Travel Guide: ನಂದಿ ಬೆಟ್ಟದ ಸಮೀಪದಲ್ಲಿವೆ ಸ್ವರ್ಗದ ಅನುಭವ ನೀಡುವ ಪ್ರವಾಸಿ ತಾಣಗಳು
Nandi Hills: ಬೆಂಗಳೂರಿಗ ಸುತ್ತಮುತ್ತ ಸ್ವರ್ಗದಂತಹ ಅನುಭವ ನೀಡುವ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ನಗರದ ಸಮೀಪದಲ್ಲಿರುವ ಪ್ರಸಿದ್ಧ ಗಿರಿಧಾಮಗಳು, ಐತಿಹಾಸಿಕ ಮತ್ತು ಪಾರಂಪರಿಕ ತಾಣಗಳು ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತಲೇ ಇರುತ್ತವೆ. ಈ ಸಾಲಿಗೆ ನಂದಿ ಬೆಟ್ಟ ಕೂಡ ಸೇರುತ್ತದೆ. ಹಾಗಾದರೆ, ಇಲ್ಲಿಗೆ ತಲುಪುವ ಮಾರ್ಗಗಳು ಹಾಗೂ ಸಮಯಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬೆಂಗಳೂರಿನಿಂದ 61.2 ಕಿಲೋ ಮೀಟರ್ ದೂರದಲ್ಲಿರುವ ನಂದಿ ಬೆಟ್ಟಕ್ಕೆ ಚಳಿಗಾಲದಲ್ಲಿ ಪ್ರವಾಸ ಕೈಗೊಳ್ಳಲು ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿಗೆ ಪ್ರತಿನಿತ್ಯವೂ ಕೂಡ ಇಲ್ಲಿಗೆ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಅದರಲ್ಲೂ ಬೆಳಗ್ಗೆ, ಸಂಜೆ ಸಮಯದಲ್ಲೇ ಭೇಟಿ ನೀಡುವವರ ಸಂಖ್ಯೆಯೇ ಹೆಚ್ಚು.

ನಂದಿದುರ್ಗ ಎಂದು ಕರೆಯಲ್ಪಡುವ ನಂದಿ ಬೆಟ್ಟವು ಸಮುದ್ರ ಮಟ್ಟದಿಂದ 1,478 ಮೀಟರ್ ಅಂದರೆ 4,850 ಅಡಿಗಳಷ್ಟು ಎತ್ತರದಲ್ಲಿದೆ. ಬೆಂಗಳೂರಿನ ಸಮೀಪದಲ್ಲಿರುವ ಈ ಬೆಟ್ಟವು ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತಲೇ ಇರುತ್ತದೆ. ಯೋಗ ನಂದೀಶ್ವರ ದೇವಾಲಯದ ಹೊರಭಾಗವನ್ನು ಕಾವಲು ಕಾಯುವಂತಿರುವ ಗೂಳಿ ನಂದಿಯ ಅದ್ಭುತವಾದ ಪ್ರತಿಮೆಯಿದೆ. ಆದ್ದರಿಂದ ಈ ಸ್ಥಳಕ್ಕೆ ನಂದಿ ಬೆಟ್ಟ ಎಂದು ಹೆಸರಿಸಲಾಗಿದೆ. ಯೋಗ ನಂದೀಶ್ವರ ದೇವಾಲಯವು ಬೆಟ್ಟಗಳ ಮೇಲೆ ನೆಲೆಗೊಂಡಿದೆ ಮತ್ತು ಶಿವನ ವಾಸಸ್ಥಾನವಾಗಿದೆ.
ನಂದಿ ಬೆಟ್ಟದ ಬಳಿ ಯಾವಾಗಲೂ ತಂಪು ಗಾಳಿ ಮತ್ತು ಶಾಂತವಾದ ವಾತವರಣದಿಂದ ಕೂಡಿರುತ್ತದೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರತಿನಿತ್ಯ ಪ್ರವಾಸಿಗರು ಕಿಕ್ಕಿರಿದು ಆಗಮಿಸುತ್ತಲೇ ಇರುತ್ತಾರೆ. ಇಲ್ಲಿನ ಹವಾಮಾನವು ವರ್ಷದುದ್ದಕ್ಕೂ ಮನಸಿಗೆ ನೆಮ್ಮದಿ ನೀಡುವಂತಿರುತ್ತದೆ. ಬೆಳಗ್ಗೆ 5ರಿಂದ 9 ಗಂಟೆಯವರೆಗೂ ಮಂಜು ಮುಸುಕಿದ ವಾತಾವರಣದಿಂದ ಕೂಡಿರುತ್ತದೆ. ಈ ದೃಶ್ಯವನ್ನು ಸವಿಯಲು ಪ್ರತಿನಿತ್ಯ ಸಾವಿರಾರು ಜನ ಭೇಟಿ ನೀಡುತ್ತಲೇ ಇರುತ್ತಾರೆ.
ನಂದಿ ಬೆಟ್ಟದ ಸುತ್ತಲಿನ ಪ್ರಸಿದ್ಧ ತಾಣಗಳು: ಅದರಲ್ಲೂ ಇಲ್ಲಿಗೆ ದೊಡ್ಡ ವಾಹನಗಳಲ್ಲಿ ಬರುವ ಬದಲಾಗಿ, ದ್ವೀಚಕ್ರ ವಾಹನಗಳಲ್ಲಿ ಪ್ರಯಾಣ ಬೆಳೆಸಿದರೆ ಇನ್ನು ಸ್ವರ್ಗದಂತಹ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ನಂದಿ ಬೆಟ್ಟದ ವಾಯುವ್ಯದಲ್ಲಿ 4,762 ಅಡಿ ಎತ್ತರದ ಚನ್ನಕೇಶವ ಬೆಟ್ಟ, ನೈರುತ್ಯದಲ್ಲಿ 4,657 ಅಡಿ ಎತ್ತರದ ಬ್ರಹ್ಮಗಿರಿ, ಉತ್ತರದಲ್ಲಿ 4,749 ಅಡಿ ಎತ್ತರದ ಸ್ಕಂದಗಿರಿ ಬೆಟ್ಟವಿದೆ. ಈ ಸ್ಥಳಗಳಿಗೆ ಚಳಿಗಾಲದಲ್ಲೇ ಭೇಟಿ ನೀಡಲು ಉತ್ತಮ ಸಮಯವಾಗಿದೆ.
ಯೋಗನಂದೀಶ್ವರ ದೇವಸ್ಥಾನಕ್ಕೆ ಹೋಗುವ ಮಾರ್ಗ ನಂದಿ ಬೆಟ್ಟದೆ ಮೇಲಿರುವ ಯೋಗನಂದೀಶ್ವರ ದೇವಸ್ಥಾನವು ಚೋಳರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಈ ದೇವಾಲಯದ ಗರ್ಭಗೃಹ ಪ್ರವೇಶದ್ವಾರದಲ್ಲಿ ಅಲಂಕಾರಿಕ ಹಿತ್ತಾಳೆಯಿಂದ ಆವೃತವಾದ ಬಾಗಿಲುಗಳು ಮತ್ತು ದ್ವಾರಪಾಲಕರ ಮೂರ್ತಿಗಳು ಎರಡೂ ಬದಿಯಲ್ಲಿವೆ.
ವಿಶೇಷತೆ ಏನು?: ಟಿಪ್ಪು ಸುಲ್ತಾನ್ ತಂಗುತ್ತಿದ್ದ ಎರಡು ಅಂತಸ್ತಿನ ಸಣ್ಣ ಕಟ್ಟಡಗಳನ್ನು ನಂದಿ ಬೆಟ್ಟದ ಮೇಲೆ ಕಾಣಬಹುದಾಗಿದೆ. ಒಂದು ಕೊಳ ಮತ್ತು ಉದ್ಯಾನವು ಇದ್ದು, ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಕಾತರದಿಂದ ಕಾಯುತ್ತಿರುತ್ತಾರೆ.
ಪ್ರಮುಖ ಆಕರ್ಷಣೆ ಏನು?: ಫೋಟೋಗ್ರಾಫಿಗೆ ಹೇಳಿ ಮಾಡಿಸಿದ ಪ್ರವಾಸಿ ತಾಣವಾಗಿದ್ದು, ವಿಶ್ರಾಂತಿ ಪಡೆಯಲು ಮತ್ತು ಮಕ್ಕಳು ಆಟವಾಡಲು ಉದ್ಯಾನದ ವ್ಯವಸ್ಥೆಯೂ ಇಲ್ಲಿವೆ. ನಂದಿ ಬೆಟ್ಟದ ಮೇಲೆ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಾಣಬಹುದಾಗಿದೆ. ಪ್ರವಾಸಿಗರು ಬೆಳಗ್ಗೆ 5 ಗಂಟೆ ಸಮಯಕ್ಕೆ ಬಂದರೆ ಸೂರ್ಯೋದಯದ ದೃಶ್ಯವನ್ನು ಸವಿಯಬಹುದಾಗಿದೆ. ಇದು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.
ನಂದಿ ಬೆಟ್ಟದ ಮೇಲೆ ತಿಂಡಿ ತಿನಿಸುಗಳು ಲಭ್ಯವಿದೆ. ಇಲ್ಲಿ ಪ್ರವಾಸಿಗರ ರುಚಿಯ ಅಗತ್ಯಗಳನ್ನು ಪೂರೈಸಲಾಗುತ್ತದೆ. ಪ್ರವಾಸಿಗರು ಬೆಟ್ಟದ ಕೆಳಗಡೆ ವಾಹನಗಳ ನಿಲುಗಡೆ ಮಾಡಬೇಕಾಗುತ್ತದೆ. ಕೆಳಗಿನಿಂದ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಏರನೇಕಾಗುತ್ತದೆ. ಬೆಂಗಳೂರಿನಿಂದ ಖಾಸಗಿ ವಾಹನ ಅಥವಾ ಟ್ಯಾಕ್ಸಿಯಲ್ಲಿ ತಲುಪಬಹುದಾಗಿದೆ.
ಹಾಗೆಯೇ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನಂದಿ ಬೆಟ್ಟದಿಂದ ಕೇವಲ 34 ಕಿಲೋ ಮೀಟರ್ ದೂರದಲ್ಲಿದೆ. ನಂದಿ ಬೆಟ್ಟದಿಂದ 20 ಕಿ.ಮೀ. ದೂರಲ್ಲಿ ಸರ್.ಎಂ.ವಿಶ್ವವೇಶ್ವರಯ್ಯ ಅವರ ಜನ್ಮಸ್ಥಳ ಮುದ್ದೇನಹಳ್ಳಿ, 25 ಕಿ.ಮೀ. ವ್ಯಾಪ್ತಿಯಲ್ಲಿ ದೇವನಹಳ್ಳಿ ಕೋಟೆ, 30 ಕಿ.ಮೀ. ದೂರಲ್ಲಿ ಘಾಟಿ ಸುಬ್ರಮಣ್ಯ ದೇವಸ್ಥಾನ, ಮತ್ತು 15 ಕಿ.ಮೀ. ದೂರದಲ್ಲಿ ಭೋಗನಂದೀಶ್ವರ ದೇವಸ್ಥಾನಕ್ಕೂ ಭೇಟಿ ನೀಡಬಹುದುದಾಗಿದೆ.
ಬೆಂಗಳೂರಿನಿಂದ 60 ಕಿ.ಮೀ. ಮತ್ತು ಚಿಕ್ಕಬಳ್ಳಾಪುರದಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ಸ್ಕಂದಗಿರಿ ಬೆಟ್ಟವಿದೆ. ಇದು ಸುಮಾರು 1,350 ಮೀಟರ್ ಎತ್ತರದಲ್ಲಿದೆ. ಇನ್ನು ಟ್ರೆಕ್ಕಿಂಗ್ ಹೋಗುವವರಿಗೆ ಇದು ಹೇಳಿ ಮಾಡಿಸಿದ ತಾಣವಾಗಿದೆ. ರಾತ್ರಿ ಚಾರಣ, ಕ್ಯಾಂಪಿಂಗ್ ಮತ್ತು ಪಕ್ಷಿ ವೀಕ್ಷಣೆಯನ್ನು ಸಹ ಮಾಡಬಹುದಾಗಿದೆ. ಇಲ್ಲಿ ಸೂರ್ಯೋದಯವನ್ನು ವೀಕ್ಷಿಸಲು ಮತ್ತು ಆ ಸುಂದರ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಬೆಳಗಿನ ಜಾವ 6-7 ಗಂಟೆ ಸೂಕ್ತ ಸಮಯವಾಗಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications