ಕೆಎಸ್‌ಆರ್‌ಟಿಸಿಯ ಅಂಬಾರಿ ಸೇವೆಗೆ ಉತ್ತಮ ಸ್ಪಂದನೆ; ಉತ್ತಮ ಆದಾಯ

ಬೆಂಗಳೂರು, ಮೇ 05; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ)ಯ ಅಂಬಾರಿ ಉತ್ಸವ ಸ್ಲೀಪರ್ ಬಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜನರು ಬಸ್‌ ಸೌಕರ್ಯವನ್ನು ಉತ್ತಮವಾಗಿ ಬಳಕೆ ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಕುರಿತು ಬಹಳ ಪ್ರಚಾರ ಮಾಡುತ್ತಿದ್ದಾರೆ.

ಕೆಎಸ್ಆರ್‌ಟಿಸಿಯ ಐಷಾರಾಮಿ ಅಂಬಾರಿ ಉತ್ಸವ ಬಸ್ ಸೇವೆಗೆ 21/2/2023ರಂದು ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದಲ್ಲಿ ಚಾಲನೆ ನೀಡಲಾಗಿತ್ತು. ಆಯ್ದ ಮಾರ್ಗದಲ್ಲಿ ಈ ಬಸ್‌ಗಳು ಸಂಚಾರ ನಡೆಸುತ್ತಿವೆ. ಈ ಸೇವೆಗೆ ವೋಲ್ವೊ ಬಿಸ್-VI 9600 ಎಸ್ ಮಾದರಿಯ ಮಲ್ಟಿ ಆಕ್ಸಲ್ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ.

Good Response For KSRTC Ambari Utsav Luxury Sleeper Bus Service

ಅಂಬಾರಿ ಉತ್ಸವ ಬಸ್ ಸೇವೆಗೆ ಬೇಡಿಕೆ ಹೆಚ್ಚಾಗಿದೆ ಎಂದು ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಹೇಳಿದ್ದಾರೆ. ಬೆಂಗಳೂರು-ಮುರುಡೇಶ್ವರ ಮತ್ತು ಬೆಂಗಳೂರು-ಎರ್ನಾಕುಲಂ, ಬೆಂಗಳೂರು-ತ್ರಿಶೂರ್ ಮಾರ್ಗದ ಬಸ್‌ಗಳು ಸಂಪೂರ್ಣವಾಗಿ ಭರ್ತಿಯಾಗುತ್ತಿವೆ.

3 ಕೋಟಿ ರೂ. ಆದಾಯ; ಕೆಎಸ್ಆರ್‌ಟಿಸಿ ಫೆಬ್ರವರಿ ತಿಂಗಳಿನಲ್ಲಿ ಅಂಬಾರಿ ಉತ್ಸವ ಸ್ಲೀಪರ್ ಬಸ್ ಸೇವೆಗೆ ಚಾಲನೆ ನೀಡಿದೆ. ಮುರುಡೇಶ್ವರ, ಕುಂದಾಪುರ, ಹೈದರಾಬಾದ್, ಎರ್ನಾಕುಲಂ, ತಿರುವನಂತಪುರ, ತ್ರಿಶೂರ್, ಪಣಜಿ ಮತ್ತು ಪುಣೆಯಂತಹ ದೀರ್ಘ ಮಾರ್ಗದಲ್ಲಿ ಬಸ್‌ಗಳು ಸಂಚಾರ ನಡೆಸುತ್ತಿವೆ. ಪ್ರತಿ ಕಿ. ಮೀ. ಗೆ 76 ರೂ.ಗಳನ್ನು ಬಸ್‌ಗಳಿಕೆ ಮಾಡುತ್ತಿದ್ದು, ನಿಗಮಕ್ಕೆ 3 ಕೋಟಿಗೂ ಅಧಿಕ ಆದಾಯ ಬಂದಿದೆ.

ಐಷಾರಾಮಿ ಬಸ್‌ಗಳಲ್ಲಿ ಸಂಚಾರ ನಡೆಸುವ ಜನರು ಉತ್ತಮವಾದ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆರಾಮದಾಯಕ ಪ್ರಯಾಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಪ್ರಚಾರವನ್ನು ಸಹ ನೀಡುತ್ತಿದ್ದಾರೆ. ಈಗ ಬೇಸಿಗೆ ರಜೆಯ ಸಂದರ್ಭದದಲ್ಲಿ ಬಸ್ ಸೇವೆಗೆ ಇನ್ನೂ ಹೆಚ್ಚಿನ ಬೇಡಿಕೆ ಬರುತ್ತಿದೆ.

Good Response For KSRTC Ambari Utsav Luxury Sleeper Bus Service

ಖಾಸಗಿ ಬಸ್‌ಗಳಿಗಿಂತ ಉತ್ತಮವಾದ ಸೇವೆ ಕೆಎಸ್‌ಆರ್‌ಟಿಸಿಯ ಅಂಬಾರಿ ಉತ್ಸವ ಬಸ್‌ಗಳಿಂದ ಸಿಗುತ್ತಿದೆ. ಪ್ರಸ್ತುತ 20 ಈ ಮಾದರಿಯ ಬಸ್‌ಗಳು ರಾಜ್ಯ, ಹೊರರಾಜ್ಯದ ವಿವಿಧ ಪ್ರದೇಶಗಳಿಗೆ ಸಂಚಾರ ನಡೆಸುತ್ತಿವೆ. 15 ಬಸ್‌ಗಳು ಬೆಂಗಳೂರು ವಿಭಾಗದಿಂದಲೇ ಸಂಚಾರ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ಇನ್ನೂ 30 ಬಸ್‌ಗಳ ಸಂಚಾರ ಆರಂಭಿಲು ಕೆಎಸ್ಆರ್‌ಸಿ ತೀರ್ಮಾನಿಸಿದೆ.

ಯಾವ-ಯಾವ ಮಾರ್ಗ; ಸದ್ಯ ಅಂಬಾರಿ ಉತ್ಸವ ಬಸ್‌ಗಳು ಬೆಂಗಳೂರು-ಸಿಕಂದ್ರಾಬಾದ್, ಬೆಂಗಳೂರು-ಹೈದರಾಬಾದ್, ಬೆಂಗಳೂರು-ಎರ್ನಾಕುಲಂ, ಬೆಂಗಳೂರು-ತಿರುವನಂತಪುರ, ಬೆಂಗಳೂರು-ತ್ರಿಶೂರ್, ಬೆಂಗಳೂರು-ಪಣಜಿ, ಕುಂದಾಪುರ-ಬೆಂಗಳೂರು ಮತ್ತು ಮಂಗಳೂರು-ಪೂನಾ ನಡುವೆ ಸಂಚಾರ ನಡೆಸುತ್ತಿವೆ.

ಕೆಎಸ್‌ಆರ್‌ಟಿಸಿ ವೋಲ್ವೊ ಬಿಎಸ್-VI 9600 ಎಸ್ ಮಾದರಿಯ ಮಲ್ಟಿ ಆಕ್ಸಲ್‌ ಸ್ಲೀಪರ್‌ ಬಸ್‌ ಸೇವೆಯನ್ನು ಆರಂಭಿಸುವ ಮುನ್ನ ಜನರಿಂದಲೇ ಈ ಸೇವೆಗೆ ಹೆಸರು ಸೂಚಿಸುವಂತೆ ಕೇಳಿತ್ತು. ಜನರು ನೀಡಿದ 'ಅಂಬಾರಿ ಉತ್ಸವ' ಎಂಬ ಹೆಸರನ್ನು ಇದಕ್ಕೆ ಇಡಲಾಗಿದೆ. 'ಸಂಭ್ರಮದ ಪ್ರಯಾಣ' ಎಂಬ ಟ್ಯಾಗ್ ಲೈನ್ ಇಟ್ಟಿದೆ. 40 ಆಸನಗಳನ್ನು ಈ ಬಸ್ ಸೇವೆ ಹೊಂದಿದೆ. ಬಸ್ 15 ಮೀಟರ್ ಉದ್ದವಿದೆ.

ಈ ಬಸ್‌ನ ಮುಂಭಾಗ ಏರೋ ಡೈನಾಮಿಕ್ ಮೇರುಕೃತಿಯ ಭಾಗವಾಗಿದೆ. ವೇಗವಾಗಿ ಬಸ್ ಸಂಚಾರ ನಡೆಸುವಾಗ ಗಾಳಿಯ ಎಳೆತವನ್ನು ಇದು ಕಡಿಮೆ ಮಾಡುತ್ತದೆ ಮತ್ತು ಇಂಧನ ಉಳಿತಾಯಕ್ಕೆ ಸಹಾಯಕವಾಗಿದೆ. ವಾಹನವು ಅತ್ಯಂತ ಸುರಕ್ಷಿತ, ಪರಿಸರ ಸ್ನೇಹಿಯಾಗಿದೆ.

'ಅಂಬಾರಿ ಉತ್ಸವ' ವೋಲ್ವೊ ಬಸ್ ಪ್ರಯಾಣಿಕರಿಗೆ ಪ್ಯಾನೊರಮಿಕ್ ವಿಂಡೋಗಳನ್ನು ಹೊಂದಿರುವ ವಿಹಂಗಮ ನೋಟದ ವೈಭವವನ್ನು ನೀಡುತ್ತದೆ. ಹೊಸ ಸುಧಾರಿತ ಪಿಎಕ್ಸ್ ಸಸ್ಪೆಕ್ಷನ್ ಸ್ಟೈರಿಂಗ್ ಪ್ರಯಾಣದ ಉತ್ತಮ ಅನುಭವವನ್ನು ನೀಡುತ್ತದೆ. ಸದ್ಯ ಆಯ್ದ ನಗರಗಳಿಗೆ ಮಾತ್ರ ಈ ಬಸ್‌ಗಳು ಸಂಚಾರ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ಬೇರೆ-ಬೇರೆ ನಗರಗಳಿಗೆ ಈ ಬಸ್ ಸೇವೆ ಆರಂಭಿಸಲು ಚಿಂತನೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+