Maha Kumbh Mela Special Trains: ಡಿಸೆಂಬರ್ 26ರಂದು ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ರೈಲು ಸಂಚಾರ; ಮಾಹಿತಿ ತಿಳಿಯಿರಿ
Maha Kumbh Mela Special Trains: ಭಾರತೀಯ ರೈಲ್ವೆಯು ಆಗಾಗ ಪ್ರಯಾಣಿಕರಿಗೆ ಶುಭಸುದ್ದಿಯನ್ನು ನೀಡುತ್ತಲೇ ಬಂದಿದೆ. ಹಾಗೆಯೇ ಇದೀಗ ಉತ್ತರ ಪ್ರದೇಶದಲ್ಲಿ ನಡೆಯಲಿರುವ ಮಹಾ ಕುಂಭಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆ ಭಾರತೀಯ ರೈಲ್ವೆ ವಿಶೇಷ ರೈಲು ಸೇವೆ ಒದಗಿಸುತ್ತಿದೆ. ಬೆಂಗಳೂರು, ಹುಬ್ಬಳ್ಳಿ ಮತ್ತು ಪ್ರಯಾಗ್‌ರಾಜ್ ನಡುವೆ ವಿಶೇಷ ಏಕಮುಖ ರೈಲು ಸಂಚಾರ ಪ್ರಕಟಿಸಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿಯಲ್ಲಿ ಮಹಾ ಕುಂಭಮೇಳ ನಡೆಯಲಿದ್ದು, ಅಲ್ಲಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆಯ ನೈಋತ್ಯ ರೈಲ್ವೆ ವಿಭಾಗವು ಬೆಂಗಳೂರು ಮತ್ತು ಹುಬ್ಬಳ್ಳಿಗಳಿಂದ ಪ್ರಯಾಗ್‌ರಾಜ್‌ಗೆ ವಿಶೇಷ ಏಕಮುಖ ರೈಲು ಸಂಚಾರ ಪ್ರಕಟಿಸಿದೆ. ಮಹಾ ಕುಂಭ ಮೇಳ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ನೈಋತ್ಯ ರೈಲ್ವೆ ಹುಬ್ಬಳ್ಳಿಯಿಂದ ಪ್ರಯಾಗ್‌ರಾಜ್‌ಗೆ ಏಕಮಾರ್ಗ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡೊಸಲಿದೆ ಎಂದು ಪಿಆರ್‌ಒ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಡಿಸೆಂಬರ್ 26 ಹುಬ್ಬಳ್ಳಿಯಿಂದ ಪ್ರಯಾಗ್‌ರಾಜ್‌ಗೆ ವಿಶೇಷ ರೈಲು: ಎಸ್‌ಎಸ್‌ಎಸ್ ಹುಬ್ಬಳ್ಳಿ-ಪ್ರಯಾಗ್‌ರಾಜ್ ನಡುವೆ ಏಕಮಾರ್ಗ ವಿಶೇಷ ಎಕ್ಸ್‌ಪ್ರೆಸ್ (ರೈಲುಸಂಖ್ಯೆ 07369) ರೈಲು ಹುಬ್ಬಳ್ಳಿಯಿಂದ ಡಿಸೆಂಬರ್ 26ರಂದು ಬೆಳಗ್ಗೆ 11 ಗಂಟೆಗೆ ಹೊರಟು, ಶನಿವಾರ 3 ಗಂಟೆಗೆ ಪ್ರಯಾಗ್‌ರಾಜ್ ತಲುಪಲಿದೆ.
ಈ ರೈಲು ಧಾರವಾಡ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಕರಾಡ್, ಪುಣೆ, ಅಹ್ಮದ ನಗರ, ಮನ್ಮಡ, ಭುಸಾವಲ್, ಖಾಂಡ್ವಾ, ತಲ್ವಾಡಿಯಾ, ಛಾನೆರಾ, ಖಿರ್ಕಿಯಾ, ಹರ್ದಾ, ಬಾನಾಪುರ, ಇಟಾರ್ಸಿ, ಪಿಪರಿಯಾ, ನರಸಿಂಗಪುರ, ಜಬಲ್ಪುರ, ಕಟ್ನಿ, ಮೈಹಾರ್, ಸತ್ನಾ ಮತ್ತು ಮಾಣಿಕ್ಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಈ ರೈಲು ಹನ್ನೊಂದು ಸ್ಲೀಪರ್ ಕ್ಲಾಸ್, 7 ಜನರಲ್ ಮತ್ತು ಎಸ್‌ಎಲ್‌ಆರ್‌ಡಿ ಸೇರಿದಂತೆ ಒಟ್ಟು 20 ಬೋಗಿಗಳನ್ನು ಹೊಂದಿರುತ್ತದೆ.
ಬೆಂಗಳೂರಿನಿದ ಪ್ರಯಾಗ್‌ರಾಜ್‌ಗೆ ವಿಶೇಷ ರೈಲು: ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ನೈಋತ್ಯ ರೈಲ್ವೆ ಏಕಮಾರ್ಗ ವಿಶೇಷ ರೈಲನ್ನು ಓಡಿಸಲಿದೆ ಎಂದು ವಲಯದ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ. ಈ ರೈಲು (06577) ಡಿಸೆಂಬರ್ 26ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣದಿಂದ ರಾತ್ರಿ 11 ಗಂಟೆಗೆ ಹೊರಟು, ಡಿಸೆಂಬರ್ 28ರ ಮಂದ್ಯಾಹ್ನ 1:30 ಗಂಟೆಗೆ ಪ್ರಯಾಗ್‌ರಾಜ್ ತಲುಪಲಿದೆ.
ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್‌ಪೇಟ್ಟೈ, ಕಟ್ಪಾಡಿ, ರೇಣಿಗುಂಟ, ಗುಡೂರು, ವಿಜಯವಾಡ, ವಾರಂಗಲ್, ಬಲ್ಹಾರ್ಷಾ, ನಾಗಪರು, ಇಟಾರ್ಸಿ, ಜಬಲ್ಪುರ್, ಕಟ್ನಿ, ಸತ್ನಾ ಮತ್ತು ಮಾಣಿಕ್ಪುರ ನಿಲ್ದಾಣಗಳಲ್ಲಿ ನಿಲ್ಲಲಿದೆ. ಈ ರೈಲು 15 ಸ್ಲೀಪರ್ ಕ್ಲಾಸ್ ಬೋಗಿಗಳು, 3 ಸಾಮಾನ್ಯ ದ್ವಿತೀಯದರ್ಜೆ ಬೋಗಿಗಳು ಮತ್ತು 2 ಎಸ್‌ಎಲ್‌ಆರ್/ಡಿ ಸೇರಿದಂತೆ 20 ಬೋಗಿಗಳನ್ನು ಒಳಗೊಂಡಿರುತ್ತದೆ.
ಈ ರೈಲುಗಳ ಆಗಮನ ಹಾಗೂ ನಿರ್ಗಮನ ಸಮಯ ತಿಳಿಯಲು ಪ್ರಯಾಣಿಕರು ಭಾರತೀಯ ರೈಲ್ವೆಯ ವೆಬ್‌ಸೈಟ್ www.enquiry.indianrail.gov.inಗೆ ಭೇಟಿ ನೀಡಬಹುದಾಗಿದೆ. ಅಥವಾ 139 ನಂಬರ್‌ಗೆ ಕರೆ ಮಾಡಿ ಅಥವಾ ಎನ್‌ಟಿಇಎಸ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮಾಹಿತಿ ಪಡೆಯಬಹುದು ಎಂದು ಭಾರತೀಯ ರೈಲ್ವೆಯ ನೈಋತ್ಯ ವಲಯದ ಅಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ












Click it and Unblock the Notifications