ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಕ್ರಿಯೆ : ಶಾಲೆಯಲ್ಲಿ ಸಿಸಿಟಿವಿ,ಪೋಷಕರ ಜೇಬಿಗೆ ಕತ್ತರಿ

|
Google Oneindia Kannada News

ಬೆಂಗಳೂರು, ನ. 17 : ಶಾಲೆಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದ ನಂತರ ಮಕ್ಕಳ ಸುರಕ್ಷತೆಗಾಗಿ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಎಲ್ಲಾ ಶಾಲೆಗಳು ಕಡ್ಡಾಯವಾಗಿ ಇದನ್ನು ಅಳವಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ಇದರಿಂದಾಗಿ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಿಸಿ, ಪೋಷಕರ ಜೇಬಿಗೆ ಕತ್ತರಿ ಹಾಕುತ್ತವೆ ಎನ್ನುತ್ತಾರೆ ಬೆಂಗಳೂರಿನ ಚಾಮರಾಜಪೇಟೆ ನಿವಾಸಿ ಲಿಂಗದೇವರು ಕೊತ್ತಲುಮನೆ.

ಶಾಲೆಗಳಲ್ಲಿ ನಡೆಯುತ್ತಿರುವ ಮಕ್ಕಳ ಮೇಲಿನ ದೌರ್ಜನ್ಯಗಳನ್ನು ಹತ್ತಿಕ್ಕಲು ನ್ಯಾಯಾಲಯ ಮತ್ತು ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಖಾಸಗಿ ಶಾಲೆಗಳು ಮಕ್ಕಳ ರಕ್ಷಣೆಗೆ ಒತ್ತು ನೀಡಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ಕ್ರಮಗಳಲ್ಲಿ ಮುಖ್ಯವಾದುದು ಸಿಸಿಟಿವಿ ಅಳವಡಿಕೆ. [ಖಾಸಗಿ ಶಾಲೆಗಳಲ್ಲಿ ಶುಲ್ಕ ಏರಿಕೆಗೆ ಚಿಂತನೆ]

schools

ಶಾಲೆಯ ಕೊಠಡಿ, ಕಾರಿಡಾರ್, ಶಾಲಾ ಕ್ಯಾಂಪಸ್ ಆವರಣ, ಶಾಲಾ ಬಸ್ಸುಗಳಲ್ಲಿ ಸಿಸಿಟಿವಿ ಅಳವಡಿಸಿ ಕ್ರಮ ಕೈಗೊಳ್ಳಲು ಅನೇಕ ಖಾಸಗಿ ಶಾಲೆಗಳು ಮುಂದಾಗಿವೆ. ಮಕ್ಕಳ ರಕ್ಷಣೆಯ ನೆಪದಲ್ಲಿ ಅವರ ಮೇಲೆ ಆಗುತ್ತಿರುವ ಒತ್ತಡದ ಬಗ್ಗೆ ಯಾರೂ ಗಮನಹರಿಸದಿರುವುದು ಆಶ್ಚರ್ಯಉಂಟುಮಾಡಿದೆ. [ಶಾಲೆಗಳ ಮಾರ್ಗಸೂಚಿಯಲ್ಲೇನಿದೆ?]

ಬಾಲ್ಯದಲ್ಲಿ ಮಕ್ಕಳ ತುಂಟತನ, ಚಟುವಟಿಕೆ, ಸ್ನೇಹಿತರ ಜತೆಗಿನ ಮಾತು, ಕೀಟಲೆಗಳು ಸಾಮಾನ್ಯ. ಆದರೆ, ಶಾಲೆಗಳಲ್ಲಿ ಸಿಸಿಟಿವಿ ಆಳವಡಿಸಿದರೆ, ಕ್ಯಾಮರಾ ತಮ್ಮನ್ನು ಗಮನಿಸುತ್ತಿರುವುದನ್ನು ತಿಳಿದ ಮಕ್ಕಳು ತಮ್ಮ ಸಹಜ ಬಾಲ್ಯ ಚಟುವಟಿಕೆಗಳನ್ನು ತಡೆದುಕೊಳ್ಳಬೇಕಾಗುತ್ತದೆ, ಈ ಒತ್ತಡದಿಂದ ಮಕ್ಕಳ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಮನೋವೈದ್ಯರು ಜನರಿಗೆ ಮಾಹಿತಿ ನೀಡಬೇಕು.

ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಸಹಜ ಪ್ರಕ್ರಿಯೆಗಳಿಗೆ ತಡೆವೊಡ್ಡಿದರೆ, ಮಕ್ಕಳ ಮನೋವಿಕಾಸ ಮತ್ತು ಬೆಳವಣಿಗೆ ಹೇಗೆ ಆಗುತ್ತದೆ? ಎಂಬುದನ್ನು ಶಿಕ್ಷಣ ಇಲಾಖೆ ಗಮನಿಸಿ ನ್ಯಾಯಾಲಯಗಳಿಗೆ ತಿಳಿಸಿಕೊಡಬೇಕು. ಮತ್ತು ದೌರ್ಜನ್ಯಗಳನ್ನು ತಡೆಯಲು ಇತರ ಮಾರ್ಗೋಪಾಯಗಳನ್ನು ಹುಡುಕಿ ಮಕ್ಕಳ ಮೇಲಿನ ಒತ್ತಡ ತಪ್ಪಿಸಲು ಪ್ರಯತ್ನಿಸಬೇಕು.

ಪೋಷಕರ ಜೀಬಿಗೆ ಕತ್ತರಿ : ಅನೇಕ ಖಾಸಗಿ ಶಾಲೆಗಳು ಸಿಸಿಟಿವಿ ಅಳವಡಿಸುವ ಖರ್ಚನ್ನು ಪೋಷಕರೇ ಭರಿಸಬೇಕು ಎಂದು ಹೇಳುತ್ತಿರುವ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಮ್ಮ ಅಭಿಪ್ರಾಯವನ್ನು ಪ್ರಕಟಿಸಬೇಕು. ಇಲಾಖೆಯ ಅಧಿಕಾರಿಗಳು ಶಾಲಾ ಭೇಟಿಯ ಸಮಯದಲ್ಲಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸುವುದನ್ನು ಹೆಚ್ಚಿಸಿದರೆ ಇಂತಹ ಘಟನೆಗಳನ್ನು ತಡೆಯಲು ಸಾಧ್ಯವಾಗಬಹುದು.

ಖಾಸಗಿ ಶಾಲೆಗಳಿಗೆ ಮಾರ್ಗಸೂಚಿ ನೀಡುವ ಶಿಕ್ಷಣ ಇಲಾಖೆ ತಾವು ನಡೆಸುತ್ತಿರುವ ಶಾಲೆಗಳಲ್ಲಿರುವ ವ್ಯವಸ್ಥೆ ಮತ್ತು ಕಲಿಕಾ ಗುಣಮಟ್ಟವನ್ನು ಸುಧಾರಿಸಿಕೊಳ್ಳಲು ಪ್ರಯತ್ನ ಮಾಡಲಿ. ಖಾಸಗಿ ಶಾಲೆಗಳಿಗೆ 5 ಕೊಠಡಿ ಕಡ್ಡಾಯ ಶಿಕ್ಷಕರು ಇಂತಿಷ್ಟು ಇರಬೇಕು ಎಂದು ಹೇಳುವ ಇಲಾಖೆ ತಮ್ಮ ಎಷ್ಟು ಶಾಲೆಗಳಿವೆ, ಸೌಲಭ್ಯಗಳು ಏನಿವೆ? ಎಂಬದುನ್ನು ತಿಳಿದು ಮೊದಲು ಕ್ರಮ ಕೈಗೊಳ್ಳಲಿ.

English summary
Letters to editor : Private schools are set to increase the fees after govt issued safety guidelines for schools. Its burden to parents said Lingadevaru Kottalumane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X