Bengaluru Airport: KIA ಟರ್ಮಿನಲ್ 2ನಲ್ಲಿ ಅಂತಾರಾಷ್ಟ್ರೀಯ ವಿಮಾನ ಹಾರಾಟ ಶುರು, ಟರ್ಮಿನಲ್ 1 ಯಾವುದಕ್ಕೆ ಬಳಕೆ
ಬೆಂಗಳೂರು, ಸೆಪ್ಟೆಂಬರ್, 12: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಕರ್ಷಣೆ ಟರ್ಮಿನಲ್ 2 ವಿದೇಶಿ ವಿಮಾನಗಳ ಹಾರಾಟ ಇಂದಿನಿಂದ ಶುರು ಆಗಿದೆ. ಟರ್ಮಿನಲ್ 2ನಲ್ಲಿ ಇವತ್ತು ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು, ಚಂಡೆಯ ನಾದದ ಜೊತೆಗೆ ಸಾಂಸ್ಕೃತಿಕ ವೈಭವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಡುಬಂತು.
ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಇಂದಿನಿಂದ ಟರ್ಮಿನಲ್ 2ಗೆ ಶಿಫ್ಟ್ ಆಗಿದೆ. 5 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಗಾರ್ಡನ್ ಟರ್ಮಿನಲ್ ಬಹು ನಿರೀಕ್ಷಿತ ಅತ್ಯಾಧುನಿಕ ತಂತ್ರಜ್ಞಾನವುಳ್ಳದ್ದಾಗಿದೆ. ಕಳೆದ ವರ್ಷ ನವಂಬರ್‌ನಲ್ಲಿ ಪ್ರಧಾನಿ ಮೋದಿ ಈ ಟರ್ಮಿನಲ್ ಅನ್ನು ಉದ್ಘಾಟನೆ ಮಾಡಿದ್ದರು. ಇದೀಗ ಸಂಪೂರ್ಣ ಕಾಮಗಾರಿ ಮುಗಿಸಿ ಹಾರಾಟ ಶುರು ಮಾಡಿದೆ. ಇಂದು ಬೆಳಗ್ಗೆ 10:45ಕ್ಕೆ ಟರ್ಮಿನಲ್ - 2 ಗೆ ಮೊದಲ ವಿದೇಶಿ ವಿಮಾನ ಬಂದಿಳಿದಿದೆ.

ಹಾಗಾದರೆ ಹಳೆಯ ಟರ್ಮಿನಲ್ 1 ಅನ್ನು ಏನುಕ್ಕೆ ಉಪಯೋಗಿಸುತ್ತಾರೆ ಅಂತಾ ಕೇಳಿದ್ರೆ ಹಳೆಯ ಟರ್ಮಿನಲ್ -1 ದೇಶಿಯ ವಿಮಾನಗಳ ಹಾರಾಟಕ್ಕೆ ಮೀಸಲು ಇಡಲಾಗುತ್ತದೆ. 10 ಸಾವಿರ ಚದರ ಮೀಟರ್ ಹಸಿರು ಗೋಡೆ, ಕೃತಕ ವಾಟರ್ ಪಾಲ್ಸ್, ನೂರಾರು ವರ್ಷಗಳ ಹಳೆಯ ಮರ ಟರ್ಮಿನಲ್ 2 ಹೊಂದಿದೆ.
2 ಲಕ್ಷ 55 ಸಾವಿರದ 661 ಚದರ್ ಮೀಟರ್‌ನ ನೂತನ 2ನೇ ಟರ್ಮಿನಲ್ ಪ್ರತ್ಯೇಕ ಆಗಮನ, ನಿರ್ಗಮನದ 2 ಹಂತಗಳನ್ನೊಳಗೊಂಡಿದೆ. ವಾರ್ಷಿಕ 25 ಮಿಲಿಯನ್ ಪ್ರಯಾಣಿಕರು ಸಂಚರಿಸಬಹುದಾದ ದೊಡ್ಡ ಟರ್ಮಿನಲ್ ಇದಾಗಿದೆ. 5 ಜಿ ನೆಟ್ವರ್ಕ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಚೆಕ್ ಇನ್, ಬ್ಯಾಗೇಜ್ ಡ್ರಾಪ್ ಕೌಂಟರ್ ವ್ಯವಸ್ಥೆ ಕೂಡ ಇಲ್ಲಿ ಇದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿನಾಮಾನ ನಿಲ್ದಾಣ ಎಂಡಿ ಹರಿಮಾನನ್, ಟರ್ಮಿನಲ್ ಹೆಡ್ ಸಂಪ್ರೀತ್ ಕೋಟ್ಯಾನ್ ಮತ್ತು ಪಿಆರ್‌ಒ ಗಾಯತ್ರಿ ಸಮ್ಮುಖದಲ್ಲಿ ಟರ್ಮಿನಲ್ 2ಗೆ ಚಾಲನೆ ನೀಡಲಾಯಿತು. ಮೊದಲ ಟರ್ಮಿನಲ್ 2 ಪ್ರಯಾಣ ಸೌದಿ ಕಡೆ ಹಿನ್ನೆಲೆ ಪ್ರಯಾಣಿಕರಿಗೆ ರಾಯಲ್ ಸ್ವಾಗತ ಕೂಡ ಮಾಡಲಾಯಿತು.
ಗಾರ್ಡನ್ ಸಿಟಿ ರೀತಿ ಇರುವ ಈ ಟರ್ಮಿನಲ್ ನೋಡಲು ಉತ್ಸುಕರಾಗಿ ಬಂದ ಪ್ರಯಾಣಿಕರಿಗೆ ಡೊಳ್ಳು ಕುಣಿತದ ಸ್ವಾಗತ ಮಾಡಲಾಯಿತು. ರಾಯಲ್ ಸ್ವಾಗತ ಕಂಡು ಪ್ರಯಾಣಿಕರು ಫುಲ್ ಖುಷ್ ಆದರು. 10:45ಕ್ಕೆ ಮೊದಲ ವಿದೇಶಿ ವಿಮಾನ ಆಗಮಿಸಿದ್ದು, ಇದರಿಂದ ಟರ್ಮಿನಲ್ 2ನಲ್ಲಿ ಅತ್ಯಂತ ಸಂತಸದ ವಾತಾವರಣ ನಿರ್ಮಾಣ ಆಗಿತ್ತು.












Click it and Unblock the Notifications