ಮಹಾ ಶಿವರಾತ್ರಿ 2023: ಉಡುಪಿಯ ಎಲ್ಲೂರು ವಿಶ್ವನಾಥ ದೇವಾಲಯದ ಕ್ಷೇತ್ರ ಪರಿಚಯ
ಎಲ್ಲೂರು ಎಂಬ ಪುಟ್ಟ ಗ್ರಾಮ ಮಂಗಳೂರು - ಉಡುಪಿ ರಾಷ್ಟೀಯ ಹೆದ್ದಾರಿ 66ರ ಉಚ್ಚಿಲದಿಂದ ಸುಮಾರು 5-6 ಕಿ.ಮೀಗಳಷ್ಟು ಪೂರ್ವದ ಕಡೆಗೆ ಚಲಿಸಿದರೆ ಸಿಗುವ ಗ್ರಾಮ. ಅಲ್ಲಿರುವ ಕಾರ್ಣಿಕ ದೇವಾಲಯವೇ 'ವಿಶ್ವೇಶ್ವರ ಕ್ಷೇತ್ರ'. ದೇವಾಲಯದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಉಡುಪಿ , ಫೆಬ್ರವರಿ 17:ಫೆಬ್ರವರಿ ಹದಿನೆಂಟರಂದು ಮಹಾಶಿವರಾತ್ರಿ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವ ಸುಲಭವಾಗಿ ಒಲಿಯುವವ ಎನ್ನುವ ಪ್ರತೀತಿಯಿದೆ. ಶಿವನನ್ನು ಒಲಿಸಿಕೊಳ್ಳಲು ಭಕ್ತಿಯಿಂದ ಶಿವಲಿಂಗಕ್ಕೆ ನೀರು, ಬಿಲ್ವಪತ್ರೆ ಅರ್ಪಿಸಿದರೆ ಸಾಕು ಎನ್ನುವುದು ನಂಬಿಕೆ.
ಶಿವರಾತ್ರಿಯ ವಿಶೇಷವೇನು ಎನ್ನುವುದಕ್ಕೆ ಪುರಾಣದಲ್ಲಿ ಹಲವು ಉಲ್ಲೇಖಗಳಿವೆ. ಶಿವನು ಪಾರ್ವತಿಯನ್ನು ಮದುವೆಯಾದ ದಿನ, ಸಮುದ್ರ ಮಂಥನದ ವೇಳೆ ವಿಷ ಉದ್ಬವವಾದಾಗ ಶಿವ ಅದನ್ನು ಕುಡಿದಾಗ ಪಾರ್ವತಿ ಇಡೀ ರಾತ್ರಿ ಜಾಗರಣೆ ಮಾಡಿ ಗಂಟಲೊಳಗೆ ವಿಷ ಇಳಿಯದಂತೆ ತಡೆದ ದಿನವೆಂದೂ ಹೇಳಲಾಗುತ್ತದೆ.
ಮಹಾಶಿವರಾತ್ರಿಯ ಪ್ರಯುಕ್ತ ಉಡುಪಿ ಜಿಲ್ಲೆಯ ಪುರಾಣ ಪ್ರಸಿದ್ದ ಮಹತೋಭಾರ ಎಲ್ಲೂರು ವಿಶ್ವೇಶ್ವರ ದೇವಾಲಯದ ಸುತ್ತ ಒಂದು ರೌಂಡ್ ಅಪ್.

ಎಲ್ಲೂರ್ ಎಂಬ ಪುಟ್ಟ ಗ್ರಾಮ ಮಂಗಳೂರು - ಉಡುಪಿ ರಾಷ್ಟೀಯ ಹೆದ್ದಾರಿ 66ರ ಉಚ್ಚಿಲದಿಂದ ಸುಮಾರು 5-6 ಕಿ.ಮೀಗಳಷ್ಟು ಪೂರ್ವದ ಕಡೆಗೆ ಚಲಿಸಿದರೆ ಸಿಗುವ ಗ್ರಾಮ. ಅಲ್ಲಿರುವ ಕಾರ್ಣಿಕ ದೇವಾಲಯವೇ 'ವಿಶ್ವೇಶ್ವರ ಕ್ಷೇತ್ರ'. ತುಳುವಿನಲ್ಲಿ 'ಉಂಡಾಯಿ ಉಲ್ಲಾಯೇ' (ಅಂದರೆ ಲಿಂಗ ರೂಪದಲ್ಲಿ ಮೂಡಿ ಬಂದತಂಹ ಈಶ್ವರ ದೇವರು) ಅಂತಲೂ ಕರೆಯಲಾಗುತ್ತದೆ.
ಸ್ಥಳ ಪುರಾಣ: ಕುಂದ ಹೆಗ್ಗಡೆ ಎಂಬ ಪ್ರಾಂತ್ಯ ಅರಸ ರಿಂದ ಪೂಜಿಸಲ್ಪಡುತ್ತಿದ್ದ ಒಂಬತ್ತು ಪ್ರಾಂತ್ಯಗಳ (ಕುತ್ಯಾರ್, ನಂದಿಕೂರ್, ಅಡ್ವೆ, ಉಳ್ಳೂರ್, ಕೊಳಚೂರ್, ಕುಂಜೂರ್, ಕಳತ್ತೂರ್, ಪಾದೂರ್, ಬೊಳಪು) ಒಡೆಯ, ಮೂಲತಃ ಒಲಿದದ್ದು ಪರಿಶಿಷ್ಟ ಗುಂಪಿಗೆ ಸೇರಿದ ಮಹಿಳೆಗೆ ಎನ್ನುವ ಮಾಹಿತಿ ದೇವಾಲಯದಲ್ಲಿ ಲಭ್ಯವಿರುವ ಉಲ್ಲಾಯ ದೇವರ ಇತಿಹಾಸ ಕುರಿತ ಪುಸ್ತಕದಲ್ಲಿ ಉಲ್ಲೇಖವಾಗಿದೆ.
ಉದ್ಭವ ಮಹಾದೇವನು ಮೊದಲು ಬುಡಕಟ್ಟು ವರ್ಗದ ವೃದ್ದ ಮಹಿಳೆಗೆ ಗೋಚರಿಸಿದ್ದು. ಮಹಿಳೆ ಅಣಬೆ ತೆಗೆಯಲು ಕತ್ತಿಯನ್ನು ಉಪಯೋಗಿಸಿದಾಗ ಆ ಕತ್ತಿ, ಉದ್ಭವ ಲಿಂಗಕ್ಕೆ ತಾಗಿ ರಕ್ತ ಒಸರಿಸಲಾರಂಭಿಸಿತಂತೆ. ವಿಷಯ ತಿಳಿದ ಅರಸ ಮತ್ತು ಆತನ ಗುರುಗಳು ಆಗಮಿಸಿ ಎಳನೀರು ಸುರಿದಾಗ ಮಹಾದೇವ ಗೋಚರಿಸಿದನು.
ಕುಂದ ಹೆಗ್ಗಡೆ ಅರಸು ಮನೆತನದ ಭೂರಿ ಕೀರ್ತಿ ಎಂಬ ಅರಸನು ಸಂತಾನ ಅಪೇಕ್ಷೆಯಿಂದ ಮತ್ತು ತನ್ನ ರಾಜ್ಯದಲ್ಲಿ ದೇವಾಲಯವಿಲ್ಲವೆಂಬ ಕಾರಣಕ್ಕೆ ಕಾಶಿಗೆ ಹೋಗಿ ತಪಸ್ಸನ್ನು ಆಚರಿಸಿ ದೇವರನ್ನು ಕರೆತಂದನೆಂದು ಕೂಡ ಇತಿಹಾಸ ಪುಟದಲ್ಲಿ ಗುರುತಿಸಲ್ಪಟ್ಟಿದ್ದಾನೆ.
ಅರಸು ತಪಸ್ಸನ್ನು ಆಚರಿಸಿದರೂ ಮಹಾದೇವ ಮೊದಲು ಗೋಚರಿಸಿದ್ದು ಮಣ್ಣಿನಮಗಳಿಗೆ, ಆಕೆಯಿಂದ "ಎಲ್ಲು" ಎಂದು ಮೊದಲು ಕರೆಯಲ್ಪಟ್ಟಿತು. ಅಂದಿನಿಂದ ಆಕೆಯ ನೆನಪಿಗಾಗಿ ಕ್ಷೇತ್ರಕ್ಕೆ ಎಲ್ಲೂರು ಎಂದಾಯಿತು ಎನ್ನುವುದು ಕ್ಷೇತ್ರಕ್ಕೆ ಇರುವ ಇತಿಹಾಸ.
ನಭೂತೋ ನಭವಿಷ್ಯತಿ: ಎನ್ನುವ ರೀತಿಯಲ್ಲಿ ಕೆಲವು ವರ್ಷಗಳ ಹಿಂದೆ ದೇವಾಲಯದ ಜಿರ್ಣೋದ್ದಾರ ಕೆಲಸ ನಡೆದಿತ್ತು. ಇಲ್ಲಿನ ಗೋಪುರ ,ಮಂಟಪ , ಗರ್ಭಗುಡಿಯು ಬೇಳೂರು ಹಳೆಬೀಡಿನಂತಹ ಶಿಲ್ಪ ಕಲೆಗಳ ರೀತಿಯಲ್ಲಿ ಮೂಡಿ ಬಂದಿರುವುದು ವಿಶೇಷ.
ಇಲ್ಲಿಗೆ ದರ್ಶನಕ್ಕೆ ಬರುವ ಭಕ್ತರು ಕೇವಲ ಎಳನೀರು ಮತ್ತು ದೀಪದ ಎಣ್ಣೆ ತೆಗೆದುಕೊಂಡು ಹೋದರೆ ಸಾಕು. ಇದೇ ಎಲ್ಲೂರು ಒಡೆಯನ ಬಯಕೆ ಎನ್ನುವುದು ನಂಬಿಕೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಚಾರವೇನಂದರೆ, ಆಸುಪಾಸಿನ ಅಂಗಡಿಯವರು ಕುಡಿಯಲು ಎಳನೀರನ್ನು ಇಲ್ಲಿ ಕೊಡುವುದಿಲ್ಲ, ಅದು ಕೇವಲ ಶಿವನ ಅಭಿಷೇಕಕ್ಕಾಗಿ ಮಾತ್ರ ಎನ್ನುವುದು ಇವರ ನಂಬಿಕೆ.
ಕ್ಷೇತ್ರದ ವಿಳಾಸ:
ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನ,
ಎಲ್ಲೂರು ಅಂಚೆ , ಎಲ್ಲೂರು ಗ್ರಾಮ
ಉಡುಪಿ ಜಿಲ್ಲೆ.
ಕ್ಷೇತ್ರಕ್ಕ ತೆರಳಲು ಮಾರ್ಗ:
ಉಡುಪಿಯಿಂದ: ರಾ.ಹೆ 66ರಲ್ಲಿ ಬಂದು ಕಟಪಾಡಿ, ಕಾಪು, ಉಚ್ಚಿಲ ಬಳಿ ಎಡಕ್ಕೆ ತಿರುಗಬೇಕು(ಮದರಂಗಡಿಗೆ ಹೋಗುವ ರಸ್ತೆ)
ಮಂಗಳೂರಿನಿಂದ: ರಾ.ಹೆ 66ರಲ್ಲಿ ಬಂದು ಸುರತ್ಕಲ್ , ಮೂಲ್ಕಿ, ಪಡುಬಿದ್ರೆ , ಉಚ್ಚಿಲ ಬಳಿ ಬಲಕ್ಕೆ ತಿರುಗಬೇಕು (ಮುದರಂಗಡಿಗೆ ಹೋಗುವ ರಸ್ತೆ)
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications