ಜುಲೈ 3ರಿಂದ ಬಿಎಂಟಿಸಿ ಹೊಸ ಮಾರ್ಗ ಆರಂಭ, ಮೆಟ್ರೋ ನಿಲ್ದಾಣಕ್ಕೆ ಬಸ್

ಬೆಂಗಳೂರು, ಜುಲೈ 02: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಜುಲೈ 3ರ ಬುಧವಾರಿಂದ ಹೊಸ ಮಾರ್ಗವನ್ನು ಪರಿಚಯಿಸಲಿದೆ. ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಮಾರ್ಗದ ನಕ್ಷೆಯನ್ನು ತಯಾರು ಮಾಡಿದೆ. ದಿನಕ್ಕೆ 20 ಟ್ರಿಪ್ ಹೊಸ ಮಾರ್ಗದಲ್ಲಿ ಬಸ್ ಸಂಚಾರವನ್ನು ನಡೆಸಲಿದೆ.

ಹೊಸ ಮಾರ್ಗದ ಕುರಿತು ಬಿಎಂಟಿಸಿ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. MF-2 ಹೆಸರಿನ ಮಾರ್ಗದ ಬಸ್ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ (ಹಿಂಭಾಗದ ಗೇಟ್) ಮತ್ತು ರಾಮಮೂರ್ತಿ ನಗರ ಬ್ರಿಡ್ಜ್ ನಡುವೆ ಸಂಚಾರವನ್ನು ಆರಂಭಿಸಲಿದೆ.

BMTC To Introduce New Route MF 2 From July 3 Details

3/7/2024 ರಿಂದ ಬಿಎಂಟಿಸಿಯ ನಾನ್ ಎಸಿ ಬಸ್‌ಗಳು ಎಂಎಫ್-2 ಹೊಸ ಮಾರ್ಗದಲ್ಲಿ ಸಂಚಾರ ನಡೆಸಲಿವೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಪ್ರಯಾಣಿಕರು ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದೆ. ಬಸ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

MF-2 ಹೊಸ ಬಿಎಂಟಿಸಿ ಮಾರ್ಗ: ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ (ಹಿಂಭಾಗದ ಗೇಟ್) ಮತ್ತು ರಾಮಮೂರ್ತಿ ನಗರ ಬ್ರಿಡ್ಜ್ ನಡುವಿನ ಬಸ್ ಬಿ. ಚನ್ನಸಂದ್ರ, ಎಸ್‌ಬಿಐ ಬ್ಯಾಂಕ್, ಕಸ್ತೂರಿ ನಗರ 2ನೇ ಹಂತ, ಬೆನ್ನಿಗಾನಹಳ್ಳಿ ಬ್ರಿಡ್ಜ್, ಸದಾನಂದ ನಗರ ಮಾರ್ಗದಲ್ಲಿ ಸಂಚಾರ ನಡೆಸಲಿದೆ.

ಈ ಬಸ್‌ಗಳು ಪ್ರತಿದಿನ 20 ಟ್ರಿಪ್ ಸಂಚಾರ ನಡೆಸಲಿದೆ. ಬಸ್ ರಾಮಮೂರ್ತಿ ನಗರ ಬ್ರಿಡ್ಜ್‌ನಿಂದ 7.40, 8.20, 9, 9.40, 17.25, 18.05, 18.45, 19.50, 20.30 ಸಮಯಕ್ಕೆ ನಿರ್ಗಮಿಸುತ್ತವೆ.

ಬಸ್ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ನಿರ್ಗಮಿಸುವ ಸಮಯ 7.20, 8, 8.40, 9.20, 10.25, 17.05, 17.45, 18.25, 19.30, 20.10, 20.50.

ಬಿಎಂಟಿಸಿ ನಮ್ಮ ಮೆಟ್ರೋ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಮೆಟ್ರೋ ಫೀಡರ್ ಸೇವೆಗಳನ್ನು ಪರಿಚಯಿಸುತ್ತದೆ. ಆದರೆ ಈಗ ಘೋಷಣೆ ಮಾಡಿರುವ ಬಸ್ ಮೆಟ್ರೋ ಫೀಡರ್ ಸೇವೆಯಲ್ಲ. ಆದರೆ ಈ ಬಸ್ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ (ಹಿಂಭಾಗದ ಗೇಟ್)ದಿಂದ ಸಂಚಾರ ನಡೆಸಲಿದೆ.

ಜುಲೈ 1ರಂದು ಬಿಎಂಟಿಸಿ ಮೂರು ಮಾರ್ಗದಲ್ಲಿ ನಾನ್ ಎಸಿ ಬಸ್‌ಗಳನ್ನು ಘೋಷಣೆ ಮಾಡಿತ್ತು. ಚಕ್ರ-1, ಚಕ್ರ-1ಎ, 225-ಎಫ್ ಎಂಬ ಮಾರ್ಗವನ್ನು ಆರಂಭಿಸಿತ್ತು. ಈ ಮಾರ್ಗದ ಬಸ್‌ಗಳು ನೆಲಮಂಗಲ-ನೆಲಮಂಗಲವನ್ನು ವಿವಿಧ ಮಾರ್ಗದ ಮೂಲಕ, ಜಾಲಹಳ್ಳಿ ಕ್ರಾಸ್-ನೆಲಮಂಗಲವನ್ನು ಸಂಪರ್ಕಿಸುತ್ತಿವೆ.

ಬಿಎಂಟಿಸಿ ಮಾಹಿತಿ ಪ್ರಕಾರ ಚಕ್ರ-1ಎ ಮಾರ್ಗದ ಬಸ್ ನೆಲಮಂಗಲ-ನೆಲಮಂಗಲ ನಡುವೆ ಸಂಚಾರ ನಡೆಸಲಿವೆ. 9 ಟ್ರಿಪ್ ಸಂಚರಿಸಲಿದೆ. ಬಸ್ ಬಸವನಹಳ್ಳಿ, ಬೊಮ್ಮಶೆಟ್ಟಿಹಳ್ಳಿ ಕ್ರಾಸ್, ಹಸ್ಕೂರು ಕ್ರಾಸ್, ಹೊನ್ನಸಂದ್ರ ಕ್ರಾಸ್, ನಾಗನೂರು ಕ್ರಾಸ್, ನಾಗನೂರು, ನಂದರಾಮಪಾಳ್ಯ, ಬಿನ್ನಿಮಂಗಲ ಮಾರ್ಗದಲ್ಲಿ ಓಡಲಿದೆ.

ಚಕ್ರ-2ಎ ಮಾರ್ಗದ ಬಸ್, ನೆಲಮಂಗಲ-ನೆಲಮಂಗಲ ನಡುವೆ 9 ಟ್ರಿಪ್ ಸಂಚರಿಸಲಿದೆ. ಬಸ್ ಬಿನ್ನಿಮಂಗಲ, ನಂದರಾಮಪಾಳ್ಯ, ನಾಗನೂರು, ನಾಗನೂರು ಕ್ರಾಸ್, ಹೊನ್ನಸಂದ್ರ ಕ್ರಾಸ್, ಹಸ್ಕೂರು ಕ್ರಾಸ್, ಬೊಮ್ಮಶೆಟ್ಟಿಹಳ್ಳಿ ಕ್ರಾಸ್, ಬಸವನಹಳ್ಳಿ ಮೂಲಕ ಓಡುತ್ತದೆ.

225-ಎಫ್ ಬಸ್, ಜಾಲಹಳ್ಳಿ ಕ್ರಾಸ್-ನೆಲಮಂಗಲ ನಡುವೆ ಸಂಪರ್ಕ ಕಲ್ಪಿಸಲಿದೆ. ಈ ಬಸ್ 8 ಟ್ರಿಪ್ ಸಂಚಾರ ನಡೆಸಲಿದೆ. ಮಾರಿಷನ್ ಫ್ಯಾಕ್ಟರಿ, ಮಾದನಾಯಕನಹಳ್ಳಿ, ಮಾಕಳಿ, ನಾಗನೂರು ಕ್ರಾಸ್, ನಾಗನೂರು, ನಂದರಾಮನಪಾಳ್ಯ, ಬಿನ್ನಿಮಂಗಲ ಮೂಲಕ ಬಸ್ ಸಂಚಾರ ನಡೆಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+