ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರ : ಮನನೊಂದ ಮಾಧ್ವನ ಮನದಾಳದ ಮಾತುಗಳು

By ಮನನೊಂದ ಮಾಧ್ವ
|
Google Oneindia Kannada News

ಮಾಧ್ವ ಬಂಧುಗಳೇ,

ನವವೃಂದಾವನಗಡ್ಡೆಯಲ್ಲಿ ನಿನ್ನೆ ಇವತ್ತು (ಡಿಸೆಂಬರ್ 8, 9) ನಡೆದ ಘಟನೆಗಳನ್ನು ನೀವೆಲ್ಲ ಟಿ.ವಿ.ಯಲ್ಲಿ ವಾಟ್ಸಪ್ ಮೊದಲಾದವುಗಳಲ್ಲಿ ನೋಡಿರುತ್ತೀರಿ. ಅಲ್ಲಿ ನಡೆದ ಘಟನೆಗಳ ಬಗ್ಗೆ ಸಾಕಷ್ಟು ಅಪಪ್ರಚಾರ ಮಾಡಿ, ಅದುವೇ ಸತ್ಯ ಎನ್ನುವ ಹಾಗೆ ಬಿಂಬಿಸುವ ಕಲೆ ಕೆಲವರಿಗೆ ಕರಗತವಾಗಿದೆ.

ನಾನು ಎರಡು ದಿನದಿಂದ ನವವೃಂದಾವನ ಗಡ್ಡೆಯಲ್ಲಿಯೇ ಇದ್ದೇನೆ. ಇಲ್ಲಿರುವ ವಸ್ತುಸ್ಥಿತಿ ಪ್ರಾಮಾಣಿಕವಾಗಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ.

ಈ ನವವೃಂದಾವನ ಗಡ್ಡೆ ಉತ್ತರಾದಿಮಠಕ್ಕೆ ಸೇರಿದ್ದು ಎಂದು ಕೆಲವು ತಿಂಗಳು ಹಿಂದೆ ಧಾರವಾಡದ ಕೋರ್ಟನಲ್ಲಿ ತೀರ್ಪು ಹೊರಬಂದಿತ್ತು. ಇದನ್ನು ರಾಯರಮಠದವರೂ ಒಪ್ಪುತ್ತಾರೆ. ಹೀಗಿರುವಾಗ ಉತ್ತರಾದಿಮಠದ ಅಧೀನದಲ್ಲಿ ಇರುವ ಗಡ್ಡೆಗೆ ಸಾವಿರಾರು ಜನರನ್ನು ಯಾವ ಪೂರ್ವ ಅನುಮತಿ ತೆಗೆದುಕೊಳ್ಳದೇ ಕರೆದುಕೊಂಡು ಬರುವುದು ಅನ್ಯಾಯವಲ್ಲವೇ? [ಕೊಪ್ಪಳ : ನವ ಬೃಂದಾವನ ಗಡ್ಡೆ ಪೂಜೆ ವಿವಾದಕ್ಕೆ ತೆರೆ?]

Nava Brindavana controversy : Letter by a Madhwa brahmin

ಮನೆ ನಿಮ್ಮದು, ಅದರಲ್ಲಿ ಇರುವದು ನನ್ನದು ಎಂದು ನಾನು ಹೇಳಿದರೆ ನೀವು ಯಾರಾದರೂ ಒಪ್ಪುತ್ತೀರಾ? ಅಥವಾ ಹಾಗೆ ನಾನು ಹೇಳುವದು ಸುಸಂಸ್ಕೃತ ಸಮಾಜದ ಸಭ್ಯವ್ಯಕ್ತಿಯ ಲಕ್ಷಣವೆಂದು ಒಪ್ಪುತ್ತೀರಾ? ನೀವೇ ಹೇಳಿ.

ಅಲ್ಲಿರುವ ಪೊಲೀಸರಿಗೂ ಪ್ರಲೋಭನೆ ಒಡ್ಡಿ, ಭಯಪಡಿಸಿ, ಇನ್ನೊಬ್ಬರ ಭೂಮಿಯಲ್ಲಿ ಬಂದು ಗದ್ದಲ ಹಾಕುವ ಈ ಜನ ಭಕ್ತಿಯಿಂದ ಬಂದವರೆಂದು ಅಲ್ಲಿದ್ದ ಯಾರಿಗೂ ಅನಿಸಲಿಲ್ಲ. ಉತ್ತರಾದಿಮಠದ ಕಡೆಯಿಂದ ಆರಾಧನೆಗೆ ಪಂಡಿತರು ಸಾಧಕಗ್ರಹಸ್ಥರು ಬಂದಿದ್ದರು. ಆದರೆ ರಾಘವೇಂದ್ರ ಮಠದ ಕಡೆಯಿಂದ ಬಂದ ಎಷ್ಟೋ ಜನರಿಗೆ ಪದ್ಮನಾಭತೀರ್ಥರ ಹೆಸರೂ ಗೊತ್ತಿಲ್ಲ. ಕೇವಲ ಜನಬಲ ತೋರಿಸಿ ಹೆದರಿಸುವ ಕುಕೃತ್ಯಕ್ಕಾಗಿ ಜನರನ್ನು ಕರೆತಂದಂತಿತ್ತು.

ಉತ್ತರಾದಿ ಮಠದವರನ್ನು ಹೊರಹೊಗುವಂತೆ ಮಾಡಿ ಆರಾಧನೆ ಮಾಡಿದ್ದೇವೆಂದು ಮೀಡಿಯಾದವರಿಗೆ ತೋರಿಸಬಹುದು. ಆದರೆ ದೇವರಿಗೆ ಶ್ರೀರಾಘವೇಂದ್ರತೀರ್ಥರಿಗೆ ಏನು ಉತ್ತರ ಕೊಡುತ್ತಾರೆ? ಇವರಲ್ಲಿ ಅನೇಕರು ನರಹರಿತೀರ್ಥರ ವೃಂದಾವನಕ್ಕೆ ಮಾಡಿದ ಅಪಚಾರ ಮಾಧ್ವ ಸಾಧಕ ಭಕ್ತರು ಇನ್ನೂ ಮರೆತಿಲ್ಲ. [ಮಡಿ ಎಂದರೇನು? ಮಡಿಯ ಬಗ್ಗೆ ಶಾಸ್ತ್ರ ಏನು ಹೇಳುತ್ತದೆ?]

Nava Brindavana controversy : Letter by a Madhwa brahmin

ನವವೃಂದಾವನಗಡ್ಡೆಯಲ್ಲಿ ಮಾಡಬೇಕಾದ ಪ್ರತಿ ಅಭಿವೃದ್ಧಿಯ ಕಾರ್ಯಕ್ಕೆ ಹಂಪಿ ಪ್ರಾಧಿಕಾರ ಮೊದಲಾದ ಹೆಸರಿನಿಂದ ಅಡ್ಡಿಮಾಡುವ ಈ ಜನ ನಿಜವಾಗಿಯೂ ಪದ್ಮನಾಭತೀರ್ಥರ ಶಿಷ್ಯರೇ? ನವವೃಂದಾವನವನ್ನು ನವಗ್ರಹವೆಂದು ಹೇಳಿ ಇತಿಹಾಸಕ್ಕೆ ಅಪಚಾರಮಾಡುವ ಈ ಕುತ್ಸಿತ ಜನರ ಅನ್ಯಾಯಕ್ಕೆ ಕೊನೆ ಎಂದು?

ಕೆಲವು ಜನ ಎರಡೂ ಮಠದವರು ಹಂಚಿಕೊಂಡು ಆರಾಧನೆ ಮಾಡಿ ಎಂದು ಬುದ್ಧಿಜೀವಿಗಳೆಂದು ಸಲಹೆ ಕೊಡುತ್ತಾರೆ. ಆ ಸಲಹೆ ಕೊಡುವ ವ್ಯಕ್ತಿಯ ಜೊತೆಗೆ ಅವನ ಆಸ್ತಿ ನನ್ನದು ಎಂದು ಜಗಳ ತೆಗೆಯುತ್ತಾನೆ. ಆಗ ನೀವು ಬಂದು ಇಬ್ಬರಲ್ಲಿ ಜಗಳ ಬೇಡ ಆಸ್ತಿಯನ್ನು ಸಮಾನವಾಗಿ ಹಂಚಿಕೊಳ್ಳಿ ಎಂದು ಹೇಳಿದರೆ ನವವೃಂದಾವನ ವಿಷಯದಲ್ಲಿ ಸಲಹೆ ಕೊಡುವವನು ನಿಮ್ಮ ಸಲಹೆಯನ್ನು ಒಪ್ಪುತ್ತಾನಾ? ತಮ್ಮದನ್ನು ಕಳೆದುಕೊಳ್ಳುವ ದುಃಖ ಪುಕ್ಕಟೆಯಾಗಿ ಸಲಹೆ ಕೊಡುವವನಿಗೆ ಯಾವ ಕಾಲಕ್ಕೂ ಬರುವದಿಲ್ಲ. [ಬ್ರಾಹ್ಮಣರೆಂಬ ರೋಮನ್ ಕ್ಯಾಥೋಲಿಕ್ಕರು!]

ಉತ್ತರಾದಿಮಠದ ಸೊತ್ತಿನಲ್ಲಿ ಬಲಾತ್ಕಾರವಾಗಿ ಬಂದು ಉತ್ತರಾದಿಮಠದವರೇ ಹೊರಗೆ ಹೊಗುವಂತೆ ಮಾಡಿ ಆರಾಧನೆ ಮಾಡಿದೆವು ಎಂದು ಅಹಂಕಾರದಿಂದ ಬೀಗುವ ಈ ಜನರನ್ನು ದೇವರು ಗುರುಗಳು ಯಾವ ಕಾಲದಲ್ಲೂ ಕ್ಷಮಿಸುವದಿಲ್ಲ. ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ ಮತ್ತು ಅವರನ್ನು ಬೆಂಬಲಿಸಿದ ಪೊಲೀಸರೇ ಮೊದಲಾದ ಯಾರನ್ನೂ ನ್ಯಾಯನಿಷ್ಠನಾದ ದೇಶಭಕ್ತ ಕ್ಷಮಿಸುವದಿಲ್ಲ. [ಬ್ರಾಹ್ಮಣರನ್ನು ಕಂಡರೆ ನಗಬೇಕೋ ಅಳಬೇಕೋ!]

ಮನನೊಂದ ಮಾಧ್ವ

English summary
Nava Brindavana controversy : Letter by a Madhwa devotee who has explained what happened during Padmanabha Teertha Swamiji aradhane between Rayara matha and Uttaradi Matha devotees. The court has given verdict in favour of Uttaradi Math, but Rayara matha continues to worship in the premises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X