ಈ ಒಂದೇ ಆಪ್ಲಿಕೇಶನ್‌ನಲ್ಲಿ ಭಾರತೀಯ ರೈಲ್ವೆಯ ಎಲ್ಲಾ ಸೇವೆಗಳು ಲಭ್ಯ
ಭಾರತೀಯ ರೈಲ್ವೆಯು ಸಾರಿಗೆ ಇಲಾಖೆಗಳಲ್ಲಿ ಅತ್ಯಂತ ದೊಡ್ಡ ವಿಭಾಗವಾಗಿದೆ. ಈ ಇಲಾಖೆಯೂ ಆಗಾಗ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಯೋಜನೆಗಳನ್ನು ಜಾರಿಗೊಳಿಸುತ್ತಲಿರುತ್ತದೆ. ಹಾಗೆಯೇ ಇದೀಗ ಸಾರ್ಜನಿಕರಿಗೆ ಒಂದೇ ವೇದಿಕೆಯಡಿ ಸೇವೆ ಒದಗಿಸುವ ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡಿದೆ. ಹಾಗಾದರೆ ಇದರಿಂದ ಏನೆಲ್ಲಾ ಪ್ರಯೋಜನೆಗಳಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರೈಲ್ವೆ ಸಚಿವಾಲಯ ಬಹುನಿರೀಕ್ಷಿತ ಸೂಪರ್ ಆ್ಯಪ್ ಸ್ವರೈಲ್ (SwaRail) ಅನ್ನು ಬಿಡುಗಡೆ ಮಾಡಿದೆ. ಸೆಂಟರ್ ಫಾರ್ ರೈಲ್ವೆ ಇನ್ಫರ್ಮೇಷನ್ ಸಿಸ್ಟಮ್ಸ್ ಅಭಿವೃದ್ಧಿಪಡಿಸಿದ ಈ ಅಪ್ಲಿಕೇಶನ್ ಭಾರತೀಯ ರೈಲ್ವೆಯ ಎಲ್ಲಾ ಸಾರ್ವಜನಿಕ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸಲಿದೆ.

ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಟಿಕೆಟ್ ಬುಕಿಂಗ್, ಪ್ಲಾಟ್‌ಫಾರ್ಮ್ ಟಿಕೆಟ್ ಬುಕಿಂಗ್, ಪಾರ್ಸೆಲ್ ಮತ್ತು ಸರಕು ವಿಚಾರಣೆಗಳು, ರೈಲು ಮತ್ತು ಪಿಎನ್ಆರ್ ಸ್ಥಿತಿ ವಿಚಾರಣೆಗಳು, ರೈಲುಗಳಲ್ಲಿ ಆಹಾರ ಆರ್ಡರ್ ಮಾಡುವುದು ಸೇರಿದಂತೆ ಇನ್ನೂ ಹಲವು ಸೇವೆಗಳನ್ನು ಇದರಲ್ಲಿ ನೀಡಲಾಗಿದೆ.
ಅಪ್ಲಿಕೇಶನ್ ವಿವರ: SwaRail ಅಪ್ಲಿಕೇಶನ್ ಪ್ರಸ್ತುತ ಬೀಟಾ ವರ್ಷನ್‌ನಲ್ಲಿದೆ ಮತ್ತು ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಿಗಾಗಿ ಕ್ರಮವಾಗಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಬಹುದು. ಆ್ಯಪ್‌ನ ಬೀಟಾ ವರ್ಷನ್ ಬಳಸುವಂತೆ ಹಾಗೂ ಸಲಹೆ ಸೂಚನೆಗಳನ್ನು ನೀಡುವಂತೆ ರೈಲ್ವೆ ಸಚಿವಾಲಯ ಕೋರಿದೆ.
ನಿಮ್ಮ ಮೊಬೈಲ್‌ನಲ್ಲಿ ಅಪ್ಲಿಕೇಶನ್ ಸ್ಟೋರ್‌ಗೆ ಹೋಗಿ SwaRail ಆ್ಯಪ್ ಸರ್ಚ್ ಮಾಡಬಹುದು. ಸಿಆರ್‌ಐಎಸ್ ಶೇರ್ ಅಪ್ಲಿಕೇಶನ್ ಅನ್ನು ಹುಡುಕಿ ಮತ್ತು ಅದನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಈಗಾಗಲೇ ಐಆರ್‌ಟಿಸಿ ರೈಲ್ ಕನೆಕ್ಟ್ ಅಥವಾ ಯುಟಿಎಸ್ ಮೊಬೈಲ್ ಅಪ್ಲಿಕೇಶನ್ ಬಳಸುತ್ತಿರುವ ಗ್ರಾಹಕರು ತಮ್ಮ ಲಾಗಿನ್ ಕ್ರೆಡೆನ್ಷಿಯಲ್ಸ್ ಬಳಸಿ ನೇರವಾಗಿ ಲಾಗ್‌ಇನ್ ಮಾಡಬಹುದಾಗುದೆ.
ಒಂದು ವೇಳೆ ಈ ಎರಡೂ ಅಪ್ಲಿಕೇಶನ್‌ಗಳಲ್ಲಿ ನೀವು ಖಾತೆಯನ್ನ ಹೊಂದಿರದಿದ್ದರೆ, ಆನ್ ಸ್ಕ್ರೀನ್ ಸೂಚನೆಗಳನ್ನು ಅನುಸರಿಸುವ ಮೂಲಕ ನೀವು ಹೊಸ ಬಳಕೆದಾರರಾಗಿ ನೋಂದಾಯಿಸಿಕೊಳ್ಳಬಹುದು. ಮೊದಲ ಬಾರಿಗೆ ಲಾಗಿನ್ ಮಾಡಿದಾಗ, ಟಿಕೆಟ್ ಬುಕಿಂಗ್‌ಗೆ ಅನುಕೂಲ ಆಗುವಂತೆ ಪ್ರತಿ ಬಳಕೆದಾರರಿಗೆ ಆರ್-ವ್ಯಾಲೆಟ್ ಅನ್ನು ರಚಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ವಿವರಿಸಿದೆ. ನೀವು ಈಗಾಗಲೇ ಆರ್-ವ್ಯಾಲೆಟ್ ಹೊಂದಿದ್ದರೆ, ಅದನ್ನು ಸ್ವಯಂಚಾಲಿತವಾಗಿ ಇದಕ್ಕೆ ಲಿಂಕ್ ಮಾಡಲಾಗುತ್ತದೆ.
ನೀವು ಲಾಗ್ ಇನ್ ಪ್ರಕ್ರಿಯೆಯನ್ನು ಸ್ಕಿಪ್ ಮಾಡಿ ಮೊಬೈಲ್ ನಂಬರ್ ಮತ್ತು ಒಟಿಪಿ ಮೂಲಕ ಲಾಗ್ ಇನ್ ಮಾಡಬಹುದು. ಈ ಮೋಡ್‌ನಲ್ಲಿ ಸುಲಭವಾಗಿ ಪರಿಶೀಲನೆ ಮಾಡಬಹದು. ಬಳಕೆದಾರರು ಎಲ್ಲಾ ಸೇವೆಗಳನ್ನು ಒಂದೇ ಲಾಗಿನ್ನೊಂದಿಗೆ ಬಳಸಬಹುದು. ಇದು ಅಸ್ತಿತ್ವದಲ್ಲಿರುವ ಭಾರತೀಯ ರೈಲ್ವೆ ಅಪ್ಲಿಕೇಶನ್‌ಗಳಾದ ಐಆರ್‌ಸಿಟಿಸಿ ರೈಲ್ ಕನೆಕ್ಟ್ ಮತ್ತು ಯುಟಿಎಸ್ ಮೊಬೈಲ್ ಅಪ್ಲಿಕೇಶನ್ಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ.
ಪ್ರಸ್ತುತ ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಬುಕಿಂಗ್‌ಗಾಗಿ ವಿಭಿನ್ನ ಅಪ್ಲಿಕೇಶನ್‌ಗಳನ್ನು ಬಳಸಬೇಕಾಗುತ್ತದೆ ಮತ್ತು ರೈಲು ಚಲನೆ ಮತ್ತು ವೇಳಾಪಟ್ಟಿಗಳನ್ನು ಪರಿಶೀಲಿಸಲು ಮತ್ತೊಂದು ಅಪ್ಲಿಕೇಶನ್ ಬೇಕಾಗುತ್ತದೆ. ಆದರೆ, ಈಗ ಈ ಎಲ್ಲಾ ಸೇವೆಗಳು SwaRail ಒಂದೇ ಅಪ್ಲಿಕೇಶನ್‌ನಲ್ಲಿಯೇ ಲಭ್ಯ ಆಗಲಿವೆ.
ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ ರೈಲ್ ಕನೆಕ್ಟ್ ಅಥವಾ ಯುಟಿಎಸ್ ಅಪ್ಲಿಕೇಶನ್ ಲಾಗಿನ್ ಮಾಹಿತಿಗಳನ್ನು ಬಳಸಿಕೊಂಡು ಸೂಪರ್ ಅಪ್ಲಿಕೇಶನ್‌ಗೆ ಸೈನ್ ಅಪ್ ಮಾಡಬಹುದು. ಬಳಕೆದಾರರ ಅನುಭವವನ್ನು ಸುಧಾರಿಸಲು ಬಹು ಲಾಗಿನ್ ಆಯ್ಕೆಗಳನ್ನು ನೀಡಲಾಗಿದೆ. ಆರಂಭಿಕ ಲಾಗಿನ್ ಬಳಿಕ ಎಂ-ಪಿನ್ ಅಥವಾ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ಅಪ್ಲಿಕೇಶನ್ ಅನ್ನು ಬಳಕೆ ಮಾಡಬಹುದಾಗಿದೆ.












Click it and Unblock the Notifications