Travel Guide: ಪ್ರವಾಸ ಪ್ರಿಯರ ಸ್ವರ್ಗ ಕರ್ನಾಟಕದ ಈ ಅದ್ಭುತ ಸ್ಥಳಗಳು
ಅಕ್ಟೋಬರ್ ಆರಂಭದಲ್ಲೇ ಸಾಲು ಸಾಲು ರಜೆಗಳಿವೆ. ಶನಿವಾರ ಭಾನುವಾರ ಅಲ್ಲದೆ ಸೋಮವಾರ ಗಾಂಧಿ ಜಯಂತಿ ಪ್ರಯುಕ್ತ ರಜೆ ಇರುವ ಕಾರಣ ಈ ಬಾರಿ ಪ್ರವಾಸ ಪ್ರಿಯರಿಗೆ ಮೂರು ದಿನ ರಜೆಗಳು ಸಿಗಲಿದೆ.
ಹೀಗಾಗಿ ಮೂರು ದಿನ ವಾರಾಂತ್ಯಕ್ಕೆ ಪ್ರವಾಸ ಕೈಗೊಳ್ಳಬೇಕು ಅಂದುಕೊಂಡಿದ್ದರೆ ಈ ಸಮಯದಲ್ಲಿ ಒಂದೆಳ್ಳೆ ಸ್ಥಳದ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತೇವೆ. ಪ್ರವಾಸ ಪ್ರಿಯರ ಸ್ವರ್ಗ ಎಂದು ಕರೆಯಲ್ಪಡುವ ಕರ್ನಾಟಕದ ಕೆಲ ಸುಂದರವಾದ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.

ಆಗುಂಬೆ
ಆಗುಂಬೆಯಾ.... ಪ್ರೇಮ ಸಂಜೆಯಾ.. ಮರೆಯಲಾರೆ ನಾನು ಎಂದಿಗೂ... ಆಗುಂಬೆ ಸೌಂದರ್ಯವನ್ನು ವರ್ಣಿಸಲು ಡಾ. ರಾಜಕುಮಾರ್ ಅಭಿನಯದ ಇದೊಂದು ಹಾಡು ಸಾಕು. ಮನಮೋಹಕ ಸೂರ್ಯಾಸ್ತ, ಹೊಳೆಯುವಂತಹ ತೊರೆಗಳು, ಪ್ರಾಚೀನ ಗ್ರಾಮೀಣ ವಾಸ್ತವ್ಯ ಇವೆಲ್ಲವನ್ನು ಹೊಂದಿರುವ ಆಗುಂಬೆಯು ಒಂದು ಅತ್ಯದ್ಬುತವಾದ ಹಳ್ಳಿಯಾಗಿದ್ದು, ಸೋಮೇಶ್ವರ ಘಟ್ಟದ ಮೇಲಿರುವ ಪ್ರಸ್ಥಭೂಮಿಯ ಮೇಲೆ ನೆಲೆಸಿದೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಈ ಸ್ಥಳವು ಅನೇಕ ಸುಂದರವಾದ ಜಲಪಾತಗಳಿಂದ ಆಶೀರ್ವದಿಸಲ್ಪಟ್ಟಿದೆ.
ಪ್ರಕೃತಿಯ ಸೌಂದರ್ಯತೆಯನ್ನು ಆಶ್ವಾಧಿಸುವ ಸೂಕ್ತವಾದ ಸ್ಥಳ ಈ ಆಗುಂಬೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಈ ಸ್ಥಳವು ಸುಂದರವಾದ ಜಲಪಾತಗಳಿಂದ ಕೂಡಿದೆ. ಮೂಕವಿಸ್ಮಿತಗೊಳಿಸುವಂತಹ ಪರಿಸರ ಮತ್ತು ಸ್ವರ್ಗಸುಖವೆನ್ನುವಂತಹ ಹವಾಮಾನ ಇವೆಲ್ಲವನ್ನು ಹೊಂದಿದ್ದು, ಇದು ನಿಸ್ಸಂದೇಹವಾಗಿಯೂ ಕಡಿಮೆ ಪರಿಶೋಧಿಸಲ್ಪಟ್ಟ ಕರ್ನಾಟಕದ ಟ್ರೆಕ್ಕಿಂಗ್ ತಾಣವೆನ್ನಬಹುದು. ಈ ಮೂರು ದಿನದ ಪ್ರವಾಸಕ್ಕಾಗಿ ನೀವು ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು ಈ ಸ್ಥಳವನ್ನು ಆನಂದಿಸುವುದರಲ್ಲಿ ಅನುಮಾನವೇ ಇಲ್ಲ.
ಕುದರೆಮುಖದ ಶಿಖರ
ಕುದರೆಮುಖ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಇಲ್ಲಿರುವ ಪರ್ವತದ ಮಾರ್ಗಗಳು ಮತ್ತು ಶ್ರೀಮಂತ ಸಸ್ಯವರ್ಗ ಹಾಗೂ ಪ್ರಾಣಿವರ್ಗಗಳಿಂದಾಗಿ ಇದನ್ನು ಚಾರುಣಿಗರು ಮತ್ತು ಪ್ರಕೃತಿ ಪ್ರೇಮಿಗಳ ಸ್ವರ್ಗವೆನ್ನಲಾಗುತ್ತದೆ. ಇಲ್ಲಿನ ಸುಂದರವಾದ ಪರಿಸರವು ಇದನ್ನು ಅತ್ಯುತ್ತಮ ತಾಣವನ್ನಾಗಿಸುತ್ತಾ ಕರ್ನಾಟಕದಲ್ಲಿ ಭೇಟಿ ಕೊಡಬಹುದಾದ ಸುಂದರವಾದ ಸ್ಥಳಗಳಲ್ಲಿ ಒಂದಾಗಿಸಿದೆ. ಕಣ್ಮನ ಸೆಳೆಯುವ ಹಸಿರು ಹುಲ್ಲು ಹಾಸಿಗೆ, ಸುತ್ತಲು ದಟ್ಟವಾದ ಕಾಡುಗಳು ಪ್ರತಿಯೊಬ್ಬ ಪ್ರವಾಸಿಗರನ್ನು ರೋಚಕಗೊಳಿಸುತ್ತದೆ. ಈ ಪರಿಸರದಲ್ಲಿ ಪ್ರತಿಯೊಬ್ಬ ಪ್ರಯಾಣಿಕನು ಪ್ರಶಾಂತತೆಯಲ್ಲಿ ಕಳೆದುಹೋಗುತ್ತಾನೆ. ಹೀಗಾಗಿ ನೀವು ಕೂಡ ಈ ಸ್ಥಳದಲ್ಲಿ ನಿಮ್ಮ ವಾರಾಂತ್ಯವನ್ನು ಆನಂದಿಸಬಹುದು.

ವಿಭಿನ್ನ ಭೂದೃಶ್ಯ
ಮರವಂತೆ ಪಶ್ಚಿಮ ಕರಾವಳಿಯಲ್ಲಿರುವ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಒಂದು ಪುಟ್ಟ ಹಳ್ಳಿ. ಇದು ಒಂದೆಡೆ ಅರಬ್ಬೀ ಸಮುದ್ರ ಮತ್ತು ಇನ್ನೊಂದು ಕಡೆ ಸೌಪರ್ಣಿಕಾ ನದಿಯನ್ನೊಳಗೊಂಡ ಸುಂದರ ಭೂದೃಶ್ಯಗಳನ್ನೊಳಗೊಂಡಿದೆ. ಈ ಮನಮೋಹಕ ದೃಶ್ಯಗಳನ್ನೊಳಗೊಂಡ ಭಾರತದ ಈ ಸ್ಥಳವು ತನ್ನದೇ ಆದ ವಿಭಿನ್ನತೆಯನ್ನು ಹೊಂದಿದೆ. ಈ ಸ್ಥಳಕ್ಕೆ ನೀವು ಭೇಟಿ ನೀಡುವ ಮೂಲಕ ರಜಾ ದಿನಗಳನ್ನು ಇಲ್ಲಿ ಕಳೆಯಬಹುದು.
ಕೊಡಚಾದ್ರಿ ಮೂಕಾಂಬಿಕಾ ದೇವಾಲಯ
ಕರ್ನಾಟಕದಲ್ಲಿ ಕೊಲ್ಲೂರು ಮೂಕಾಂಬಿಕೆ ಪ್ರಸಿದ್ಧ ದೇವಸ್ಥಾನ. ಈ ದೇವಸ್ಥಾನ ಕೇವಲ ಯಾತ್ರಾಸ್ಥಳಕ್ಕಾಗಿ ಮಾತ್ರ ಜನಮನ್ನಣೆ ಪಡೆದುದಲ್ಲದೆ ಇಲ್ಲಿರುವ ಕೊಡಚಾದ್ರಿ ಶಿಖರವೂ ಕೂಡಾ ಪ್ರತಿಯೊಬ್ಬ ಪ್ರಕೃತಿ ಪ್ರೇಮಿಯು ಹೋಗಬಯಸುವಂತಹ ಸ್ಥಳವಾಗಿದೆ. ಈ ಹತ್ತನೇ ಶಿಖರವು ಕರ್ನಾಟಕದ ಪಾರಂಪರಿಕ ಪ್ರಕೃತಿ ತಾಣವಾಗಿದೆ.
ಇದು ಅನೇಕ ಜೀವವೈವಿಧ್ಯದ ನೆಲೆಯಾಗಿದೆ. ಈ ಸುಂದರವಾದ ಜಲಪಾತಗಳು ನಿಮ್ಮ ಜೋಡಿಕಣ್ಣುಗಳಿಗೆ ಹಬ್ಬವನ್ನು ನೀಡುತ್ತದೆ. ಈ ಮನಮೋಹಕ ಶಿಖರದಲ್ಲಿಯ ಸೂರ್ಯಾಸ್ತವು ಜೀವಮಾನದಲ್ಲೊಮ್ಮೆ ಅನುಭವಿಸಲೇಬೇಕು ಎನ್ನುವಂತದ್ದಾಗಿದೆ.

ಹೊನ್ನೆಮರಡು ಬೆಟ್ಟಗಳು
ಗೋಲ್ನ್ ಲೇಖ್ ಲಿಂಗನಮಕ್ಕಿ ಜಲಾಶಯದ ಮೇಲಿದೆ. ಶರಾವತಿ ನದಿಯ ಹಿನ್ನೀರಿನಲ್ಲಿ ನೆಲೆಗೊಂಡಿರುವ ಹೊನ್ನೆಮರಡು ಬೆಟ್ಟಗಳ ಮೇಲೆ ನೆಲೆಸಿರುವ ಒಂದು ಸಣ್ಣ ಗ್ರಾಮವಾಗಿದ್ದು, ಲಿಂಗನಮಕ್ಕಿ ಜಲಾಶಯದ ಮೇಲಿದೆ. ಅದ್ಭುತ ಮತ್ತು ಗಮನಾರ್ಹ ಹಿನ್ನೆಲೆ ಹೊಂದಿರುವ ಹೊನ್ನೆಮರಡು ಜಲ ಕ್ರೀಡೆಗಳಿಗೆ ಸ್ವರ್ಗವಾಗಿದೆ.
ಇಲ್ಲಿನ ಕೊರಾಕಲ್ ಸವಾರಿಯ ಅದ್ಭುತ ಅನುಭವಕ್ಕೆ ಹೆಸರುವಾಸಿಯಾಗಿದೆ. ಗೋಲ್ನ್ ಲೇಖ್ ಸೂರ್ಯೋದಯ ಮತ್ತು ಸೂರ್ಯಾಸ್ತದ ಕೆಲವು ಅದ್ಭುತ ನೋಟಗಳನ್ನು ಹೊಂದಿದೆ. ಜೋಗ ಮತ್ತು ದಬ್ಬೆ ಜಲಪಾತಗಳು ಹೊನ್ನೆಮರಡಿಗೆ ಹತ್ತಿರದಲ್ಲಿ ನೆಲೆಸಿದೆ.












Click it and Unblock the Notifications