• search
  • Live TV
keyboard_backspace

ಬಾಹ್ಯಾಕಾಶ ಕೇಂದ್ರದಲ್ಲಿ ರಷ್ಯಾದ ಕ್ಷಿಪಣಿ ಪರೀಕ್ಷೆಯಿಂದಾದ ತ್ಯಾಜ್ಯಕ್ಕೆ ಆಕ್ರೋಶ

Google Oneindia Kannada News

ಮಾಸ್ಕೋ, ನವೆಂಬರ್ 16: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಗಗನಯಾತ್ರಿಗಳಿಗೆ ಬಾಹ್ಯಾಕಾಶ ತ್ಯಾಜ್ಯದ ಆತಂಕ ಎದುರಾಗಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅಮೆರಿಕದ ನಾಲ್ವರು, ಜರ್ಮನಿಯ ಒಬ್ಬರು ಹಾಗೂ ರಷ್ಯಾದ ಇಬ್ಬರು ಗಗನಯಾತ್ರಿಗಳು ಇದ್ದಾರೆ. ಇವರು ತಮ್ಮ ವಾಹನಗಳಲ್ಲೇ ತಂಗುವಂತೆ ಬಾಹ್ಯಾಕಾಶ ನಿಯಂತ್ರಕರು ನಿರ್ದೇಶನ ನೀಡಿದ್ದಾರೆ.

ಒಂದು ತಿಂಗಳ ಹಿಂದಷ್ಟೇ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದ ವ್ಯಕ್ತಿ ವಿಮಾನ ದುರಂತದಲ್ಲಿ ಸಾವುಒಂದು ತಿಂಗಳ ಹಿಂದಷ್ಟೇ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದ ವ್ಯಕ್ತಿ ವಿಮಾನ ದುರಂತದಲ್ಲಿ ಸಾವು

ಐಎಸ್​ಎಸ್​ನಲ್ಲಿ ಸೃಷ್ಟಿಯಾಗಿರುವ ತ್ಯಾಜ್ಯದಿಂದ ತೊಂದರೆಯಾಗಿದ್ದು, ಅವರ ಸುಲಲಿತ ಕೆಲಸಗಳಿಗೆ ಇದು ಅಡ್ಡಿಯನ್ನುಂಟು ಮಾಡಿದೆ. ಇನ್ನೂ ಒಂದೆರಡು ದಿನಗಳವರೆಗೆ ಈ ಅಡ್ಡಿ ಮುಂದುವರಿಯಬಹುದು. ಗಗನಯಾತ್ರಿಗಳ ವಿಜ್ಞಾನ ಸಂಶೋಧನೆ ಮತ್ತು ಇತರ ಕೆಲಸಕ್ಕೂ ತೊಂದರೆ ಆಗಬಹುದು ಎಂದು ಅಮೆರಿಕ​ ಬಾಹ್ಯಾಕಾಶ ಕಮಾಂಡ್ ಹೇಳಿದೆ.

ಇವುಗಳಿಂದಾಗಿ ಭೂಮಿಗೆ ಯಾವುದೇ ರೀತಿಯ ಹಾನಿ ಆಗದಿದ್ದರೂ, ಕಕ್ಷೆಯಲ್ಲಿ ಅನಾಥವಾಗಿ ಸುತ್ತುತ್ತಿರುವ ಇವುಗಳು, ಕಾರ್ಯನಿರ್ವಹಿಸುವ ಕೃತಕ ಉಪಗ್ರಹಗಳು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಾರ್ಯನಿರ್ವಹಣೆಗೆ ಅಡ್ಡಿಯನ್ನುಂಟು ಮಾಡಬಹುದು ಎಂಬ ಆತಂಕ ವಿಜ್ಞಾನಿಗಳಲ್ಲಿದೆ.

ಬಲೆ ಬಳಸಿ ಕಸದ ಚೂರುಗಳನ್ನು ಹಿಡಿದು ಅವುಗಳನ್ನು ಭೂವಾತಾವರಣಕ್ಕೆ ತಂದು ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಉರಿಸುವುದು, ಇದೇ ಮಾದರಿಯಲ್ಲಿ ಬಲೂನುಗಳನ್ನು ಬಳಸಿ ಅವಶೇಷಗಳನ್ನು ಭೂವಾತಾವರಣಕ್ಕೆ ತಂದು ಅವುಗಳು ಹೊತ್ತಿ ಉರಿಯುವಂತೆ ಮಾಡುವುದು ಮತ್ತು ಭೂಮಿಯಿಂದ ಲೇಸರ ಕಿರಣಗಳನ್ನು ಬಿಟ್ಟು ಅವಶೇಷಗಳನ್ನು ಸುರಕ್ಷಿತ ಕಕ್ಷೆಗೆ ಅಥವಾ ಭೂವಾತಾವರಣಕ್ಕೆ ಎಳೆದು ತರುವುದು ಸೇರಿದಂತೆ ಹಲವು ಪರಿಹಾರ ಸೂತ್ರಗಳು ಸಂಶೋಧಕರ ಮನದಲ್ಲಿದೆ.

ಅಪಾಯವೇನು?: ಇವುಗಳಿಂದಾಗಿ ಭೂಮಿಗೆ ಯಾವುದೇ ರೀತಿಯ ಹಾನಿ ಆಗದಿದ್ದರೂ, ಕಕ್ಷೆಯಲ್ಲಿ ಅನಾಥವಾಗಿ ಸುತ್ತುತ್ತಿರುವ ಇವುಗಳು, ಕಾರ್ಯನಿರ್ವಹಿಸುವ ಕೃತಕ ಉಪಗ್ರಹಗಳು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಾರ್ಯನಿರ್ವಹಣೆಗೆ ಅಡ್ಡಿಯನ್ನುಂಟು ಮಾಡಬಹುದು ಎಂಬ ಆತಂಕ ವಿಜ್ಞಾನಿಗಳಲ್ಲಿದೆ.

ರಷ್ಯಾದ ಬಾಹ್ಯಾಕಾಶ ತ್ಯಾಜ್ಯ: ನಿನ್ನೆ ರಷ್ಯಾ ಕಕ್ಷೆಯಲ್ಲಿದ್ದ ತನ್ನದೇ ಸ್ವಂತ ಉಪಗ್ರಹವೊಂದನ್ನು ಸ್ಫೋಟಿಸಿದ ಕಾರಣ ಬಾಹ್ಯಾಕಾಶದಲ್ಲಿ ಅವಶೇಷಗಳು/ತ್ಯಾಜ್ಯಗಳು ಸೃಷ್ಟಿಯಾಗಿತ್ತು. 1500ಕ್ಕೂ ಹೆಚ್ಚು ತ್ಯಾಜ್ಯದ ಚೂರುಗಳಾಗಿ ಮಾರ್ಪಟ್ಟಿತ್ತು.

ಈ ಬಾಹ್ಯಾಕಾಶ ತ್ಯಾಜ್ಯಗಳು ಅಪಾಯಕಾರಿಯಾಗಿದ್ದು, ಇದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಗಗನಯಾತ್ರಿಗಳ ಕಾರ್ಯಕ್ಕೆ ತಡೆಯೊಡ್ಡಿದೆ. ಹೀಗಾಗಿ ರಷ್ಯಾದ ಗಗನಯಾತ್ರಿಗಳು ಸೋಯುಜ್ MS-18 ಕ್ಯಾಪ್ಸುಲ್‌ನಲ್ಲಿ ತಂಗಿದ್ದು, ಅಮೆರಿಕದ ನಾಲ್ವರು ಗಗನಯಾತ್ರಿಗಳು ಕಕ್ಷೆಯ ಹೊರ ನಿಲ್ದಾಣಕ್ಕೆ ಬಂದಿದ್ದಾರೆ.

ಏನಿದು ಬಾಹ್ಯಾಕಾಶ ತ್ಯಾಜ್ಯ?: ಬಾಹ್ಯಾಕಾಶ ತ್ಯಾಜ್ಯ (Space Junk)ವನ್ನು ಬಾಹ್ಯಾಕಾಶ ಮಾಲಿನ್ಯ, ಬಾಹ್ಯಾಕಾಶ ಕಸ ಎಂದೂ ಕರೆಯಲಾಗುತ್ತದೆ. ಭೂಮಿಯಲ್ಲಿ ಮಾತ್ರವಲ್ಲ ಬಾಹ್ಯಾಕಾಶದಲ್ಲಿ ಕೂಡ ಕಸ/ತ್ಯಾಜ್ಯಗಳು ತುಂಬಿಕೊಂಡಿವೆ. ಮಾನವರು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಉಪಗ್ರಹಗಳು, ನೌಕೆ, ರಾಕೆಟ್​ ಹಾಗೂ ಇತರ ಸಂಶೋಧನಾ ಸಾಧನಗಳಲ್ಲಿ ಕೆಲವು ವಿಫಲವಾಗಿ ನಿಷ್ಕ್ರಿಯಗೊಂಡಿರುತ್ತವೆ.

ಇವುಗಳ ಪಳೆಯಳಿಕೆ ಅಥವಾ ಅವಶೇಷಗಳನ್ನೇ ಬಾಹ್ಯಾಕಾಶ ತ್ಯಾಜ್ಯ ಎಂದು ಕರೆಯಲಾಗುತ್ತದೆ. ಇವು ಚೂರುಚೂರಾಗಿ ಕಕ್ಷೆಯಲ್ಲೇ ಉಳಿದುಕೊಂಡಿರುತ್ತವೆ. ಪ್ರಸ್ತುತ ಸುಮಾರು 6 ಸಾವಿರಕ್ಕೂ ಅಧಿಕ ಟನ್​​ ತ್ಯಾಜ್ಯ ಬಾಹ್ಯಾಕಾಶದಲ್ಲಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಕೆಳ ಭೂಮಿಯ ಕಕ್ಷೆ (Low Earth orbit - LEO)ಯಲ್ಲಿರುವ ಬಾಹ್ಯಾಕಾಶ ನಿಲ್ದಾಣವಾಗಿದೆ.

ಕೆಳ ಭೂಮಿಯ ಕಕ್ಷೆಯು ಭೂಮಿಯ ಮೇಲ್ಮೈಗೆ ತುಲನಾತ್ಮಕವಾಗಿ ಹತ್ತಿರವಿರುವ ಕಕ್ಷೆಯಾಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ನಾಸಾ (NASA) ಸೇರಿದಂತೆ ಐದು ಬಾಹ್ಯಾಕಾಶ ಏಜೆನ್ಸಿಗಳ ಸಿಬ್ಬಂದಿ ಕಾರ್ಯನಿರ್ವಸಿಸುತ್ತಿದ್ದಾರೆ.

English summary
A Russian weapons test created more than 1,500 pieces of space junk now threatening the seven astronauts aboard the International Space Station, according to U.S. officials who called the strike reckless and irresponsible.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X