Vande Metro: ಕೆಲವೇ ಕ್ಷಣಗಳಲ್ಲಿ ದೇಶದ ಮೊದಲ ವಂದೇ ಮಟ್ರೋಗೆ ಚಾಲನೆ-ಮಾರ್ಗ, ಸಮಯ, ಟಿಕೆಟ್ ದರಗಳ ಮಾಹಿತಿ ತಿಳಿಯಿರಿ
Vande Metro: ಈಗಾಗಲೇ ವಂದೆ ಭಾರತ್ ಎಕ್ಸ್‌ಪ್ರೆಸ್ ರೈಲು ದೇಶಾದ್ಯಂತ ಸಂಚರಿಸುತ್ತಿದ್ದು, ದಿನದಿಂದ ದಿನಕ್ಕೆ ಭಾರೀ ಜನಮನ್ನಣೆ ಗಳಿಸುತ್ತಿದೆ. ಇನ್ನು ಇದರ ಭಾಗವಾಗಿರುವ ಮೊದಲ ವಂದೇ ಮೆಟ್ರೋಗೆ ಪ್ರಧಾನಿ ಮೋದಿ ಅವರು ಇಂದು (ಸೆಪ್ಟೆಂಬರ್ 16) ಚಾಲನೆ ನೀಡಲಿದ್ದಾರೆ. ಹಾಗಾದರೆ ಯಾವ್ಯವಾ ಮಾರ್ಗಗಳಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಗುಜರಾತ್‌ನ ಅಹಮದಾಬಾದ್ ಮತ್ತು ಕಛ್ ಜಿಲ್ಲೆಯ ಭುಜ್ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ದೇಶದ ಮೊಟ್ಟ ಮೊದಲ ವಂದೇ ಮೆಟ್ರೋ ರೈಲಿಗೆ ಇಂದು (ಸೋಮವಾರ, ಸೆಪ್ಟೆಂಬರ್ 16) ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಅಲ್ಲದೆ ಇದರ ಜೊತೆಗೆ ಇದೇ ವೇಳೆ ಹಲವು ಭಾಗಗಳ ವಂದೇ ಭಾರತ್ ರೈಲು ಎಕ್ಸ್‌ಪ್ರೆಸ್ ರೈಲುಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ.

ಇದೀಗ ಸಂಚರಿಸುತ್ತಿರುವ ಸಾಮಾನ್ಯ ಮೆಟ್ರೋ ರೈಲುಗಳು ನಗರದೊಳಗೆ ಮತ್ತು ನಗರದ ಹೊರವಲಯದ ಪ್ರದೇಶಗಳಿಗೆ ಸಂಚಾರ ಮಾಡುತ್ತಿವೆ. ಆದರೆ, ವಂದೇ ಮೆಟ್ರೋ 100-250 ಕಿಲೋ ಮೀಟರ್ ವ್ಯಾಪ್ತಿಯ ನಗರಗಳ ನಡುವೆ ಸಂಚಾರ ಮಾಡಲಿದೆ ಎಂದು ಅಧಿಕಾರಿಗಳಿ ತಿಳಿಸಿದ್ದಾರೆ.
ಇನ್ನು ಈ ವಂದೇ ಮೆಟ್ರೋ ರೈಲು ಗಂಟೆಗೆ 110 ಕಿಲೋ ಮೀಟರ್ ವೇಗದಲ್ಲಿ ಸಂಚಾರ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದು ಸ್ಲೈಡಿಂಗ್ ಡೋರ್, ಆರಾಮದಾಯಕ ಆಸನ ಸೇರಿದಂತೆ ಮೆಟ್ರೋ ರೈಲಿನ ರೀತಿಯಲ್ಲೇ ಸೌಕರ್ಯಗಳನ್ನು ಹೊಂದಿರಲಿದೆ. ಇದು 12 ಕೋಚ್ ಹೊಂದಿದ್ದು, ಒಂದು ಬಾರಿಗೆ 1,150 ಪ್ರಯಾಣಿಕರನ್ನು ಹೊತ್ತು ಸಾಗಲಿದೆ ಎಂದು ತಿಳಿದುಬಂದಿದೆ.
ಬೃಹತ್ ನಗರವಾಗಿರುವ ಅಹಮದಾಬಾದ್ ಮತ್ತು ಭೌಗೋಳಿಕವಾಗಿ ದೇಶದ ಅತಿದೊಡ್ಡ ಜಿಲ್ಲೆ ಮತ್ತು ಔದ್ಯಮಿಕ ಕೇಂದ್ರವಾಗಿರುವ ಭುಜ್ ನಡುವಿನ 359 ಕಿಲೋ ಮೀಟರ್ ದೂರವನ್ನು ರೈಲು 5 ಗಂಟೆ 45 ನಿಮಿಷದಲ್ಲಿ ಕ್ರಮಿಸಲಿದೆ. ಟಿಕೆಟ್ ದರ 455 ರುಪಾಯಿ ಇರಲಿದ್ದು, ಕನಿಷ್ಠ ದರ 30 ರುಪಾಯಿ ಎಂದು ತಿಳಿದುಬಂದಿದೆ.
ಮಾರ್ಗ, ನಿಲುಗಡೆ, ಸಮಯಗಳ ವಿವರ
1. ವಂದೇ ಮೆಟ್ರೋ ಸೇವೆಯು ಭುಜ್ (ಕಚ್ ಜಿಲ್ಲೆಯಲ್ಲಿದೆ) ನಿಂದ ಅಹಮದಾಬಾದ್‌ನೊಂದಿಗೆ ಸಂಪರ್ಕಿಸುತ್ತದೆ.
2. 360 ಕಿಲೋ ಮೀಟರ್ ದೂರವನ್ನ 5 ಗಂಟೆ 45 ನಿಮಿಷಗಳಲ್ಲಿ ಕ್ರಮಿಸಲಿದೆ.
3. ಈ ರೈಲು ಗರಿಷ್ಠ 110 ಕಿಲೋ ಮೀಟರ್ವೇ ವೇಗದಲ್ಲಿ ಸಂಚರಿಲಿದೆ.
4. ಅಂಜಾರ್, ಗಾಂಧಿಧಾಮ್, ಭಚೌ, ಸಮಖಿಯಾಲಿ, ಹಲ್ವಾಡ್, ಧ್ರಂಗಾಧ್ರಾ, ವಿರಾಮ್ಗಮ್, ಚಂದ್ಲೋಡಿಯಾ, ಸಬರಮತಿ ಮತ್ತು ಕಲುಪುರ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
5. ವಾರದಲ್ಲಿ 6 ದಿನ ಕಾರ್ಯನಿರ್ವಹಿಸುತ್ತದೆ. ಶನಿವಾರ ಭುಜ್‌ನಿಂದ, ಭಾನುವಾರ ಅಹಮದಾಬಾದ್‌ನಿಂದ ಸೇವೆ ಸ್ಥಗಿತಗೊಳಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳಿ ತಿಳಿಸಿದ್ದಾರೆ.
6. ಬೆಳಗ್ಗೆ 5:05 ಗಂಟೆಗೆ ಭುಜ್‌ನಿಂದ ನಿರ್ಗಮಿಸಲಿದ್ದು, ಅಹಮದಾಬಾದ್‌ಗೆ ಬೆಳಗ್ಗೆ 10:50 ಗಂಟೆಗೆ ಆಗಮಿಸಲಿದೆ.
7. ಸಂಜೆ 5:30ಕ್ಕೆ ಅಹಮದಾಬಾದ್‌ನಿಂದ ನಿರ್ಗಮಿಸಲಿದ್ದು, ಭುಜ್‌ಗೆ ರಾತ್ರಿ 11:20 ಗಂಟೆಗೆ ಆಗಮನಿಸಲಾಗಿದೆ
ಯಾವೆಲ್ಲ ವಿಶೇಷತೆಗಳನ್ನೊಳಗೊಂಡಿದೆ?
1. ಈ ಮೆಟ್ರೋ ರೈಲು 1,150 ಹಾಸನಗಳನ್ನು ಹೊಂದಿರಲಿದ್ದು, 2,058 ನಿಂತು ಪ್ರಯಾಣಿಸಬಹುದಾಗಿದೆ. ಕುಳಿತುಕೊಳ್ಳಲು ಮೃದು ಸೋಫಾಗಳನ್ನು ಕೂಡ ಹೊಂದಿದೆ.
2. ಮೆಟ್ರೋ ಸಂಪೂರ್ಣ ಹವಾನಿಯಂತ್ರಿತವಾಗಿದೆ (ಎ.ಸಿ.)
3. ಇದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನೇ ಹೋಲುತ್ತದೆ. ಆದರೆ ಉಪನಗರದ ಮೆಟ್ರೋ ವ್ಯವಸ್ಥೆಗಳ ವೈಶಿಷ್ಟ್ಯತೆಯನ್ನು ಒಳಗೊಂಡಿದೆ.
4. ಎರಡೂ ತುದಿಗಳಲ್ಲಿ ಎಂಜಿನ್ ಮತ್ತು ಎರಡೂ ಬದಿಗಳಲ್ಲಿ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳನ್ನು ಹೊಂದಿದೆ.
5. ಇನ್ನು ಸಂಪೂರ್ಣ ಬುಕ್ಕಿಂಗ್ ಇಲ್ಲ, ಟಿಕೆಟ್ ಖರೀದಿಸಲು ಕೂಡ ಅವಕಾಶ ಕಲ್ಪಿಸಲಾಗಿದೆ.
ಟಿಕೆಕ್ ದರಗಳ ವಿವರ: ಕನಿಷ್ಠ ಟಿಕೆಟ್ ದರವು 30 ರೂಪಾಯಿನಿಂದ ಆರಂಭವಾಗಲಿದ್ದು, ಜಿಎಸ್‌ಟಿ ಸೇರಿ ನಿಖರವಾದ ದರಗಳನ್ನು ಇನ್ನೂ ತಿಳಿಸಲಾಗಿಲ್ಲ. ಭುಜ್‌ನಿಂದ ಅಹಮದಾಬಾದ್‌ಗೆ ಏಕಮುಖ ಪ್ರಯಾಣಕ್ಕೆ ಜಿಎಸ್‌ಟಿ ಹೊರತುಪಡಿಸಿ ಟಿಕೆಟ್ ದರ 430 ರೂಪಾಯಿ ಆಗಲಿದೆ ಎಂದು ತಿಳಿದುಬಂದಿದೆ.












Click it and Unblock the Notifications