• search
  • Live TV
keyboard_backspace

ಮಾಜಿ ಸಿಎಂ ಸಿದ್ದರಾಮಯ್ಯ ಪಡೆದ ಪ್ರಕೃತಿ ಚಿಕಿತ್ಸೆ ಏನು? ಅವರಲ್ಲಾದ ಸುಧಾರಣೆ ಏನು?

Google Oneindia Kannada News

ಬೆಂಗಳೂರು, ಆ. 31: ವಿಪಕ್ಷ ನಾಯಕ ಸಿದ್ದರಾಮಯ್ಯ ಹತ್ತು ದಿನಗಳ ಕಾಲ ಪ್ರಕೃತಿ ಚಿಕಿತ್ಸೆ ಪಡೆದು ಮಂಗಳವಾರ ತಮ್ಮ ಮನೆಗೆ ಮರಳಿದ್ದಾರೆ. ಬೆಂಗಳೂರಿನ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ವಿವಿಧ ಚಿಕಿತ್ಸೆಗಳನ್ನು ಸಿದ್ದರಾಮಯ್ಯ ಪಡೆದಿದ್ದಾರೆ ಎಂಬ ಮಾಹಿತಿಯಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವು ಪ್ರಮುಖ ರಾಜಕೀಯ ನಾಯಕರು ಜಿಂದಾಲ್‌ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದರು.

ಈಗ ಸಿದ್ದರಾಮಯ್ಯ ಅವರು ಹತ್ತು ದಿನಗಳ ಕಾಲ ಪ್ರಕೃತಿ ಚಿಕಿತ್ಸೆ ಪಡೆದು ಹುಮ್ಮನಸ್ಸಿನಿಂದ ತಮ್ಮ ಮನೆಗೆ ಮರಳಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಅದರೊಂದಿಗೆ ಜಿಂದಾಲ್ ಪ್ರಕೃತಿ ಚಿಕಿತ್ಸೆಯ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ರಾಜಕಾರಣಿಗಳು ಜಿಂದಾಲ್ ಅಥವಾ ಇನ್ಯಾವುದೆ ಪ್ರಕೃತಿ ಚಿಕಿತ್ಸಾಲಯಕ್ಕೆ ಹೋದಾಗ ಯಾವ ಚಿಕಿತ್ಸೆ ಪಡೆಯುತ್ತಾರೆ? ಈ ಸಲ ಸಿದ್ದರಾಮಯ್ಯ ಅವರು ಜಿಂದಾಲ್‌ಗೆ ದಾಖಲಾಗಿದ್ದು ಯಾಕೆ? ಯಾವ ಯಾವ ಚಿಕಿತ್ಸೆಗಳನ್ನು ಅವರು ಪಡೆದುಕೊಂಡಿದ್ದಾರೆ. ಅದರಿಂದ ಆಗಿರುವ ಲಾಭಗಳೇನು? ಮುಂದಿದೆ ಮಾಹಿತಿ!

ಸಿದ್ದರಾಮಯ್ಯ ಪಡೆದ ಚಿಕಿತ್ಸೆ ಯಾವುದು?

ಸಿದ್ದರಾಮಯ್ಯ ಪಡೆದ ಚಿಕಿತ್ಸೆ ಯಾವುದು?

ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಬಿಡುಗಡೆಯಾಗಿದ್ದಾರೆ. ಹತ್ತು ದಿನಗಳ ಕಾಲ ಸಿದ್ದರಾಮಯ್ಯ ಅವರು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿದ್ದು ಸಂಪೂರ್ಣ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ. ಕಳೆದ ಆಗಸ್ಟ್ 21ರಂದು ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದರು. ಹತ್ತು ದಿನಗಳ ಕಾಲ ವಿವಿಧ ಪರೀಕ್ಷೆಗೆ ಒಳಗಾಗುವುದರೊಂದಿಗೆ ಚಿಕಿತ್ಸೆಯನ್ನೂ ಪಡೆದಿದ್ದಾರೆ. ಅಷ್ಟಕ್ಕೂ ತಾವು ಒಡೆದ ಚಿಕಿತ್ಸೆ ಹಾಗೂ ಅದರ ಪರಿಣಾಮದ ಕುರಿತು ಸ್ವತಃ ಸಿದ್ದರಾಮಯ್ಯ ಮಾಹಿತಿ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ತೂಕ ಕಡಿಮೆ ಆಗಿದೆಯಾ?

ಸಿದ್ದರಾಮಯ್ಯ ತೂಕ ಕಡಿಮೆ ಆಗಿದೆಯಾ?

ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಪಡೆದಿರುವ ಚಿಕಿತ್ಸೆ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ. "ಹತ್ತು ದಿನಗಳ ಚಿಕಿತ್ಸೆ ಪಡೆದು ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ಇಂದು (ಮಂಗಳವಾರ) ವಾಪಾಸಾಗಿದ್ದೇನೆ. ಕೊರೊನಾ ಸೋಂಕಿಗೆ ಒಳಗಾದ ಬಳಿಕ ದೇಹದ ತೂಕ ಮೂರ್ನಾಲ್ಕು ಕೆ.ಜಿ. ಹೆಚ್ಚಾಗಿತ್ತು. ಚಿಕಿತ್ಸೆ ಪಡೆದ ಬಳಿಕ ಈಗ ಮೂರು ಕೆ.ಜಿ. ತೂಕ ಕಡಿಮೆಯಾಗಿದೆ" ಎಂದು ಸಿದ್ದರಾಮಯ್ಯ ತಮ್ಮ ಚಿಕಿತ್ಸೆ ಬಗ್ಗೆ ಹೇಳಿದ್ದಾರೆ. ಅದರಿಂದಿಗೆ ಚಿಕಿತ್ಸೆ ಪಡೆಯಲು ಇದ್ದ ಕಾರಣವನ್ನೂ ವಿವರಿಸಿದ್ದಾರೆ.

ಕೊರೊನಾ ಬಳಿಕ ಹೆಚ್ಚಾಗಿದ್ದ ಡಯಾಬಿಟೀಸ್!

ಕೊರೊನಾ ಬಳಿಕ ಹೆಚ್ಚಾಗಿದ್ದ ಡಯಾಬಿಟೀಸ್!

ಕೊರೊನಾ ಸೋಂಕು ತಗುಲಿದ ಬಳಿಕ ಸಿದ್ದರಾಮಯ್ಯಗೆ ಡಯಾಬಿಟೀಸ್ ಹೆಚ್ಚಾಗಿತ್ತಂ ತೆತೆ.ತೆ ಜೊತೆಗೆ ದೇಹದ ತೂಕವೂ ಹೆಚ್ಚಿತ್ತು. ಪ್ರಕೃತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದ ಬಳಿಕ ಈಗ ಆರೋಗ್ಯ ಸಧಾರಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಚಿಕಿತ್ಸೆ ಪಡೆದ ಹೊರ ಬಂದು ಯಾವುದೇ ಪ್ರವಾಸ ಮಾಡಬೇಕು ಎಂದುನ ಕೊಂಡಿಲ್ಲ. ಜೊತೆಗೆ ಅಧಿವೇಶನದಲ್ಲಿ ಭಾಗವಹಿಸುತ್ತೇವೆ. ಅದಕ್ಕಾಗಿಯೂ ಚಿಕಿತ್ಸೆ ಪಡೆದಿಲ್ಲ ಎಂದು ಚಿಕಿತ್ಸೆ ಕುರಿತು ಸಿದ್ದರಾಮಯ್ಯ ವಿವರಿಸಿದ್ದಾರೆ.

ಪ್ರವಾಸ ಮಾಡಲು ಚಿಕಿತ್ಸೆ ಪಡೆದಿದ್ದಾರೆ?

ಪ್ರವಾಸ ಮಾಡಲು ಚಿಕಿತ್ಸೆ ಪಡೆದಿದ್ದಾರೆ?

"ಚಿಕಿತ್ಸೆ ಪಡೆದಿರುವುದು ಯಾವುದೇ ಪ್ರವಾಸ ಮಾಡಲು ಅಂತಲ್ಲ. ಆರೋಗ್ಯಕ್ಕಾಗಿ ಮಾತ್ರ ಹೋಗಿ ದಾಖಲಾಗಿದ್ದ. ಅಧಿವೇಶನ, ಪ್ರವಾಸ ಅಂತ ಹೋಗಿ ಚಿಕಿತ್ಸಾ ಕೇಂದ್ರಕ್ಕೆ ಸೇರಿಕೊಂಡಿರಲಿಲ್ಲ. ಚಿಕಿತ್ಸೆ ಪಡೆದ ಬಳಿಕ ಮೂರು ಕೆಜಿ ತೂಕ ಕಡಿಮೆಯಾಗಿರುವುದೂ ಸೇರಿದಂತೆ ಆರೋಗ್ಯ ಸುಧಾರಣೆ ಆಗಿದೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿವರಿಸಿದ್ದಾರೆ.

ಯಾವುದೇ ಉದ್ದೇಶವನ್ನಿಟ್ಟುಕೊಂಡು ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ದಾಖಲು ಆಗಿರಲಿಲ್ಲ. ಈಗ ರಾಜ್ಯ ಪ್ರವಾಸವನ್ನಾಗಲಿ, ಬೇರೆ ಯಾವುದೇ ಕಾರ್ಯಕ್ರಮಗಳನ್ನಾಗಲಿ ಹಾಕಿಕೊಂಡಿಲ್ಲ ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.

English summary
Opposition leader Siddaramaiah has taken various treatments at the Jindal Naturecure Institute for 10 days. Know more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X