keyboard_backspace

ಓಮಿಕ್ರಾನ್ BA.2: ಹೊಸ ಉಪ-ರೂಪಾಂತರಿ ಬಗ್ಗೆ ನಿಮಗೆಷ್ಟು ಗೊತ್ತು?

Google Oneindia Kannada News

ನವದೆಹಲಿ, ಜನವರಿ 24: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಓಮಿಕ್ರಾನ್ ರೂಪಾಂತರಿಯು ಜಗತ್ತಿನ ಬಹುಪಾಲು ರಾಷ್ಟ್ರಗಳಲ್ಲಿ ನಡುಕ ಹುಟ್ಟಿಸಿದೆ. ಅದೇ ಓಮಿಕ್ರಾನ್ ರೂಪಾಂತರಿಯ ಮತ್ತೊಂದು ಉಪ ರೂಪಾಂತರಿ ಈಗ ವಿಶ್ವದಲ್ಲಿ ಸದ್ದು ಮಾಡುತ್ತಿದೆ. ಓಮಿಕ್ರಾನ್ ರೂಪಾಂತರಿಗಿಂತ ಬಿಎ.2 ಉಪ ರೂಪಾಂತರಿ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಯುನೈಟೆಡ್ ಕಿಂಗ್ ಡಮ್ (ಯುಕೆ)ಯ ಆರೋಗ್ಯ ಪ್ರಾಧಿಕಾರವು BA.2 ಎಂದು ಕರೆಯಲ್ಪಡುವ ಉಪ-ರೂಪಾಂತರಿಯ ಬಗ್ಗೆ ತನಿಖೆ ನಡೆಸುತ್ತಿದೆ. ಇದು ಪ್ರಾಥಮಿಕ ಅಥವಾ ಆರಂಭಿಕ ಹಂತದ ತನಿಖೆಯಾಗಿದ್ದು, ಪ್ರಸ್ತುತ BA.1 ಕಳವಳದ ರೂಪಾಂತರಿಯ ಮೂಲ ಎಂದು ಗುರುತಿಸಲಾಗಿದೆ.

 ಕೋವಿಡ್‌ಗೆ ಮನೆಯಲ್ಲೇ ಚಿಕಿತ್ಸೆ ಪಡೆಯುವುದು ಹೇಗೆ?: ಇಲ್ಲಿದೆ ಕೆಲವು ಟಿಪ್ಸ್‌ ಕೋವಿಡ್‌ಗೆ ಮನೆಯಲ್ಲೇ ಚಿಕಿತ್ಸೆ ಪಡೆಯುವುದು ಹೇಗೆ?: ಇಲ್ಲಿದೆ ಕೆಲವು ಟಿಪ್ಸ್‌

ಕಳೆದ ಡಿಸೆಂಬರ್ ತಿಂಗಳಿನಿಂದ ಜನವರಿ 10ರ ನಡುವೆ ಯುಕೆಯಲ್ಲಿ ಮೊದಲು ಪತ್ತೆಯಾದ ಬಿಎ.2 ಉಪ ರೂಪಾಂತರಿ ಅನ್ನು ಸ್ಟೆಲ್ತ್ ಓಮಿಕ್ರಾನ್ ಎಂದು ಕರೆಯಲಾಗುತ್ತಿದೆ. ಈ ಉಪ ರೂಪಾಂತರಿಯಲ್ಲಿ 53 ಅನುಕ್ರಮಗಳು ಇರುವುದನ್ನು ಪತ್ತೆ ಮಾಡಲಾಗಿದೆ. ಹಾಗಿದ್ದರೆ ಏನಿದು ಸ್ಟೆಲ್ತ್ ಓಮಿಕ್ರಾನ್?, ಓಮಿಕ್ರಾನ್ ರೂಪಾಂತರಿಯ ಉಪ ರೂಪಂತರಿಯಲ್ಲಿ ಎಷ್ಟು ತಳಿಗಳಿವೆ?, ಓಮಿಕ್ರಾನ್ ಉಪ ರೂಪಾಂತರಿ ಅನ್ನು ಸ್ಟೆಲ್ತ್ ಓಮಿಕ್ರಾನ್ ಎಂದು ಕರೆಯುವುದು ಏಕೆ? ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಓಮಿಕ್ರಾನ್ ರೂಪಾಂತರದಲ್ಲಿರುವ ಉಪ ತಳಿಗಳು?

ಓಮಿಕ್ರಾನ್ ರೂಪಾಂತರದಲ್ಲಿರುವ ಉಪ ತಳಿಗಳು?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಓಮಿಕ್ರಾನ್ ರೂಪಾಂತರದಲ್ಲಿ ಮೂರು ಉಪ ತಳಿಗಳಿವೆ. BA.1, BA.2 ಮತ್ತು BA.3. ಪ್ರಸ್ತುತ ಪತ್ತೆ ಆಗುತ್ತಿರುವ ಓಮಿಕ್ರಾನ್ ಸೋಂಕಿತ ಪ್ರಕರಣಗಳಲ್ಲಿ ಶೇ.99ರಷ್ಟು BA.1 ತಳಿಯನ್ನು ಹೊಂದಿರುವುದು ಗೊತ್ತಾಗಿದೆ. B.1.1.529 ಕುರಿತು ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳಬೇಕಾಗಿದೆ, ಆದರೆ ಈ ತಳಿಯು ಹೆಚ್ಚು ವೈವಿಧ್ಯಮಯವಾಗಿದೆ ಎಂದು WHO ಹೇಳಿದೆ. ಆದರೆ ಈಗ, ಹೆಚ್ಚಿನ ಉಪ-ರೂಪಾಂತರಿಗಳು ಕಾಣಿಸಿಕೊಳ್ಳುತ್ತಿವೆ. ಯುರೋಪ್‌ ವಿಶೇಷವಾಗಿ ಕೊವಿಡ್ -19 ಹರಡುವಿಕೆಯಿಂದ ಹೆಚ್ಚು ಪೀಡಿತ ಪ್ರದೇಶಗಳಲ್ಲಿ ಒಂದಾಗಿದೆ.

ಓಮಿಕ್ರಾನ್ BA.2 ಉಪ ರೂಪಾಂತರಿ ಪತ್ತೆಯಾಗಿದ್ದು ಎಲ್ಲಿ?

ಓಮಿಕ್ರಾನ್ BA.2 ಉಪ ರೂಪಾಂತರಿ ಪತ್ತೆಯಾಗಿದ್ದು ಎಲ್ಲಿ?

UK ಹೊರತುಪಡಿಸಿ, BA.2 ಉಪ ರೂಪಾಂತರಿಯು ಡೆನ್ಮಾರ್ಕ್, ನಾರ್ವೆ ಮತ್ತು ಸ್ವೀಡನ್‌ನಲ್ಲಿ ಕಂಡುಬಂದಿದೆ. ಫ್ರಾನ್ಸ್ ಮತ್ತು ಭಾರತದಲ್ಲಿನ ವಿಜ್ಞಾನಿಗಳು BA.2 ಉಪ-ರೂಪಾಂತರದ ತ್ವರಿತ ಹರಡುವಿಕೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇದು ಇತರ ಓಮಿಕ್ರಾನ್ ತಳಿಗಳನ್ನು ಮೀರಿಸುವ ನಿರೀಕ್ಷೆಯಿದೆ ಎಂದಿದ್ದಾರೆ. ಡೆನ್ಮಾರ್ಕ್‌ನಲ್ಲಿ ಪರಿಸ್ಥಿತಿ ತೀರಾ ಕೆಟ್ಟದಾಗಿದ್ದು, ಡಿಸೆಂಬರ್ ಅಂತ್ಯ ಮತ್ತು ಜನವರಿ ಮಧ್ಯದ ನಡುವೆ BA.2 ಉಪ ರೂಪಾಂತರಿ ಪ್ರಕರಣಗಳ ಶೇಕಡಾವಾರು ಪ್ರಮಾಣವು ಶೇ.20 ರಿಂದ ಶೇ. 45ಕ್ಕೆ ಏರಿಕೆಯಾಗಿದೆ. ಇದೇ ವಾರದಲ್ಲಿ ಡೆನ್ಮಾರ್ಕ್ ಒಂದೇ ದಿನ 30,000 ಸೋಂಕಿತ ಪ್ರಕರಣಗಳನ್ನು ವರದಿ ಮಾಡಿದೆ. ಕಳೆದ ಸಾಂಕ್ರಾಮಿಕ ಪಿಡುಗಿನ ಅಲೆಯ ನಂತರದಲ್ಲಿ ಮೊದಲ ಬಾರಿಗೆ ಡೆನ್ಮಾರ್ಕ್ ಅತಿಹೆಚ್ಚು ಸೋಂಕಿತ ಪ್ರಕರಣಗಳನ್ನು ವರದಿ ಮಾಡಿದೆ.

ಓಮಿಕ್ರಾನ್ ರೂಪಾಂತರಿಯ BA.1, BA.2, BA.3 ತಳಿ

ಓಮಿಕ್ರಾನ್ ರೂಪಾಂತರಿಯ BA.1, BA.2, BA.3 ತಳಿ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮುಂಬರುವ ಕಾಲದಲ್ಲಿ ಹೊಸ ಉಪ ರೂಪಾಂತರಿಯು ಏಕೆ ಪ್ರಮುಖ ಕಾರಣವಾಗುತ್ತದೆ ಎಂಬುದಕ್ಕೆ ಸಂಶೋಧಕರು ಕಾರಣಗಳನ್ನು ಕಂಡುಕೊಂಡಿದ್ದಾರೆ. BA.2 ತಳಿಯು BA.1 ತಳಿಯೊಂದಿಗೆ 32 ವೈಶಿಷ್ಟ್ಯಗಳನ್ನು ಹಂಚಿಕೊಳ್ಳುತ್ತದೆ. ಆದರೆ ಇದರ ಜೊತೆಗೆ ತನ್ನದೇ ಆಗಿರುವ 28 ವೈಶಿಷ್ಟ್ಯತೆಗಳನ್ನು ಹೊಂದಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕೊವಿಡ್-19 ಲಸಿಕೆ ಸುರಕ್ಷತಾ ಜಾಲದ ಸದಸ್ಯ ವಿಪಿನ್ ಎಂ ವಶಿಷ್ಠ ಟ್ವಿಟರ್ ಮಾಡಿದ್ದಾರೆ. BA.3 ತಳಿಯು ಬಹುಪಾಲು BA.1 ಪ್ರತಿಜನಕವನ್ನು ಹೋಲುತ್ತದೆ. ಏಕೆಂದರೆ ಇದು 417, 446, 484 ಮತ್ತು ಇತರ ಪ್ರಮುಖ ವೈಶಿಷ್ಟ್ಯಗಳನ್ನು ಹಂಚಿಕೊಳ್ಳುತ್ತದೆ.

ಅದಾಗ್ಯೂ, BA.2 ಉಪ ರೂಪಾಂತರಿಯ ಅರ್ಥವನ್ನು ಈಗಲೇ ಹೀಗೆ ಎಂದು ನಿರ್ಧರಿಸುವುದಕ್ಕೆ ಸಾಧ್ಯವಾಗುವುದಿಲ್ಲ. BA.1 ಮತ್ತು BA.2 ವಿಭಿನ್ನ ಗುಣಲಕ್ಷಣಗಳನ್ನು ಹೊಂದಿರುತ್ತವೆ ಎಂಬುದನ್ನು ಖಾತ್ರಿಪಡಿಸುವ ಕುರಿತು ಯಾವುದೇ ಮಾಹಿತಿಯಿಲ್ಲ ಎಂದು ಸರ್ಕಾರ ನಡೆಸುತ್ತಿರುವ ಸಾಂಕ್ರಾಮಿಕ ರೋಗ ಸಂಶೋಧನಾ ಕೇಂದ್ರ ಸ್ಟೇಟನ್ಸ್ ಸೀರಮ್ ಇನ್ಸ್ ಟಿಟ್ಯೂಟ್ ಹೇಳಿದೆ.

ಡೆನ್ಮಾರ್ಕ್ ಸರ್ಕಾರದ ಆರಂಭಿಕ ವಿಶ್ಲೇಷಣೆಯಲ್ಲಿ BA.1 ರೂಪಾಂತರಿಗೆ ಹೋಲಿಸಿದರೆ BA.2 ರೂಪಾಂತರಿಯಿಂದ ಆಸ್ಪತ್ರೆಗೆ ದಾಖಲಾಗಿರುವವರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಲಾಗುತ್ತಿದೆ. ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಕಡಿಮೆ ಆಗಿರುವುದರ ಹಿನ್ನೆಲೆ ನಿರ್ಬಂಧಗಳನ್ನು ಸಡಿಲಿಸಲಾಗಿದೆ ಎಂದು ಸರ್ಕಾರ ಘೋಷಿಸಿದೆ.

ಸ್ಟೆಲ್ತ್ ಓಮಿಕ್ರಾನ್ ಎಂದು ಕರೆಯುವುದು ಏಕೆ?

ಸ್ಟೆಲ್ತ್ ಓಮಿಕ್ರಾನ್ ಎಂದು ಕರೆಯುವುದು ಏಕೆ?

ಓಮಿಕ್ರಾನ್ ರೂಪಾಂತರವನ್ನು ವಿಜ್ಞಾನಿಗಳು ಮೊದಲು ಕಂಡುಹಿಡಿದಾಗ BA.1 ಅನ್ನು ಮೂಲ ತಳಿ ಎಂದು ಗುರುತಿಸಿದರು. ಅಂದು PCR ಪರೀಕ್ಷೆಗಳಿಂದ ಪತ್ತೆಯಾದ "S" ಅಥವಾ ಏರಿಕೆಯ ತಳಿಯು ಅಳಿಸುವಿಕೆಯ ರೂಪದಲ್ಲಿ ರೂಪಾಂತರವನ್ನು ಹೊಂದಿದೆ ಎಂಬುದನ್ನು ಕಂಡುಕೊಂಡಿದ್ದರು. BA.2 ಉಪ- ರೂಪಾಂತರಿಯು ಅದೇ ತಳಿಯ ಲಕ್ಷಣಗಳನ್ನು ಹೊಂದಿಲ್ಲದ ಕಾರಣ ಇದನ್ನು 'ಸ್ಟೆಲ್ತ್ ಓಮಿಕ್ರಾನ್' ಎಂದು ಕರೆಯಲಾಗುತ್ತಿದೆ. ಆದರೆ ಇತ್ತೀಚಿನ ವಾರಗಳಲ್ಲಿ, ಪಿಸಿಆರ್ ಪರೀಕ್ಷೆಗಳಲ್ಲಿ ಉಪ-ರೂಪಾಂತರಿಗಳು ಕಾಣಿಸಿಕೊಳ್ಳುತ್ತದೆ ಎಂದು ಅನೇಕ ತಜ್ಞರು ಹೇಳಿದ್ದಾರೆ. "BA.2 ಅನ್ನು PCR ಮೂಲಕ ಪತ್ತೆ ಹಚ್ಚಬಹುದಾಗಿದೆ, ಈ ಸುದ್ದಿ ವರದಿಗಳು ಸಂಪೂರ್ಣವಾಗಿ ತಪ್ಪಾಗಿದೆ. ಏಕೆಂದರೆ BA.1 ರೂಪಾಂತರಿಯು ಪಿಸಿಆರ್ ಪರೀಕ್ಷೆ ವೇಳೆ ಇತರೆ ಓಮಿಕ್ರಾನ್ ರೀತಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಇದು ಇನ್ನೂ ಪಾಸಿಟಿವ್ ಫಲಿತಾಂಶವನ್ನು ನೀಡುತ್ತದೆ.

ಆದರೆ BA.2 ಪ್ರಸ್ತುತ ಸುದ್ದಿಯಲ್ಲಿದೆ. ಇಂಪೀರಿಯಲ್ ಕಾಲೇಜ್ ಆಫ್ ಲಂಡನ್ ಟಾಮ್ ಪೀಕಾಕ್‌ನ ವೈರಾಲಜಿಸ್ಟ್ ಪ್ರಕಾರ, ಇದು ಅನೇಕ ದೇಶಗಳಲ್ಲಿ ಈಗಾಗಲೇ ತೀವ್ರವಾಗಿ ಹರಡುತ್ತಿರುವುದು ಪತ್ತೆಯಾಗಿದೆ. BA.2 ಉಪ ರೂಪಾಂತರಿಯು ಓಮಿಕ್ರಾನ್ ಸೋಂಕಿನ BA.1 ರೂಪಾಂತರಿಗಿಂತ ಹೆಚ್ಚು ಹರಡಬಹುದಾದ ಸಾಮರ್ಥ್ಯವನ್ನು ಹೊಂದಿದೆ.

English summary
Stealth Omicron: What is The Fast Spreading Omicron BA.2 Sub-Variant, That Can Escape RT-PCR Test. Know Detection, Symptoms and Other Details in Kannada.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X