Dasara package tour: ಮಂಗಳೂರು ವಿಭಾಗದ KSRTCಯಿಂದ ಪ್ಯಾಕೇಜ್ ಟೂರ್‌ ಘೋಷಣೆ, ದರ, ಸಮಯ, ದಿನಾಂಕಗಳ ವಿವರ

ಕರ್ನಾಟಕ, ಅಕ್ಟೋಬರ್‌, 07: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಮಂಗಳೂರು ವಿಭಾಗವು ಅಕ್ಟೋಬರ್ 15 ರಿಂದ 24 ರವರೆಗೆ ಸಾರ್ವಜನಿಕರ ಬೇಡಿಕೆಯ ಮೇರೆಗೆ ದಸರಾ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಆಯೋಜಿಸುತ್ತಿದೆ. ಹಾಗಾದರೆ ನವರಾತ್ರಿ 10 ದಿನಗಳ ಅವದಿಯಲ್ಲಿ ಯಾವ್ಯಾವ ಬಸ್‌ಗಳು ಯಾವ ಮಾರ್ಗಗಳಲ್ಲಿ ಸಂಚರಿಸಲಿವೆ, ಪ್ಯಾಕೇಜ್‌ ದರಗಳು ಹಾಗೂ ಸಮಯಗಳ ವಿವರವನ್ನು ಇಲ್ಲಿ ತಿಳಿಯಿರಿ.

ಮಂಗಳೂರು ದರ್ಶನ ಪ್ಯಾಕೇಜ್‌ಗಾಗಿ ಜೆಎನ್‌ಎನ್‌ಯುಆರ್‌ಎಂ ಬಸ್‌ಗಳು ಮತ್ತು ಸಿಟಿ ವೋಲ್ವೊ ಬಸ್‌ಗಳು ಕಾರ್ಯನಿರ್ವಹಿಸಿದರೆ, ಮಂಗಳೂರು-ಮಡಿಕೇರಿ ಮತ್ತು ಮಂಗಳೂರು-ಕೊಲ್ಲೂರು ಪ್ಯಾಕೇಜ್ ಪ್ರವಾಸಕ್ಕೆ ಕರ್ನಾಟಕ ಸರಿಗೆ ಬಸ್‌ಗಳು ಮತ್ತು ಪಂಚದುರ್ಗ ದರ್ಶನ ಪ್ಯಾಕೇಜ್‌ಗಾಗಿ ಜೆಎನ್‌ಎನ್‌ಯುಆರ್‌ಎಂ ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ.

KSRTC: Dasara package tour announcement by Mangaluru Division KSRTC

ಮಂಗಳೂರು ದರ್ಶನ ಪ್ರವಾಸವು ಕೆಎಸ್‌ಆರ್‌ಟಿಸಿ ಬಿಜೈ ಟರ್ಮಿನಲ್‌ನಿಂದ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಸಂಜೆ 7:30ಕ್ಕೆ ಮುಕ್ತಾಯಗೊಳ್ಳಲಿದೆ. ಈ ಪ್ಯಾಕೇಜ್‌ನಲ್ಲಿ ಮಂಗಳಾದೇವಿ, ಪೊಳಲಿ ರಾಜರಾಜೇಶ್ವರಿ, ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ, ಸಸಿಹಿತ್ಲು ಭಗವತಿ ಮತ್ತು ಬೀಚ್‌, ಚಿತ್ತಾಪುರ ದುರ್ಗಾಪರಮೇಶ್ವರಿ, ಉರ್ವ ಮಾರಿಯಮ್ಮ ಮತ್ತು ಕುದ್ರೋಳಿ ಗೋಕರ್ಣನಾಥ ಸ್ಥಳಗಳು ಒಳಗೊಂಡಿವೆ.

ಜೆಎನ್‌ಎನ್‌ಯುಆರ್‌ಎಂ ಬಸ್‌ಗಳಲ್ಲಿ ಪ್ಯಾಕೇಜ್‌ ಪ್ರವಾಸ ಕೈಗೊಳ್ಳುವುದಾದರೆ, ವಯಸ್ಕರಿಗೆ ₹400 ಮತ್ತು 6-12 ವರ್ಷ ವಯಸ್ಸಿನ ಮಕ್ಕಳಿಗೆ ₹300 ಪಾವತಿಸಬೇಕಾಗುತ್ತದೆ. ಆದರೆ ವೋಲ್ವೋದಲ್ಲಿ ಆಹಾರ ಹೊರತುಪಡಿಸಿ ಆಯಾ ವರ್ಗಗಳಿಗೆ ₹500 ಮತ್ತು ₹400 ಪಾವತಿಸಬೇಕಾಗುತ್ತದೆ.

ಮಂಗಳೂರು-ಮಡಿಕೇರಿ (KSRTC ಬಸ್‌) ಪ್ಯಾಕೇಜ್ ಟೂರ್‌ ಪ್ಯಾಕೇಜ್‌ ಬೆಳಗ್ಗೆ 7ಗಂಟೆಗೆ ಬಿಜೈನಿಂದ ಪ್ರಾರಂಭವಾಗಲಿದ್ದು, ರಾತ್ರಿ 10.30 ಕ್ಕೆ ಕೊನೆಗೊಳ್ಳುತ್ತದೆ. ಈ ವೇಳೆ ರಾಜಾ ಸೀಟ್, ಅಬ್ಬಿ ಫಾಲ್ಸ್, ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಹಾರಂಗಿ ಅಣೆಕಟ್ಟುಗಳ ಸೌಂದರ್ಯವನ್ನು ಸವಿಯಬಹುದಾಗಿದೆ. ಈ ಪ್ಯಾಕೇಜ್‌ ದರಗಳನ್ನು ನೋಡುವುದಾದರೆ, ವಯಸ್ಕರಿಗೆ ₹500 ಮತ್ತು ಮಕ್ಕಳಿಗೆ ₹400 ದರವನ್ನು ನಿಗದಿ ಮಾಡಲಾಗಿದೆ.

ಬೆಳಗ್ಗೆ 8 ಗಂಟೆಗೆ ಬಿಜೈಯಿಂದ ಆರಂಭವಾಗುವ ಕೊಲ್ಲೂರು (KSRTC ಬಸ್‌) ಪ್ಯಾಕೇಜ್ ಟೂರ್ ಸಂಜೆ 6.30ಕ್ಕೆ ಕೊನೆಗೊಳ್ಳಲಿದೆ. ಈ ವೇಳೆ ಮಾರನಕಟ್ಟೆ ಮಹಾಲಿಂಗೇಶ್ವರ, ಕೊಲ್ಲೂರು ಮೂಕಾಂಬಿಕಾ, ಕಮಲಶಿಲೆ ದುರ್ಗಾಪರಮೇಶ್ವರಿ, ಉಚ್ಚಿಲ ಮಹಾಲಕ್ಷ್ಮಿ ಸ್ಥಗಳಿಗೆ ಭೇಟಿ ನೀಡಬಹುದಾಗಿದೆ. ಇಲ್ಲಿನ ದರಗಳನ್ನು ಗಮನಿಸುವುದಾದರೆ, ವಯಸ್ಕರಿಗೆ ₹500 ಮತ್ತು ಮಕ್ಕಳಿಗೆ ₹400 ದರಗಳನ್ನು ನಿಗದಿ ಮಾಡಲಾಗಿದೆ.

ಪಂಚದುರ್ಗಾ ದರ್ಶನ ಪ್ಯಾಕೇಜ್ ಟೂರ್ (ಜೆಎನ್‌ಎನ್‌ಯುಆರ್‌ಎಂ ಬಸ್‌ಗಳು) ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಸಂಜೆ 6ಕ್ಕೆ ಕೊನೆಗೊಳ್ಳಲಿದೆ. ಈ ವೇಳೆ ತಲಪಾಡಿ ದುರ್ಗಾಪರಮೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಮುಂಡ್ಕೂರು ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ, ಚಿತ್ರಾಪುರ ದುರ್ಗಾಪರಮೇಶ್ವರಿಗೆ ಭೇಟಿ ನೀಡಬಹುದಾಗಿದೆ. ಇಲ್ಲಿ ವಯಸ್ಕರಿಗೆ ₹400 ಮತ್ತು ಮಕ್ಕಳಿಗೆ ₹300 ದರ ನಿಗದಿಪಡಿಸಲಾಗಿದೆ.

ಹೆಚಿನ ಮಾಹಿತಿಗಾಗಿ, 7760990702, 776099071, ಮಂಗಳೂರು ಮುಂಗಡ ಕಾಯ್ದಿರಿಸುವಿಕೆ ಕೌಂಟರ್‌ 9663211553 ಅಥವಾ ಮಂಗಳೂರು ಬಸ್ ನಿಲ್ದಾಣ, 7760990720 ನಂಬರ್‌ಗೆ ಕರೆ ಮಾಡಬಹುದಾಗಿದೆ. ಇನ್ನು www.ksrtc.inಗೆ ಭೇಟಿ ನೀಡಿ ಮುಂಗಡ ಟಿಕೆಟ್‌ ಕಾಯ್ದಿರಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+