ಬೆಂಗಳೂರಿನಿಂದ ಕೆಲವೇ ಕಿ.ಮೀ ದೂರದಲ್ಲಿವೆ ತಮಿಳುನಾಡಿನ ಈ 5 ಸೂಪರ್ ಸ್ಥಳಗಳು.. ನೋಡಲು ಮರೆಯದಿರಿ

ಆಗಸ್ಟ್ ತಿಂಗಳು ಬಂದೇ ಬಿಡ್ತು. ಮುಂಗಾರು ಚುರುಕಾಗಿರುವ ಈ ಸಮಯದಲ್ಲಿ ವೀಕೆಂಡ್ ಬಂದರೆ ಸಾಕು ಮನೆಯಲ್ಲಿರುವ ಮನಸ್ಸಾಗುವುದಿಲ್ಲ. ಮನಸ್ಸಿಗೆ ಮುದಕೊಡುವಂತಹ ಕಣ್ಣಿಗೆ ಹಿತವಾಗುವಂತಹ ಸ್ಥಳಗಳಿಗೆ ಭೇಟಿ ನೀಡಲು ಎಲ್ಲರು ಕಾತುರರಾಗಿರುತ್ತಾರೆ. ಈ ಆಗಸ್ಟ್ ತಿಂಗಳಲ್ಲಿ ಇಂತಹ ಅದ್ಬುತ ಸ್ಥಳಗಳಿಗೆ ಭೇಟಿ ನೀಡಲು ನೀವೇನಾದರು ಯೋಚಿಸಿದ್ದರೆ ಬೆಂಗಳೂರಿನಿಂದ ಕೆಲ ಕಿ.ಮೀ ದೂರದಲ್ಲಿರುವ ಈ ಸ್ಥಳಗಳು ನಿಮಗೆ ನಿರಾಸೆ ಮಾಡುವುದಿಲ್ಲ.

ಕೇರಳವನ್ನು ದೇವರ ನಾಡು ಎಂದು ಕರೆಯುವ ನಮ್ಮ ಜನರಿಗೆ ಆಗಸ್ಟ್‌ನಲ್ಲಿ ತಮಿಳುನಾಡಿನಲ್ಲಿ ಭೇಟಿ ನೀಡಬೇಕಾದ ಸ್ಥಳಗಳ ಬಗ್ಗೆ ಹೆಚ್ಚು ತಿಳಿದಿಲ್ಲ. ಇಲ್ಲಿಗೆ ಹೋದರೆ ಕೇರಳವಷ್ಟೇ ಅಲ್ಲ, ತಮಿಳುನಾಡು ಕೂಡ ದೇವರ ನಾಡು ಎಂದೆನಿಸದೇ ಇರದು. ಹಾಗಾದರೆ ಈ ವೀಕೆಂಡ್ ಬೆಂಗಳೂರಿನಿಂದ ತಮಿಳುನಾಡಿಗೆ ಹತ್ತಿರವಾಗಿರುವ ಈ ಪ್ರಮುಖ 5 ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದು.

5 Super Places in Tamil Nadu just a few km away from Bengaluru.. Dont forget to check it out

1. ಕೊಡೈಕೆನಾಲ್: ಮುಂಗಾರು ಚುರುಕಾಗಿರುವ ಈ ಸಮಯದಲ್ಲಿ ಕೆಲ ತಂಪಾದ ಪ್ರದೇಶಗಳಿಗೆ ಪ್ರಯಾಣಿಸಬೇಕು ಅಂದರೆ ಕೊಡೈಕೆನಾಲ್ ಬೆಸ್ಟ್ ಪ್ಲೇಸ್. ಬೆಟ್ಟಗಳ ರಾಜಕುಮಾರಿ ಎಂದು ಕರೆಯಲ್ಪಡುವ ಕೊಡೈಕೆನಾಲ್ ಬಗ್ಗೆ ನಾವು ಹೆಚ್ಚು ಹೇಳಬೇಕಾಗಿಲ್ಲ.

ರುದ್ರರಮಣೀಯವಾದ ಪರ್ವತ ಚಾರಣದಿಂದ ಹಿಡಿದು ಕೊಡೈಕೆನಾಲ್ ಸರೋವರದ ದೋಣಿ ವಿಹಾರದವರೆಗೆ ಅದ್ಬುತವಾಗಿದೆ. ಪರ್ವತವನ್ನು ಚುಂಬಿಸುವ ಮೋಡಗಳನ್ನು ಕಾಣುತ್ತ ಅದ್ಬುತ ಕ್ಷಣಗಳನ್ನು ಆನಂದಿಸಬಹುದು. ಇವುಗಳಲ್ಲದೆ ಬೇರ್ ಶೋಲಾ ಫಾಲ್ಸ್, ಪಿಲ್ಲರ್ ರಾಕ್ಸ್, ಬ್ರ್ಯಾಂಟ್ ಪಾರ್ಕ್, ಕೋಕರ್ಸ್ ವಾಕ್ ಇತರ ಪ್ರವಾಸಿ ಆಕರ್ಷಣೆಗಳಾಗಿವೆ.

5 Super Places in Tamil Nadu just a few km away from Bengaluru.. Dont forget to check it out

2. ಊಟಿ: ನೀವು ರಾಜಕುಮಾರಿಯ ಬಗ್ಗೆ ಹೇಳಿ ರಾಜಕುಮಾರನನ್ನು ಬಿಟ್ಟರೆ ಅವನು ಕೋಪಗೊಳ್ಳುವುದಿಲ್ಲವೇ? ರಾಜಕುಮಾರ ಅಂದರೆ ಅದು ಊಟಿ. ಕ್ವೀನ್ ಆಫ್ ಹಿಲ್ಸ್ ಎಂದೂ ಕರೆಯಲ್ಪಡುವ ಊಟಿ ಕೊಡೈಕೆನಾಲ್ ನಂತೆಯೇ ಪ್ರಸಿದ್ಧ ಸ್ಥಳವಾಗಿದೆ. ಊಟಿಯು ನೀಲಗಿರಿ ಮೌಂಟೇನ್ ರೈಲ್ವೇ, ತೊಟ್ಟಪೆಟ್ಟಾ ಶಿಖರ, ಬೊಟಾನಿಕಲ್ ಗಾರ್ಡನ್, ರೋಸ್ ಗಾರ್ಡನ್, ಡಾಲ್ಫಿನ್ ನೋಸ್, ಬೋಟಿಂಗ್ ಮುಂತಾದ ಪ್ರವಾಸಿ ಆಕರ್ಷಣೆಗಳಿಂದ ತುಂಬಿರುವ ಪ್ರದೇಶವಾಗಿದೆ. ಕೊಡೈಕೆನಾಲ್‌ನಂತೆ ಇಲ್ಲಿಯೂ ಎತ್ತರದ ಪರ್ವತ ಶಿಖರಗಳು ಮತ್ತು ಪ್ರಾಚೀನ ಮರಗಳಿವೆ.

5 Super Places in Tamil Nadu just a few km away from Bengaluru.. Dont forget to check it out

3. ಕೂನೂರು: ನೀವು ಊಟಿಗೆ ಹೋಗಿ ಕೂನೂರನ್ನು ಮಿಸ್ ಮಾಡಿಕೊಳ್ಳಬಹುದೇ? ಸಾಧ್ಯನೇ ಇಲ್ಲ. ಊಟಿಯ ಸಮೀಪದಲ್ಲಿರುವ ಕೂನೂರು ಪ್ರಕೃತಿಯ ಕೊಡುಗೆಯಾಗಿದೆ. ಮಲೆನಾಡಿನ ಸ್ವರ್ಗದಂತೆ ಕಾಣುವ ಕೂನೂರಿಗೆ ಹೋಗದೆ ಯಾರೂ ಊಟಿಗೆ ಹೋಗುವುದಿಲ್ಲ. ಇಲ್ಲಿರುವ ರೋಮಾಂಚಕ ಪರ್ವತದ ಹಾದಿಗಳು ಮತ್ತು ಕಣ್ಣಿಗೆ ಹಿತ ನೀಡುವ ಚಹಾ ತೋಟಗಳು ನೋಡುಗರನ್ನು ವಿಸ್ಮಯಗೊಳಿಸುತ್ತವೆ.

4. ವಾಲ್ಪಾರೈ: ವಾಲ್ಪಾರೈ ಊಟಿ ಮತ್ತು ಕೊಡೈಕೆನಾಲ್‌ಗಳಷ್ಟು ಜನಪ್ರಿಯವಾಗಿಲ್ಲ. ತಮಿಳು ಮಾತನಾಡುವ ಕೊಯಮತ್ತೂರು ಜಿಲ್ಲೆಯಲ್ಲಿರುವ ವಾಲ್ಪಾರೈ, ಹಸಿರು ಕಾಡುಗಳ ನಾಡು ಎಂದು ಕರೆಯಲ್ಪಡುತ್ತದೆ. ಇಲ್ಲಿ ಪ್ರಕೃತಿ ತನ್ನೊಂದಿಗೆ ಬದಲಾಗದ ಸೌಂದರ್ಯವನ್ನು ಇಟ್ಟುಕೊಂಡಿದೆ. ದಟ್ಟವಾದ ಕಾಡುಗಳು, ಅನೈಮಲೈ ಹುಲಿ ಸಂರಕ್ಷಿತ ಪ್ರದೇಶ, ನೀರಾರ್ ಅಣೆಕಟ್ಟು, ಚೋಲೈಯಾರ್ ಅಣೆಕಟ್ಟುಗಳು ಇಲ್ಲಿ ಭೇಟಿ ನೀಡಬೇಕಾದ ಸ್ಥಳಗಳಾಗಿವೆ.

5. ಕುರ್ತಾಲಂ: ಜೂನ್ ಬಂತೆಂದರೆ ಪ್ರವಾಸಿಗರಿಗೆ ಮೊದಲು ನೆನಪಾಗುವುದು ಕುರ್ಟಾಲಂ. ಪಶ್ಚಿಮ ಘಟ್ಟಗಳ ಮೇಲಿನಿಂದ ಸುರಿಯುವ ಝುಳು ಝುಳು ನೀರನ್ನು ಆನಂದಿಸಲು ತೆಂಕಶಿ ಜಿಲ್ಲೆಯ ಕುರ್ತಾಲಂಗೆ ಭೇಟಿ ನೀಡಬೇಕು. ಆಗಸ್ಟ್‌ನಲ್ಲಿ ಈ ಜಲಪಾತದಲ್ಲಿ ನೀರು ಉತ್ತಮವಾಗಿರುತ್ತದೆ. ದಕ್ಷಿಣ ಭಾರತದ ಸ್ಪಾ ಎಂದು ಕರೆಯಲ್ಪಡುವ ಕುರ್ತಾಲಂನ ಸೌಂದರ್ಯವನ್ನು ಅನುಭವಿಸಲು ಆಗಸ್ಟ್ ಅತ್ಯತ್ತಮ ಸಮಯ. ತಪ್ಪಿದರೆ ಮುಂದಿನ ವರ್ಷದವರೆಗೆ ಕಾಯಬೇಕು.

ಇದಲ್ಲದೇ ತಮಿಳುನಾಡಿನ ತಂಜಾವೂರು, ಕನ್ಯಾಕುಮಾರಿ, ಮಧುರೈ, ರಾಮೇಶ್ವರಂ ಮುಂತಾದ ಹಲವು ಅದ್ಭುತ ಸ್ಥಳಗಳಿಗೆ ಆಗಸ್ಟ್‌ನಲ್ಲಿ ಭೇಟಿ ನೀಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+