ಜಗ್ಗೇಶ್ ಅವರೆ, ಆಕೆಯೊಬ್ಬಳನ್ನೇ ಗುರಿಯಾಗಿಸುವುದು ಕುತರ್ಕ!

By: ವಿಶ್ವಮಾನವ
Subscribe to Oneindia Kannada

ಪ್ರಿಯ ಜಗ್ಗೇಶ್ ಅವರೆ! ಯಾರ ಮೇಲೇ ಆಗಲಿ ಯಾರಿಗೂ ಅತಿ ಪ್ರೀತಿ, ಪ್ರೇಮ, ಮಮತೆ ಕೂಡದು. ಯಾವುದು ಅತಿಯಾದರೂ ಅನಾನುಕೂಲ ಕಟ್ಟಿಟ್ಟ ಬುತ್ತಿ.

ಆಕೆ ಯಾರೆನ್ನುವ ವಿಷಯ ನೀವು ಹೇಳದಿದ್ದರೂ ಜನಕ್ಕೆ ಅರ್ಥವಾಗಿದೆ. ಆದರೆ ತರ್ಕಬದ್ಧವಾಗಿ ಯೋಚಿಸುವುದಾದರೆ ಆಕೆಯೊಬ್ಬಳನ್ನೇ ಗುರಿಯಾಗಿಸಿ ಮಾತಾಡುವುದು ಕುತರ್ಕವಾಗುತ್ತದೆ. ಆಕೆಯ ಮಾತಿಗೆ ಹಿತ್ತಾಳೆ ಕಿವಿ ಕೊಟ್ಟವರು ಆಕೆಗಿಂತ ಅವಿವೇಕಿಗಳೂ, ಮುಠ್ಠಾಳರೂ ಆಗಿದ್ದಾರಲ್ಲವೆ?

ಈ ಲೋಕದಲ್ಲಿ ವಿದ್ಯಾವಂತ ಅವಿವೇಕಿಗಳು, ಅವಿದ್ಯಾವಂತ ಮುಠಾಳರೇ ತುಂಬಿ ತುಳುಕುತ್ತಿರುವಾಗ ನೀವು ಯಾರನ್ನು ತಾನೇ ಸರಿಮಾಡಲಾದೀತು? [ಅಂಬರೀಶ್ ಅವನತಿಗೆ ಕಾರಣವಾದ ಹೆಂಗಸಿನ ಬಗ್ಗೆ ಜಗ್ಗೇಶ್ ಟ್ವೀಟ್]

Jaggesh, what is the logic behind targetting only that lady

ಸ್ವಾಮಿ ಹೆಂಗಸರು ಗಂಡಸರು ಇಬ್ಬರಲ್ಲೂ ಕಾಮನ್ ಸೆನ್ಸ್ ಒಂದನ್ನು ಬಿಟ್ಟು ಮಿಕ್ಕೆಲ್ಲಾ ಜ್ಞಾನಗಳೂ ಧಾರಾಳವಾಗಿರುತ್ತವೆ. ಸಾಮಾನ್ಯ ಜ್ಞಾನವಿಲ್ಲದ ಮೇಲೆ ಬೇರೆ ಯಾವುದೇ ಜ್ಞಾನವೂ ಕೆಲಸಕ್ಕೆ ಬರುವುದಿಲ್ಲವೆನ್ನುವುದು ಅಂತಹವರಿಗೆ ತಿಳಿದಿರುವುದಿಲ್ಲ.

ಗರುಡಪುರಾಣದಲ್ಲಿನ ಒಂದು ಉಕ್ತಿಯನ್ನು ನಾನು ಇಲ್ಲಿ ಉಲ್ಲೇಖಿಸಲೇಬೇಕಾಗಿದೆ. ಅದು ಹೀಗೆ ಹೇಳುತ್ತದೆ: "ಈ ಲೋಕದಲ್ಲಿ ಯಾರು ಯಾರಿಗೂ ನಿಕಟ ಸಂಬಂಧವಿರುವುದು ಸಾಧ್ಯವೇಯಿಲ್ಲ. ಈ ನಮ್ಮ ದೇಹವೇ ಅನಿತ್ಯವೆಂದ ಮೇಲೆ ಅನ್ಯರೊಡನೆ ನಿಕಟ ಸಂಬಂಧವೆಂತಹುದು?". [ಶಾಸಕ ಸ್ಥಾನಕ್ಕೆ ಅಂಬರೀಶ್ ರಾಜೀನಾಮೆ]

ಸ್ವಾರ್ಥವೇ ಮುಖ್ಯವಾದಾಗ ಅದರ ಮುಂದೆ ಈ ಲೋಕದಲ್ಲಿ ಯಾರಿಗೆ ಯಾರೂ ಬೇಕಾಗುವುದಿಲ್ಲ. ಅವರ ಕಣ್ಣಿಗೆ ಲೋಕವೆಲ್ಲಾ ಹಳದಿ ಬಣ್ಣವಾಗಿ ಕಾಣಿಸುತ್ತಿರುತ್ತದೆ. ಅವರವರ ಸ್ವಾರ್ಥ ಅದು ಬೇರೆಯವರಿಗೆ ಎಷ್ಟೇ ನೋವು ಕೊಟ್ಟರೂ, ತಾತ್ಕಾಲಿಕವಾಗಿ ಇಂತಹ ವಿಘ್ನಸಂತೋಷಿಗಳಿಗೆ ಬಹಳ ಸಂತೋ಼ಷ ನೀಡುತ್ತಿರುತ್ತದೆ. ಇಂತಹವರನ್ನು 'ವಿಕೃತಮನಸ್ಕರು' [sadists] ಎಂದು ಕರೆಯುತ್ತಾರೆ.

ಆದರೆ ಒಂದು ದಿನ ಅದು ಅವರಿಗೇ ವಕ್ಕರಿಸಿದಾಗ ಅವರಿಗೆ ಆಗುವ ಆಘಾತದಿಂದ ಹೊರಗೆ ಬರಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹಾಗೆಯೇ ಯಾವ ಪಕ್ಷವಾಗಲೀ, ಯಾವ ಹುದ್ದೆಯಾಗಲೀ ಶಾಶ್ವತವಲ್ಲವೆನ್ನುವುದನ್ನು ಎಲ್ಲರೂ ಅರಿಯಬೇಕು. ಅವಕಾಶ ಸಿಕ್ಕಿದಾಗ ಅದನ್ನು ಸದುಪಯೋಗಪಡಿಸಿಕೊಳ್ಳಬೇಕಷ್ಟೆ. [ಎಸ್.ಟಿ.ಸೋಮಶೇಖರ್ ಗೆ ಸಿನಿಮಾ ಸ್ಪೈಲಲ್ಲಿ ಪಂಚ್ ಕೊಟ್ಟ ಜಗ್ಗೇಶ್!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Letter to the editor. Jaggesh, what is the logic behind targetting only that lady? All is fair in love and war. Karnataka politics is not different from it. It is not at all good to be attached with anything or deeply love anyone. Fantastic letter by Vishwamanava.
Please Wait while comments are loading...