ಹಡಗಲಿ-ಬೆಂಗಳೂರು; ನಾನ್ ಎಸಿ ಸ್ಲೀಪರ್ ಬಸ್, ವೇಳಾಪಟ್ಟಿ
ಬೆಂಗಳೂರು, ಫೆಬ್ರವರಿ 18; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ)ಯ ವಿಜಯನಗರ ಜಿಲ್ಲೆಯ ಹೊಸಪೇಟೆ ವಿಭಾಗ ಹಡಗಲಿ-ಬೆಂಗಳೂರು ನಡುವೆ ನೂತನ ಬಸ್ ಸೇವೆ ಆರಂಭಿಸಿದೆ. ಹವಾನಿಯಂತ್ರಣ ರಹಿತ ಬಸ್ ಸೇವೆ ಇದಾಗಿದ್ದು, ಜನರು ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸಪೇಟೆಯ ವಿಭಾಗೀಯ ನಿಯಂತ್ರಾಣಾಧಿಕಾರಿಗಳು ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಜನಪ್ರತಿನಿಧಿಗಳು ಹಾಗೂ ಪ್ರಯಾಣಿಕರ ಬೇಡಿಕೆ ಮೇರೆಗೆ ಪ್ರತಿಷ್ಠಿತ ವಾಹನಗಳ ಸೇವೆ ಒದಗಿಸುವ ಉದ್ದೇಶದಿಂದ ಹಡಗಲಿ-ಬೆಂಗಳೂರು ಬಸ್ ಸೇವೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.

ವೇಳಾಪಟ್ಟಿ; ಹಡಗಲಿ-ಬೆಂಗಳೂರು ನಡುವಿನ ನಾನ್ ಎಸಿ ಬಸ್ ವಯಾ ಹರಪನಹಳ್ಳಿ, ಹರಿಹರ, ದಾವಣಗೆರೆ ಮಾರ್ಗದಲ್ಲಿ ಫೆಬ್ರವರಿ 16 ರಿಂದ ಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ಪ್ರಕಟಣೆ ಹೇಳಿದೆ.
ಈ ಬಸ್ ಹಡಗಲಿಯಿಂದ ರಾತ್ರಿ 9.30ಕ್ಕೆ ಹೊರಟು, 10.30ಕ್ಕೆ ಹರಪನಹಳ್ಳಿಗೆ, 11.30ಕ್ಕೆ ಹರಿಹರ ತಲುಪಲಿದೆ. 11.59ಕ್ಕೆ ದಾವಣಗೆರೆಯಿಂದ ನಿರ್ಗಮಿಸಿ ಬೆಳಗ್ಗೆ 5.30ಕ್ಕೆ ಬೆಂಗಳೂರು ನಗರ ತಲುಪಲಿದೆ.
ಬೆಂಗಳೂರಿನಿಂದ ರಾತ್ರಿ 10.45ಕ್ಕೆ ನಿರ್ಗಮಿಸುವ ಬಸ್, ದಾವಣಗೆರೆಗೆ ಬೆಳಗ್ಗೆ 4.15ಕ್ಕೆ, ಹರಿಹರಕ್ಕೆ 4.50ಕ್ಕೆ, ಹರಪನಹಳ್ಳಿಗೆ 5.25ಕ್ಕೆ ಹಾಗೂ ಹಡಗಲಿಗೆ 6 ಗಂಟೆಗೆ ಬಂದು ತಲುಪಲಿದೆ.
ಸಂಡೂರು-ಹೈದರಾಬಾದ್ ಎಸಿ ಬಸ್; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ)ಯ ಬಳ್ಳಾರಿ ವಿಭಾಗದ ಸಂಡೂರು ಘಟಕ ಸಂಡೂರು-ಹೈದರಾಬಾದ್ (ದೋಣಿಮಲೈ, ವಿದ್ಯಾನಗರ, ಬಳ್ಳಾರಿ, ಆಲೂರು, ಕರ್ನೂಲ್ ಮಾರ್ಗ) ಪ್ರತಿಷ್ಠಿತ ಎಸಿ ಸ್ಲೀಪರ್ ನೂತನ ಬಸ್ ಸಂಚಾರ ಆರಂಭಸಿದೆ.
ಈ ಬಸ್ ಸಂಡೂರಿನಿಂದ ರಾತ್ರಿ 7ಕ್ಕೆ ಹೊರಟು, ಬಳ್ಳಾರಿಗೆ ರಾತ್ರಿ 10ಕ್ಕೆ ಆಗಮಿಸಿ (ವಯಾ ಆಲೂರು, ಕರ್ನೂಲ್ ಮಾರ್ಗ) ಹೈದರಾಬಾದ್‌ಗೆ ಬೆಳಗ್ಗೆ 6.10ಕ್ಕೆ ತಲುಪಲಿದೆ. ಪ್ರಯಾಣ ದರವು ಸಂಡೂರಿನಿಂದ ರೂ. 1,290 ಹಾಗೂ ಬಳ್ಳಾರಿಯಿಂದ ರೂ.1,120 ಇರಲಿದೆ.
ಹೈದರಾಬಾದ್‌ನಿಂದ ರಾತ್ರಿ 9.46ಕ್ಕೆ ಹೊರಡುವ ಬಸ್ ಬಳ್ಳಾರಿಗೆ 6.15ಕ್ಕೆ (ಪ್ರಯಾಣ ದರ ರೂ. 1,120) ಹಾಗೂ ಸಂಡೂರಿಗೆ ಬೆಳಗ್ಗೆ 8ಕ್ಕೆ (ಪ್ರಯಾಣ ದರ ರೂ.1,290) ಆಗಮಿಸಲಿದೆ.
ಪ್ರಯಾಣಿಕರು ಮುಂಗಡ ಆಸನಗಳನ್ನು ಬುಕ್ ಮಾಡಲು www.ksrtc.in ವೆಬ್‌ಸೈಟ್‌ಗೆ ಲಾಗ್ ಇನ್ ಆಗಬೇಕು. ನೂತನ ಬಸ್ ಸೇವೆಯನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಸಂಡೂರು-ಬೆಂಗಳೂರು ಬಸ್; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಬಳ್ಳಾರಿ ವಿಭಾಗದ ಸಂಡೂರು ಘಟಕ ಸಂಡೂರು-ಬೆಂಗಳೂರು (ವಯಾ ದೋಣಿಮಲೈ, ವಿದ್ಯಾನಗರ, ತೋರಣಗಲ್ಲು, ಕುಡುತಿನಿ, ಬಳ್ಳಾರಿ, ಚಳ್ಳಕೆರೆ) ಎಸಿ ಸ್ಲೀಪರ್ ನೂತನ ಬಸ್ ಸಂಚಾರ ಆರಂಭಿಸಿದೆ.
ಈ ಬಸ್ ಸಂಡೂರಿನಿಂದ ರಾತ್ರಿ 9.30ಕ್ಕೆ ಹೊರಟು, ದೋಣಿಮಲೈಗೆ ರಾತ್ರಿ 10.15ಕ್ಕೆ, ವಿದ್ಯಾನಗರ (ಜೆಎಸ್‍ಡಬ್ಲ್ಯೂ)ಕ್ಕೆ ರಾತ್ರಿ 10.35ಕ್ಕೆ, ಬಳ್ಳಾರಿಗೆ ರಾತ್ರಿ 11.30ಕ್ಕೆ ಆಗಮಿಸಲಿದೆ. ಬೆಂಗಳೂರಿಗೆ ಬೆಳಗ್ಗೆ 6 ಗಂಟೆಗೆ ತಲುಪಲಿದೆ.
ಬಸ್‌ನಲ್ಲಿ ಸಂಡೂರಿನಿಂದ ರೂ. 1,000, ದೋಣಿಮಲೈನಿಂದ ರೂ. 960, ವಿದ್ಯಾನಗರದಿಂದ ರೂ. 920 ಹಾಗೂ ಬಳ್ಳಾರಿಯಿಂದ ರೂ.830 ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ.
ಬೆಂಗಳೂರಿನಿಂದ ರಾತ್ರಿ 10.30ಕ್ಕೆ ಹೊರಡುವ ಬಸ್, ಬಳ್ಳಾರಿಗೆ ಬೆಳಗ್ಗೆ 5.45ಕ್ಕೆ ಆಗಮಿಸಲಿದೆ. ವಿದ್ಯಾನಗರಕ್ಕೆ ಬೆಳಗ್ಗೆ 6.30ಕ್ಕೆ, ದೋಣಿಮಲೈಗೆ ಬೆಳಗ್ಗೆ 7 ಗಂಟೆಗೆ ಹಾಗೂ ಸಂಡೂರಿಗೆ ಬೆಳಗ್ಗೆ 7.30ಕ್ಕೆ ಆಗಮಿಸಲಿದೆ.
ಮುಂಗಡ ಆಸನಗಳನ್ನು ಕಾಯ್ದಿರಿಸಲು www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡಿಬಹುದು.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications