Amarnath Yatra Registration: ಅಮರನಾಥ ಯಾತ್ರೆಗೆ ಹೋಗ್ತೀರಾ? ಹಾಗಾದರೆ ನೋಂದಣಿ, ಶುಲ್ಕ, ಷರತ್ತುಗಳ ಮಾಹಿತಿ ಇಲ್ಲಿದೆ
ಬಾಬಾ ಬರ್ಫಾನಿಯ ದರ್ಶನ ಪಡೆಯಲು ಇಚ್ಛಿಸುವ ಭಕ್ತರಿಗಾಗಿ ಅಮರನಾಥ ಯಾತ್ರೆಯ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಈ ವರ್ಷ ನೀವು ಅಮರನಾಥಕ್ಕೆ ಹೋಗಲು ಯೋಜಿಸುತ್ತಿದ್ದರೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಸೋಮವಾರ ಅಂದರೆ ಇಂದಿನಿಂದ (ಏಪ್ರಿಲ್ 15) ಅಮರನಾಥ ಯಾತ್ರೆಗೆ ನೋಂದಣಿ ಪ್ರಾರಂಭವಾಗಿದೆ. ಭಕ್ತರು ಇಂದಿನಿಂದ (ಏಪ್ರಿಲ್ 15) ಅಮರನಾಥ ಯಾತ್ರೆಗೆ ನೋಂದಣಿ ಮಾಡಿಕೊಳ್ಳಬಹುದು. ಈ ವರ್ಷ ಜೂನ್ 29 ರಿಂದ ಅಮರನಾಥ ಯಾತ್ರೆ ಆರಂಭವಾಗಲಿದೆ.

ಶ್ರಾವಣ ಮಾಸದ ಶ್ರಾವಣ ಜಾತ್ರೆಯ ಸಮಯದಲ್ಲಿ ಜನರು 'ಬಾಬಾ ಬರ್ಫಾನಿ'ಯ ದರ್ಶನಕ್ಕಾಗಿ ಅಮರನಾಥ ಯಾತ್ರೆಯನ್ನು ತಲುಪುತ್ತಾರೆ. ಹಾಗಾದೆ ಬನ್ನಿ ಅಮರನಾಥ ಯಾತ್ರೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
ಅಮರನಾಥ ಯಾತ್ರೆಯ ನೋಂದಣಿ ಆರಂಭ
ಇಂದಿನಿಂದ ಅಂದರೆ 15ನೇ ಏಪ್ರಿಲ್ 2024 ರಿಂದ ಅಮರನಾಥ ಯಾತ್ರೆಗೆ ನೋಂದಣಿ ಪ್ರಾರಂಭವಾಗಿದೆ. ಅಮರನಾಥ ದೇವಾಲಯಕ್ಕೆ ವಾರ್ಷಿಕ ಯಾತ್ರೆ ಜೂನ್ 29 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 19 ರಂದು ಕೊನೆಗೊಳ್ಳಲಿದೆ ಎಂದು ಶ್ರೀ ಅಮರನಾಥ ಶ್ರೈನ್ ಬೋರ್ಡ್ (SASB) ತಿಳಿಸಿದೆ.
ಅಮರನಾಥ ಯಾತ್ರೆಗೆ ನೋಂದಣಿ ಶುಲ್ಕ ಎಷ್ಟು?
ಅಮರನಾಥ ಯಾತ್ರೆ 2024ರ ನೋಂದಣಿ ಶುಲ್ಕವನ್ನು ಪ್ರತಿ ವ್ಯಕ್ತಿಗೆ 150 ರೂಪಾಯಿ ನಿಗಧಿ ಪಡಿಸಿಲಾಗಿದೆ. ಅಮರನಾಥ ಯಾತ್ರೆ 2024 ರ ನೋಂದಣಿ ಮಾಡಿಕೊಳ್ಳು ಬಯಸುವ ಯಾತ್ರಾತ್ರಿಗಳು ಶುಲ್ಕವನ್ನು ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾದ ಬ್ಯಾಂಕ್ ಶಾಖೆಗಳ ಮೂಲಕ ಪಾವತಿಸಬಹುದು.

ಅಮರನಾಥ ಯಾತ್ರೆಗೆ ಎಲ್ಲಿ ನೋಂದಾಯಿಸಿಕೊಳ್ಳಬೇಕು?
ಈ ವರ್ಷ ಅಮರನಾಥ ಯಾತ್ರೆಗೆ ನೋಂದಾಯಿಸಲು ಬಯಸಿದರೆ, ನೀವು ಶ್ರೀ ಅಮರನಾಥ ದೇಗುಲ ಮಂಡಳಿಯ ಅಧಿಕೃತ ವೆಬ್‌ಸೈಟ್ https://jksasb.nic.in ನಲ್ಲಿ ನೋಂದಾಯಿಸಿಕೊಳ್ಳಬಹುದು. ಇದಲ್ಲದೇ ಅಮರನಾಥ ದೇಗುಲ ಮಂಡಳಿಯ ಮೊಬೈಲ್ ಅಪ್ಲಿಕೇಶನ್ ಮೂಲಕವೂ ಅಮರನಾಥ ಯಾತ್ರೆಗೆ ನೋಂದಣಿ ಮಾಡಿಕೊಳ್ಳಬಹುದು.
ಅಮರನಾಥ ಯಾತ್ರೆಗೆ ವಯಸ್ಸಿನ ಮಿತಿ ಎಷ್ಟು?
ಅಮರನಾಥ ಯಾತ್ರೆಗೆ ನೋಂದಾಯಿಸುವ ಮೊದಲು, ನೀವು ಶ್ರೀ ಅಮರನಾಥ ದೇಗುಲ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಮತ್ತು ಯಾತ್ರೆಗೆ ಸಂಬಂಧಿಸಿದ ನಿಯಮಗಳನ್ನು ಸಂಪೂರ್ಣವಾಗಿ ಓದಬೇಕು. 13 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಥವಾ 70 ವರ್ಷ ಮೇಲ್ಪಟ್ಟವರು ಅಮರನಾಥ ಯಾತ್ರೆಯಲ್ಲಿ ಭಾಗವಹಿಸುವಂತಿಲ್ಲ. ಇದಲ್ಲದೆ, 6 ವಾರಗಳಿಗಿಂತ ಹೆಚ್ಚು ಗರ್ಭಿಣಿ ಮಹಿಳೆಯರನ್ನು ಅಮರನಾಥ ಯಾತ್ರೆಗೆ ನೋಂದಾಯಿಸಿಕೊಳ್ಳುವಂತಿಲ್ಲ.
ಯಾವ ಮಾರ್ಗಗಳ ಮೂಲಕ ಅಮರನಾಥ ಯಾತ್ರೆ?
52 ದಿನಗಳ ಕಾಲ ನಡೆಯುವ ಅಮರನಾಥ ಯಾತ್ರೆ ಎರಡು ಮಾರ್ಗಗಳ ಮೂಲಕ ನಡೆಯುತ್ತದೆ. ಒಂದನೇ ಮಾರ್ಗವು ಅನಂತನಾಗ್ ಜಿಲ್ಲೆಯ ಸಾಂಪ್ರದಾಯಿಕ 48 ಕಿಮೀ ಉದ್ದದ ನುನ್ವಾನ್-ಪಹಲ್ಗಾಮ್ ಮಾರ್ಗವಾಗಿದೆ. ಇನ್ನೊಂದು ಮಾರ್ಗವು ಗಂಡರ್ಬಾಲ್ ಜಿಲ್ಲೆಯ 14 ಕಿಮೀ ಉದ್ದದ ಬಾಲ್ಟಾಲ್ ಮಾರ್ಗವಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಶ್ರೀನಗರದಿಂದ 141 ಕಿಲೋಮೀಟರ್ ದೂರದಲ್ಲಿರುವ ಮತ್ತು ಸಮುದ್ರ ಮಟ್ಟದಿಂದ 12,756 ಅಡಿ ಎತ್ತರದಲ್ಲಿರುವ ಅಮರನಾಥ ಯಾತ್ರೆಯ ಮೂಲಕ ಬಾಬಾ ಬರ್ಫಾನಿಯನ್ನು ಭೇಟಿ ಮಾಡಲು ತೆರಳುತ್ತಾರೆ.
ಈ ದಾಖಲೆಗಳು ಅಗತ್ಯ
ಅಮರನಾಥ ಯಾತ್ರೆಯಲ್ಲಿ ಭಾಗವಹಿಸಲು ಬಯಸುವ ಭಕ್ತರು ಅಧಿಕೃತ ವೈದ್ಯರು, ಆಧಾರ್ ಕಾರ್ಡ್, ಸರ್ಕಾರಿ ಮಾನ್ಯತೆ ಪಡೆದ ಗುರುತಿನ ಚೀಟಿ, ಕಡ್ಡಾಯ ಆರೋಗ್ಯ ಪ್ರಮಾಣಪತ್ರ (CHC) ಹೊಂದಿದ್ದರೆ ಮಾತ್ರ. ಜೊತೆಗೆ ಆರೋಗ್ಯ ಪ್ರಮಾಣ ಪತ್ರವನ್ನು ಭಕ್ತರು ಏಪ್ರಿಲ್ 8, 2024 ರ ನಂತರ ಪಡೆದಿರಬೇಕು.
ಬಾಬಾ ಬರ್ಫಾನಿಯ ಆರತಿಯ ನೇರ ಪ್ರಸಾರ
ಜೂನ್ 29 ರಂದು ಅಮರನಾಥ ಯಾತ್ರೆ ಪ್ರಾರಂಭವಾದ ತಕ್ಷಣ, ಬೆಳಿಗ್ಗೆ ಮತ್ತು ಸಂಜೆ ಆರತಿಯನ್ನು ಮಾಡಲಾಗುತ್ತದೆ. ಇದನ್ನು ಬಾಬಾ ಬರ್ಫಾನಿಯ ಪವಿತ್ರ ಗುಹೆಯಿಂದ ನೇರ ಪ್ರಸಾರ ಮಾಡಲಾಗುತ್ತದೆ. ಇದನ್ನು ನೀವು ಅಮರನಾಥ ಶ್ರೈನ್ ಬೋರ್ಡ್‌ನ ಅಧಿಕೃತ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿಯೂ ವೀಕ್ಷಿಸಬಹುದು.












Click it and Unblock the Notifications