ ಆರಂಭವಾಗಿದ್ದು, ರಿಯಾಯಿತಿ ದರದಲ್ಲಿ ನೀವು ಪ್ರೇಮ ಕಾಶ್ಮೀರವನ್ನು ಸುತ್ತಿ ಬರಬಹುದು.
ಐಆರ್‌ಸಿಟಿಸಿಯ ಕಾಶ್ಮೀರ ಪ್ರವಾಸವು ಕೈಗೆಟುಕುವ ದರದಲ್ಲಿ 6 ದಿನಗಳ ಕಾಶ್ಮೀರ ಪ್ರವಾಸದ ಪ್ಯಾಕೇಜ್ ಇರುತ್ತದೆ. ಇದು ವಿಮಾನ ದರ, ವಸತಿ ಮತ್ತು ಊಟ ಸೇರಿದಂತೆ ಎಲ್ಲಾ ಪ್ರಯಾಣ ವೆಚ್ಚಗಳನ್ನು ಒಳಗೊಂಡಿದೆ.

ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಎಂಬ ಭಾರತೀಯ ರೈಲ್ವೆ ವಿಭಾಗವು ಏಪ್ರಿಲ್ 9ರಂದು ಕಾಶ್ಮೀರ ಪ್ರವಾಸದ ಪ್ಯಾಕೇಜ್‌ಗಳನ್ನು ನೀಡಲು ಪ್ರಾರಂಭಿಸುತ್ತದೆ. ಈ ಪ್ಯಾಕೇಜ್‌ನ ಹೆಸರು ಜನ್ನತ್-ಎ-ಕಾಶ್ಮೀರ್. ಇದು ಆರು ಹಗಲು ಮತ್ತು ಐದು ರಾತ್ರಿಗಳ ದೀರ್ಘ ಪ್ರವಾಸವಾಗಿರುತ್ತದೆ.
ಐಆರ್‌ಸಿಟಿಸಿ ಕಾಶ್ಮೀರ ಟೂರ್ ಪ್ಯಾಕೇಜ್ ಈ ಸೌಲಭ್ಯಗಳನ್ನು ಹೊಂದಿರುತ್ತದೆ
ಇಂಡಿಗೋ ಏರ್ ವಿಮಾನದಲ್ಲಿ ಪ್ರವಾಸ ಇರುತ್ತದೆ. ಹೋಟೆಲ್‌ನಲ್ಲಿ ನಾಲ್ಕು ರಾತ್ರಿಗಳು ವಾಸ್ತವ್ಯ ಇರುತ್ತದೆ. ವೇಳಾಪಟ್ಟಿಯ ಪ್ರಕಾರ 5 ಉಪಹಾರಗಳು ಮತ್ತು 5 ಭೋಜನಗಳು ಇರುತ್ತದೆ. ಶ್ರೀನಗರದ ದೋಣಿಮನೆಯಲ್ಲಿ ಒಂದು ರಾತ್ರಿ ಕಳೆಯುವ ಅವಕಾಶ ಇರುತ್ತದೆ. ಪ್ರಯಾಣದ ಪ್ರಕಾರ ಸ್ಥಳೀಯ ಪ್ರದೇಶಗಳನ್ನು ನಾನ್ ಎಸಿ ವಾಹನದಲ್ಲಿ ಪ್ರವಾಸ ಇರುತ್ತದೆ.

ಈ ಕಾಶ್ಮೀರ ಪ್ರವಾಸದ ಸಮಯದಲ್ಲಿ ಗುಲ್ಮಾರ್ಗ್, ಸೋನ್ಮಾರ್ಗ್, ಪಹಲ್ಗಾಮ್, ದಾಲ್ ಸರೋವರ, ಝೇಲಂ ಸರೋವರದಂತಹ ದೈವಿಕ ಸ್ಥಳಗಳನ್ನು ತೋರಿಸಲಾಗುತ್ತದೆ. ಈ ಐಆರ್‌ಸಿಟಿಸಿ ಟೂರ್ ಪ್ಯಾಕೇಜ್ ಇಂದೋರ್ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನವನ್ನು ಒಳಗೊಂಡಿರುತ್ತದೆ ಮತ್ತು ಇದು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಇಳಿಯುತ್ತದೆ.
ಈ ಪ್ರವಾಸದ ಪ್ಯಾಕೇಜ್‌ನಲ್ಲಿ ಹೋಗುವ ಮತ್ತು ಹಿಂತಿರುಗುವ ಏರ್‌ಲೈನ್ ಟಿಕೆಟ್‌ಗಳನ್ನು ಸಹ ಒಳಗೊಂಡಿದೆ. ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರವಾಸದ ವಿವರವಾದ ಮಾರ್ಗಸೂಚಿ ಲಭ್ಯವಿದೆ, ಹೆಚ್ಚಿನ ಮಾಹಿತಿಗಾಗಿ ಈ ನೇರ ಲಿಂಕ್ ಅನ್ನು ಪರಿಶೀಲಿಸಬಹುದು. ಕಾಶ್ಮೀರ ಪ್ರವಾಸದ ಪ್ಯಾಕೇಜ್‌ನ ವೆಚ್ಚವು ಪ್ರವಾಸಿಗರು ಆಯ್ಕೆಮಾಡಿದ ವಾಸ್ತವ್ಯ ಮಾದರಿಯನ್ನು ಅವಲಂಬಿಸಿರುತ್ತದೆ. ಇದು 41,300 ರೂಪಾಯಿಗಳಿಂದದ ಆರಂಭವಾಗಿ 61,000 ರೂಪಾಯಿ ವರೆಗೂ ಇರುತ್ತದೆ. ಒಬ್ಬ ವ್ಯಕ್ತಿಯ ಟಿಕೆಟ್‌ನ ಬೆಲೆ 60,100 ರೂ. ಇಬ್ಬರು ಪ್ರಯಾಣಿಸುತ್ತಿದ್ದರೆ ಒಬ್ಬರ ಪ್ರಯಾಣ ದರ 44,900 ರೂಪಾಯಿ ಆಗುತ್ತದೆ. ಮೂವರು ಒಟ್ಟಿಗೆ ಪ್ರಯಾಣಿಸುತ್ತಿದ್ದರೆ ಪ್ರತಿಯೊಬ್ಬರು 44,000 ರೂಪಾಯಿ ಆಗುತ್ತದೆ. ಹಾಸಿಗೆ ಇಲ್ಲದ ಮಕ್ಕಳ ಟಿಕೆಟ್ ದರ 41,300 ರೂಪಾಯಿ ಆಗುತ್ತದೆ.
ಸರ್ಕಾರಿ ನೌಕರರು ಐಆರ್‌ಸಿಟಿಸಿ ರಜೆಯ ಪ್ಯಾಕೇಜ್‌ಗಳಿಗಾಗಿ ಎಲ್‌ಟಿಸಿಗೆ ಪ್ರವೇಶವನ್ನು ಹೊಂದಿರುತ್ತಾರೆ. ನಿಮ್ಮ ಕಚೇರಿಯಲ್ಲಿ ಎಲ್ಲಾ ಬಿಲ್‌ಗಳನ್ನು ಒದಗಿಸುವ ಮೂಲಕ, ನೀವು ಎಲ್‌ಟಿಸಿ ಕ್ಲೈಮ್ ಮಾಡಬಹುದು. ಈ ಎಲ್ಲಾ ಮಾಹಿತಿಯು ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಅಥವಾ ಗ್ರಾಹಕ ಸೇವೆಯ ಮೂಲಕ ಲಭ್ಯವಿದೆ.












Click it and Unblock the Notifications