E-ticket Booking: ಇ-ಟಿಕೆಟ್‌ಗಳ ಬುಕ್ಕಿಂಗ್ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ರೈಲ್ವೆ ಇಲಾಖೆ

ನವದೆಹಲಿ, ಜೂನ್. 26: ಐಆರ್‌ಸಿಟಿಸಿ (IRCTC) ಖಾತೆಯನ್ನು ಹೊಂದಿರುವ ಯಾವುದೇ ವ್ಯಕ್ತಿಯು ಇತರರಿಗೆ ಇ-ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಹೇಳಿ ಎಲ್ಲಾ ವದಂತಿಗಳನ್ನು ತಳ್ಳಿಹಾಕಿದೆ. ವಿವಿಧ ಉಪನಾಮಗಳಿಂದಾಗಿ ಇ-ಟಿಕೆಟ್‌ಗಳ ಬುಕ್ಕಿಂಗ್‌ಗೆ ನಿರ್ಬಂಧ ಹಾಕಲಾಗಿದೆ ಎಂಬ ಸಾಮಾಜಿಕ ಮಾಧ್ಯಮಗಳಲ್ಲಿನ ವೈರಲ್ ಸುದ್ದಿಯನ್ನು ನಂಬದಿರಲು ರೈಲ್ವೆ ಸಚಿವಾಲಯ ತಿಳಿಸಿದೆ.

ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ವೆಬ್‌ಸೈಟ್‌ನಲ್ಲಿ ಖಾತೆಯನ್ನು ಹೊಂದಿರುವ ವ್ಯಕ್ತಿಯು ತನ್ನ ಖಾತೆಯಿಂದ ಬೇರೆ ಉಪನಾಮಗಳನ್ನು ಹೊಂದಿರುವ ಇತರ ಜನರಿಗೆ ಟಿಕೆಟ್‌ಗಳನ್ನು ಬುಕ್ ಮಾಡಲಾಗುವುದಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ವೈರಲ್ ಆಗಿದೆ.

IRCTC Account Holders Can Book E-Tickets For Anyone Railway Ministry

ರೈಲ್ವೇ ಸಚಿವಾಲಯದ ವಕ್ತಾರರು ಈ ಹೇಳಿಕೆಯನ್ನು ನಿರಾಕರಿಸಿದ್ದು, ವೈರಲ್ ಆಗುತ್ತಿರುವು ಸುದ್ದಿ ಸುಳ್ಳು ಎಂದು ಹೇಳಿದೆ. ರೈಲ್ವೆ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದೆ ಮತ್ತು ಈ ಮಾರ್ಗಸೂಚಿಗಳಿಗೆ ಸಂಬಂಧಿಸಿದ ಮಾಹಿತಿಯು ಸಾರ್ವಜನಿಕವಾಗಿ ಲಭ್ಯವಿದೆ ಎಂದು ವಕ್ತಾರರು ಹೇಳಿದ್ದಾರೆ. ಭಾರತೀಯ ರೈಲ್ವೇ ಪ್ರಕಾರ, ಯಾವುದೇ ವ್ಯಕ್ತಿ ತಮ್ಮ ಬಳಕೆದಾರ ಐಡಿ ಮೂಲಕ ಸ್ನೇಹಿತರು, ಕುಟುಂಬ ಮತ್ತು ಸಂಬಂಧಿಕರಿಗೆ ಟಿಕೆಟ್ ಕಾಯ್ದಿರಿಸಬಹುದು ಎಂದಿದೆ.

ಬಳಕೆದಾರರು ತಮ್ಮ ಐಆರ್‌ಸಿಟಿಸಿ ಖಾತೆಯಿಂದ ತಿಂಗಳಿಗೆ 12 ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ. ವೈಯಕ್ತಿಕ ಬಳಕೆದಾರ ಐಡಿಗಳಲ್ಲಿ ಬುಕ್ ಮಾಡಲಾದ ಟಿಕೆಟ್‌ಗಳು ವಾಣಿಜ್ಯ ಮಾರಾಟಕ್ಕಲ್ಲ ಮತ್ತು ಹಾಗೆ ಮಾಡುವುದು ರೈಲ್ವೆ ಕಾಯಿದೆಯ 1989 ರ ಸೆಕ್ಷನ್ 143 ರ ಅಡಿಯಲ್ಲಿ ಅಪರಾಧವಾಗಿದೆ ಎಂದು ತಿಳಿಸಿದ್ದಾರೆ.

ರೈಲ್ವೆ ಮಂಡಳಿ ಮಾರ್ಗಸೂಚಿ ಹೀಗಿದೆ

1. ಒಬ್ಬರು ಸ್ನೇಹಿತರು, ಕುಟುಂಬ ಮತ್ತು ಸಂಬಂಧಿಕರಿಗೆ ವೈಯಕ್ತಿಕ ಬಳಕೆದಾರ ಐಡಿಯಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

IRCTC Account Holders Can Book E-Tickets For Anyone Railway Ministry

2. ತಿಂಗಳಿಗೆ 12 ಟಿಕೆಟ್‌ಗಳವರೆಗೆ ಬುಕಿಂಗ್ ಮಾಡಬಹುದು. ಆಧಾರ್ ದೃಢೀಕೃತ ಬಳಕೆದಾರರು ತಿಂಗಳಿಗೆ 24 ಟಿಕೆಟ್‌ಗಳವರೆಗೆ ಹೋಗಬಹುದು. ಟಿಕೆಟ್‌ನಲ್ಲಿರುವ ಪ್ರಯಾಣಿಕರಲ್ಲಿ ಒಬ್ಬರು ಸಹ ಆಧಾರ್ ದೃಢೀಕರಿಸಿದ್ದರೆ ಸಾಕು.

3. ವೈಯಕ್ತಿಕ ಬಳಕೆದಾರ ಐಡಿಗಳಲ್ಲಿ ಬುಕ್ ಮಾಡಲಾದ ಟಿಕೆಟ್‌ಗಳು ವಾಣಿಜ್ಯ ಮಾರಾಟಕ್ಕಾಗಿ ಉದ್ದೇಶಿಸಿಲ್ಲ ಮತ್ತು ಅಂತಹ ಕೃತ್ಯವು ರೈಲ್ವೆ ಕಾಯ್ದೆ 1989 ರ ಸೆಕ್ಷನ್ 143 ರ ಅಡಿಯಲ್ಲಿ ಅಪರಾಧವಾಗಿದೆ. ಈ ಎಲ್ಲಾ ಮಾಹಿತಿಯನ್ನು ಐಆರ್‌ಸಿಟಿಸಿ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+