Tirupati Tirumala: ಶ್ರೀವಾರಿಯ ಭಕ್ತರಿಗೆ ಬೇಸಿಗೆ ರಜೆಯ ಸಿಹಿಸುದ್ದಿ: ಸರ್ವದರ್ಶನ ಟಿಕೆಟ್ ಹೆಚ್ಚಳಕ್ಕೆ ಟಿಟಿಡಿ ನಿರ್ಧಾರ
ಇತ್ತೀಚೆಗೆ ತಿರುಮಲ ಶ್ರೀಗಳ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಇದಕ್ಕೆ ಶಾಲಾ-ಕಾಲೇಜುಗಳಿಗೆ ರಜೆ ಇರುವುದೇ ಪ್ರಮುಖ ಕಾರಣ. ಈ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ತಿರುಮಲಕ್ಕೆ ತೆರಳುವವರಿಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಶುಭ ಸುದ್ದಿ ನೀಡಿದೆ.
ರಜಾ ದಿನಗಳಲ್ಲಿ ತಿರುಪತಿಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗುವ ಕಾರಣ ದರ್ಶನ ಟಿಕೆಟ್ ಹೆಚ್ಚಳಕ್ಕಾಗಿ ಟಿಟಿಡಿ ನಿರ್ಧರಿಸಿದೆ. ಹೌದು.. ಉಚಿತ ಸರ್ವದರ್ಶನ (ಎಸ್‌ಎಸ್‌ಡಿ) ಹಾಗೂ 300 ರೂಪಾಯಿಯ ವಿಶೇಷ ಪ್ರವೇಶ ದರ್ಶನ (ಎಸ್‌ಇಡಿ) ಟಿಕೆಟ್‌ಗಳ ಕೋಟಾ ಹೆಚ್ಚಳದ ಕುರಿತು ಚಿಂತಿಸಲಾಗಿದೆ. ಟಿಟಿಡಿ ಡಯಲ್ ಯುವರ್ ಈವೋ ಕಾರ್ಯಕ್ರಮದಲ್ಲಿ ಈ ಬಗ್ಗೆ ಟಿಟಿಡಿ ಇಒ ಎ.ವಿ.ಧರ್ಮ ರೆಡ್ಡಿ ಮಾಹಿತಿ ಹಂಚಿಕೊಂಡಿದ್ದಾರೆ.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಇಒ, ಬೇಸಿಗೆಯ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ವಿಐಪಿಗಳು, ಪ್ರವಾಸೋದ್ಯಮ ಮತ್ತು ವರ್ಚುವಲ್ ಸೇವೆಗಳ ಟಿಕೆಟ್‌ಗಳನ್ನು ಕಡಿಮೆ ಮಾಡಲಾಗುವುದು ಮತ್ತು ಎಸ್‌ಎಸ್‌ಡಿ ಮತ್ತು ಎಸ್‌ಇಡಿ ಟಿಕೆಟ್‌ಗಳ ಕೋಟಾವನ್ನು ಹೆಚ್ಚಿಸಲಾಗುವುದು. ಚುನಾವಣಾ ನೀತಿ ಸಂಹಿತೆ ಬರುವ ಹಿನ್ನೆಲೆಯಲ್ಲಿ ವಿಐಪಿ ಶಿಫಾರಸ್ಸು ಪತ್ರಗಳಿಗೆ ಬ್ರೇಕ್ ಹಾಕಲಾಗುತ್ತದೆ ಎಂದು ಹೇಳಿದರು.
ಇನ್ನೂ ತಿರುಪತಿಯಲ್ಲಿ ಮತ್ತೊಮ್ಮೆ ಭರ್ಜರಿ ಆದಾಯ ಸಂಗ್ರಹವಾಗಿದೆ. ಫೆಬ್ರವರಿ ತಿಂಗಳಲ್ಲೂ ದಾಖಲೆ ಪ್ರಮಾಣದ ಆದಾಯ ಬಂದಿದೆ ಎಂದು ಟಿಟಿಡಿ ಬಹಿರಂಗಪಡಿಸಿದೆ. ಫೆಬ್ರವರಿ ತಿಂಗಳಲ್ಲಿ 19.06 ಲಕ್ಷ ಭಕ್ತರು ಶ್ರೀಗಳ ದರ್ಶನ ಪಡೆದಿದ್ದಾರೆ. ಹುಂಡಿ ಮೂಲಕ ಶ್ರೀವಾರಿಗೆ 111.71 ಕೋಟಿ ರೂ. ಆದಾಯ ಬಂದಿದೆ. ಟಿಟಿಡಿ ಈ ತಿಂಗಳಲ್ಲಿ 95,43,000 ಲಡ್ಡುಗಳನ್ನು ಭಕ್ತರಿಗೆ ಮಾರಾಟ ಮಾಡಿದೆ. 43,61000 ಭಕ್ತರು ಶ್ರೀವಾರಿ ಅನ್ನಪ್ರಸಾದ ಸ್ವೀಕರಿಸಿದ್ದು, 6.56 ಲಕ್ಷ ಭಕ್ತರು ಹರಕೆ ಸಮರ್ಪಿಸಿ ಪೂಜೆ ಸಲ್ಲಿಸಿದ್ದಾರೆ.
ದೇವಸ್ಥಾನಗಳಿಗೆ ಭಕ್ತರು ನೀಡಿದ ವಸ್ತ್ರ ಹರಾಜು
ಶ್ರೀವಾರಿ ದೇವಸ್ಥಾನ ಹಾಗೂ ಇತರೆ ಸಂಯೋಜಿತ ದೇವಸ್ಥಾನಗಳಿಗೆ ಭಕ್ತರು ನೀಡಿದ ವಸ್ತ್ರಗಳನ್ನು ಮಾರ್ಚ್ 15 ರಿಂದ 22 ರವರೆಗೆ ಹರಾಜು ಮಾಡಲಾಗುತ್ತದೆ. ಇವುಗಳಲ್ಲಿ 412 ಹೊಸ ಮತ್ತು ಭಾಗಶಃ ಹಾನಿಗೊಳಗಾದ ಉಡುಪುಗಳಿವೆ. ಇದರಲ್ಲಿ ಆರ್ಟ್ ಸಿಲ್ಕ್ ಧೋತಿಗಳು, ಟರ್ಕಿ ಟವೆಲ್‌ಗಳು, ಲುಂಗಿಗಳು, ದುಪಟ್ಟಾಗಳು, ಶಾಲುಗಳು, ಬೆಡ್ ಶೀಟ್‌ಗಳು, ನ್ಯಾಪ್‌ಕಿನ್‌ಗಳು, ಹ್ಯಾಂಡ್ ಕರ್ಚೀಫ್‌ಗಳು, ಪಂಜಾಬಿ ಡ್ರೆಸ್ ಮೆಟೀರಿಯಲ್‌ಗಳು, ಕಾರ್ಪೆಟ್‌ಗಳು, ಛತ್ರಿಗಳು ಸೇರಿವೆ. ಇತರ ವಿವರಗಳಿಗಾಗಿ TTD ಮಾರ್ಕೆಟಿಂಗ್ ಆಫೀಸ್ ನಂಬರ್ 0877-2264429 ಅಥವಾ TTD ವೆಬ್‌ಸೈಟ್ www.tirumala.org / www.konugolu.ap.govt.in ಗೆ ಸಂಪರ್ಕಿಸಲು ಟಿಟಿಡಿ ಸಲಹೆ ನೀಡುತ್ತದೆ.

ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ ಡ್ರೋನ್ ಸದ್ದು..
ತಿರುಪತಿ ಜಿಲ್ಲೆಯ ಶ್ರೀಕಾಳಹಸ್ತಿಯಲ್ಲಿ ಡ್ರೋನ್ ಕ್ಯಾಮೆರಾವೊಂದು ಸಂಚಲನ ಮೂಡಿಸಿದೆ. ತಮಿಳುನಾಡಿನ ಐವರು ಯುವಕರು ಡ್ರೋನ್ ಕ್ಯಾಮೆರಾದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಅವರನ್ನು ದೇವಸ್ಥಾನದ ಭದ್ರತಾ ಸಿಬ್ಬಂದಿ ಗುರುತಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ತಿರುಮಲ ಶ್ರೀಗಳ ದರ್ಶನಕ್ಕೆ ಶನಿವಾರ ರಾತ್ರಿ ಶ್ರೀಕಾಳಹಸ್ತಿಗೆ ಬಂದಿದ್ದ ಚೆನ್ನೈನ ವಿಘ್ನೇಶ್, ಅಜಿತ್ ಕಣ್ಣನ್, ಶಂಕರ್ ಶರ್ಮಾ, ಅರವಿಂದ್ ಮತ್ತು ಪೋರ್ಚೆ ಜಿ.ಎನ್. ಮುಕ್ಕಂಟಿ ದೇವಸ್ಥಾನದ ಬಳಿ ಖಾಸಗಿ ಅತಿಥಿಗೃಹದಲ್ಲಿ ಕೊಠಡಿ ಬಾಡಿಗೆಗೆ ಪಡೆದಿದ್ದರು.
ಮಹಾಶಿವರಾತ್ರಿ ಬ್ರಹ್ಮೋತ್ಸವ ಆರಂಭವಾಗುತ್ತಿದ್ದಂತೆ ದೇವಾಲಯದ ಸುತ್ತಮುತ್ತ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಇವೆಲ್ಲವನ್ನೂ ಚಿತ್ರೀಕರಿಸಲು ಆ ಯುವಕರು ಡ್ರೋನ್ ಬಳಕೆ ಮಾಡಿದ್ದಾರೆ. ಅವರು ತಂಗಿದ್ದ ಅತಿಥಿಗೃಹದ ಮೇಲಿನಿಂದ ಡ್ರೋನ್ ಕ್ಯಾಮೆರಾದೊಂದಿಗೆ ಮಧ್ಯರಾತ್ರಿ ಮುಖ್ಯ ದೇವಾಲಯದಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ದೇವಸ್ಥಾನದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಡ್ರೋನ್ ಬೆನ್ನಟ್ಟಿ ಯುವಕರನ್ನು ಗುರುತಿಸಲಾಯಿತು. ಶ್ರೀಕಾಳಹಸ್ತಿ ಒನ್ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications