Summer Special Express Trains: ಬೆಂಗಳೂರಿನಿಂದ ಈ ಮಾರ್ಗಗಳಿಗೆ ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ-ಮಾಹಿತಿ
Summer Special Trains: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿಶೇಷ ರೈಲುಗಳನ್ನು ಬಿಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಬೇಸಿಗೆ ಹಿನ್ನೆಲೆ ಪ್ರಯಾಣಿಕರ ಬೇಡಿಕೆಯ ಮೇರೆಗೆ ವಿಶೇಷ ರೈಲುಗಳನ್ನು ಬಿಡಲು ನಿರ್ಧರಿಸಿದೆ. ಈ ರೈಲುಗಳು ಬೆಂಗಳೂರಿನಿಂದ ದೇಶದ ವಿವಿಧ ನಗರಗಳಿಗೆ ಸಂಚರಿಸಲಿವೆ. ಹಾಗಾದರೆ ಮಾರ್ಗ, ಸಮಯ, ದಿನಾಂಕಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಸಾಮಾನ್ಯವಾಗಿ ರಜಾ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆಯವನ್ನು ನಿಯಂತ್ರಿಸುವ ಸಲುವಾಗಿ ಈ ಬೇಸಿಗೆ ವಿಶೇಷ ರೈಲುಗಳನ್ನು ಬಿಡಲು ಮುಂದಾಗಿದ್ದು, ಇದು ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ತುಂಬಾ ಅನುಕೂಲ ಆದಂತಾಗಲಿದೆ.

ಬೇಸಿಗೆ ವಿಶೇಷ ರೈಲುಗಳ ಪಟ್ಟಿ ಇಲ್ಲಿದೆ
* ರೈಲು ಸಂಖ್ಯೆ 06249/06250KSR ಬೆಂಗಳೂರು-ರೂರ್ಕೆಲಾ-ಎಸ್‌ಎಂವಿಟಿ ಬೆಂಗಳೂರು ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಜೋಲಾರ್‌ಪೇಟ್ಟೈ, ವಿಜಯವಾಡ, ವಿಜಯನಗರ, ರಾಯಗಡ, ತಿತಿಲಗಢ ಮತ್ತು ಸಂಬಲ್‌ಪುರ ಮೂಲಕ ಚಲಿಸುತ್ತದೆ. ಈ ರೈಲು ಮೇ 17ರಂದು ರಾತ್ರಿ 9:15ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಡಲಿದ್ದು, ಮೇ 19ರಂದು ಬೆಳಿಗ್ಗೆ 5 ಗಂಟೆಗೆ ರೂರ್ಕೆಲಾ ತಲುಪಲಿದೆ.
* 06251/06252 ಸಂಖ್ಯೆಯ ಎಸ್‌ಎಂವಿಟಿ ಬೆಂಗಳೂರು-ಖುರ್ದಾ ರಸ್ತೆ-ಎಸ್‌ಎಂವಿಟಿ ಬೆಂಗಳೂರು ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಜೋಲಾರ್‌ಪೇಟ್ಟೈ, ವಿಜಯವಾಡ, ವಿಜಯನಗರ, ಸಂಬಲ್‌ಪುರ, ಕಟಕ್ ಮತ್ತು ಭುವನೇಶ್ವರ ನಡುವೆ ಓಡಲಿದೆ. ಈ ರೈಲು ಮೇ 18ರಂದು ಬೆಳಗ್ಗೆ 10:15ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಡಲಿದ್ದು, ಮೇ 19ರ ರಾತ್ರಿ 9 ಗಂಟೆಗೆ ಖುರ್ದಾ ರಸ್ತೆಯನ್ನು ತಲುಪಲಿದೆ.
* 06253/06254 ಸಂಖ್ಯೆಯ ಎಸ್‌ಎಂವಿಟಿ ಬೆಂಗಳೂರು-ಖುರ್ದಾ ರಸ್ತೆ-ಎಸ್‌ಎಂವಿಟಿ ಬೆಂಗಳೂರು ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಮೇ 21ರ ರಾತ್ರಿ 11 ಗಂಟೆಗೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಡಲಿದ್ದು, ಮೇ 23ರ ಬೆಳಗ್ಗೆ 11 ಗಂಟೆಗೆ ಖುರ್ದಾ ರಸ್ತೆಯನ್ನು ತಲುಪುತ್ತದೆ.
* 06259/06260 ಸಂಖ್ಯೆಯ ಎಸ್‌ಎಂವಿಟಿ ಬೆಂಗಳೂರು-ಖರಗ್‌ಪುರ-ಎಸ್‌ಎಂವಿಟಿ ಬೆಂಗಳೂರು ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಭುವನೇಶ್ವರ, ಕಟಕ್, ಭದ್ರಕ್ ಮತ್ತು ಬಾಲೇಶ್ವರ ಮೂಲಕ ಸಂಚಾರ ಮಾಡಲಿದೆ. ಈ ರೈಲು ಮೇ 25ರಂದು ಬೆಳಗ್ಗೆ 10:15ಕ್ಕೆ SMVT ಬೆಂಗಳೂರಿನಿಂದ ಹೊರಡಲಿದ್ದು, ಮೇ 26ರ ಸಂಜೆ 7:30ಕ್ಕೆ ಖರಗ್‌ಪುರ ತಲುಪಲಿದೆ.
ಈ ರೈಲುಗಳ ಸಮಯ ಪರಿಷ್ಕರಣೆ
* ರೈಲು ಸಂಖ್ಯೆ 06587 SMVT ಬೆಂಗಳೂರು-ಭಗತ್ ಕಿ ಕೋಟಿ ಜೂನ್ 6ರ ಬದಲಿಗೆ ಜೂನ್ 27 ರವರೆಗೆ ಚಲಿಸುತ್ತದೆ (ಮೂರು ಹೆಚ್ಚುವರಿ ಟ್ರಿಪ್‌ಗಳು).
* ರೈಲು ಸಂಖ್ಯೆ 06588 ಭಗತ್ ಕಿ ಕೋಟಿ-ಎಸ್‌ಎಂವಿಟಿ ಬೆಂಗಳೂರು ಜೂನ್ 9ರ ಬದಲಿಗೆ ಜೂನ್ 30ರವರೆಗೆ ಸಂಚಾರ ಮಾಡಲಿದೆ (ಮೂರು ಹೆಚ್ಚುವರಿ ಟ್ರಿಪ್‌ಗಳು).
* ರೈಲು ಸಂಖ್ಯೆ 05271 ಮುಜಾಫರ್‌ಪುರ-ಯಶವಂತಪುರ ಮೇ 11ರ ಬದಲಿಗೆ ಮೇ 17ರವರೆಗೆ ಓಡುತ್ತದೆ (ಒಂದು ಹೆಚ್ಚುವರಿ ಟ್ರಿಪ್).
* ರೈಲು ಸಂಖ್ಯೆ 05272 ಯಶವಂತಪುರ-ಮುಜಾಫರ್‌ಪುರ ಮೇ 14ರ ಬದಲಿಗೆ ಮೇ 20ರ ವರೆಗೆ ಸಂಚಾರ ಮಾಡಲಿದೆ (ಒಂದು ಹೆಚ್ಚುವರಿ ಟ್ರಿಪ್).
* ರೈಲು ಸಂಖ್ಯೆ 02811 ಭುವನೇಶ್ವರ-ಯಶವಂತಪುರ ಮೇ 25ರ ಬದಲು ಜೂನ್ 29ರ ವರೆಗೆ ಸಂಚಾರ ಮಾಡಲಿದೆ (ಐದು ಹೆಚ್ಚುವರಿ ಟ್ರಿಪ್‌ಗಳು).
* ರೈಲು ಸಂಖ್ಯೆ 02812 ಯಶವಂತಪುರ-ಭುವನೇಶ್ವರ ಮೇ 27 (ಐದು ಹೆಚ್ಚುವರಿ ಟ್ರಿಪ್‌ಗಳು) ಬದಲಿಗೆ ಜುಲೈ 1 ರವರೆಗೆ ಸಂಚಾರ ಮಾಡಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.












Click it and Unblock the Notifications