• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೌಢ್ಯ ನಿಷೇಧ ಕಾಯ್ದೆ ಸ್ವಾಗತಿಸಿದ ಹುಲಿಕಲ್ ನಟರಾಜ್

By ಹುಲಿಕಲ್ ನಟರಾಜ್
|

ಪಟ್ಟಭದ್ರ ಹಿತಾಶಕ್ತಿಗಳ ಮಾತಿಗೆ ಮನ್ನಣೆ ಹಾಕದೆ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಮೌಢ್ಯ ನಿಷೇಧ ಜಾರಿಗೆ ತರುತ್ತಿರುವುದನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕಾರ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜ್ ಅವರು ಸ್ವಾಗತಿಸಿದ್ದಾರೆ.

'ನಾನು 25 ವರ್ಷಗಳಿಂದ ಸತತವಾಗಿ ಮೂಢನಂಬಿಕೆಗಳ ವಿರುದ್ದ ಜನ ಜಾಗೃತಿ ಕೈಂಕರ್ಯದಲ್ಲಿ ಕೆಲಸ ಮಾಡುತ್ತಿದ್ದು ಅಲ್ಲಿ ಕಂಡು ಕೊಂಡದ್ದು ಮುಗ್ಧ, ವಿದ್ಯಾವಂತ, ಅಮಾಯಕ ಅವಿದ್ಯಾವಂತರೆನ್ನದೆ ಮೋಸ ಹೋಗಿ ತಮ್ಮ ಆಸ್ತಿ, ಹಣ, ಕಳೆದುಕೊಂಡಿದ್ದಲ್ಲದೆ ಮಾನಸಿಕ ದೈಹಿಕ ಜೀವಂತ ಶವವಾಗಿ ನರಳುತ್ತಿರುವ ಅದಷ್ಟೋ ಜನರು ಇಂದಿಗೂ ನಮ್ಮ ನಿಮ್ಮ ನಡುವೆ ಇದ್ದಾರೆ.

ಮೌಢ್ಯ ನಿಷೇಧ ಮಸೂದೆಯಿಂದ ಮೂಲ ನಂಬಿಕೆಗೆ ಧಕ್ಕೆ: ಪಾಲೆಮಾರ್

ಮೌಢ್ಯತೆಯ ಹೆಮ್ಮಾರಿಯಿಂದ ನರಳುತ್ತಿದ್ದ ಮಂದಿ ಹೊರಬಂದು ತೃಪ್ತಿಕರ ನೆಮ್ಮದಿ ಜೀವನ ಮಾಡುವಂತೆ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದೇನೆ. ಆದರೂ ಇನ್ನೂ ಅನೇಕ ಜನ ಅದರಲ್ಲೇ ಮುಳುಗಿ ಹೊರ ಬರಲಾಗದೆ ಸಾವನ್ನಪ್ಪುತ್ತಿದ್ದಾರೆ. ಮೌಢ್ಯತೆಯ ಮಾರಿಯಿಂದ ಹೊರಬರಬೇಕಾದರೆ ಮೌಢ್ಯ ನಿಷೇಧ ಕಾಯಿದೆಯಲ್ಲಿ ಇವುಗಳನ್ನೂ ಪರಿಗಣಿಸುವುದು ಉತ್ತಮ.

ಶೂನ್ಯದಿಂದ ವಸ್ತುಗಳ ಸೃಷ್ಟಿ: ಡೋಂಗಿ ದೇವಮಾನವರು ಮಾಡುವ ಪವಾಡಗಳು ಅಂದರೆ ಶೂನ್ಯದಿಂದ ವಸ್ತುಗಳ ಸೃಷ್ಟಿ ಮಾಡಿ( ವಿಭೂತಿ, ಚೈನ್, ಹಣ, ಹೂ, ಹಣ್ಣುಗಳು ಇತ್ಯಾದಿ) ಜನರನ್ನು ನಂಬಿಸುವುದು. ಅದಕ್ಕೆ ಮುಗ್ಧ ಜನ ಬಲಿಯಾಗಿ ತಮ್ಮ ಜೀವಮಾನ ಪೂರ್ತಿ ಅವರ ದಾಸರಾಗುವುದು.

ವಾಮಾಚಾರ ಬಗ್ಗೆ ಹುಲಿಕಲ್ ನಟರಾಜ್

ವಾಮಾಚಾರ ಬಗ್ಗೆ ಹುಲಿಕಲ್ ನಟರಾಜ್

ವಾಮಾಚಾರದ ಹೆಸರಿನಲ್ಲಿ ಮುಗ್ದ ಮಕ್ಕಳ ಬಲಿ, ಅಂಗಾಂಗ ಕತ್ತರಿಸಿಕೊಳ್ಳುವಂತೆ ಪ್ರೇರಣೆ, ಇಡೀ ರಾತ್ರಿ ಮಸಣದಲ್ಲಿ ಬೆತ್ತಲೆ ಪೂಜೆ, ದೈಹಿಕ ದಂಡನೆ ಮಾಡಿಸುವುದು, ಮಳೆ ಬಾರದಿದ್ದರೆ ಹೂತಿಟ್ಟ ಹೆಣಗಳನ್ನು ಹೊರ ತೆಗೆದು ಪೂಜೆ ಮಾಡುವುದು. ಮನೆ, ಜಮೀನು,ಮುಂತಾದ ಕಡೆ ವಾಮಾಚಾರದ ವಸ್ತುಗಳನ್ನು ಹಾಕುವುದು ಮನೆಯ ಮುಂದೆ ಪ್ರಾಣಿಗಳನ್ನು ಕತ್ತರಿಸಿ ವಾಮಾಚಾರದ ವಸ್ತುಗಳನ್ನು ಹಾಕುವುದರಿಂದ ದುರ್ಬಲ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದಲ್ಲದೆ. ಪೂಜೆಯ ಹೆಸರಿನಲ್ಲಿ ಮತ್ತಷ್ಟೂ ಹೆದರಿಸುವುದು.

ಫಲ ಭವಿಷ್ಯ ಬಗ್ಗೆ ನಟರಾಜ್

ಫಲ ಭವಿಷ್ಯ ಬಗ್ಗೆ ನಟರಾಜ್

ಫಲ ಭವಿಷ್ಯ : ಪ್ರತೀ ತಾಲ್ಲೂಕಿನ ಮನೆ, ಕೊಠಡಿ ಲಾಡ್ಜ್ ಗಳಲ್ಲಿ ವಾಸಮಾಡಿಕೊಂಡು ಜ್ಯೋತಿಷ್ಯ ಕುಟ್ಟಿ ಚೇತನ, ಜನ, ಪಶು ಹಣ, ಸ್ತ್ರೀ. ಪುರುಷ, ಬೇತಾಳ, ಸಂತಾನಸಿದ್ದಿ, ವಶೀಕರಣ ಹಾಗೂ ಕೆಂಡ ಮಾಲಿನಿ,ಕುಂಡ ಮಾಲಿನಿ, ರುಂಡ ಮಾಲಿನಿ, ಅಘೋರಗಳ ಹೆಸರಿನಲ್ಲಿ ಪೂಜೆ ಮಾಡಿ ಲಕ್ಷಾಂತರ ರೂಗಳ ವಂಚನೆ, ರಾಸಾಯನಿಕ ವಸ್ತುಗಳು ಹಾಗೂ ಗಿಡ ಮೂಲಿಕೆಗಳನ್ನು ಬಳಸಿ ಪ್ರಜ್ಞೆ ತಪ್ಪಿಸಿ ಲೈಂಗಿಕ ಕಿರುಕುಳ ನೀಡುವುದಲ್ಲದೆ ಹಣ ದೋಚುವುದು.

ಜನ್ಮಾಂತರ ಕಾರ್ಯಕ್ರಮ ವಿವಾದ

ಜನ್ಮಾಂತರ ಕಾರ್ಯಕ್ರಮ ವಿವಾದ

ಮಾಧ್ಯಮಗಳಲ್ಲಿ ಪ್ರತಿ ದಿನ ಜನ್ಮಾಂತರದ ಹೆಸರಿನಲ್ಲಿ ಹಗಲು ದರೋಡೆ ನಡೆಯುತ್ತಿದೆ ಇದು ವೈಜ್ಞಾನಿಕವಾಗಿ ಎಲ್ಲಿಯೂ ಸಾಬಿತಾಗಿಲ್ಲ ಆದರೂ ಪ್ರತಿ ನಿತ್ಯ ಪಾಯೋಜಿತ ಕಾರ್ಯಕ್ರಮವಾಗಿ ಜನರನ್ನು ಮರಳು ಮಾಡುವ ಸುಳ್ಳು ಹೇಳಿ ಮುಗ್ದ ಜನರನ್ನು ವಂಚಿಸುವ ಬಹಿರಂಗ ದಂಧೆ ನಡೆಯುತ್ತಲೇ ಇರುತ್ತದೆ.

ದುರ್ಬಲ ಮನಸ್ಸಿನ ಮುಗ್ದ ವಿದ್ಯಾವಂತ ಬುದ್ದಿವಂತರನ್ನೂ ತಮ್ಮ ಸುಳ್ಳಿನ ಮೋಡಿಯಿಂದ ಮೋಸ ಮಾಡಿ ಮೌಢ್ಯದ ಬೀಜ ಬಿತ್ತುವುದನ್ನು ಪೊಳ್ಳು ಫಲ ಭವಿಷ್ಯವನ್ನು ನಿಷೇಧಿಸಬೇಕು.

ಭಯ ಹುಟ್ಟಿಸುವ ವಾಣಿ ನಿಷೇಧಿಸಬೇಕು

ಭಯ ಹುಟ್ಟಿಸುವ ವಾಣಿ ನಿಷೇಧಿಸಬೇಕು

ಎಲೆ, ಕಡವೆ ಆಂಜನ, ಸಜೀವಿಗಳ ಸೃಷ್ಟಿ, ಕೇರ ಬೀಜಗಳನ್ನು ಬಳಸಿಕೊಂಡು ಕೇರ ಬೀಳಿಸುವುದು, ಸ್ವಾರ್ಥ ಮನಸ್ಸಿನಿಂದ ವಸ್ತುಗಳನ್ನು ಹತ್ತಿಸುವುದು, ನಾನೇ ದೇವರು ನನ್ನ ಮೈಮೇಲೆ ದೇವರು ಬಂದಿದೆ ಎಂದು ತಾನೇ ದೈಹಿಕ ದಂಡನೆ ಮಾಡಿಕೊಳ್ಳುವುದು ಮಧ್ಯ ರಾತ್ರಿ ಬೆತ್ತಲೆ ಬಂದು ಭಯ ಹುಟ್ಟಿಸುವ ವಾಣಿ ನುಡಿಯುವುದು, ಸೂತಕದ ಮನೆಯಲ್ಲಿ ಮಾನಸಿಕ ಹಿಂಸೆ ನೀಡುವ ಆಚರಣೆಗಳನ್ನು ಮಾಡಿ ಮತ್ತಷ್ಠು ಮಾನಸಿಕ ಸೂತಕವನ್ನುಂಟು ಮಾಡುವುದು ಎಲ್ಲವೂ ನಿಷೇಧವಾಗಬೇಕಿದೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rationalist and myth-buster Hulikal Nataraj has welcomed Karnataka cabinet move to bring anti-superstition bill to prevent and eradicate inhuman evil practices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more