ಸವದತ್ತಿ ಯಲ್ಲಮ್ಮ ಜಾತ್ರೆ: ವಿಶೇಷ ಬಸ್ ವ್ಯವಸ್ಥೆ
ಬೆಳಗಾವಿ,ಡಿ.24:
ಶ್ರೀಕ್ಷೇತ್ರ ಸವದತ್ತಿ ಯಲ್ಲಮ್ಮಾದೇವಿ ಜಾತ್ರೆಯು ಇದೇ ಡಿಸೆಂಬರ್ 28 ರಿಂದ ಜನವರಿ 1 ರವರೆಗೆ ಜರುಗಲಿರುವ ಪ್ರಯುಕ್ತ ಗೋಕಾಕ/ರಾಯಬಾಗ/ಚಿಕ್ಕೋಡಿ/ಹುಕ್ಕೇರಿ/ನಿಪ್ಪಾಣಿ/ಅಥಣಿ/ ಕಾಗವಾಡ/ತೆಲಸಂಗ/ಜತ್ತ/ಸಾಂಗಲಿ/ಮಿರಜ/ಕೊಲ್ಹಾಪುರ ಇತರ ಸ್ಥಳಗಳಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. id="toptextpromo"> ಅದರಂತೆ ಕೇರಳ ರಾಜ್ಯದ ಶಬರಿಮಲೈನಲ್ಲಿ ನಡೆಯುವ ಉತ್ಸವಕ್ಕೆ ಹೋಗಬಯಸುವ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಪ್ರಾಸಂಗಿಕ ಕರಾರು ಮೇರೆಗೆ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ಭಕ್ತಾದಿಗಳು ಈ ಕೆಳಕಂಡ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ವಿಭಾಗದ ಅಧಿಕಾರಿ ವರ್ಗದವರನ್ನು ಸಂಪರ್ಕಿಸಲು ಕೋರಲಾಗಿದೆ. id='are-slot-1' class='oiad oi-axt oiadv'> id='top-searched-articles'>*ವಿಭಾಗೀಯ
ನಿಯಂತ್ರಣಾಧಿಕಾರಿ ಮೊಬೈಲ್ ಸಂಖ್ಯೆ: 94808 16091,*ವಿಭಾಗೀಯ ಸಾರಿಗೆ ಅಧಿಕಾರಿ ಮೊಬೈಲ್ ಸಂಖ್ಯೆ: 94808 16092,
*ವಿಭಾಗೀಯ ತಾಂತ್ರಿಕ ಶಿಲ್ಪಿ ಮೊಬೈಲ್ ಸಂಖ್ಯೆ: 94808 16093,
*ಸಹಾಯಕ ಕಾನೂನು ಅಧಿಕಾರಿ ಮೊಬೈಲ್ ಸಂಖ್ಯೆ: 94808 16099,
*ಡಿಪೋ ಮ್ಯಾನೇಜರ್ ಚಿಕ್ಕೋಡಿ ಮೊಬೈಲ್ ಸಂಖ್ಯೆ: 94808 16094,
*ಡಿಪೋ ಮ್ಯಾನೇಜರ್ ನಿಪ್ಪಾಣಿ ಮೊಬೈಲ್ ಸಂಖ್ಯೆ: 94808 16097,
*ಡಿಪೋ ಮ್ಯಾನೇಜರ್ ಸಂಕೇಶ್ವರ 94808 16095,
*ಡಿಪೋ ಮ್ಯಾನೇಜರ್ ಗೋಕಾಕ ಮೊಬೈಲ್ ಸಂಖ್ಯೆ: 94808 16096,
*ಡಿಪೋ ಮ್ಯಾನೇಜರ್ ರಾಯಬಾಗ ಮೊಬೈಲ್ ಸಂಖ್ಯೆ: 94808 16098 ಹಾಗೂ
*ಡಿಪೋ ಮ್ಯಾನೇಜರ್ ಅಥಣಿ ಮೊಬೈಲ್ ಸಂಖ್ಯೆ: 94808 16082 ಗೆ ಸಂಪರ್ಕಿಸಬೇಕೆಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications