Hasanamba Utsav 2023: ಹಾಸನಾಂಬ ಜಾತ್ರೆಗಾಗಿ 100 KSRTC ಬಸ್‌ಗಳ ವ್ಯವಸ್ಥೆ, ಯಾವ್ಯಾವ ಜಿಲ್ಲೆಗಳಿಂದ?, ಆರಂಭ ಯಾವಾಗ?

ಹಾಸನ, ಅಕ್ಟೋಬರ್‌, 13: ಹಾಸನಾಂಬ ಜಾತ್ರಾ ಮಹೋತ್ಸ ನವೆಂಬರ್‌ 2ರಿಂದ 15ವರೆಗೂ ನಡೆಯಲಿದ್ದು, ಈ ವೇಳೆ ದೇವಿ ದರ್ಶನಕ್ಕೆ 10 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಆದ್ದರಿಂದ ಭಕ್ತರ ಅನುಕೂಲಕದಕಾಗಿ ಕೆಎಸ್‌ಆರ್‌ಟಿಸಿ 100 ವಿಶೇಷ ಬಸ್‌ಗಳನ್ನು ಕಲ್ಪಿಸಲು ಮುಂದಾಗಿದೆ. ಹಾಗಾದರೆ ಈ ಬಸ್‌ಗಳು ಯಾವ್ಯಾವ ಜಿಲ್ಲೆಗಳಿಂದ ಆಗಮಿಸಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಕಳೆದ ಬಾರಿ ದೇವಿ ದರ್ಶನಕ್ಕೆ 6 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಅದರಲ್ಲೀ ಈ ಬಾರಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲು ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಹಿನ್ನೆಲೆ ಈ ಬಾರಿ ವಿಶೇಷ 10 ಲಕ್ಷಕ್ಕೂ ಹೆಚ್ಚು ಭಕ್ತರು ಬರುವ ನಿರೀಕ್ಷೆಯಿದೆ ಎನ್ನಲಾಗಿದೆ. ಆದ್ದರಿಂದ ಕೆಎಸ್ಆರ್‌ಟಿಸಿ ಇದೆ ಮೊದಲ ಬಾರಿಗೆ 100 ವಿಶೇಷ ಬಸ್‌ಗಳನ್ನು ಓಡಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ksrtc-allocates-100-buses-for-hasanamba-utsav-2023

ಈ ಬಾರಿ ಶಕ್ತಿ ಯೋಜನೆಯಡಿ ಉಚಿತ ಬಸ್‌ ಸೌಲಭ್ಯ ಇರುವುದರಿಂದ ಹೆಚ್ಚಿನ ಸಂಖ್ಯೆಯ ಮಹಿಳೆಯರು, ಭಕ್ತರು ಹಾಸನಾಂಬ ದರ್ಶನಕ್ಕೆ ಆಗಮಿಸುವ ಸಾಧ್ಯತೆಯಿದೆ. ಆದ್ದರಿಂದ KSRTCಯು ಹಾಸನ ಮತ್ತು ಚಿಕ್ಕಮಗಳೂರು ವಿಭಾಗದ ಅಧಿಕಾರಿಗಳು ಗುರುವಾರ (ಅಕ್ಟೋಬರ್‌ 13) ರಂದು ಸಭೆ ನಡೆಸಿ ಚರ್ಚೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಹಾಸನ ವಿಭಾಗದಿಂದ 100 ವಿಶೇಷ ಬಸ್‌ಗಳನ್ನು ಬೆಂಗಳೂರು, ಮೈಸೂರು ಸೇರಿದಂತೆ ಅಂತರ ಜಿಲ್ಲೆಗಳಿಂದ ಓಡಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಹೊರ ಜಿಲ್ಲೆಗಳ ವಿಭಾಗದ ಬಸ್‌ಗಳನ್ನು ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಳಕೆ ಮಾಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಹಾಸನ ವಿಭಾಗದಿಂದ 100 ವಿಶೇಷ ಬಸ್‌ಗಳನ್ನು ಬೆಂಗಳೂರು, ಮೈಸೂರು ಸೇರಿದಂತೆ ಅಂತರ ಜಿಲ್ಲೆಗಳಿಂದ ಓಡಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಹೊರ ಜಿಲ್ಲೆಗಳ ವಿಭಾಗದ ಬಸ್‌ಗಳನ್ನು ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಳಕೆ ಮಾಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಹಾಸನಾಂಬ ದೇಗುಲದ ಬಾಗಿಲು ನವೆಂಬರ್‌ 2ರಂದು ತೆರೆಯಲಿದ್ದು, ಪ್ರಥಮ ದಿನದಂದು ಸಾರ್ವಜನಿಕ ದರ್ಶನ ಇಲ್ಲದ ಕಾರಣ ನವೆಂಬರ್‌ 3ರಿಂದ ವಿಶೇಷ ಬಸ್‌ಗಳು ಕಾರ್ಯಾಚರಣೆ ಪ್ರಾರಂಭಿಸಲಿವೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್‌ಕುಮಾರ್‌ ತಿಳಿಸಿದ್ದಾರೆ.

ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆ 15ದಿನಗಳ ಕಾಲ ನಗರದ ಮುಖ್ಯರಸ್ತೆ ಮತ್ತು ಸರ್ಕಾರಿ ಕಚೇರಿಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಿಸಲು ಟೆಂಡರ್‌ ಕರೆದು ಅಂತಿಮಗೊಳಿಸಲಾಗಿದೆ. ಇನ್ನು ಹಾಸನಾಂಬ ದೇವಿ ಗರ್ಭಗುಡಿ ಮುಂಭಾಗ ಆವರಣ ಕಿರಿದಾಗಿರುವ ಕಾರಣ ಹಾಗೂ ಸಮರ್ಪಕ ಗಾಳಿ ಬೇಕೆಂಬ ಕಾರಣದಿಂದ 4 ಟನ್‌ ಎಸಿ ಅಳವಡಿಸಲಾಗುತ್ತಿದೆ. ಗಣ್ಯರು, ಜನಪ್ರತಿನಿಧಿಗಳು,ಅಧಿಕಾರಿಗಳಿಗೆ ನೀಡುವ ಪಾಸ್‌ ದುರುಪಯೋಗ ತಡೆಗಟ್ಟಲು ಈ ಬಾರಿ ಪಾಸ್‌ಗೆ ಬಾರ್‌ಕೋಡ್‌ ತಂತ್ರಜ್ಞಾನ ಬಳಸಲಾಗುತ್ತಿದೆ.

ಅಲ್ಲದೆ ಹಾಸನಾಂಬ ಉತ್ಸವ ಹಿನ್ನೆಲೆ ಪ್ರವಾಸಿಗರು, ಭಕ್ತರಿಗಾಗಿ ನಗರ ಪ್ರದಕ್ಷಿಣೆ ಮಾಡಲು ಬಯಸುವವರಿಗಾಗಿ ಹೆಲಿಕಾಪ್ಟರ್‌ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ಪ್ಯಾರಾ ಸೈಲಿಂಗ್‌ ಕೂಡ ಇರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+