keyboard_backspace

2022 ಯುಪಿ ಚುನಾವಣೆ: 7 ಪಕ್ಷ, ಸದಸ್ಯರು- ಬಿಜೆಪಿಯ ಹೊಸ ಜಾತಿ ಒಕ್ಕೂಟ ಹೀಗಿದೆ ನೋಡಿ

Google Oneindia Kannada News

ಲಕ್ನೋ, ನವೆಂಬರ್‌ 09: ಉತ್ತರ ಪ್ರದೇಶದಲ್ಲಿ 2022 ರಲ್ಲಿ ವಿಧಾನಸಭೆ ಚುನಾವಣೆಯು ನಡೆದ ಬಳಿಕ ಮತ್ತೆ ರಾಜ್ಯದ ಗದ್ದುಗೆಯನ್ನು ಏರಲು ಬಿಜೆಪಿ ಎಲ್ಲಾ ತಂತ್ರಗಾರಿಕೆ ನಡೆಸುತ್ತಿದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್‌, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ಜಾತಿ ಆಧಾರದಲ್ಲಿ ಮತ ಪಡೆಯುವ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಅದಕ್ಕಾಗಿ ಎಸ್‌ಪಿ, ಬಿಎಸ್‌ಪಿ ಬ್ರಾಹ್ಮಣರ ಸಭೆ, ಸಮಾವೇಶಗಳನ್ನೂ ನಡೆಸಿದೆ. ಈ ನಡುವೆ ಬಿಜೆಪಿಯ ಈ ಜಾತಿ ಆಧಾರದ ಚುನಾವಣಾ ತಂತ್ರಕ್ಕೆ ಏಳು ಪಕ್ಷಗಳು ಕೈಜೋಡಿಸಿದೆ. ಈ ಮೂಲಕ ಆಡಳಿತರೂಢ ಬಿಜೆಪಿ ಪಕ್ಷವು ಮುಂದಿನ 2022 ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಅಧಿಕಾರವನ್ನು ತನ್ನ ತೆಕ್ಕೆಗೆ ಪಡೆಯುವ ತಂತ್ರ ರೂಪಿಸಿದೆ.

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧ ಮಾಡಿ ಒ ಪಿ ರಾಜ್ಬರ್‌ ನೇತೃತ್ವದ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ) ಉತ್ತರ ಪ್ರದೇಶದಲ್ಲಿ ಎನ್‌ಡಿಎ ಒಕ್ಕೂಟವನ್ನು ತೊರೆದಿದೆ. ಕಳೆದ ತಿಂಗಳು ಸಮಾಜವಾದಿ ಪಕ್ಷದೊಂದಿಗೆ ತನ್ನ ಮೈತ್ರಿಯನ್ನು ಎಸ್‌ಬಿಎಸ್‌ಪಿ ಘೋಷಣೆ ಮಾಡಿದೆ.

ಉತ್ತರ ಪ್ರದೇಶ ಚುನಾವಣೆ: ಬಿಜೆಪಿಗೆ ಬೆಂಬಲ ಘೋಷಿಸಿದ 7 ಪಕ್ಷಗಳುಉತ್ತರ ಪ್ರದೇಶ ಚುನಾವಣೆ: ಬಿಜೆಪಿಗೆ ಬೆಂಬಲ ಘೋಷಿಸಿದ 7 ಪಕ್ಷಗಳು

ಈ ಬೆನ್ನಲ್ಲೇ ಬಿಜೆಪಿ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವತ್ತ ಗಮನ ಹರಿಸಿದೆ. ಈಗ ಒಟ್ಟು ಏಳು ಸ್ಥಳೀಯ ಪಕ್ಷಗಳು ಬಿಜೆಪಿಯ ಜೊತೆಯಾಗಿದೆ. ಏಳು ಸಣ್ಣ ಪಕ್ಷಗಳ ಒಕ್ಕೂಟ ಹಿಸ್ಸೆದಾರಿ ಮೋರ್ಚಾ 2022 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವನ್ನು ನೀಡುವುದಾಗಿ ಘೋಷಣೆ ಮಾಡಿದೆ.

ಈ ಏಳು ಪಕ್ಷದಲ್ಲಿ ಯಾರು ಯಾರು ಇದ್ದಾರೆ

ಈ ಏಳು ಪಕ್ಷದಲ್ಲಿ ಯಾರು ಯಾರು ಇದ್ದಾರೆ

ಭಾರತೀಯ ಮಾನವ ಸಮಾಜ ಪಕ್ಷದ ಕೇವತ್ ರಾಮಧಾನಿ ಬಿಂದ್, ಮುಸಾಹರ್ ಆಂದೋಲನ ಮಂಚ್‌ನ ಚಂದ್ರ ವನವಾಸಿ ಮತ್ತು ಶೋಷಿತ್ ಸಮಾಜ ಪಕ್ಷದ ಬಾಬುಲಾಲ್ ರಾಜ್‌ಭರ್, ಮಾನವ ಹಿತ ಪಕ್ಷದ ಕೃಷ್ಣ ಗೋಪಾಲ್ ಸಿಂಗ್ ಕಶ್ಯಪ್, ಭಾರತೀಯ ಸುಹೇಲ್ದೇವ್ ಜನತಾ ಪಾರ್ಟಿಯ ಭೀಮ್ ರಾಜಭರ್, ಪೃಥ್ವಿರಾಜ್ ಜನಶಕ್ತಿ ಪಕ್ಷದ ಚಂದನ್ ಸಿಂಗ್ ಚೌಹಾಣ್ ಮತ್ತು ಭಾರತೀಯ ಸಮತಾ ಸಮಾಜ ಪಕ್ಷದ ಮಹೇಂದ್ರ ಪ್ರಜಾಪತಿ ಬಿಜೆಪಿಗೆ ಬೆಂಬಲ ಸೂಚಿಸಿ ಪತ್ರವನ್ನು ಬಿಜೆಪಿಯ ಅಧ್ಯಕ್ಷ ಸ್ವತಂತ್ರ ದೇವ್‌ ಸಿಂಗ್‌ಗೆ ನೀಡಿದ್ದಾರೆ.

2022 ರ ವಿಧಾನಸಭೆ ಚುನಾವಣೆ: ಮತಕ್ಕಾಗಿ ಯುಪಿಯಲ್ಲಿ ಹೀಗಿದೆ ಬಿಜೆಪಿಯ ಕಾರ್ಯತಂತ್ರ

ಈ ಒಕ್ಕೂಟವು ಒಬಿಸಿ ಸಮುದಾಯಕ್ಕೆ ಸೇರಿದ ಒಕ್ಕೂಟದಂತೆ ಇದೆ. ಈ ಏಳು ಪಕ್ಷದಲ್ಲಿ ಬಿಂದ್, ಗದರಿಯಾ, ಕುಮ್ಹಾರ್, ಧಿವರ್, ಕಶ್ಯಪ್ ಮತ್ತು ರಾಜಭರ್ ಜಾತಿಯು ಸೇರಿದೆ. ಇನ್ನು ಈ ಪೈಕಿ ಕೆಲವು ಪಕ್ಷಗಳು ಬಿಜೆಪಿಯಿಂದ ಹೊರ ಹೋಗಿ ಎಸ್‌ಬಿಎಸ್‌ಪಿ ಸ್ಥಾಪನೆ ಮಾಡಿದ ಭಾಗಿದರಿ ಸಂಕಲ್ಪ ಮೋರ್ಚಾದಲ್ಲಿದ್ದ ಪಕ್ಷಗಳೂ ಕೂಡಾ ಸೇರಿದೆ. ಇನ್ನು ಈ ಬಗ್ಗೆ ಮಾಹಿತಿ ನೀಡಿದ ಹಿಸ್ಸೆದಾರಿ ಮೋರ್ಚಾದ ಸಂಚಾಲಕ ಕೇವತ್ ರಾಮಧಾನಿ ಬಿಂದ್, "ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ನಮಗೆ ಕನಿಷ್ಠ 15 ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತದೆ ಎಂಬ ನಿರೀಕ್ಷೆಇದೆ," ಎಂದು ದಿ ಪ್ರಿಂಟ್‌ಗೆ ತಿಳಿಸಿದ್ದಾರೆ. "ನಮಗೆ ಬೇರೆ ಬೇರೆ ಜಾತಿಗಳ ಬೆಂಬಲವಿದೆ. ಬಿಜೆಪಿಯು ಯಾದವೇತರ ಒಬಿಸಿಗಳು ಹಾಗೂ ದಲಿತರ ಮೇಲೆ ಅಧಿಕ ಗಮನಹರಿಸಿದೆ ಎಂಬುವುದು ನಮಗೆ ತಿಳಿದಿದೆ. ನಮಗೆ ಅವಕಾಶ ನೀಡಿದ ಬಿಜೆಪಿಗೆ ಧನ್ಯವಾದ," ಎಂದು ಕೂಡಾ ತಿಳಿಸಿದ್ದಾರೆ. ಹಾಗಾದರೆ ಈ ಏಳು ಪಕ್ಷಗಳು ಯಾವ ಯಾವ ಜಾತಿಯನ್ನು ಪ್ರತಿನಿಧಿಸುತ್ತದೆ. ಬಿಜೆಪಿಯ ಜಾತಿ ಒಕ್ಕೂಟ ಯಾವ ರೀತಿಯಾಗಿ ಇದೆ ಎಂದು ತಿಳಿಯಲು ಮುಂದೆ ಓದಿ.

ಕೇವತ್ ರಾಮಧಾನಿ ಬಿಂದ್‌ರ ಭಾರತೀಯ ಮಾನವ ಸಮಾಜ ಪಕ್ಷ

ಕೇವತ್ ರಾಮಧಾನಿ ಬಿಂದ್‌ರ ಭಾರತೀಯ ಮಾನವ ಸಮಾಜ ಪಕ್ಷ

ಕೇವತ್ ರಾಮಧಾನಿ ಬಿಂದ್‌ ನೇತೃತ್ವದ ಭಾರತೀಯ ಮಾನವ ಸಮಾಜ ಪಕ್ಷವು 2017 ರಲ್ಲಿ ಸ್ಥಾಪನೆ ಆಗಿದೆ. ಈ ಪಕ್ಷವು ಮುಖ್ಯವಾಗಿ ಒಬಿಸಿ ವರ್ಗದ ಬಿಂದ್‌ ಸಮುದಾಯದ ಮೇಲೆ ಮುಖ್ಯ ಗಮನವನ್ನು ಹರಿಸುತ್ತದೆ. "ಪೂರ್ವ ಉತ್ತರ ಪ್ರದೇಶದಲ್ಲಿ ಆರು ಶೇಕಡದಷ್ಟು ಬಿಂದ್ ಸಮುದಾಯ ಜನರು ಇದ್ದಾರೆ. ಅದರಲ್ಲೂ ಮುಖ್ಯವಾಗಿ ಪ್ರಯಾ‌ಗ್‌ರಾಜ್‌, ಜಾನ್‌ಪುರ್, ವಾರಣಾಸಿ, ಮಿರ್ಜಾಪುರ, ಸೋನ್‌ಭದ್ರ ಮತ್ತು ಗಾಜಿಪುರದಲ್ಲಿ ಬಿಂದ್‌ ಸಮುದಾಯದ ಹೆಚ್ಚಿನ ಜನರು ಇದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಬಿಂದ್ ಸಮುದಾಯವು ಅಧಿಕವಾಗಿ ಪಾತ್ರ ನಿರ್ವಹಿಸುತ್ತದೆ," ಎಂದು ಕೇವತ್ ರಾಮಧಾನಿ ಬಿಂದ್‌ ಹೇಳಿದ್ದಾರೆ.

ಇನ್ನು 41 ವರ್ಷದ ರಾಮಧಾನಿ ಬಿಂದ್‌ ತನ್ನನ್ನು ತಾನು, "ಪೂರ್ವ ಉತ್ತರ ಪ್ರದೇಶದಲ್ಲಿ ರಾಜಕೀಯ ವಾತಾವರಣವನ್ನು ಬದಲಾಯಿಸಲು ಮುಂಬೈನಿಂದ ಬಂದಿರುವ ವ್ಯಕ್ತಿ," ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ಕೇವತ್‌ ಭಾಗಿದರಿ ಸಂಕಲ್ಪ ಮೋರ್ಚಾದ ಜೊತೆ ಇದ್ದರು. ಬಳಿಕ ಈ ವರ್ಷ ಹಿಸ್ಸೇದಾರಿ ಮೋರ್ಚಾವನ್ನು ಆರಂಭ ಮಾಡಿದರು.ಈ ನಡುವೆ "ಯುಪಿಯಲ್ಲಿ ಈ ಹಿಂದೆ ಬಿಂದ್‌ಗಳು ಸಾಂಪ್ರಾದಾಯಿಕವಾಗಿಯೇ ಎಸ್‌ಪಿ, ಬಿಎಸ್‌ಪಿ ಮತದಾರರು. ಬಿಜೆಪಿಯು ಈ ಹಿಂದೆ ಬಿಂದ್‌ಗಳ ಜೊತೆ ಅಧಿಕ ನಂಟು ಹೊಂದಿತ್ತು. ನಿಶಾದ್‌ ಪಕ್ಷದೊಂದಿಗೆ ಬಿಜೆಪಿಯ ಮೈತ್ರಿ ಮುರಿದ ಬಳಿಕ ಬಿಜೆಪಿಯು ಬೇರೆ ಪರ್ಯಾಯವನ್ನು ನೋಡಿಕೊಂಡಿದೆ," ಎಂದು ವರದಿಯು ಉಲ್ಲೇಖ ಮಾಡಿದೆ.
ಬಾಬುಲಾಲ್ ರಾಜ್‌ಭರ್‌ರ ಶೋಷಿತ್ ಸಮಾಜ ಪಕ್ಷ

ಬಾಬುಲಾಲ್ ರಾಜ್‌ಭರ್‌ರ ಶೋಷಿತ್ ಸಮಾಜ ಪಕ್ಷ

ಶೋಷಿತ್ ಸಮಾಜ ಪಕ್ಷವು ದುರ್ಬಲ ವರ್ಗಗಳ, ವಿಶೇಷವಾಗಿ ರಾಜ್‌ಭರ್‌ಗಳ ಧ್ವನಿ ಎತ್ತುವುದು ತನ್ನ ಆದ್ಯತೆಯಾಗಿದೆ ಎಂದು ಹೇಳಿಕೊಂಡಿದೆ. ಈ 2020 ರಲ್ಲಿ ಸ್ಥಾಪನೆ ಆಗಿದೆ. ಪಕ್ಷವು ಆದರೆ "ನಮ್ಮ ಪಕ್ಷ ಬರಿಯೇ ರಾಜ್‌ಭರ್‌ ಸಮುದಾಯಕ್ಕೆ ಸೇರಿದ್ದು ಅಲ್ಲ, ನಮ್ಮ ಪಕ್ಷ ಎಲ್ಲಾ ಜಾತಿಗಳನ್ನು ಪ್ರತಿನಿಧಿಸಲು ಪ್ರಯತ್ನಿಸುತ್ತದೆ," ಎಂದು ಬಾಬುಲಾಲ್ ರಾಜ್‌ಭರ್‌ ಹೇಳಿದ್ದಾರೆ.

ಯುಪಿಯಲ್ಲಿ ಬ್ರಾಹ್ಮಣರ ಮತಕ್ಕೆ ಬಲೆ: ವಿಪಕ್ಷದ ಓಲೈಕೆ, ಬಿಜೆಪಿಯಿಂದ ಉಳಿಸಿಕೊಳ್ಳುವ ಪ್ರಯತ್ನ

ಬಾಬುಲಾಲ್ ರಾಜ್‌ಭರ್‌ ಪ್ರಕಾರ ಈ ಹಿಂದೆ ಒ ಪಿ ರಾಜ್‌ಭರ್‌ನಿಂದಾಗಿ ತಾವು ಪ್ರಭಾವಿತರಾಗಿದ್ದರು, ಆದರೆ ಬಳಿಕ ಒ ಪಿ ರಾಜ್‌ಭರ್‌ ರಾಜವಶಂದ ಬೆಂಬಲಿಗರು. ಆದ್ದರಿಂದಾಗಿ ತಮ್ಮದೇ ಆದ ಪಕ್ಷವನ್ನು ಬಾಬುಲಾಲ್ ರಾಜ್‌ಭರ್‌ ಸ್ಥಾಪನೆ ಮಾಡಿಕೊಂಡರು. "ಪೂರ್ವ ಉತ್ತರ ಪ್ರದೇಶದಲ್ಲಿ ರಾಜ್‌ಭರ್‌ಗಳು ಶೇಕಡ 14 ರಿಂದ 22 ರಷ್ಟು ಜನಸಂಖ್ಯೆಯನ್ನು ಹೊಂದಿದ್ದಾರೆ. ಒ ಪಿ ರಾಜ್‌ಭರ್‌ ತಮ್ಮ ಕುಟುಂಬಕ್ಕಾಗಿ ಮಾತ್ರ ಕೆಲಸ ಮಾಡುತ್ತಾರೆ ಎಂಬುವುದು ಜನರಿಗೆ ತಿಳಿದಿದೆ. ಅವರು ಸಮುದಾಯಕ್ಕಾಗಿ ಕೆಲಸ ಮಾಡುವುದಿಲ್ಲ ಎಂಬುವುದು ಕೂಡಾ ಜನರಿಗೆ ತಿಳಿದಿದೆ. ಆದ್ದರಿಂದ ಈ ಬಾರಿ ಸಮುದಾಯವು ನಮ್ಮ ಪಕ್ಷವನ್ನು ಬೆಂಬಲಿಸುತ್ತಿದೆ," ಎಂದು ತಿಳಿಸಿದ್ದಾರೆ.

ಭೀಮ್ ರಾಜಭರ್‌ನ ಭಾರತೀಯ ಸುಹೇಲ್ದೇವ್ ಜನತಾ ಪಾರ್ಟಿ

ಭೀಮ್ ರಾಜಭರ್‌ನ ಭಾರತೀಯ ಸುಹೇಲ್ದೇವ್ ಜನತಾ ಪಾರ್ಟಿ

ಭೀಮ್ ರಾಜಭರ್‌ನ ಭಾರತೀಯ ಸುಹೇಲ್ದೇವ್ ಜನತಾ ಪಾರ್ಟಿಯು 2020 ರಲ್ಲಿ ಸ್ಥಾಪನೆ ಮಾಡಲಾಗಿದೆ. ಬಲ್ಲಿಯಾ ಜಿಲ್ಲೆಯ ಬಳಿ ಇರುವ ರಾಜ್‌ಭರ್ ಸಮುದಾಯದ ಮೇಲೆ ಪಕ್ಷವು ಗಮನಹರಿಸುತ್ತಿದೆ. ಭೀಮ್ ರಾಜಭರ್‌ ಈ ಹಿಂದೆ ಒ.ಪಿ.ರಾಜ್‌ಭರ್ ಅವರ ಎಸ್‌ಬಿಎಸ್‌ಪಿ ಸದಸ್ಯರೂ ಆಗಿದ್ದರು. ಆದರೆ ಕೃಷಿ ಕಾನೂನು ವಿಚಾರದಲ್ಲಿ ಒ.ಪಿ.ರಾಜ್‌ಭರ್ ಬಿಜೆಪಿ ಒಕ್ಕೂಟವನ್ನು ತೊರೆದಿದ್ದಾರೆ. ಬಳಿಕ ಭಾಗಿದರಿ ಸಂಕಲ್ಪ ಮೋರ್ಚಾವನ್ನು ಸ್ಥಾಪನೆ ಮಾಡಿದ್ದಾರೆ. ಇನ್ನು ಭೀಮ್ ರಾಜಭರ್‌ ಹಿಸ್ಸೆದಾರಿ ಮೋರ್ಚಾದ ಸಹ ಸಂಸ್ಥಾಪಕ ಸದಸ್ಯರಾಗಿದ್ದಾರೆ.

ಮಹೇಂದ್ರ ಪ್ರಜಾಪತಿಯ ಭಾರತೀಯ ಸಮತಾ ಸಮಾಜ ಪಕ್ಷ

ಮಹೇಂದ್ರ ಪ್ರಜಾಪತಿಯ ಭಾರತೀಯ ಸಮತಾ ಸಮಾಜ ಪಕ್ಷ

ಮಹೇಂದ್ರ ಪ್ರಜಾಪತಿಯ ಭಾರತೀಯ ಸಮತಾ ಸಮಾಜ ಪಕ್ಷವು 2008 ರಲ್ಲಿ ಸ್ಥಾಪನೆ ಮಾಡಲಾಗಿದೆ. "ನಮ್ಮ ಪಕ್ಷ ಮುಖ್ಯವಾಗಿ ಒಬಿಸಿಯ ಪ್ರಜಾಪತಿಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದೆ. ಸಮುದಾಯದ ಸದಸ್ಯರ ಆರ್ಥಿಕ ಸ್ಥಿರತೆಗಾಗಿ ಕೆಲಸ ಮಾಡುವ ಗುರಿಯನ್ನು ಪಕ್ಷ ಹೊಂದಿದೆ. ರಾಜ್ಯದ ಜನಸಂಖ್ಯೆ ಶೇಕಡ 5 ಕ್ಕಿಂತ ನಮ್ಮ ಸಮುದಾಯದವರು ಇದ್ದಾರೆ," ಎಂದು ಮಹೇಂದ್ರ ಪ್ರಜಾಪತಿ ಹೇಳಿದ್ದಾರೆ.

ಪ್ರಜಾಪತಿಗಳಲ್ಲಿ ಮುಖ್ಯವಾಗಿ ಕುಮಾರರು ಅಥವಾ ಕುಂಬಾರಿಕೆಯಲ್ಲಿ ತೊಡಗಿರುವವರು ಆಗಿದ್ದಾರೆ ಎಂದು ಪಕ್ಷದ ಕಾರ್ಯಕಾರಿ ಸದಸ್ಯರೊಬ್ಬರು ಹೇಳಿದ್ದಾರೆ. ಸಾಂಪ್ರದಾಯಿಕವಾಗಿ ಎಸ್‌ಪಿ ಬೆಂಬಲಿಗರಾಗಿದ್ದರು. ಆದರೆ 2017 ರಲ್ಲಿ ಯಾದವೇತರ ಒಬಿಸಿಗಳು ಬಿಜೆಪಿಯತ್ತ ವಾಲಿದ್ದಾರೆ ಎಂದು ಕೂಡಾ ಕಾರ್ಯಕಾರಿ ಸದಸ್ಯರು ಹೇಳಿದ್ದಾರೆ. ಈ ಪಕ್ಷವು 2019 ರ ಲೋಕ ಸಭೆ ಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ಆದರೆ ಠೇವಣಿಯನ್ನೇ ಕಳೆದುಕೊಂಡಿದೆ.
ಕೃಷ್ಣ ಗೋಪಾಲ್ ಸಿಂಗ್ ಕಶ್ಯಪ್‌ರ ಮಾನವ ಹಿತ ಪಕ್ಷ

ಕೃಷ್ಣ ಗೋಪಾಲ್ ಸಿಂಗ್ ಕಶ್ಯಪ್‌ರ ಮಾನವ ಹಿತ ಪಕ್ಷ

ಕೃಷ್ಣ ಗೋಪಾಲ್ ಸಿಂಗ್ ಕಶ್ಯಪ್‌ರ ಮಾನವ ಹಿತ ಪಕ್ಷವು 2015 ರಲ್ಲಿ ಸ್ಥಾಪನೆ ಮಾಡಲಾಗಿದೆ. ಪಕ್ಷವು ನಿಶಾದ್‌ಗಳ ಅಡಿಯಲ್ಲಿ ಬಂದ ಉಪಜಾತಿಯಾದ ಕಶ್ಯಪ್‌ ಸಮುದಾಯದ ಮೇಲೆ ಮುಖ್ಯ ಕೇಂದ್ರೀಕೃತವಾಗಿದೆ.

ಕೃಷ್ಣ ಗೋಪಾಲ್ ಸಿಂಗ್ ಕಶ್ಯಪ್‌ 1998 ಮತ್ತು 2014 ರ ನಡುವೆ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಯಲ್ಲಿದ್ದರು. ಬಳಿಕ ಮಾನವ ಹಿತ ಪಕ್ಷವನ್ನು 2015 ರಲ್ಲಿ ಸ್ಥಾಪನೆ ಮಾಡಿದ್ದಾರೆ. "ನಾವು 2017 ರ ಚುನಾವಣೆಯನ್ನು ಎದುರಿಸಿದ್ದೇವೆ. ನಾವು ಪಡೆದ ಮತಗಳ ಪ್ರಮಾಣವು ಶೇಕಡ 1 ಕ್ಕಿಂತ ಕಡಿಮೆ ಇತ್ತು. ಆ ಬಳಿಕ 2022 ರ ಚುನಾವಣೆಯಲ್ಲಿ ನಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ನಮಗೆ ಭರವಸೆ ನೀಡಿತು. ಆ ಹಿನ್ನೆಲೆಯಿಂದಾಗಿ ನಾವು 2019 ರ ಲೋಕಸಭಾ ಚುನಾವಣೆಯಲ್ಲಿ ನಾವು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದೆವು.ಆದರೆ ಆ ಭರವಸೆಯ ಬಗ್ಗೆ ಕಾಂಗ್ರೆಸ್‌ ಯಾವುದೇ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ. ಆದ್ದರಿಂದ ನಾವು ಈಗ ಹಿಸ್ಸೆದಾರಿ ಮೋರ್ಚಾವನ್ನು ಸೇರ್ಪಡೆ ಆಗುವ ತೀರ್ಮಾಣವನ್ನು ಮಾಡಿಕೊಂಡಿದ್ದೇವೆ. ಯುಪಿಯ ಜನಸಂಖ್ಯೆಯ ಶೇಕಡ 3 ಕ್ಕಿಂತ ಹೆಚ್ಚು ಕಶ್ಯಪ್‌ಗಳು ಇದ್ದಾರೆ," ಎಂದು ಕೃಷ್ಣ ಗೋಪಾಲ್ ಸಿಂಗ್ ಕಶ್ಯಪ್‌ ತಿಳಿಸಿದ್ದಾರೆ.
ಚಂದನ್ ಸಿಂಗ್ ಚೌಹಾಣ್‌ರ ಪೃಥ್ವಿರಾಜ್ ಜನಶಕ್ತಿ ಪಕ್ಷ

ಚಂದನ್ ಸಿಂಗ್ ಚೌಹಾಣ್‌ರ ಪೃಥ್ವಿರಾಜ್ ಜನಶಕ್ತಿ ಪಕ್ಷ

ಚಂದನ್ ಸಿಂಗ್ ಚೌಹಾಣ್‌ರ ಪೃಥ್ವಿರಾಜ್ ಜನಶಕ್ತಿ ಪಕ್ಷವು 2018 ರಲ್ಲಿ ಸ್ಥಾಪನೆ ಆಗಿದೆ. ಪೂರ್ವ ಉತ್ತರ ಪ್ರದೇಶದಲ್ಲಿ ಕಂಡು ಬರುವ ಒಬಿಸಿಯ ಉಪ ಜಾತಿಯಾದ ನೋನಿಯಾವನ್ನು ಮುಖ್ಯವಾಗಿ ಗುರಿಯಾಗಿಸಿಕೊಂಡು ಈ ಪಕ್ಷವನ್ನು ರಚನೆ ಮಾಡಲಾಗಿದೆ. ವಾರಣಾಸಿ, ಚಂದೌಲಿ ಮತ್ತು ಮಿರ್ಜಾಪುರ್ ಸೇರಿದಂತೆ ಪೂರ್ವ ಉತ್ತರ ಪ್ರದೇಶ ಜಿಲ್ಲೆಗಳಲ್ಲಿ ನೋನಿಯಾಗಳು ಶೇಕಡಾ 3 ರಷ್ಟು ಜನಸಂಖ್ಯೆಯನ್ನು ಹೊಂದಿದ್ದಾರೆ ಎಂದು ಪಕ್ಷದ ಕಾರ್ಯಕಾರಿ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ. ಈ ಪಕ್ಷವು ಮುಖ್ಯವಾಗಿ ವಾರಾಣಾಸಿಯಲ್ಲಿ ಕೊಂಚ ತನ್ನ ಪ್ರಾಬಲ್ಯವನ್ನು ಹೊಂದಿದೆ.

ಚಂದ್ರ ವನವಾಸಿಯ ಮುಸಾಹರ್‌ ಆಂದೋಲನ ಮಂಚ್‌ (ಗರೀಬ್‌ ಪಕ್ಷ)

ಚಂದ್ರ ವನವಾಸಿಯ ಮುಸಾಹರ್‌ ಆಂದೋಲನ ಮಂಚ್‌ (ಗರೀಬ್‌ ಪಕ್ಷ)

ಚಂದ್ರ ವನವಾಸಿಯ ಮುಸಾಹರ್ ಆಂದೋಲನ ಮಂಚ್‌ ಗರೀಬ್‌ ಪಕ್ಷ ಹೆಸರಿನಲ್ಲಿ ತನ್ನ ಪಕ್ಷದ ನೋಂದಣಿಗೆ ಅರ್ಜಿಯನ್ನು ಸಲ್ಲಿಸಿದೆ. ಘಾಜಿಪುರ ಜಿಲ್ಲೆಯಲ್ಲಿ ಈ ಪಕ್ಷವು ಅಧಿಕವಾಗಿ ಸಕ್ರಿಯವಾಗಿದೆ. ಈ ಪಕ್ಷವು ಅಧಿಕವಾಗಿ ದಲಿತರನ್ನು ಅದರಲ್ಲೂ ಮುಖ್ಯವಾಗಿ ಮುಸಾಹರ್‌ಗಳನ್ನು ಕೇಂದ್ರೀಕರಿಸಿ ಸಂಘಟನೆ ಕಟ್ಟಿಕೊಂಡು ಬಂದಿದೆ. ಮುಸಾಹರ್‌ ಎಂಬ ಪದದ ಅರ್ಥ "ಇಲಿ-ಭಕ್ಷಕ" ಎಂದು ಆಗಿದೆ. ಈ ಸಮುದಾಯವು ಇಲಿಗಳನ್ನು ಹಿಡಿಯುವ ಕಾರ್ಯವನ್ನು ಮಾಡುತ್ತಿದ್ದ ಕಾರಣದಿಂದಾಗಿ ಈ ಸಮುದಾಯಕ್ಕೆ ಈ ಹೆಸರು ಬಂದಿದೆ ಎಂದು ಈ ಪಕ್ಷದ ಸದಸ್ಯರೊಬ್ಬರು ಹೇಳುತ್ತಾರೆ. ಈ ಸಮುದಾಯದವರನ್ನು ವನವಾಸಿ ಎಂದು ಕೂಡಾ ಕರೆಯುತ್ತಾರೆ. ಈ ಸಮುದಾಯದ ಅನೇಕ ಮಂದಿ ಇನ್ನೂ ಕೂಡ ಬಡವರಾಗಿದ್ದಾರೆ. ಬಡತನದ ಹಿನ್ನೆಲೆ ಒತ್ತಾಯಪೂರ್ವಕವಾಗಿ ಕೆಲಸವನ್ನು ಮಾಡಬೇಕಾದ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ಸದಸ್ಯರು ಹೇಳಿದ್ದಾರೆ. ಇನ್ನು ಈ ಸಮುದಾಯವು ಪೂರ್ವ ಉತ್ತರ ಪ್ರದೇಶದ ಜನಸಂಖ್ಯೆಯ ಸುಮಾರು ಶೇಕಡ 1 ಪ್ರತಿಶತವನ್ನು ಹೊಂದಿದ್ದಾರೆ.

ಈ ಪಕ್ಷಗಳಿಗೆ ದುರ್ಬಲ ವರ್ಗದ ಬೆಂಬಲ

ಈ ಪಕ್ಷಗಳಿಗೆ ದುರ್ಬಲ ವರ್ಗದ ಬೆಂಬಲ

"ಈ ಎಲ್ಲಾ ಏಳು ಪಕ್ಷಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಪಕ್ಷಗಳಿಗೆ ದುರ್ಬಲ ವರ್ಗದ ಬೆಂಬಲವಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರ್ಕಾರವು ಈ ದುರ್ಬಲ ವರ್ಗಕ್ಕೆ ಅಗತ್ಯ ಸಹಾಯವನ್ನು ಮಾಡಿದೆ. ಹಾಗೆಯೇ ಬಿಜೆಪಿಯು ಈ ಸಮುದಾಯಕ್ಕೆ ದೊಡ್ಡ ವೇದಿಕೆಯನ್ನು ನೀಡಿದೆ. ಪೂರ್ವ ಉತ್ತರ ಪ್ರದೇಶ ಶೇಕಡ 25 ರಷ್ಟು ಜನರು ಈ ದುರ್ಬಲ ವರ್ಗಕ್ಕೆ ಸೇರಿದವರು ಆಗಿದ್ದಾರೆ. ಅದರಲ್ಲೂ ಗಾಜಿಪುರ, ಬಲ್ಲಿಯಾ, ಅಜಂಗಢ, ಜಾನ್‌ಪುರ್ ಮತ್ತು ವಾರಣಾಸಿಯಲ್ಲಿ ಈ ದುರ್ಬಲ ವರ್ಗಕ್ಕೆ ಸೇರಿದ ಜನರು ಅಧಿಕವಾಗಿ ಇದ್ದಾರೆ. ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರಗಳ ಪೈಕಿ 50 ವಿಧಾನಸಭೆ ಕ್ಷೇತ್ರಗಳು ಈ ಪ್ರದೇಶದಲ್ಲಿ ಇದೆ. ಆದ್ದರಿಂದ ನಮಗೆ ಮತವು ಅಧಿಕವಾಗಲಿದೆ. 7 ಸಣ್ಣ ಪಕ್ಷಗಳು ಹಲವಾರು ಜಾತಿಗಳನ್ನು ಪ್ರತಿನಿಧಿಸುತ್ತವೆ. ಅದರಲ್ಲೂ ಮುಖ್ಯವಾಗಿ ಒಬಿಸಿ ಹಾಗೂ ಎಸ್‌ಟಿ ವರ್ಗವನ್ನು ಪ್ರತಿನಿಧಿಸುತ್ತದೆ," ಎಂದು ಉತ್ತರ ಪ್ರದೇಶ ಬಿಜೆಪಿ ವಕ್ತಾರ ರಾಕೇಶ್‌ ತ್ರಿಪಾಠಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
The 7 parties & its members: BJP’s new caste coalition for 2022 UP polls, Explained in Kannada. Read on.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X