ಬೆಂಗಳೂರಿನ ಕೆಆರ್ ಪುರಂ, ವೈಟ್‌ಫೀಲ್ಡ್ ಸೇರಿದಂತೆ 15 ರೈಲು ನಿಲ್ದಾಣಗಳು ಪಡೆಯಲಿವೆ ಹೊಸ ರೂಪ, ಇದಕ್ಕೆ ತಗಲುವ ವೆಚ್ಚ ಎಷ್ಟು?

ಬೆಂಗಳೂರು, ಡಿಸೆಂಬರ್‌, 06: "ಅಮೃತ್ ಭಾರತ್ ನಿಲ್ದಾಣ" ಯೋಜನೆಯಡಿಯಲ್ಲಿ ರಾಜ್ಯದ ಹಲವು ಕಡೆ ರೈಲೈ ನಿಲ್ದಾಣಗಳಿಗೆ ಹೊಸ ರೂಪ ನೀಡಲು ನಿರ್ಧರಿಸಲಾಗಿದೆ. ಹಾಗೆಯೇ ಬೆಂಗಳೂರಿನ ಹೊರವಲಯದಲ್ಲಿರುವ ಈ ರೈಲು ನಿಲ್ದಾಣಗಳು ಹೊಸ ರೂಪ ಪಡೆಯಲಿವೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್ ಮಾಹಿತಿ ನೀಡಿದ್ದಾರೆ. ಹಗಾದರೆ ಆ ರೈಲು ನಿಲ್ದಾಣಗಳು ಯಾವುವು, ಅವುಗಳ ಹೊಸ ರೂಪಕ್ಕೆ ತಗಲುವ ವೆಚ್ಚ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬಂಗಾರಪೇಟೆ, ಕೆಂಗೇರಿ, ಕೃಷ್ಣರಾಜಪುರಂ, ಮಂಡ್ಯ, ಚನ್ನಪಟ್ಟಣ, ಹೊಸೂರು, ಹಿಂದೂಪುರ, ಕುಪ್ಪಂ, ಮಾಲೂರು, ರಾಮನಗರ, ತುಮಕೂರು ಮತ್ತು ವೈಟ್‌ ಫೀಲ್ಡ್ ಸೇರಿದಂತೆ 15 ನಿಲ್ದಾಣಗಳು ಹೊಸ ರೂಪ ಪಡೆಯಲಿವೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ (ಡಿಆರ್‌ಯುಸಿಸಿ) ಮೂರನೇ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಯೋಗೇಶ್ ಮೋಹನ್ ಅವರು, ತುಮಕೂರಿನ ಕ್ಯಾತಸಂದ್ರ, ನಿಡವಂಡ, ಪೆನುಕೊಂಡ ಮತ್ತು ವೈಟ್‌ ಫೀಲ್ಡ್‌ನಲ್ಲಿ ಇರುವ ಗೂಡ್ಸ್ ಶೆಡ್‌ಗಳನ್ನು ಫೆನ್ಸಿಂಗ್‌, ಆಶ್ರಯ, ವ್ಯಾಪಾರಿ ಕೊಠಡಿ, ಕಾರ್ಮಿಕರಿಗೆ ಕ್ಯಾಂಟೀನ್ ಮತ್ತು ವಿಶ್ರಾಂತಿ ಕೊಠಡಿಯಂತಹ ಸೌಲಭ್ಯಗಳೊಂದಿಗೆ ಹೊಸ ರೂಪ ನೀಡಲು ನಿರ್ಧರಿಸಲಾಗಿದೆ ಎಂದರು.

New look for 15 railway stations including KR Puram, Whitefield, when?

ಕಳೆದ ಒಂದು ವರ್ಷದಲ್ಲಿ ವಿಭಾಗದ ಸಾಧನೆಗಳನ್ನು ವಿವರಿಸಿದ ಮೋಹನ್, ನವೆಂಬರ್‌ನಲ್ಲಿ 24.22 ಕೋಟಿ ರೂಪಾಯಿ ಆದಾಯ ಬಂದಿದ್ದು, ಇದು ಇದುವರೆಗಿನ ತಿಂಗಳೊಂದರಲ್ಲಿ ಅತ್ಯಧಿಕ ಸರಕು ಸಾಗಣೆ ಆದಾಯ ಆಗಿದೆ. ಪ್ರಸಕ್ತ ವರ್ಷದಲ್ಲಿ ಈ ವಿಭಾಗವು ಇಲ್ಲಿಯವರೆಗೆ 173.17 ಕೋಟಿ ರೂಪಾಯಿಗಳ ಒಟ್ಟು ಸರಕು ಸಾಗಣೆ ಆದಾಯವನ್ನು ದಾಖಲಿಸಿದೆ ಎಂದು ತಿಳಿಸಿದರು.

ಈ ವರ್ಷದ ಏಪ್ರಿಲ್‌ನಲ್ಲಿ ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ರೂಪದಲ್ಲಿ ಹೊಸ ಸಂಚಾರ ಪ್ರಾರಂಭ ಆಗಿದೆ. ಇಲ್ಲಿಯವರೆಗೆ 63 ರೇಕ್‌ಗಳನ್ನು ಲೋಡ್ ಮಾಡಲಾಗಿದ್ದು, ಇದರಿಂದ 9.33 ಕೋಟಿ ರೂಪಾಯಿ ಆದಾಯ ಬಂದಿದೆ. ಅಕ್ಟೋಬರ್‌ನಲ್ಲಿ ದೊಡ್ಡಬಳ್ಳಾಪುರದಿಂದ ರಾಜಸ್ಥಾನದ ಕನಕಪುರಕ್ಕೆ ಮೊದಲ ಬಾರಿಗೆ ಟ್ರ್ಯಾಕ್ಟರ್‌ಗಳನ್ನು ಲೋಡ್ ಮಾಡಲಾಗಿದೆ ಎಂದು ತಿಳಿಸಿದರು.

ನವೆಂಬರ್ 2023ರವರೆಗೆ 515 ರೇಕ್‌ಗಳನ್ನು ಲೋಡ್ ಮಾಡಲಾಗಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 46ರಷ್ಟು ಬೆಳವಣಿಗೆ ಕಂಡುಬಂದಿದೆ. ಹೆಚ್ಚುವರಿಯಾಗಿ, ರೈಲುಗಳ ಮೂಲಕ ಆಟೋ ಮೊಬೈಲ್‌ಗಳ ಸಾಗಣೆಯು ಗಮನಾರ್ಹವಾದ ಹೆಚ್ಚಳವನ್ನು ಕಂಡಿದೆ ಅಂತಾ ಹೇಳಿದರು.

ಮಂಗಳೂರು ಜಂಕ್ಷನ್‌ಗೆ ಹೊಸ ರೂಪ

ಮಂಗಳೂರು ಜಂಕ್ಷನ್‌ನ ಪುನರಾಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿದ್ದು, ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗವು ಫೆಬ್ರವರಿ ಅಂತ್ಯದ ವೇಳೆಗೆ ಈ ಕಾರ್ಯವನ್ನು ಮುಗಿಸುವ ಭರವಸೆಯನ್ನು ನೀಡಿದೆ.

ದಕ್ಷಿಣ ರೈಲ್ವೆಯು "ಅಮೃತ್ ಭಾರತ್ ಸ್ಟೇಷನ್" ಯೋಜನೆಯಡಿ ₹10.58 ಕೋಟಿ ಅಂದಾಜು ವೆಚ್ಚದಲ್ಲಿ ಈ ಪುನರಾಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಇದು ಮುಂದಿನ ವರ್ಷದ ಅಂದರೆ 2024 ಫೆಬ್ರವರಿ ವೇಳೆಗೆ ಸಂಪೂರ್ಣವಾಗಿದೆ ಮುಕ್ತಯಾವಾಗಲಿದೆ. ಈ ವಿಭಾಗದ ಅಡಿಯಲ್ಲಿ ಇನ್ನೂ 15 ನಿಲ್ದಾಣಗಳು ಪುನರಾಭಿವೃದ್ಧಿ ಪ್ರಕ್ರಿಯೆಯ ಹಂತದಲ್ಲಿದೆ ಎಂದು ತಿಳಿಸಿದೆ.

ಪುನರಾಭಿವೃದ್ಧಿ ಕಾರ್ಯದ ಸಮಯದಲ್ಲಿ, ಪಡೀಲ್-ಬಜಾಲ್ ರಸ್ತೆಯಿಂದ ನಿಲ್ದಾಣಕ್ಕೆ ಸರಿಯಾದ ಸಂಪರ್ಕ ರಸ್ತೆಯ ಬಾಕಿ ಉಳಿದಿರುವ ಬೇಡಿಕೆಯನ್ನು ಈಡೇರಿಸಲಿದೆ. ಇದರ ಪರಿಣಾಮವಾಗಿ, 5 ಮೀಟರ್ ಅಗಲದ ಕಾಂಕ್ರೀಟ್ ರಸ್ತೆಯ 350 ಮೀ ವಿಸ್ತರಣೆಯನ್ನು ಕಾಂಕ್ರೀಟ್ ಸುಸಜ್ಜಿತ ರಸ್ತೆಯಾಗಿ 9 ಮೀಟರ್‌ಗೆ ವಿಸ್ತರಿಸಲಾಗುತ್ತಿದೆ. ವಿಸ್ತರಣೆಗೊಂಡ ರಸ್ತೆಯಿಂದ ನಿಲ್ದಾಣದ ಆವರಣದಲ್ಲಿ ಬಸ್‌ಗಳು ಸಹ ಸುಲಭವಾಗಿ ಸಂಚಾರ ಮಾಡಬಹುದು ಎಂದು ತಿಳಿಸಿದೆ.

ಪ್ರಯಾಣಿಕರು ಸೇರಿದಂತೆ ಭೇಟಿ ನೀಡುವ ಸಾರ್ವಜನಿಕರಿಗೆ ಸಂಘಟಿತ ಸ್ಥಳದೊಂದಿಗೆ ಹೆಚ್ಚಿನ ವಾಹನಗಳಿಗೆ ಸ್ಥಳಾವಕಾಶ ಕಲ್ಪಿಸಲು ಪಾರ್ಕಿಂಗ್ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವಿಭಾಗವು ತಿಳಿಸಿದೆ. ಇನ್ನು ಪ್ಲಾಟ್‌ ಫಾರ್ಮ್ ಸಂಖ್ಯೆ 1 ಮತ್ತು 2ರಲ್ಲಿ ಪೂರ್ಣ ಉದ್ದದ ಪ್ಲಾಟ್‌ ಫಾರ್ಮ್‌ಗಳ ಶೆಲ್ಟರ್‌ಗಳು ನಿರ್ಮಾಣ ಹಂತದಲ್ಲಿವೆ.

ಈಗಿರುವ ಕಟ್ಟಡದ ಪಕ್ಕದಲ್ಲೇ ಹೊಸ ಪಾರ್ಸೆಲ್ ಕಚೇರಿ ಬರಲಿದೆ. ಪಾರ್ಸೆಲ್ ಕಚೇರಿ ಕಟ್ಟಡದ ಅಡಿಪಾಯಕ್ಕಾಗಿ ಭೂಮಿ ಉತ್ಖನನ ಪ್ರಗತಿಯಲ್ಲಿದೆ. ಪುನರಾಭಿವೃದ್ಧಿಯು ಸುಧಾರಿತ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಇರಲಿದೆ. ನಿಲ್ದಾಣದ ಮುಂಭಾಗವು ಪೂರ್ಣಗೊಂಡ ನಂತರ ಕರ್ನಾಟಕದ ಕರಾವಳಿ ನಿರ್ಮಾಣ ಶೈಲಿಯನ್ನು ಹೊಂದಿರಲಿದೆ.

ಶೋರನೂರು-ಮುಂಬೈ ಮತ್ತು ಹಾಸನ-ಮಂಗಳೂರು ಮಾರ್ಗಗಳಲ್ಲಿ ನೆಲೆಗೊಂಡಿರುವ ಮಂಗಳೂರು ಜಂಕ್ಷನ್ ಪಶ್ಚಿಮ ಕರಾವಳಿ ಪ್ರಮುಖ ನಿಲ್ದಾಣವಾದಾಗಿದೆ. ಇದು ಸುಮಾರು 85 ವಿವಿಧ ರೀತಿಯ ರೈಲುಗಳನ್ನು ಕಾರ್ಯನಿವಹಿಸುತ್ತವೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+