ಓದುಗರು ಕೇಳಿರುವ ಪ್ರಶ್ನೆಗಳಿಗೆ ರಮ್ಯಾ ಉತ್ತರಿಸುವರೆ?

By: ಒನ್ಇಂಡಿಯಾ ಕನ್ನಡ ಓದುಗರು
Subscribe to Oneindia Kannada

ವೈಯಕ್ತಿಕ ಕಾರಣಗಳಿಂದಾಗಿ ಚಿತ್ರನಟಿ, ಮಂಡ್ಯ ಕ್ಷೇತ್ರದ ಮಾಜಿ ಸಂಸದೆ ರಮ್ಯಾ ಅವರು ನಟನೆಯಿಂದ ಮತ್ತು ರಾಜಕೀಯದಿಂದ ತೆರೆಯಮರೆಗೆ ಸರಿಯಲಿದ್ದಾರೆ ಎಂಬ ಗಾಳಿಸುದ್ದಿಯನ್ನು ಸುಳ್ಳು ಮಾಡಿರುವ ರಮ್ಯಾ, ಕಾಂಗ್ರೆಸ್ಸಿನ ಸೋಷಿಯಲ್ ಮೀಡಿಯಾ ಹೆಡ್ ಆಗುತ್ತಿದ್ದಂತೆ ಮತ್ತೆ ಚಿಗುರಿ ನಿಂತಿದ್ದಾರೆ.

ನರೇಂದ್ರ ಮೋದಿ ಸರಕಾರ 3 ವರ್ಷ ಪೂರೈಸಿರುವ ಸಂದರ್ಭದಲ್ಲಿ, ಮಂಗಳವಾರ ಕಾಂಗ್ರೆಸ್ಸಿನ ಯುವ ನೇತಾರರು ನಡೆಸಿದ ಸುದ್ದಿಗೋಷ್ಠಿಯಲ್ಲಿ, ಸಿಕ್ಕ ಕೆಲ ನಿಮಿಷಗಳ ಸಮಯಾವಕಾಶದಲ್ಲಿ, 'ನರೇಂದ್ರ ಮೋದಿಯವರು ಮೂರು ವರ್ಷಗಳಲ್ಲಿ ದೇಶವನ್ನು ಹಳ್ಳ ಹಿಡಿಸಿದ್ದಾರೆ' ನರೇಂದ್ರ ಮೋದಿ ಮತ್ತು ಬಿಜೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.[ಮೂರು ವರ್ಷದಲ್ಲಿ ದೇಶವನ್ನು ಹಳ್ಳ ಹಿಡಿಸಿದ ಮೋದಿ -ಕಾಂಗ್ರೆಸ್]

ನರೇಂದ್ರ ಮೋದಿಯವರು ದಕ್ಷಿಣ ಭಾರತವನ್ನು ಕಡೆಗಣಿಸಿದ್ದಾರೆ, ತಮಿಳುನಾಡಿನಲ್ಲಿ ಭೀಕರ ಬರಗಾಲವಿದ್ದರೂ (ಕರ್ನಾಟಕದಲ್ಲೂ ಅದಕ್ಕಿಂತ ಹೆಚ್ಚಾಗಿದೆ) ಅವರು ಶ್ರೀಲಂಕಾಗೆ ಪ್ರವಾಸ ಹೋಗುತ್ತಾರೆ ಎಂದು ತೆಗಳಿದ್ದ ರಮ್ಯಾ ಅವರಿಗೆ, ಒನ್ಇಂಡಿಯಾ ಓದುಗರು ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ.

ಇನ್ನೇನು 2018ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ, 2019ರಲ್ಲಿ ಲೋಕಸಭಾ ಚುನಾವಣೆ ಸಂಭವಿಸಲಿದೆ. ರಮ್ಯಾ ಅವರು ಯಾವ ಕ್ಷೇತ್ರದಿಂದ ನಿಲ್ಲುತ್ತಾರೋ ಗೊತ್ತಿಲ್ಲ. ಆದರೆ, ಅವರೇ ಪ್ರತಿನಿಧಿಸಿದ್ದ ಮಂಡ್ಯ ಮತ್ತು ಸುತ್ತಲಿನ ಪ್ರದೇಶದ ಕುರಿತು ಕೆಲವೊಂದು ಸಮಸ್ಯೆಗಳ ಬಗ್ಗೆ ಓದುಗರು ಗಂಭೀರವಾದ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ಸಮಂಜಸ ಉತ್ತರಗಳನ್ನು ನೀಡುವರೆ ರಮ್ಯಾ?[ರಮ್ಯಾ ಮೇಡಂ ಈಗ ಸೋಶಿಯಲ್ ಮೀಡಿಯಾ ಹೆಡ್: ಟ್ವಿಟ್ಟಿಗರು ಏನಂತಾರೆ?]

ಮಂಡ್ಯದ ಜನರಿಗೆ ಕುಡಿಯಲು ನೀರಿಲ್ಲ

ಮಂಡ್ಯದ ಜನರಿಗೆ ಕುಡಿಯಲು ನೀರಿಲ್ಲ

ಅಲ್ಲ ತಾಯೇ... ಮೈಸೂರಿನಲ್ಲಿ ಮಹದೇವಪ್ಪನವರ ಮಗನ ಮರಳಿನ ಮಾಫಿಯಾ ಬಗ್ಗೆ ಮಾತಾಡಿ. ಡಾ. ಯತೀಂದ್ರ ಅವರು ಸುಮ್ನೆ ರಾಜಕೀಯ ಸಭೆ ಮಾಡುತ್ತಾ ಇದ್ದಾರೆ. ಗುಂಡ್ಲುಪೇಟೆ ರೋಡ್ ಆಗ್ಲೇ ಕಿತ್ತು ಬಂದಿದೆ. ಮಹದೇಶ್ವರ ಬೆಟ್ಟದಲ್ಲಿ ಜಾನುವಾರುಗಳಿಗೆ ಮೇವು ಇಲ್ಲ. ಮಂಡ್ಯದ ಜನರಿಗೆ ಕುಡಿಯಲು ನೀರಿಗೆ ಕಷ್ಟ ಆಗಿದೆ. ನಿಮ್ಮ ಸಿದ್ದಣ್ಣ ಏನು ನಿದ್ದೆ ಹೊಡಿತಾ ಇದಾರೆ. ನಿಮ್ಮ ಪಕ್ಷದ ಚಿದಂಬರಂ ಮತ್ತೆ ಅವರ ಮಗ ಯುಪಿಎ ಸರಕಾರ ಇದ್ದಾಗ ಲೂಟಿ ಮಾಡಿದ್ದು ಎಲ್ಲ ವಿಷಯ ತೆಗಿಯಮ್ಮ. ಪ್ರತಿಪಕ್ಷ ಅಂದ್ರೆ ಬರೀ ತೆಗಳಬೇಕು ಅಂತ ರೂಲ್ಸ್ ಇಲ್ಲ... ಹೌದು ತಾನೇ? - ಶ್ರೀಕಾಂತ್.[ಸೋಷಿಯಲ್ ಮೀಡಿಯಾ ಕುಸ್ತಿ : ಜಟ್ಟಿ ನರೇಂದ್ರ ಮೋದಿ Vs ಗಟ್ಟಿಗಿತ್ತಿ ರಮ್ಯಾ]

ನೀವು ಬೊಬ್ಬೆ ಹೊಡೆದಷ್ಟು ಬಿಜೆಪಿಗೆ ಲಾಭ

ನೀವು ಬೊಬ್ಬೆ ಹೊಡೆದಷ್ಟು ಬಿಜೆಪಿಗೆ ಲಾಭ

ರಮ್ಯಾ ನೀವು ಮತ್ತು ರಾಹುಲ್ ಗಾಂಧಿ ಬೊಬ್ಬೆ ಹೊಡೆದಷ್ಟು ಬಿ.ಜೆ. ಪಿ ಗೆ ಲಾಭನೇ ಹೊರತು ನಷ್ಟ ಇಲ್ಲ. ನೀವು ಸುಮ್ಮನೆ ಕೂತ್ರೆನೇ ಬಿಜೆಪಿಗೆ ನಷ್ಟ. ಯಾಕಂದ್ರೆ ಮೋದಿ ಬಗ್ಗೆ ಯಾರು ಏನು ಹೇಳೋದು ಬೇಕಾಗಿಲ್ಲ. ಮೋದಿ ಬಗ್ಗೆ ಭಾರತೀಯರಿಗೆ ಚೆನ್ನಾಗಿ ಗೊತ್ತಿದೆ. - ಹರೀಶ್ ನೂಜಿ.[ರಮ್ಯಾಗೆ ದೊಡ್ಡ ಜವಾಬ್ದಾರಿ ನೀಡಿದ ರಾಹುಲ್ ಗಾಂಧಿ!]

ಇದೇ ಏನು ಸಿದ್ದಣ್ಣನ ಸರಕಾರದ ಸಾಧನೆ?

ಇದೇ ಏನು ಸಿದ್ದಣ್ಣನ ಸರಕಾರದ ಸಾಧನೆ?

ಹೇಳೋದು ದಲಿತ ಪರ ಸರ್ಕಾರ. ಆದರೆ ಆ ದಲಿತ ಮಕ್ಕಳ ಹಾಸಿಗೆ ಹಣ ದಿಂಬಿನ ಹಣವನ್ನು ಬಿಡಲಿಲ್ಲಾ. ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ಗೋಪುರದ ಕಳಸ ಮುರಿದು ಬಿದ್ದು ನಾಲ್ಕು ವರ್ಷವಾಗಿದೆ, ಆ ಕಳಸ ಹಾಕಿಸೋಕೆ ಸರ್ಕಾರದ ಬಳಿ ಕಾಸಿಲ್ಲಾ, ಆದರೆ ಸಾವಿರಾರು ಕೋಟಿ ಬೆಲೆಯ ಸ್ಟೀಲ್ ಬ್ರಿಜ್ ಬೇಕಂತೆ! ಇದು ನಿಮ್ಮ ಸರ್ಕಾರದ ಇಬ್ಬಗೆಯ ನೀತಿ. ಮಸೀದಿಯಲ್ಲಿ ನಮಾಜ್ ಮಾಡುವ ಮೌಜಿನ್ ಮತ್ತು ಮೌಲ್ವಿಗಳಿಗೆ ತಿಂಗಳಿಗೆ ಸಿದ್ದಣ್ಣನ ಸರ್ಕಾರ ನೀಡೋದು 3500 - 4500 ರೂಪಾಯಿ ಗೌರವ ಧನ. ಪಾಪ ಗಣೇಶನ ದೇವಸ್ಥಾನದ, ಮಾರಿಗುಡಿ ಗುಡ್ಡಪ್ಪಗಳು ಏನು ಪಾಪ ಮಾಡಿದ್ದಾರೆ? ವರ್ಷಕ್ಕೆ ಎಣ್ಣೆ ಬತ್ತಿ ಹೂವು ಕೊಳ್ಳೋಕೆ ನೀಡೋದು 200 -450 ಪ್ಯಾಕೆಟ್ ಮನಿ. ಇದು ಸಿದ್ದಣ್ಣನ ಸರ್ಕಾರದ ಸಾಧನೆ ರಮ್ಯಾರವರೇ - ಸಿಟಿ ಮಂಜುನಾಥ್.

ರಾಜ್ಯದ ಬರ ನಿರ್ವಹಣೆ ಮಾಡೋದು ಅಂದ್ರೆ...

ರಾಜ್ಯದ ಬರ ನಿರ್ವಹಣೆ ಮಾಡೋದು ಅಂದ್ರೆ...

ಕರ್ನಾಟಕದಲ್ಲಿ ಮರಳು ಮಾಫಿಯಾ ಎಗ್ಗಿಲ್ಲದಂತೆ ಸಾಗುತ್ತಿದೆ. ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಸಕ್ಕರೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಬರ ನಿರ್ವಹಣೆಯಲ್ಲಿ, ಗೋವಿನ ಹೆಸರಿನಲ್ಲಿ ಕಳ್ಳಲೆಕ್ಕ ಬರೆದು ಅಧಿಕಾರಿಗಳು, ಸಿದ್ದರಾಮಯ್ಯನವರ ಮಂತ್ರಿಗಳು ಗೋವಿನ ಮೇವಿನ ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ಆ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿಗೆ ಸೇರಿದ 272 ಎಕರೆ ಭೂಮಿಯನ್ನು ನುಂಗಿರೋದು, ನರೇಂದ್ರ ಮೋದಿಯಲ್ಲ. ರಾಜ್ಯದಲ್ಲಿ ಬರ ನಿರ್ವಹಣೆ ಮಾಡೋದು ಎಂದರೆ ಪಿವಿಆರ್ ನಲ್ಲಿ ಕುಳಿತು ಬಾಹುಬಲಿ ಸಿನಿಮಾ ನೋಡಿದ ಹಾಗಲ್ಲ. ಹಾಪ್ ಕಾಮ್ಸ್ ನಲ್ಲಿ ಹಲಸಿನ ತೊಳೆ ತಿಂದು, ಮಾವಿನ ಹನನ್ನು ಚಪ್ಪರಿಸಿದ ಹಾಗಲ್ಲ. - ಅನಾಮಧೇಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Will former mp of Mandya, Congress social media head Ramya answer few questions asked by Oneindia Kannada readers? They are asking about development work happening in Mandya, pathetic road conditions in surrounding districts.
Please Wait while comments are loading...