ಕನ್ನಡಕ್ಕಾಗಿ ಭಿಕ್ಷೆ ಬೇಡಬೇಕಿಲ್ಲ, ಬೊಬ್ಬೆ ಹೊಡೆಯಬೇಕಿಲ್ಲ

Posted By:
Subscribe to Oneindia Kannada

2016ನೇ ವರ್ಷದ ಅಂತ್ಯದ ಆರಂಭವಾಗಿರುವಾಗ ಕನ್ನಡಿಗರಾದ ನಾವೆಲ್ಲರೂ ಕನ್ನಡದ ಉಳಿಕೆಗಾಗಿ, ಉನ್ನತಿಗಾಗಿ, ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಲಿಕ್ಕಾಗಿ ದೃಢಸಂಕಲ್ಪ ಮಾಡಬೇಕಿದೆ. ಕನ್ನಡಕ್ಕಾಗಿ, ಕನ್ನಡಿಗರ ಸ್ಥಾನಮಾನಕ್ಕಾಗಿ ನಾವೀಗ ಬೇಡುವಂಥ ಸ್ಥಿತಿ ಬಂದಿರುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ.

ಹೊಸವರ್ಷಕ್ಕೆ ಎಲ್ಲರೂ ಏನೇನೋ ಸಂಕಲ್ಪಗಳನ್ನು ಮಾಡುತ್ತಾರೆ. ಮದುವೆ ಆಗಬೇಕಂತಾನೋ, ಸಿಗರೇಟು ಬಿಡಬೇಕು ಅಂತಾನೋ, ತೂಕ ಕಡಿಮೆ ಮಾಡಿಕೊಳ್ಳಬೇಕು ಅಂತಾನೋ, ಮನೆ ಕಟ್ಟಬೇಕು ಅಂತಾನೋ, ಹೇಗಾದ್ರೂ ಮಾಡಿ ಪಕ್ಕದ ಹುಡುಗಿಯನ್ನ ಲವ್ ಮಾಡಬೇಕು ಅಂತಾನೋ... ಹೀಗೇ ಏನೇನೋ...

ಆದರೆ, ನಾವು ಕನ್ನಡಿಗರು ಗಟ್ಟಿ ಮನಸ್ಸಿನಿಂದ ಪರಭಾಷೆಯವರೊಂದಿಗೆ ಕನ್ನಡದಲ್ಲೇ ಮಾತಾಡೋಣ, ಸಾಮಾಜಿಕ ತಾಣದಲ್ಲಿ ಕನ್ನಡದಲ್ಲೇ ಬರೆಯೋಣ, ಕನ್ನಡದ ಶಕ್ತಿ ಏನೆಂದು ಉಳಿದವರಿಗೆ ತೋರಿಸೋಣ, ಕನ್ನಡದ ಏಳ್ಗೆಗಾಗಿ ಸಂಕಲ್ಪ ಮಾಡೋಣ.

ಹಾಗಾದಾಗ ಮಾತ್ರ ಕನ್ನಡಕ್ಕೆ ಸಿಗಬೇಕಾದ ಗೌರವ, ಮಾನಸಮ್ಮಾನ ತಂತಾನೇ ಬರುತ್ತದೆ. ಈ ವಿಷಯ ಕುರಿತಂತೆ ಸ್ನೇಹಿತರೊಬ್ಬರು ಪುಟ್ಟ ಪತ್ರ ಬರೆದಿದ್ದಾರೆ. ತುಂಬಾ ಅರ್ಥಪೂರ್ಣವಾಗಿದೆ. ಹಾಗೆಯೆ, ಇನ್ನಿತರ ವಿಷಯಗಳ ಬಗ್ಗೆ ಇತರರು ಬರೆದಿರುವ ಪತ್ರಗಳೂ ಇವೆ.

ಕನ್ನಡಕ್ಕೆ ಬೆಲೆ ಕೊಡಿ ಅಂತಾ ನಾವು ಕೇಳಬಾರದು

ಕನ್ನಡಕ್ಕೆ ಬೆಲೆ ಕೊಡಿ ಅಂತಾ ನಾವು ಕೇಳಬಾರದು

ಕನ್ನಡಕ್ಕೆ ಬೆಲೆ ಕೊಡಿ ಅಂತಾ ನಾವು ಕೇಳಬಾರದು, ಆದರೆ ಬೆಲೆ ಕೊಡದಿದ್ದರೆ ಅವರಿಗೇ ಬೆಲೆ ಇಲ್ಲ ಅಂತಾ ಅನ್ನಿಸಬೇಕು. ಹಾಗೆ ಮಾಡಿದರೆ ನಾವು ಕೇಳದೆ ಅವರೇ ಬೆಲೆ ಕೊಡುತ್ತಾರೆ. ಭಿಕ್ಷೆ ಬೇಡುವವರನ್ನು ಎಲ್ಲರೂ ಅಸಡ್ಡೆಯಿಂದಾ ನೋಡುತ್ತಾರೆ. ಆದರೆ ಕನ್ನಡವನ್ನು ಕಡೆಗಣಿಸಿದರೆ ಅವರಿಗೇ ನಷ್ಟ ಅನ್ನುವಂತಾ ಪರಿಸ್ಥಿತಿ ಉಂಟು ಮಾಡಿದರೆ ನಾವೇ ಕೇಳದೇ, ಬೇಡಿಕೊಳ್ಳದೇ ಕನ್ನಡಕ್ಕೆ ಸಿಗಬೇಕಾದ ಗೌರವ ಸಿಗುತ್ತೆ.

ಪ್ರಾದೇಶಿಕ ಪಕ್ಷದಿಂದಾ ಕನ್ನಡ ಉದ್ದಾರ ಆಗುತ್ತೆ ಅನ್ನೋದೂ ಕೂಡಾ ಒಂದು ಭ್ರಮೆ.. ಬೆಂಗಳೂರಿನಲ್ಲಿರುವ ಕನ್ನಡಿಗರೆಲ್ಲಾ ಪರಭಾಷಿಕರ ಜೊತೆ ಅವರವರ ಭಾಷೆಯಲ್ಲಿ ಮಾತಾಡುವುದು ಬಿಟ್ಟು ಬೇರೆಯವರು ಯಾವುದೇ ಭಾಷೆಯಲ್ಲಿ ಮಾತಾಡಿದರೂ ಕನ್ನಡದಲ್ಲಿ ಮಾತ್ರ ಉತ್ತರಿಸಿದರೆ ಅವರೆಲ್ಲೂ ಬಾಯಿ ಮುಚ್ಕೊಂಡು ಆರು ತಿಂಗಳಲ್ಲಿ ಕನ್ನಡ ಕಲಿಯುತ್ತಾರೆ, ಅದರ ಬದಲು ಅವರ ಭಾಷೆಯಲ್ಲಿ ನಾವೇ ವ್ಯವಹರಿಸಿ ಅವರ ಲೈಫ್ ಸುಲಭ ಮಾಡಿದರೆ ಅವರು ಇಲ್ಲಿ 10 ವರ್ಷ ಇದ್ದರೂ ಕನ್ನಡ್ ಗೊತ್ತಿಲ್ಲ ಎಂಬ ಎರಡು ಪದ ಮಾತ್ರ ಕಲೀತಾರೆ.

ಇದಕ್ಕಾಗಿ, ನಾವು ಬೇಡಬೇಕಿಲ್ಲ, ಹೇಳಬೇಕಿಲ್ಲ, ಕೇಳಿಕೊಳ್ಳಬೇಕಿಲ್ಲ, ಬೊಬ್ಬೆ ಹೊಡೆಯಬೇಕಿಲ್ಲ. ಸಾಧ್ಯವಿರುವ ಕಡೆಯೆಲ್ಲಾ ಕನ್ನಡದಲ್ಲಿ ಮಾತ್ರ ಮಾತನಾಡುತ್ತೇನೆ ಅನ್ನುವ ಒಂದು ದೃಢ ನಿರ್ದಾರ ಮತ್ತು ಅದನ್ನು ಆಚರಣೆ ಮಾಡುವ ಒಂದು ಮೌನ ಕ್ರಾಂತಿ.

ರಾಜನ್

ನಮ್ಮ ಕಾನೂನು ಬೇಡ ಆದರೆ...

ನಮ್ಮ ಕಾನೂನು ಬೇಡ ಆದರೆ...

ಪ್ರಬುದ್ಧ ಹೇಳಿಕೆ ಮತ್ತು ಸರಕಾರವೇ ಇದನ್ನು ಮನಗಂಡು ಮಾಡ ಬೇಕಾಗಿತ್ತು ಮತ್ತು ವೋಟಿನ ಆಸೆಗಾಗಿ ಇದನ್ನು ಮಾಡುವ ಅವಶ್ಯಕತೆ ಇದೆಯಾ? ಮಾಡುವುದೂ ಸರಿನಾ? ಅವರಿಗೆ ನಮ್ಮ ಕಾನೂನು ಬೇಡ ಆದರೆ ಅವರ ಪವಿತ್ರ ಯಾತ್ರೆಗೆ ಸರಕಾರ ನೀಡುವ ನಮ್ಮ ದೇಗುಲಗಳ ಹಣ ಸಹಾಯ ಮಾತ್ರ ಯಾಕೆ ಬೇಕು!?

ಆಚಾರ್ಯ

ತಾಯಿ, ಸಹೋದರಿಯನ್ನು ಒಳಗೆಹಾಕಿ

ತಾಯಿ, ಸಹೋದರಿಯನ್ನು ಒಳಗೆಹಾಕಿ

ಮೊದಲು ಅವನ ತಾಯಿ, ಸಹೋದರಿಯನ್ನು ಒಳಗೆಹಾಕಿ. ಮತ್ತು ಮುಖ್ಯವಾಗಿ ಅವರಿಗೆ ತಲೆಗೆ ಹುಳ ಬಿಟ್ಟ(ದುಡ್ಡಿನಾಸೆಗೆ) ವಕೀಲನನ್ನು ಒದ್ದು ಒಳಗೆ ಹಾಕಿ. ಅಪರಾಧಿಯನ್ನು ಕೋಟ೯ ಆದೇಶದ ಪ್ರಕಾರ ಗಲ್ಲಿಗೇರಿಸಿದ ಮೇಲೆ ಇವರನ್ನು ಬಡುಗಡೆಮಾಡಿ. ಇಲ್ಲಾಂದರೆ ಏನಾದರೂ ಒಂದು ನೆಪವೊಡ್ಡಿ ಕೋಟ೯ನ ಸಮಯ ಹಾಳುಮಾಡಿ, ನ್ಯಾಯಕ್ಕೆ ಬೆಲೆ ಇಲ್ಲದ ಹಾಗೆ ಮಾಡ್ತಾರೆ, ಮೂರಾ ಬಿಟ್ಟ ಕಂತ್ರಿಗಳು.

ಎಂ ದಶರಥ

ಅಲ್ಲಾಹು ಅಕ್ಬರ್ ಎಂದು ಕೂಗುತ್ತಿದ್ದಾರೆಯೇ ವಿನಃ

ಅಲ್ಲಾಹು ಅಕ್ಬರ್ ಎಂದು ಕೂಗುತ್ತಿದ್ದಾರೆಯೇ ವಿನಃ

ನಮ್ಮ ರಾಜಕೀಯದವರು ದರಿದ್ರ ಮುಂಡೆ ಮಕ್ಕಳು. ಪ್ರಪಂಚ ಎಲ್ಲ ಬಾಂಬುಗಳನ್ನೂ ಹಾಕಿ ಕೊಲ್ಲುತ್ತಿರುವ ಜನರಿಗೆ ಏನೆಲ್ಲಾ ಸೌಲಭ್ಯ. ಅದು ಹಿಂದೂಗಳು ದುಡಿದು ಕಟ್ಟಿದ ತೆರಿಗೆಯಲ್ಲಿ. ಅದನ್ನು ಪ್ರಶ್ನಿಸಿದರೆ ರಾಮ ಸೇನಾ ಹಾಗು ಆರ್ ಎಸ್ ಎಸ್ ಗಳು ಕೇಸರಿ ಭಯೋತ್ಪಾದಕರೆಂದು ಕರೆಯುವುದು. ಎಲ್ಲ ಕಡೆಯು ಭಯೋತ್ಪಾದಕರು ಅಲ್ಲಾಹು ಅಕ್ಬರ್ ಎಂದು ಕೂಗುತ್ತಿದ್ದಾರೆಯೇ ವಿನಃ ರಾಮ್ ಕೃಷ್ಣ ಅಥವಾ ಶಿವನ ಹೆಸರನ್ನು ಕೂಗುತ್ತಿಲ್ಲ ಅಲ್ವ? ಮೊದಲು ಈ ಜನರನನ್ನು ಓಲೈಸುವುದು ಬಿಡಲಿ

ನಿಜವಾದ ದೇಶಭಕ್ತ

ಪ್ರತಿಮೇನಾ ಮನೇಲಿಟ್ಟು ಪೂಜೆ ಮಾಡಲಿ

ಪ್ರತಿಮೇನಾ ಮನೇಲಿಟ್ಟು ಪೂಜೆ ಮಾಡಲಿ

ಜಯಲಲಿತ ಒಂದು ದಿಟ್ಟ ಮಹಿಳೆ(ಕನಾ೯ಟಕದೊಳು ಅಲ್ಲವೇ) ಅನ್ನೋದು ಸರಿಯೇ. ಆದರೆ ಭಾರತ ರತ್ನ ಕೊಡೊವಷ್ಟು, ಅವಳ ಪ್ರತಿಮೆ ಸ್ಥಾಪನೆ ಮಾಡೊವಷ್ಟು ದೇಶಕ್ಕೆ ಏನೂ ಮಾಡಿಲ್ಲ. ಅದು ಏನೇ ಮಾಡಿದ್ದರೂ ಅದು ಪನ್ನೀರ್ ಸೆಲ್ವಮ್, ಮತ್ತು ತಮಿಳು(ಕೂಂಗಾಟಿಗಳಿಗೆ)ನೋರಿಗೆ ಮಾತ್ರ. ಇದನ್ನೆಲ್ಲಾ ಯಾವ ಮುಖ ಇಟ್ಕೊಂಡು ಮಾತಾಡ್ತಾನೆ. ಈ ಸೆಲ್ವಮ್ ತಿಳ್ಕೊಂಡಿರೋದು, ಪನ್ನೀರು ತಿಂದಷ್ಟು ಸುಲಭ ಅಂತ. ಬೇಕಾದರೆ ಜಯಲಲಿತ ಪ್ರತಿಮೆನಾ ಸೆಲ್ವಂ, ಪನ್ನೀರಲ್ಲಿ ಇಟ್ಟು ತನ್ನ ಮನೆಯಲ್ಲಿ ಇಟ್ಕೂಂಡು ಮೂರೊತ್ತು ಪೂಜೆಮಾಡ್ಕೊಳ್ಳಲಿ, ಯಾರು ಬೇಡ ಅಂದೋರು ?

ಅನಾಮಿಕ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Letters to the Editor : We should pass a resolution to speak and write in Kannada. There is no need to demand respect for Kannada or Kannadigas. The respect has to come on it's own. A reader has written a beautiful letter what every Kannadiga should do.
Please Wait while comments are loading...