ಗೋಲ್ಡ್‌ನ್ ಬೀಚ್‌ಸ್ ಆಫ್ ಕರ್ನಾಟಕ ಪ್ರವಾಸ
ಬೆಂಗಳೂರು,
ಏ.10: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಪ್ರತಿ ಬುಧವಾರ ರಾತ್ರಿ 8 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆಗೆ ಹಿಂದಿರುಗುವ ಐದು ದಿನಗಳನ್ನೊಳಗೊಂಡ ಗೋಲ್ಡ್‌ನ್ ಬೀಚ್‌ಸ್ ಆಫ್ ಕರ್ನಾಟಕ ಎಂಬ ವಿಶೇಷ ಪ್ರವಾಸವನ್ನು ಹಮ್ಮಿಕೊಂಡಿದೆ. id="toptextpromo">ಸದರಿ
ಪ್ರವಾಸದಲ್ಲಿ ಕಾರವಾರದ ಬೀಚ್, ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನ ಹಾಗೂ ಓಂ ಬೀಚ್, ಮುರಡೇಶ್ವರದ ದೇಗುವಲ ಹಾಗೂ ಬೀಚ್, ಮರವಂಥೆ ಬೀಚ್, ಉಡುಪಿಯ ಶ್ರೀ ಕೃಷ್ಣದೇವಾಲಯ, ಮಲ್ಪೆಯ ಸೇಂಟ್ ಮೇರಿ ದ್ವೀಪ, ಉಲ್ಲಾಳ ಬೀಚ್, ಸೋಮೇಶ್ವರ ಬೀಚ್, ಪಿಲಿಕುಲ ನಿಸರ್ಗಧಾಮ ನತ್ತು ಪಣಂಬೂರ್ ಬೀಚ್, ಈ ಸ್ಥಳಗಳನ್ನು ನೋಡಿಕೊಂಡು ಬರಲು ಪ್ರತ್ಯೇಕ ಹವಾನಿಯಂತ್ರಿತ ವಸತಿ ಸೌಲಭ್ಯ ಒಳಗೊಂಡ ನಿಗಮದ ಹವಾನಿಯಂತ್ರಿತ ವೋಲ್ವೋ ವಾಹನದಲ್ಲಿ ಏರ್ಪಡಿಸಲಾಗಿದ್ದು, ಇದರ ದರ ರು.6,425 ಗಳನ್ನು ನಿಗದಿಪಡಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಹೆಚ್ಚಿನ
ಮಾಹಿತಿಗಾಗಿ ನಿಗಮದ ಬಾದಾಮಿ ಕಟ್ಟಡ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎದುರು, ಎನ್. ಆರ್. ಚೌಕ, ಬೆಂಗಳೂರು - 2ಇಲ್ಲಿ ಖುದ್ದಾಗಿ ಅಥವಾ ಈ ದೂರವಾಣಿ ಸಂಖ್ಯೆಗಳನ್ನು 22222400, 22212098, 22275883, 22275869 ಸಂಪರ್ಕಿಸಬಹುದಾಗಿದೆ. (ದಟ್ಸ್ ಕನ್ನಡ ವಾರ್ತೆ)











Click it and Unblock the Notifications