keyboard_backspace

ಎಚ್ಚರಿಕೆ ಗಂಟೆ: ಚೀನಾದ ಹಸಿ ಮಾರುಕಟ್ಟೆಯಲ್ಲಿ 18 ಹೊಸ ವೈರಸ್‌ಗಳು ಪತ್ತೆ!

Google Oneindia Kannada News

ಬೀಜಿಂಗ್, ನವೆಂಬರ್ 17: ಚೀನಾದ ಹಸಿಮಾಂಸ ಮಾರುಕಟ್ಟೆ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಇದೇ ಮಾರುಕಟ್ಟೆಯಿಂದ ಇಡೀ ಜಗತ್ತಿಗೆ ಹರಡಿತು ಎಂಬ ನಂಬಲಾಗಿದೆ. ಈಗದೇ ಮಾರುಕಟ್ಟೆಯಲ್ಲಿ 18ಕ್ಕೂ ಹೆಚ್ಚು ಅಪಾಯಕಾರಿ ವೈರಸ್‌ಗಳಿವೆ ಎಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಚೀನಾದ ಹಸಿ ಮಾರುಕಟ್ಟೆಯಲ್ಲಿ ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವು 18 ಸಸ್ತನಿ ವೈರಸ್‌ಗಳನ್ನು ಗುರುತಿಸಿದೆ. ಈ ರೋಗಾಣುಗಳು ಮಾನವ ಸಂಕುಲ ಮತ್ತು ಸಾಕುಪ್ರಾಣಿಗಳಿಗೆ ಹೆಚ್ಚಿನ ಅಪಾಯವನ್ನು ಉಂಟು ಮಾಡಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಕೊರೊನಾ ವೈರಸ್ ಜೈವಿಕ ಅಸ್ತ್ರ ಅಲ್ಲ: ಯುಎಸ್‌ಎ ಇಂಟೆಲಿಜೆನ್ಸ್ ವಿಭಾಗ ಸ್ಪಷ್ಟನೆಕೊರೊನಾ ವೈರಸ್ ಜೈವಿಕ ಅಸ್ತ್ರ ಅಲ್ಲ: ಯುಎಸ್‌ಎ ಇಂಟೆಲಿಜೆನ್ಸ್ ವಿಭಾಗ ಸ್ಪಷ್ಟನೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಇಡೀ ಜಗತ್ತಿನಲ್ಲಿ ಈವರೆಗೂ 51.29 ಲಕ್ಷ ಜನರು ಪ್ರಾಣ ಬಿಟ್ಟಿದ್ದು, 25.50 ಕೋಟಿ ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊವಿಡ್-19 ಸೋಂಕಿಗೂ ಚೀನಾದ ವುಹಾನ್ ನಗರದಲ್ಲಿರುವ ಸಮುದ್ರಾಹಾರ ಮಾರುಕಟ್ಟೆಗೂ ನಂಟು ಹೊಂದಿದೆ. ವುಹಾನ್‌ನ ಆರ್ದ್ರ ಮಾರುಕಟ್ಟೆಯಲ್ಲಿ SARS-CoV-2 ನ ಮೊದಲ ಪ್ರಕರಣ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸಾಧ್ಯತೆಯಿದೆ ಎಂದು ಚೀನಾ ಈ ಹಿಂದೆೆಯೇ ಹೇಳಿಕೊಂಡಿತ್ತು.

ಇಡೀ ವಿಶ್ವಕ್ಕೆ ಅಪಾಯಕಾರಿ ಕೊವಿಡ್-19 ಸೋಂಕು ಪರಿಚಯಿಸಿದ ಚೀನಾದ ಅದೇ ಮಾರುಕಟ್ಟೆಯಲ್ಲಿ ಮತ್ತಷ್ಟು ಅಪಾಯಕಾರಿ ರೋಗಾಣುಗಳು ಪತ್ತೆಯಾಗಿವೆ. ಈ 18 ರೋಗಾಣುಗಳಿಂದ ಜಗತ್ತು ಮತ್ತೊಂದು ಸಾಂಕ್ರಾಮಿಕ ಪಿಡುಗು ಎದುರಿಸುವಂತಾ ಪರಿಸ್ಥಿತಿ ಸೃಷ್ಟಿಯಾಗುತ್ತದೆಯೇ ಎಂಬ ಭೀತಿ ಹುಟ್ಟಿಕೊಂಡಿದೆ. ಚೀನಾದ ಮಾರುಕಟ್ಟೆಯಲ್ಲಿ ಪತ್ತೆಯಾಗಿರುವ ಹೊಸ ರೋಗಾಣುಗಳ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.

ಚೀನಾದ ಮಾರುಕಟ್ಟೆಯಲ್ಲಿ ನಿಷೇಧಿತ ರೋಗಾಣುಗಳು ಪತ್ತೆ

ಚೀನಾದ ಮಾರುಕಟ್ಟೆಯಲ್ಲಿ ನಿಷೇಧಿತ ರೋಗಾಣುಗಳು ಪತ್ತೆ

ಚೀನಾ, ಯುನೈಟೆಡ್ ಸ್ಟೇಟ್ಸ್, ಬೆಲ್ಜಿಯಂ ಮತ್ತು ಆಸ್ಟ್ರೇಲಿಯಾದ ಸಂಶೋಧಕರು ಚೀನಾದಲ್ಲಿ ಸಾಮಾನ್ಯವಾಗಿ ಭೇಟೆಯಾಡುವ ಅಥವಾ ವಿಲಕ್ಷಣ ಆಹಾರವಾಗಿ ಸೇವಿಸುವ ಪ್ರಾಣಿಗಳನ್ನು ಪತ್ತೆ ಮಾಡಿದ್ದಾರೆ. SARS-CoV ಮತ್ತು SARS-CoV-2 ರೋಗಾಣುಗಳ ಮಾದರಿಗಳು ಹೆಚ್ಚಾಗಿವೆ. ಮೊದಲ ಬಾರಿಗೆ ತಂಡವು ಅನೇಕ ಜಾತಿಯ ರೋಗಾಣುಗಳನ್ನು ಪರೀಕ್ಷಿಸಿದೆ. ಅವುಗಳಲ್ಲಿ ಕೆಲವು ರೋಗಾಣುಗಳು ಕೋವಿಡ್ -19 ಸಾಂಕ್ರಾಮಿಕ ರೋಗದ ಆರಂಭಿಕ ಹಂತದಿಂದ ವ್ಯಾಪಾರ ಅಥವಾ ಕೃತಕ ಸಂತಾನೋತ್ಪತ್ತಿಗಾಗಿ ಚೀನಾ ಸರ್ಕಾರವು ನಿಷೇಧಿಸಿದೆ.

ಮಾನವ ಸಂಕುಲಕ್ಕೆ ಅಪಾಯಕಾರಿಯಾದ 18 ವೈರಸ್‌ಗಳು

ಮಾನವ ಸಂಕುಲಕ್ಕೆ ಅಪಾಯಕಾರಿಯಾದ 18 ವೈರಸ್‌ಗಳು

ಚೀನಾದಾದ್ಯಂತ 16 ಜಾತಿ ಮತ್ತು ಐದು ಸಸ್ತಿಗಳು ಸೇರಿದಂತೆ ಒಟ್ಟು 1725 ಪ್ರಾಣಿಗಳ ಮೇಲೆ ಸಂಶೋಧನೆಯನ್ನು ನಡೆಸಲಾಯಿತು. "ಇದರಿಂದ ನಾವು 71 ಸಸ್ತನಿ ವೈರಸ್‌ಗಳನ್ನು ಗುರುತಿಸಿದ್ದು, 45 ಅನ್ನು ಮೊದಲ ಬಾರಿಗೆ ವಿವರಿಸಲಾಗಿದೆ. 18 ವೈರಸ್‌ಗಳನ್ನು ಮಾನವರು ಮತ್ತು ಸಾಕುಪ್ರಾಣಿಗಳಿಗೆ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ," ಎಂದು ಚೀನಾದ ನಾನ್‌ಜಿಂಗ್ ಕೃಷಿ ವಿಶ್ವವಿದ್ಯಾಲಯದ ಪಶುವೈದ್ಯಕೀಯ ಕಾಲೇಜ್‌ನ ಲೇಖಕ ಶುವೋ ಸು ಹೇಳಿದ್ದಾರೆ.

ಚೀನಾದಲ್ಲೇ ಈ ಹಿಂದೆ SARS-CoV ಮಾದರಿ ಪತ್ತೆ

ಚೀನಾದಲ್ಲೇ ಈ ಹಿಂದೆ SARS-CoV ಮಾದರಿ ಪತ್ತೆ

"ವಿಜ್ಞಾನಿಗಳ ತಂಡವು ಯಾವುದೇ SARS-CoV-2-ತರಹದ ಅಥವಾ SARS-CoV-ತರಹದ ಮಾದರಿಯನ್ನು ಗುರುತಿಸಲಿಲ್ಲ. ಇದರಲ್ಲಿ ಮಲಯನ್ ಪ್ಯಾಂಗೊಲಿನ್‌ಗಳು ಸೇರಿದಂತೆ SARS-CoV-2 ತರಹದ ವೈರಸ್‌ಗಳನ್ನು ಈ ಹಿಂದೆಯೇ ಗುರುತಿಸಲಾಗಿತ್ತು," ಎಂದು ಪ್ರಿಪ್ರಿಂಟ್‌ನಲ್ಲಿ ಪೋಸ್ಟ್ ಮಾಡಿದ ಅಧ್ಯಯನದಲ್ಲಿ ಸು ಹೇಳಿದರು. ಸಂಶೋಧಕರ ಪ್ರಕಾರ, ಪ್ಯಾಂಗೊಲಿನ್ SARS-ತರಹದ ವೈರಸ್‌ಗಳ ಕೊರತೆಗೆ ಇವೆರಡೂ ಪ್ರಾಣಿಗಳ ಕಳ್ಳಸಾಗಣೆಯೇ ಮುಖ್ಯ ಕಾರಣವಾಗಿ ಕಂಡು ಬಂದಿದೆ. ಈ ಹಿಂದಿನ ವೈರಸ್ ಪಾಸಿಟಿವ್ ಮಾದರಿಗಳನ್ನು ಗುವಾಂಗ್‌ಡಾಂಗ್ ಮತ್ತು ಗುವಾಂಗ್ಕ್ಸಿ ಪ್ರಾಂತ್ಯಗಳಲ್ಲಿನ ಕಸ್ಟಮ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಝೆಜಿಯಾಂಗ್ ಪ್ರಾಂತ್ಯದಲ್ಲಿ ಪತ್ತೆಯಾದ ಹೊಸ ಮಾದರಿ

ಝೆಜಿಯಾಂಗ್ ಪ್ರಾಂತ್ಯದಲ್ಲಿ ಪತ್ತೆಯಾದ ಹೊಸ ಮಾದರಿ

ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದಿಂದ ಹೊಸ ಮಾದರಿಗಳನ್ನು ಪಡೆಯಲಾಗಿದೆ. ಅಂತಾರಾಷ್ಟ್ರೀಯ ಗಡಿಯನ್ನು ಹೊಂದಿಲ್ಲದ ಈ ಪ್ರಾಂತ್ಯವು ಕಳ್ಳಸಾಗಣೆಗೆ ಅನುಕೂಲಕರವಾಗಿಲ್ಲ, ಎಂದು ಅವರು ಹೇಳಿದ್ದಾರೆ. ಬ್ಯಾಟ್‌ನಿಂದ ಸಿವೆಟ್‌ಗೆ ಬ್ಯಾಟ್ ಕೊರೊನಾವೈರಸ್ HKU8 ಹರಡುವುದನ್ನು ಅವರು ಗುರುತಿಸಲಾಗಿದೆ. ಅದೇ ರೀತಿ ಬಾವಲಿಗಳಿಂದ ಮುಳ್ಳುಹಂದಿಗೆ ಮತ್ತು ಪಕ್ಷಿಗಳಿಂದ ಮುಳ್ಳುಹಂದಿಗೆ ಸೋಂಕು ಹರಡಿರುವುದು ಪತ್ತೆಯಾಗಿದೆ.

ಅದೇ ರೀತಿ ಪಕ್ಷಿಗಳಲ್ಲಿ ಶೀತಜ್ವರದ ವೈರಸ್ H9N2 ಅನ್ನು ಸಿವೆಟ್ಸ್ ಮತ್ತು ಏಷ್ಯನ್ ಬ್ಯಾಡ್ಜರ್‌ಗಳಲ್ಲಿ ಗುರುತಿಸಲಾಗಿದೆ. ಮೊದಲು ಈ ರೋಗಾಣುವಿನಿಂದ ಶೀತಜ್ವರದ ಲಕ್ಷಣಗಳು ಗೋಚರಿಸುತ್ತವೆ, ಎರಡನೆೇಯದಾಗಿ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಸೋಂಕು ಮನುಷ್ಯರಿಂದ ವನ್ಯಜೀವಿಗಳಿಗೆ ಹರಡುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

Recommended Video

ಪಂತ್-ಅಯ್ಯರ್ ನಡುವೆ ಭಾರೀ ಪೈಪೋಟಿ:ಯಾರಿಗೆ ಸಿಗುತ್ತೆ ಚಾನ್ಸ್ | Oneindia Kannada

English summary
Scientists Found 18 High Risk Viruses At China’s Wet Markets; World Maybe face Another Pandemic.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X