ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಗವಾನ್ ರೇ ಈ ಜಗತ್ತು ಹುಚ್ಚಾಸ್ಪತ್ರೆ ಆಗುವ ಅಪಾಯದಿಂದ ತಪ್ಪಿಸಿ...

By ಅನಿಲ್
|
Google Oneindia Kannada News

ಕೆ.ಎಸ್.ಭಗವಾನ್ ರಿಗೆ ನಮಸ್ಕಾರ,
ಮೈಸೂರಿನ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊಂದರಲ್ಲಿ ನಿಮ್ಮ ಮಾತುಗಳನ್ನು ಕೇಳಿದೆ. ಈ ಹಿಂದೆಲ್ಲ ಪತ್ರಿಕೆಗಳು, ಟಿವಿಗಳಲ್ಲಿ ನಿಮ್ಮ ಮಾತು ಕೇಳಿದ್ದೆ. ನೀವು ರಾಮಾಯಣ ಹಾಗೂ ಮಹಾಭಾರತದ ಬಗ್ಗೆ ಹೇಳುವಾಗೆಲ್ಲ ಕಾಡುವ ಪ್ರಶ್ನೆ ಏನೆಂದರೆ, ಅದು ಯಾರು ಬರೆದ ಗ್ರಂಥವನ್ನು ಓದಿಕೊಂಡಿದ್ದೀರಿ?

ಶ್ರೀರಾಮನ ನ್ಯೂನತೆಗಳು, ತಪ್ಪುಗಳು ಅಂತೆಲ್ಲ ನೀವು ಹೇಳುತ್ತಾ ಇರುತ್ತೀರಿ. ಆದರೆ ಅದು ಯಾವ ಕವಿ ಅಥವಾ ಇತಿಹಾಸಕಾರ ಬರೆದಿದ್ದು ಅಂತ ಮಾತ್ರ ಹೇಳಲ್ಲ. ಇವತ್ತು ಬೆಳಗ್ಗೆ ಮೈಸೂರಿನಿಂದ ಬಸ್ಸಿನಲ್ಲಿ ಬರುವಾಗ ಪಕ್ಕದಲ್ಲಿ ಕೂತಿರುವವರೊಬ್ಬರು, ಇವರ ಹೆಸರು ಭಗವಾನ್ ಅಲ್ಲವಾ? ದೇವರ ಹೆಸರನ್ನು ಇವರು ಯಾಕೆ ಬದಲಿಸಿಕೊಂಡಿಲ್ಲ ಅಂತ ಕೇಳುತ್ತಿದ್ದರು.

ದೇವಸ್ಥಾನಗಳಿಗೆ ಹೋಗಬೇಡಿ. ಹೋದ್ರೆ ದಡ್ಡರಾಗುತ್ತೀರಿ ಎಂದ ಭಗವಾನ್ದೇವಸ್ಥಾನಗಳಿಗೆ ಹೋಗಬೇಡಿ. ಹೋದ್ರೆ ದಡ್ಡರಾಗುತ್ತೀರಿ ಎಂದ ಭಗವಾನ್

ತಮ್ಮ ಹೆಸರನ್ನೇ ಬದಲಾಯಿಸಿಕೊಳ್ಳಲಾಗದ ಇವರು, ಜನರೇ ಬದಲಾಗಿ ಅಂತಾರಲ್ಲಾ ಅಂತ ಜೋರಾಗಿ ನಕ್ಕರು. ಬಿಡಿ, ನಿಮ್ಮನ್ನು ಕಂಡರೆ ಆಗದವರು ಅಂದುಕೊಂಡು ಸುಮ್ಮನಾದರೆ ಆಯಿತು. ಆದರೆ ಆಸ್ತಿಕ ಅಂದರೆ ಆಸ್ತಿ ಇರುವವನು, ನಾಸ್ತಿಕ ಅಂದರೆ ಆಸ್ತಿ ಇಲ್ಲದವನು ಅಂತ ಅರ್ಥ ಹೇಳಿದರಲ್ಲಾ, ಸ್ವಾಮಿ ದಯಮಾಡಿ ಆ ನಿಘಂಟು ಯಾವ ಪಬ್ಲಿಕೇಷನ್ ನಿಂದ ಆಗಿದ್ದು ಅಂತ ತಿಳಿಸಿಬಿಡಿ, ಪ್ಲೀಸ್...ಪ್ಲೀಸ್.

ರಾಧಾಕೃಷ್ಣನ್ ನೇಮಕಾತಿ ಪತ್ರ ಪಡೆದಿದ್ದೇ ಗುರುವಾಯೂರಿನಲ್ಲಿ

ರಾಧಾಕೃಷ್ಣನ್ ನೇಮಕಾತಿ ಪತ್ರ ಪಡೆದಿದ್ದೇ ಗುರುವಾಯೂರಿನಲ್ಲಿ

ದೇವಸ್ಥಾನ, ಚರ್ಚು, ಮಸೀದಿಗಳಿಗೆ ಹೋಗುವವರು ಹುಚ್ಚರಾಗುತ್ತಾರೆ ಅಂತ ಹೇಳಿದರಲ್ಲಾ, ಆಗ ಸಾಲುಸಾಲಾಗಿ ಏನೆಲ್ಲ ನೆನಪಾದವು ಗೊತ್ತಾ?

ರಾಧಾಕೃಷ್ಣನ್ ಅಂತ ಇಸ್ರೋದ ಅಧ್ಯಕ್ಷರಾಗಿದ್ದವರು. ಅವರ ನೇಮಕಾತಿ ಪತ್ರವನ್ನು ಗುರುವಾಯೂರಿನ ಕೃಷ್ಣ ದೇವಸ್ಥಾನದ ಫ್ಯಾಕ್ಸ್ ನಂಬರಿಗೆ ಕಳಿಸುವಂತೆ ಹೇಳಿ, ಅಲ್ಲಿ ಪಡೆದುಕೊಂಡರು. ಇನ್ನು ದೇವೇಗೌಡರು, ಯಡಿಯೂರಪ್ಪ, ನರೇಂದ್ರ ಮೋದಿ, ಮೊನ್ನೆ ಮೊನ್ನೆ ರಾಷ್ಟ್ರಪತಿ ಸ್ಥಾನದಿಂದ ನಿರ್ಗಮಿಸಿದ ಪ್ರಣವ್ ಮುಖರ್ಜಿ, ಚರ್ಚ್ ನಲ್ಲೇ ಇರುವ ಪೋಪ್...

ಹೌಸ್ ಫುಲ್ ಬೋರ್ಡ್ ತಗುಲಿಸಿಕೊಂಡ ದೇಗುಲಗಳು

ಹೌಸ್ ಫುಲ್ ಬೋರ್ಡ್ ತಗುಲಿಸಿಕೊಂಡ ದೇಗುಲಗಳು

ಸದಾ ಹೌಸ್ ಫುಲ್ ಬೋರ್ಡ್ ತಗುಲಿಸಿಕೊಂಡಿರುವ ತಿರುಪತಿ, ಧರ್ಮಸ್ಥಳ, ಕುಕ್ಕೆ, ತಮಿಳುನಾಡು, ಕೇರಳದ ದೇವಸ್ಥಾನಗಳಿಗೆ ತೆರಳುವ ಹಿಂದೂಗಳು, ಮೆಕ್ಕಾಗೆ ಹಜ್ ಯಾತ್ರೆಗೆ ತೆರಳುವ ಜಗತ್ತಿನ ಲಕ್ಷ ಲಕ್ಷ ಮುಸ್ಲಿಮರು ಇವರ ಬಗ್ಗೆ ನೀವೇನಾದರೂ ಹೇಳಲೇಬೇಕು.

ನೀವು ಓದಿದ ರಾಮಾಯಣ, ನಿಘಂಟು ಯಾವುದು?

ನೀವು ಓದಿದ ರಾಮಾಯಣ, ನಿಘಂಟು ಯಾವುದು?

ಪಠ್ಯಪುಸ್ತಕಗಳೆಲ್ಲ ತಪ್ಪು-ತಪ್ಪಾಗಿ ಇವೆ. ಇದು ಕೇಂದ್ರ ಸರಕಾರದವರ ಹುನ್ನಾರ ಎಂದಿದ್ದೀರಿ. ಈ ಬಿಜೆಪಿಯವರು ಅಧಿಕಾರಕ್ಕೆ ಬಂದು ಮೂರು ವರ್ಷ ಆಯಿತು. ಅದಕ್ಕೆ ಮುಂಚೆ ನೀವು ಓದಿಕೊಂಡಿರುವ ರಾಮ ಕಥೆಗಳು, ನಿಘಂಟು ಇವೆಲ್ಲ ಯಾರ ಕೈಗೂ ಸಿಗ್ತಿಲ್ಲ. ನೀವು ಸಂಶೋಧನೆ ಮಾಡಿ, ಕಂಡುಹಿಡಿದ ಸಂಗತಿಗಳ ಬಗ್ಗೆ ಗುಟ್ಟು ಕೂಡ ನೀವು ಬಿಟ್ಟು ಕೊಡ್ತಿಲ್ಲ.

ಈ ಜಗತ್ತು ಹುಚ್ಚಾಸ್ಪತ್ರೆ ಆಗುವುದರಿಂದ ತಪ್ಪಿಸಿ

ಈ ಜಗತ್ತು ಹುಚ್ಚಾಸ್ಪತ್ರೆ ಆಗುವುದರಿಂದ ತಪ್ಪಿಸಿ

ಸಾಹಿತ್ಯ ಸಮ್ಮೇಳನದ ಮುಕ್ತಾಯ ಸಮಾರಂಭದ ನೆಪದಲ್ಲಿ ಈಗಲಾದರೂ ನಿಮ್ಮ ಜ್ಞಾನ ಭಂಡಾರದ ಮೂಲವನ್ನು ಪಾಮರ ಜಗತ್ತಿಗೆ ಗೊತ್ತು ಮಾಡಿಸಿ. ನಿಮ್ಮ ಮಾನಸಿಕ ಸ್ಥೈರ್ಯ, ನಂಬಿಕೆ ಇಷ್ಟು ಗಟ್ಟಿಯಾಗುವಂತೆ ಮಾಡಿದ ನೀವು ತೆಗೆದುಕೊಳ್ಳುವ ಫುಡ್, ಮಲಗುವ ಬೆಡ್ಡು, ಅನುಸರಿಸುವ ಜೀವನ ವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ. ಈ ಜಗತ್ತು ಹುಚ್ಚಾಸ್ಪತ್ರೆ ಆಗುವ ಅಪಾಯದಿಂದ ತಪ್ಪಿಸಿ.

ಇವತ್ತು ಬೆಳಗ್ಗೆಯಿಂದ ದೇವಸ್ಥಾನಕ್ಕೆ ಹೋಗುವುದಕ್ಕೆ ಹೆದರುತ್ತಿರುವ
ನಿಮ್ಮ ಅಭಿಮಾನಿ

English summary
Progressive thinker KS Bhagawan statement in Mysuru Kannada sahitya sammelana became controversial. Here is the response by a Oneindia reader to Bhagawan statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X