Get Updates
Get notified of breaking news, exclusive insights, and must-see stories!

ರಮ್ಯಾ ಮೇಡಂ ಈಗ ಸೋಶಿಯಲ್ ಮೀಡಿಯಾ ಹೆಡ್: ಟ್ವಿಟ್ಟಿಗರು ಏನಂತಾರೆ?

ಕನ್ನಡತಿ, ಮಾಜಿ ಸಂಸದೆ ರಮ್ಯಾ ಅವರನ್ನು ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆಯನ್ನಾಗಿ ನೇಮಿಸಿರುವುದನ್ನು ಆಕೆಯ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ.

ನವದೆಹಲಿ, ಮೇ 10: ಕನ್ನಡತಿ, ಮಾಜಿ ಸಂಸದೆ ರಮ್ಯಾ ಅವರನ್ನು ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆಯನ್ನಾಗಿ ನೇಮಿಸಿರುವುದನ್ನು ಕನ್ನಡಿಗರು ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ. ಹಲವರು ಟೀಕಿಸಿದ್ದಾರೆ ಕೂಡ!

ಹಲವು ಚುನಾವಣೆಗಳ ಸತತ ಸೋಲಿನ ನಂತರ ಎಚ್ಚೆತ್ತುಕೊಂಡ ಕಾಂಗ್ರೆಸ್ 17 ಕ್ಕೂ ಹೆಚ್ಚು ಕಾರ್ಯದರ್ಶಿಗಳನ್ನು ಬದಲಾಯಿಸಿದ್ದು, ಆಮೂಲಾಗ್ರ ಬದಲಾವಣೆಗೆ ಮುಂದಾಗಿದೆ. ರಾಜಸ್ಥಾನ ಮತ್ತು ಗುಜರಾತಿನ ಪ್ರಧಾನ ಕಾರ್ಯದರ್ಶಿಗಳನ್ನೂ ಬದಲಾಯಿಸಲಾಗಿದೆ.[ರಮ್ಯಾಗೆ ದೊಡ್ಡ ಜವಾಬ್ದಾರಿ ನೀಡಿದ ರಾಹುಲ್ ಗಾಂಧಿ!]

ಕಳೆದ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳು ಮಹತ್ವದ ಸ್ಥಾನ ಪಡೆದಿರುವುದನ್ನು ಮನಗಂಡ ಕಾಂಗ್ರೆಸ್, ಈ ಬಾರಿ ತಾನೂ ಸಾಮಾಜಿಕ ಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ನಿಶ್ಚಯಿಸಿದೆ. ಆದ್ದರಿಂದ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚಟುವಟಿಕೆಯಲ್ಲಿರುವ ರಮ್ಯಾ ಅವರನ್ನು ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆಯನ್ನಾಗಿ ನೇಮಿಸುವ ನಿರ್ಧಾರ ಮಾಡಲಾಗಿದೆ.[ಸೋಷಿಯಲ್ ಮೀಡಿಯಾ ಕುಸ್ತಿ : ಜಟ್ಟಿ ಮೋದಿ Vs ಗಟ್ಟಿಗಿತ್ತಿ ರಮ್ಯಾ]

ರೋಹ್ಟಕ್ ನ ಸಂಸದ ದೀಪೇಂದ್ರ ಹೋಡಾ ಅವರು ಹೆಚ್ಚೇನೂ ಉತ್ತಮ ಪ್ರದರ್ಶನ ನೀಡದ ಕಾರಣ ಅವರ ಬದಲಿಗೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರನ್ನು ಈ ಸ್ಥಾನಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆಯ್ಕೆ ಮಾಡಿದ್ದಾರೆ.[ರಮ್ಯಾ ಟ್ವಿಟ್ಟರಲ್ಲಿ ನಡೆಯುತ್ತಿದೆ ಹೊಸ ಕರೆನ್ಸಿ ನೋಟು ಪರೀಕ್ಷೆ!]

ಕಾಂಗ್ರೆಸ್ ನ ಮಹತ್ವದ ಹುದ್ದೆಯೊಂದಕ್ಕೆ ಆಯ್ಕೆಯಾಗಿರುವ ಕನ್ನಡತಿ ರಮ್ಯಾಗೆ ಟ್ವೀಟ್ಟರ್ ನಲ್ಲಿ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ.[ಬೆಂಗಳೂರಿನ ನೀರಿನ ಸಮಸ್ಯೆಗೆ 'ದಿವ್ಯ' ಉಪಾಯ ನೀಡಿದ ರಮ್ಯಾ]

ಅಭಿನಂದನೆಗಳು ರಮ್ಯಾ

ಕಾಂಗ್ರೆಸ್ ನ ಸೋಶಿಯಲ್ ಮೀಡಿಯಾ ಮುಖ್ಯಸ್ಥೆಯಾಗಿ ಅಯ್ಕೆಯಾಗಿರುವ ರಮ್ಯ ಅವರಿಗೆ ಅಭಿನಂದನೆಗಳು ಮತ್ತು ಶುಭಾರೈಕೆಗಳು ಎಂದು ವಿದ್ಯಾ ಸಿಂಗ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ನಲ್ಲಿ ಮಹತ್ವದ ಬದಲಾವಣೆ

ಉತ್ತಮ ಪ್ರದರ್ಶನ ನೀಡದ ಕಾರಣ ದೀಪೇಂದ್ರ ಹೂಡಾ ಅವರನ್ನು ಸೋಶಿಯಲ್ ಮೀಡಿಯಾ ಮುಖ್ಯಸ್ಥ ಹುದ್ದೆಯಿಂದ ಇಳಿಸಿ, ಆ ಹುದ್ದೆಗೆ ಕನ್ನಡತಿ ರಮ್ಯಾ ಅವರನ್ನು ನೇಮಿಸಲಾಗಿದೆ. ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ಹಲವು ರೀತಿಯ ಬದಲಾವಣೆ ಕೈಗೊಳ್ಳುತ್ತಿದ್ದಾರೆ.

ಮಹಿಳಾ ರಾಯಭಾರಿ

ರಮ್ಯಾ ಅವರು ಎಲ್ಲ ಮಹಿಳಾ ಸಮುದಾಯದ ರಾಯಭಾರಿ, ತಮಗೆ ನೀಡಿದ ಜವಾಬ್ದಾರಿಯನ್ನು ಅವರು ನ್ಯಾಯಯುತವಾಗಿ ನಡೆಸುತ್ತಾರೆಂಬ ವಿಶ್ವಾಸವಿದೆ. ಆಕೆ ಕರ್ನಾಟಕದ ಹೆಮ್ಮೆ ಎಂದು ಜಯರಾಮ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಸ್ವಾಗತಾರ್ಹ ನಿರ್ಧಾರ

ರಮ್ಯಾ ಅವರನ್ನು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆಯನ್ನಾಗಿ ನೇಮಿಸಿರುವುದು ಸ್ವಾಗತಾರ್ಹ ನಿರ್ಧಾರ ಎಂದು ಮುನಿಶ್ ಕಾಲಿಯಾ ಎಂಬುವವರು ಟ್ವೀಟ್ ಮಾಡಿದ್ದಾರೆ.

ಪಾಕ್ ಪ್ರೇಮಿಗೆ ಇಂಥ ಪಟ್ಟ!

ಕಾಂಗ್ರೆಸ್ ಇದೀಗ ಕೆಟ್ಟ ಸ್ಥಿತಿಯಿಂದ ಅತ್ಯಂತ ಕೆಟ್ಟ ಸ್ಥಿತಿಯತ್ತ ದಾಪುಗಾಲಿಡುತ್ತಿದೆ! ಪಾಕ್ ಪ್ರೇಮಿ ರಮ್ಯಾ ಅವರಿಗೆ ಸೋಶಿಯಲ್ ಮೀಡಿಯಾ ಇನ್ ಚಾರ್ಜ್ ಸ್ಥಾನ ನೀಡಲಾಗಿದೆ ಎಂದು ಜಸುಮತಿ ಎನ್ನುವವರು ವ್ಯಂಗ್ಯವಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+