IRCTC: ಕಡಿಮೆ ದರದಲ್ಲಿ 8 ದಿನ "ದೇವರ ನಾಡು" ಕೇರಳಕ್ಕೆ ಪ್ರವಾಸ ಕೈಗೊಳ್ಳಲು ಇದು ಉತ್ತಮ ಅವಕಾಶ, ದರ, ಸ್ಥಳಗಳ ವಿವರ ಇಲ್ಲಿದೆ
ಕೇರಳ, ಜೂನ್, 09: ಭಾರತೀಯ ರೈಲ್ವೆಯ ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಸಿಯು ಕೈಗೆಟುಕುವ ದರದಲ್ಲಿ ವಿದೇಶ, ದೇಶದಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಿಸುತ್ತಲೇ ಬಂದಿದೆ. ಅದೇ ರೀತಿ ಇದೀಗ ದೇವರ ನಾಡು ಅಂತಲೇ ಪ್ರಸಿದ್ಧಿ ಪಡೆದಿರುವ ಕೇರಳ ರಾಜ್ಯದಲ್ಲಿನ ಪ್ರವಾಸಿ ತಾಣಗಳನ್ನು ನೋಡಲು ಕಡಿಮೆ ದರದಲ್ಲಿ ಪ್ರವಾಸ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಹಾಗಾದರೆ ಈ ಪ್ಯಾಕೇಜ್ ದರ ಮತ್ತು ಆರಂಭವಾಗುವ ದಿನಾಂಕಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಭಾರತದ ದಕ್ಷಿಣ ಭಾಗದಲ್ಲಿರುವ ಕೇರಳದಲ್ಲಿನ ಮೋಡಿ ಮಾಡುವ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬಯಸುವವರಿಗೆ ಇದು ಉತ್ತಮ ಪ್ಯಾಕೇಜ್ ಆಗಿದೆ. ಇಲ್ಲಿನ ತಾಣಗಳು ಬರೀ ದೇಶದಲ್ಲಲ್ಲದೆ ಪ್ರಪಂಚದಾದ್ಯಂತ ಹೆಸರುವಾಸಿಯಾಗಿವೆ. ಸಾಮಾನ್ಯವಾಗಿ ದೇವರ ನಾಡು ಎಂದು ಕರೆಯಲ್ಪಡುವ ಕೇರಳವು ತನ್ನ ಅದ್ಭುತಗಳನ್ನು ಅನ್ವೇಷಿಸಲು ನಿಮ್ಮನ್ನು ಕೈಬೀಸಿ ಕರೆಯುತ್ತಿದೆ. ಮತ್ತು ಇದಕ್ಕೆ ತಕ್ಕಂತೆ IRCTC ನಿಮಗಾಗಿ ಪ್ರತ್ಯೇಕವಾಗಿ ವಿಶಿಷ್ಟವಾದ ಪ್ರವಾಸ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ.

ಪ್ರವಾಸಿ ತಾಣಗಳ ವಿವರ
ಇದು 8 ಹಗಲುಗಳು 7 ರಾತ್ರಿಯ ಪ್ರವಾಸ ಆಗಿದೆ. ಸಾರಿಗೆಯು ವಿಭಾಗ ವಿಮಾನ ಆಗಿದ್ದು, ಈ ಪ್ರವಾಸ ಜೈಪುರ ನಗರದಿಂದ ಪ್ರಾರಂಭ ಆಗಲಿದೆ. ನೀವು ಇಲ್ಲಿನ ಕೊಚ್ಚಿ, ಮುನ್ನಾರ್, ತೆಕ್ಕಡಿ, ತಿರುವನಂತಪುರಂ, ಅಲೆಪ್ಪಿ ಮತ್ತು ಕನ್ಯಾಕುಮಾರಿ ಮೂಲಕ ಪ್ರಯಾಣಿಸುವಾಗ ಆಹ್ಲಾದಕರ ಅನುಭವವನ್ನು ಪಡೆಯಬಹುದಾಗಿದೆ. ಇಲ್ಲಿ ಪ್ರತಿಯೊಂದೂ ಸ್ಥಳಗಳು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು, ಇಲ್ಲಿನ ಆಕರ್ಷಣೆಗೆ ನೀವು ಫಿದಾ ಆಗುವುದಂತೂ ನಿಜ.
ಇನ್ನು ಅಕ್ಟೋಬರ್ 20 ಅಥವಾ ಡಿಸೆಂಬರ್ 19ರಿಂದ ನಿಮ್ಮ ಆದ್ಯತೆಯ ಪ್ರಯಾಣದ ದಿನಾಂಕಗಳನ್ನು ಆರಿಸಿಕೊಳ್ಳಲು ಅವಕಾಶವನ್ನು ಸಹ ಕಲ್ಪಿಸಲಾಗಿದೆ. ಹಾಗೆಯೆ ಕೇರಳದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ದೃಶ್ಯಗಳನ್ನು ವೀಕ್ಷಿಸುವ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ವಿಮಾನದಲ್ಲಿ ಪ್ರವಾಸಕ್ಕೆಂದು 20 ಆಸನಗಳು ಮಾತ್ರ ಸೀಮಿತವಾಗಿದ್ದು, ಇದರಲ್ಲಿ ನಿಮ್ಮ ನೆಚ್ಚಿನ ಆಸನಗಳಿಗಾಗಿ ಈಗಲೇ ಟಿಕೆಟ್ ಬುಕ್ ಮಾಡಿ.
ಈ ಪ್ರವಾಸದ ಪ್ಯಾಕೇಜ್ ಅನ್ನು ನಿಮ್ಮ ಪ್ರತಿಯೊಂದು ಅಗತ್ಯವನ್ನು ಪೂರೈಸುವಂತೆ ವಿನ್ಯಾಸಗೊಳಿಸಲಾಗಿದೆ. ರೌಂಡ್-ಟ್ರಿಪ್ ಫ್ಲೈಟ್ ಟಿಕೆಟ್‌ಗಳ ಜೊತೆಗೆ, ಪ್ರತಿ ಗಮ್ಯಸ್ಥಾನದಲ್ಲಿ ಆರಾಮದಾಯಕವಾದ ವಸತಿ ಸೌಕರ್ಯವನ್ನು ಕೂಡ ಒದಗಿಸಲಾಗುತ್ತದೆ. ಹಾಗೆಯೆ ವಿಶ್ರಾಂತಿ ಪಡೆಯಲು ಕೂಡ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ ಕೇರಳದ ರುಚಿಕರವಾದ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗುತ್ತದೆ.
ಪ್ರವಾಸ ಪ್ಯಾಕೇಜ್‌ನ ದರಗಳ ವಿವರ
ನೀವು ಈ ಪ್ರವಾಸ ಕೈಗೊಳ್ಳಲು ಬಯಸಿದರೆ, ಒಬ್ಬರಿಗೆ 74,200 ರೂಪಾಯಿ, ಇಬ್ಬರು ಪ್ರಯಾಣ ಮಾಡಲು ಇಚ್ಚಿಸಿದರೆ 50,700 ರೂಪಾಯಿ ಪಾವತಿಸಬೇಕಾಗುತ್ತದೆ. ಇನ್ನು ಒಟ್ಟಿಗೆ ಗುಂಪಿನಲ್ಲಿ ಪ್ರೀತಿ ಪಾತ್ರರು, ಸ್ನೇಹಿತರು, ಕುಟುಂಬದ ಜೊತೆ ಪ್ರಯಾಣ ಮಾಡಲು ಬಯಸಿದರೆ 47,700 ರೂಪಾಯಿ ಪಾವತಿಸಬೇಕಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಯನ್ನು ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ.
ಒಟ್ಟಿನಲ್ಲಿ ಹೇಳುವುದಾದರೆ ಐಆರ್‌ಸಿಟಿಸಿಯು ಮೊದಲಿನಿಂದಲೂ ಪ್ರಯಾಣಿಕರ ಅನೂಕೂಲಕ್ಕೆ ತಕ್ಕಂತೆ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲೇ ಬಂದಿದೆ. ಇದೀಗ ದೇವರ ನಾಡು ಅಂತಲೇ ಪ್ರಸಿದ್ಧಿ ಆಗಿರುವ ಕೇರಳ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಹಾಗಾದರೆ ಯಾಕೆ ತಡ ಇಲ್ಲಿನ ಅದ್ಭುತ ಪ್ರವಾಸಿ ತಾಣಗಳ ಸೌಂದರ್ಯವನ್ನು ಸವಿಯನ್ನು ತಯಾರಾಗಿ.












Click it and Unblock the Notifications