Pallakki Bus; ಹುಬ್ಬಳ್ಳಿ-ಶಿರಡಿ ಬಸ್; ದರ, ವೇಳಾಪಟ್ಟಿ

ಹುಬ್ಬಳ್ಳಿ, ಜನವರಿ 21: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶಿರಡಿಗೆ ಹೋಗುವ ಭಕ್ತರ ಅನುಕೂಲಕ್ಕಾಗಿ ಹವಾನಿಯಂತ್ರಣ ರಹಿತ ಸ್ಲೀಪರ್ ಬಸ್ ಸೇವೆಯನ್ನು ಹುಬ್ಬಳ್ಳಿಯಿಂದ ಆರಂಭಿಸಿದೆ.

ವಾ.ಕ.ರ.ಸಾ.ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗ ಹುಬ್ಬಳ್ಳಿ-ಶಿರಡಿ ನಡುವೆ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್ ಧಾರವಾಡ, ಬೆಳಗಾವಿ, ಪುಣೆ, ಅಹಮದ್ ನಗರ ಮೂಲಕ ಶಿರಡಿಯನ್ನು ತಲುಪಲಿದೆ.

NWKRTC Pallakki Bus Hubballi Shirdi Fare And Schedule

ಉತ್ತರ ಕರ್ನಾಟಕ ಭಾಗದಿಂದ ಮತ್ತು ಹುಬ್ಬಳ್ಳಿಯಿಂದ ಶಿರಡಿಗೆ ಹೋಗುವ ಭಕ್ತರು ಹುಬ್ಬಳ್ಳಿ -ಶಿರಡಿ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಸಲು ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಲು http://ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಬಸ್ ವೇಳಾಪಟ್ಟಿ, ದರ; ಹುಬ್ಬಳ್ಳಿ-ಶಿರಡಿ ನಡುವಿನ ನಾನ್ ಎಸಿ ಸ್ಲೀಪರ್ ಬಸ್ ಸೇವೆಗೆ 1280 ರೂ. ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ. ಈ ಕುರಿತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದೆ.

ಈ ಬಸ್ ಹುಬ್ಬಳ್ಳಿಯನ್ನು 20:88ಕ್ಕೆ ಬಿಡಲಿದ್ದು, ಶಿರಡಿಯನ್ನು 08:44ಕ್ಕೆ ತಲುಪಲಿದೆ. ಶಿರಡಿಯಿಂದ 20:00ಕ್ಕೆ ಹೊರಡಲಿದ್ದು, ಹುಬ್ಬಳ್ಳಿಗೆ 07;00ಕ್ಕೆ ತಲುಪಲಿದೆ. ಪ್ರಯಾಣಿಕರ ಹೆಚ್ಚಿನ ಮಾಹಿತಿಗಾಗಿ 7760991682/ 7760991688 ಸಂಖ್ಯೆಗೆ ಕರೆ ಮಾಡಬಹುದು.

10 ಪಲ್ಲಕ್ಕಿ ಬಸ್; 2023ರ ಅಕ್ಟೋಬರ್ ತಿಂಗಳಿನಲ್ಲಿ ಕೆಎಸ್ಆರ್‌ಟಿಸಿ 'ಪಲ್ಲಕ್ಕಿ' ಹೆಸರಿನ ನೂತನ ನಾನ್ ಎಸಿ ಸ್ಲೀಪರ್ ಬಸ್‌ ಸೇವೆಯನ್ನು ಆರಂಭಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಮಾದರಿಯ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಿದ್ದರು.

ಹಂತ ಹಂತವಾಗಿ ಮೂರು ಸಾರಿಗೆ ನಿಗಮಗಳಿಗೆ ಈ ಮಾದರಿಯ ಬಸ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC)ಗೆ 10 'ಪಲ್ಲಕ್ಕಿ' ಮಾದರಿ ಬಸ್‌ಗಳನ್ನು ನೀಡಲಾಗುತ್ತದೆ ಎಂಬ ಮಾಹಿತಿ ಇತ್ತು.

ಈ ಸ್ಲೀಪರ್ ಮಾದರಿ ಬಸ್‌ಗಳನ್ನು ಯಾವ ಮಾರ್ಗದಲ್ಲಿ ಓಡಿಸಬೇಕು ಎಂದು ನಿಗಮ ತೀರ್ಮಾನ ಕೈಗೊಳ್ಳಲಿದೆ. ಸದ್ಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿರುವ ಒಟ್ಟು ಬಸ್‌ಗಳು 4,866 ಮತ್ತು ಕಾರ್ಯಾಚರಣೆಯಲ್ಲಿರುವ ಬಸ್‌ಗಳು 4,579.

ನಾನ್ ಎಸಿ ಸ್ಲೀಪರ್ ಬಸ್‌ಗಳಿಗೆ 'ಪಲ್ಲಕ್ಕಿ' ಎಂಬ ಹೆಸರನ್ನು ಸ್ವತಃ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದ್ದರು. ಈ ಬಸ್‌ಗಳಿಗೆ 'ಸಂತೋಷವು ಪ್ರಯಾಣಿಸುತ್ತಿದೆ' ಎಂಬ ಟ್ಯಾಗ್ ಲೈನ್ ನೀಡಲಾಗಿದೆ.

'ಪಲ್ಲಕ್ಕಿ' ಹೆಸರಿನ ಈ ಬಸ್‌ಗಳು 11.3 ಮೀಟರ್ ಉದ್ದವಿದ್ದು, ಬಿಎಸ್‌-6 ತಂತ್ರಜ್ಞಾನ ಮಾದರಿ ಹೆಚ್‌ಪಿ ಇಂಜಿನ್ ಹೊಂದಿವೆ. 30 ಸೀಟುಗಳನ್ನು ಹೊಂದಿದ್ದು, ಪ್ರತಿ ಸೀಟುಗಳಿಗೆ ಮೊಬೈಲ್, ಲ್ಯಾಪ್‌ಟಾಪ್ ಚಾರ್ಜಿಂಗ್ ವ್ಯವಸ್ಥೆ ಇದೆ. ಬಸ್‌ನಲ್ಲಿ ಆಡಿಯೋ ಸ್ಪೀಕರ್ ಮೂಲಕ ಪ್ರಯಾಣಿಕರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ.

ಇದು ಸ್ಲೀಪರ್ ಮಾದರಿಯ ಬಸ್ ಆದರೂ ಸಹ ಎಸಿ ಸೌಲಭ್ಯವನ್ನು ಹೊಂದಿಲ್ಲ. ಅತ್ಯಾಧುನಿಕ ವ್ಯವಸ್ಥೆಗಳು ಪ್ರಯಾಣಿಕರಿಗೆ ಸುಖಕರ ಪ್ರಯಾಣದ ಅನುಭವ ನೀಡಲಿವೆ. ವಿವಿಧ ಮಾರ್ಗದಲ್ಲಿ ಈಗಾಗಲೇ ಪಲ್ಲಕ್ಕಿ ಮಾದರಿ ಬಸ್‌ಗಳು ಸಂಚಾರವನ್ನು ನಡೆಸುತ್ತಿವೆ, ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+