Chennai-Bangaluru Expressway: ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಈ ದಿನಾಂಕಕ್ಕೆ ಅಲ್ವಂತೆ; ಮತ್ಯಾವಾಗ?
Chennai-Bangaluru Expressway: ಕರ್ನಾಟಕಕ್ಕೆ ಹೊರ ರಾಜ್ಯಗಳನ್ನು ಸಂಪರ್ಕಿಸುವ ಹೆದ್ದಾರಿಗಳಲ್ಲಿ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಕೂಡ ಒಂದಾಗಿದೆ. ಈ ಎಕ್ಸ್‌ಪ್ರೆಸ್ ವೇ 2024ರ ಅಂತ್ಯದಲ್ಲಿ ಉದ್ಘಾಟನೆಯಾಗಲಿದ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದರು. ಆದರೆ, ಇದೀಗ ಉದ್ಘಾಟನೆ ಮತ್ತಷ್ಟು ತಡವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಾರಣ ಏನೆಂದು ಇಲ್ಲಿ ತಿಳಿಯಿರಿ.
2024ರ ಅಂತ್ಯ ಅಂದರೆ, ಡಿಸೆಂಬರ್‌ನಲ್ಲಿ ಆಗಬೇಕಿದ್ದ ಬಹುನಿರೀಕ್ಷಿತ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಮತ್ತಷ್ಟು ತಡವಾಗಲಿದೆ ಎನ್ನುವ ಅಪ್ಡೇಟ್ ಮಾಹಿತಿ ಇದೀಗ ಲಭ್ಯವಾಗಿದೆ. ತಮಿಳುನಾಡು ವಿಭಾಗದಲ್ಲಿ ಕಾಮಗಾರಿ ಇನ್ನೂ ಪೂರ್ಣವಾಗದೆ ಬಾಕಿ ಇರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಕಾಮಗಾರಿ ಯಾವಾಗ ಪೂರ್ಣ?: ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ವೇ ಕಾಮಗಾರಿ ಸುಮಾರು 72 ಕಿಲೋ ಮೀಟರ್‌ನಷ್ಟು ಕರ್ನಾಟಕ ವಿಭಾಗ ಈಗಾಗಲೇ ಸಿದ್ಧವಾಗಿದೆ. ಆದರೆ 106 ಕಿಲೋ ಮೀಟರ್ ತಮಿಳುನಾಡು ವಿಭಾಗದಲ್ಲಿ ಇನ್ನೂ ಪೂರ್ಣ ಆಗಿಲ್ಲ. ಚೆನ್ನೈ ಬಳಿಯಿರುವ ಇರುಂಗಟ್ಟುಕೊಟ್ಟೈನಿಂದ ತಮಿಳುನಾಡು-ಆಂಧ್ರಪ್ರದೇಶದ ಗಡಿಯ ಸಮೀಪ ಇರುವ ಗುಡಿಪಾಲವರೆಗೆ ವಿಸ್ತರಲಿದೆ.
ಆದ್ದರಿಂದ ಈ ಕಾಮಾಗರಿ 2025ರ ಮಧ್ಯದಲ್ಲಿ ಅಂದರೆ ಜೂನ್ ಅಥವಾ ಜುಲೈ ತಿಂಗಳಲ್ಲಿ ಮುಕ್ತಾಯವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇನ್ನು ಈ ಎಕ್ಸ್‌ಪ್ರೆಸ್ ವೇ ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕಾಮಕಾರಿ ಆರಂಭವಾಗಿದೆ. ಈ ಹೆದ್ದಾರಿ ಪೂರ್ಣಗೊಂಡರೆ, ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ. ಗಂಟೆಗೆ 120 ಕಿಮೀ ವೇಗದಲ್ಲಿ ಸಮಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಈವರೆಗೂ ಚೆನ್ನೈ-ಬೆಂಗಳೂರು ಎರಡೂ ನಗರಗಳ ನಡುವೆ ಸಂಚರಿಸಲು 6-7 ಗಂಟೆ ಸಮಯ ಬೇಕೇ ಬೇಕಾಗುತ್ತಿತ್ತು. ಆದರೆ, ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾದರೆ, ಈ ಸಮಯ 2 ಗಂಟೆಗೆ ಇಳಿಕೆಯಾಗಲಿದೆ ಎನ್ನಲಾಗುತ್ತಿದೆ. ಇದರಿಂದ ವಾಹನ ಸವಾರರಿಗೆ ಯಾವುದೇ ಅಡೆತಡೆಗಳಿರುವುದಿಲ್ಲ ಹಾಗೂ ಇಂಧನವೂ ಕೂಡ ಉಳಿತಾಯ ಆಗಲಿದೆ.
ಏನೆಲ್ಲಾ ಪ್ರಯೋಜನೆಗಳಿವೆ?: ಈ ಎಕ್ಸ್‌ಪ್ರೆಸ್ ವೇ ತಮಿಳುನಾಡಿನಲ್ಲಿ ಇರುಂಗಟ್ಟುಕೊಟ್ಟೈ-ವಾಲಾಜಪೇಟ್ ಸ್ಟ್ರೆಚ್ ಸರಕು ಸಾಗಣೆಯನ್ನು ಕಡಿಮೆ ಸಮಯದಲ್ಲಿ ಸಾಗಿಸಲು ಸಹಕಾರಿಯಾಗಲಿದೆ. ಅದರಲ್ಲೂ ಚೆನ್ನೈ ಬಂದರಿಗೆ ಸರಕುಗಳನ್ನು ಸಾಗಿಸುವ ಟ್ರಕ್‌ಗಳು ಚಲಿಸಲು ಇದು ಅನುಕೂಲ ಆಗಲಿದೆ.
ಇರುಂಗಟ್ಟುಕೊಟ್ಟೈನಲ್ಲಿ 129 ಕೋಟಿ ರೂಪಾಯಿ ವೆಚ್ಚದಲ್ಲಿ ಟ್ರಂಪೆಟ್ ಇಂಟರ್‌ಚೇಂಜ್ ಎಕ್ಸ್‌ಪ್ರೆಸ್ ವೇ ಅನ್ನು ರಾಷ್ಟ್ರೀಯ ಹೆದ್ದಾರಿ 4ನೊಂದಿಗೆ ಸಂಪರ್ಕಿಸುವ ಕಾಮಗಾರಿ ಅಹ ನಿರ್ಮಾಣ ಹಂತದಲ್ಲಿದೆ. ಇದು ಚೆನ್ನೈ ಪೆರಿಫೆರಲ್ ರಿಂಗ್ ರೋಡ್ ಕಾಮಗಾರಿ ಮುಕ್ತಾಯವಾದ ಬಳಿಕ ಬಂದರು ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸಲಿದೆ.
ಇನ್ನು ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ವೇ ಅನ್ನು NE7 ಎಂದು ಕರೆಯಲಾಗುತ್ತದೆ. ಈ ಯೋಜನೆ ಮುಕ್ತಾಯವಾದರೆ, ಬೆಂಗಳೂರು ಗ್ರಾಮಾಂತರ ಹೊಸಕೋಟೆ ಹಾಗೂ ಚೆನ್ನೈ ಬಳಿಯ ಪೆರಂಬದೂರ್ ರಸ್ತೆಯನ್ನು ಸಂಪರ್ಕಿಸಲಿದೆ. ಇದು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಳ ಮಾಡಲಿದೆ. ಅಲ್ಲದೆ, ಜೊತೆಗೆ ಸಾರಿಗೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಿದೆ ಎಂದು ಹೇಳಲಾಗುತ್ತಿದೆ.
ಕಾಮಗಾರಿ ವೆಚ್ಚ ಎಷ್ಟು?: ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಾದ್ಯಂತ 268 ಕಿಲೋ ಮೀಟರ್ ವಿಸ್ತರಿಸಿರುವ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಅನ್ನು ಅಂದಾಜು 17,930 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿ ಮಾಡಲಾಗುತ್ತಿದೆ. ಮಾರ್ಚ್‌ನಲ್ಲಿ ಪೂರ್ಣಗೊಳ್ಳಲು ಉದ್ದೇಶಿಸಲಾಗಿದ್ದ ಯೋಜನೆಯು ಭೂಸ್ವಾಧೀನ, ಪರಿಸರ ಸಂರಕ್ಷಣೆ ಹಾಗೂ ಇನ್ನಿತರ ಕಾರಣಗಳ ಹಿನ್ನೆಲೆ ಆಮೆಗತಿಯಲ್ಲಿ ಸಾಗುತ್ತಾ ಬಂದಿದೆ.
ಈಗಾಗಗಲೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಾಣ ಆಗಿದ್ದು, ಇದರಿಂದ ತುಂಬಾ ಪ್ರಯೋಜನೆಗಳಾಗುತ್ತಿದೆ. ಆದರೆ, ಟೋಲ್ ವಿಚಾರದಲ್ಲಿ ಮಾತ್ರ ಆಗಾಗ ಅನ್ಯಾಯ ಆಗುತ್ತಿದೆ ಎನ್ನುವ ಆರೋಪವನ್ನು ವಾಹನ ಸವಾರರು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಮತ್ತೊಂದೆಡೆ ಟೋಲ್ ಸಿಬ್ಬಂದಿ ಸಹ ವಾಹನ ಸವಾರರ ಮೇಲೆ ಕೈ ಮಾಡಿದ ಘಟನೆಗಳು ತುಂಬಾ ನಡೆದಿವೆ.
ಮತ್ತೊಂದೆಡೆ ನೋಡುವುದಾದರೆ, ಈ ಹೆದ್ದಾರಿಯಲ್ಲಿ ಕಳ್ಳರ ಕಾಟ, ಹಾಗೂ ರಕ್ಷಣೆ ಇಲ್ಲ ಎನ್ನುವ ಆರೋಪಗಳು ಕೂಡ ಕೇಳಿಬಂದಿದ್ದವು. ಅಪಘಾತಗಳ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿದ್ದು, ಇದನ್ನು ಎಚ್ಚೆತ್ತ ಪೊಲೀಸ್ ಇಲಾಖೆ ಅತ್ಯಾಧುನಿಕ ಎಐ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿದೆ. ಇದರಿಂದ ಅಪಘಾತನಗಳ ಸಂಖ್ಯೆಯೂ ಕೂಡ ಕಡಿಮೆಯಾಗಿದೆ ಎನ್ನಲಾಗುತ್ತಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications