ಬೆಂಗಳೂರು ಇಂಟರ್‌ಸಿಟಿ ರೈಲು ಮಾರ್ಗ ಬದಲಾವಣೆ: ಕಾರಣ ಏನು?-ಮಾಹಿತಿ, ವಿವರ ಇಲ್ಲಿದೆ
South Western Railway zone: ಸಾಮಾನ್ಯವಾಗಳಿ ಹಳಿ ಅಳವಡಿಕೆ ಸೇರಿದಂತೆ ರೈಲ್ವೆಗೆ ಸಂಬಂಧಿಸಿದ ಇನ್ನಿತರೆ ಕಾಮಗಾರಿಗಳು ನಡೆಯುವ ಮಾರ್ಗಗಳಲ್ಲಿ ರೈಲು ಸಂಚಾರ ಕೆಲವು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತದೆ ಅಥವಾ ಮಾರ್ಗಗಳನ್ನು ಬದಲಾಯಿಸಲಾಗುತ್ತದೆ. ಹಾಗೆಯೇ ಇದೀಗ ರೈಲ್ವೆ ಕಾಮಗಾರಿ ಹಿನ್ನೆಲೆ ಎರ್ಕಾಕುಲಂ-ಬೆಂಗಳೂರು ನಡುವೆ ಸಂಚಾರ ನಡೆಸುವ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ ಮಾರ್ಗ ಬದಲಾವಣೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಂಪೂರ್ಣ ವಿವರ ಇಲ್ಲಿದೆ ತಿಳಿಯಿರಿ.
ಇನ್ನು ಈ ಕುರಿತುಮಾ ಹಿತಿ ನೀಡಿರುವ ನೈರುತ್ಯ ರೈಲ್ವೆ ವಲಯ, ಸೇಲಂ ವಿಭಾಗದಲ್ಲಿ ಸುರಕ್ಷತೆ ಸಂಬಂಧಿತ ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆ ದಕ್ಷಿಣ ರೈಲ್ವೇ ಇಂಟರ್‌ಸಿಟಿ ಮಾರ್ಗ ಬದಲಾವಣೆ ಮಾಡಿ ಬದಲಿ ಮಾರ್ಗ ಹಾಗೂ ವೇಳಾಪಟ್ಟಿಯನ್ನು ನೀಡಿದೆ ಎಂದು ತಿಳಿಸಿದೆ.

ಎರ್ನಾಕುಲಂ-ಬೆಂಗಳೂರು ಇಂಟರ್‌ಸಿಟಿ: ರೈಲು ಸಂಖ್ಯೆ 12678 ಎರ್ನಾಕುಲಂ-ಕೆಎಸ್‌ಆರ್ ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಜುಲೈ 4, 6, 7, 9, 10, 11, 13, 14, 15, 16, 17, 18, 20, 21, 22, 23, 24, 25, 27, 28 ಹಾಗೂ 30ರಂದು ಎರ್ನಾಕುಲಂನಿಂದ ಬಿಡಲಿದ್ದು, ಪೊದನೂರು ಜಂಕ್ಷನ್, ಇರುಗೂರ್ ಮತ್ತು ಸುರತ್ಕಲ್ ನಿಲ್ದಾಣಗಳ ಮೂಲಕ ಹೋಗುತ್ತದೆ. ಈ ಮಾರ್ಗದಲ್ಲಿ ಕೊಯಮತ್ತೂರು ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ. ಪೋದನೂರು ಜಂಕ್ಷನ್‌ನಲ್ಲಿ ಹೆಚ್ಚುವರಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ರೈಲು ಸಂಖ್ಯೆ 12677 ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಜುಲೈ 7, 8, 10, 14, 15, 17, 21, 22, 24 ಹಾಗೂ 28ರಂದು ಕೆಎಸ್‌ಆರ್ ಬೆಂಗಳೂರಿನಿಂದ ಹೊರಡಲಿದ್ದು, ಇರುಗೂರ್, ಪೊದನೂರ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಕೊಯಮತ್ತೂರು ನಿಲ್ದಾಣಕ್ಕೆ ಹೋಗುವುದಿಲ್ಲ.
ರೈಲುಗಳ ಸಂಚಾರ ರದ್ದು: ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇಳಿಕೆ ಹಿನ್ನೆಲೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಪಂಢರಪುರ ನಿಲ್ದಾಣಗಳ ನಡುವೆ ಓಡಲು ನಿಗದಿಪಡಿಸಲಾಗಿದ್ದ ವಿಶೇಷ ರೈಲುಗಳನ್ನು ರದ್ದುಪಡಿಸಲಾಗಿದೆ. ರೈಲು ಸಂಖ್ಯೆ 06295 ಬೆಂಗಳೂರು-ಪಂಢರಪುರ ವಿಶೇಷ ಎಕ್ಸ್‌ಪ್ರೆಸ್ ಅನ್ನು ಜುಲೈ 5 ಮತ್ತು 7ರಂದು ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ 06296 ಪಂಢರಪುರ-ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಜುಲೈ 6 ಮತ್ತು 8ರಂದು ರದ್ದು ಮಾಡಲಾಗಿದೆ. ರೈಲು ಸಂಖ್ಯೆ 06297 ಬೆಂಗಳೂರು-ಪಂಢರಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಜುಲೈ 6ರಂದು ರದ್ದು ಮಾಡಲಾಗಿದೆ. ರೈಲು ಸಂಖ್ಯೆ 06298 ಪಂಢರಪುರ - ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಜುಲೈ 7ರಂದು ರದ್ದುಪಡಿಸಲಾಗಿದೆ.
ಗುಂಟೂರು ವಿಭಾಗದಲ್ಲಿ ನಡೆಯುತ್ತಿರುವ ಸುರಕ್ಷತಾ ಕುರಿತು ಕಾಮಗಾರಿ ಹಿನ್ನೆಲೆ ಹುಬ್ಬಳ್ಳಿ-ವಿಜಯವಾಡ ರೈಲು ಸಂಚಾರವನ್ನು ವಿಸ್ತರಣೆ ಮಾಡಲಾಗಿದೆ. ರೈಲು ಸಂಖ್ಯೆ 17329 ಎಸ್‌ಎಸ್‌ಎಸ್ ಹುಬ್ಬಳ್ಳಿ-ವಿಜಯವಾಡ ಡೈಲಿ ಎಕ್ಸ್‌ಪ್ರೆಸ್ ಜುಲೈ 31, 2024 ರವರೆಗೆ ರದ್ದುಪಡಿಸಲಾಗಿದ್ದು, ರೈಲು ಸಂಖ್ಯೆ 17330 ವಿಜಯವಾಡ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ಆಗಸ್ಟ್ 1, 2024ರವರೆಗೆ ರದ್ದು ಮಾಡಲಾಗಿದೆ ಎಂದು ತಿಳಿಸಿದೆ.
-
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Railway Alert: ಚನ್ನಸಂದ್ರ ನಿಲ್ದಾಣದಲ್ಲಿ ಕಾಮಗಾರಿ, ವಿವಿಧ ರೈಲುಗಳ ಮಾರ್ಗ ಬದಲಾವಣೆ, ಸಂಚಾರ ರದ್ದು -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ












Click it and Unblock the Notifications