ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರ : ಗಟ್ಟಿಮುಟ್ಟಾದ ತರ್ಕವಿಲ್ಲದ ಬಾಲಿಶ ವಿಚಾರಧಾರೆ

By ಸ್ನೇಹಾ, ಬೆಂಗಳೂರು
|
Google Oneindia Kannada News

ಸ್ವರ್ಣ ಕುಮಾರ್, ನೀವು 'ಗೋಹತ್ಯೆ ವಿರೋಧಿಸುವವರಿಗೆ ಕೆಲ ಪ್ರಶ್ನೆಗಳು' ಎಂಬ ಲೇಖನದಲ್ಲಿ 'ಏಕೆ ನಿಷೇಧಿಸಬೇಕು?' ಎಂಬ ಮಂಡನೆಯಲ್ಲಿ ಚರ್ಚೆಗಳಿಗೆ ನಾಂದಿ ಹಾಡಬಹುದಾದ ಲೇಖನ ಬರೆಯಲು ಪ್ರಯತ್ನಿಸಿರುವಿರಿ. ತುಂಬಾ ಶ್ಲಾಘನೀಯ.

ಆದರೆ ನೀವು ಯಾವುದೆ ವಿಚಾರವನ್ನಾದರೂ ಸರಿ ಅದನ್ನು ಸಮರ್ಥಿಸಿಕೊಳ್ಳುವಾಗ ಅತ್ಯಂತ ಬಲಶಾಲಿಯಾದ, ಗಟ್ಟಿ ಮುಟ್ಟಾದ ತರ್ಕ, ಯೋಚನೆ, ಸಾಧ್ಯವಾದರೆ ವಾಸ್ತವ ಅಂಶಗಳನ್ನು ಅದಕ್ಕೆ ಪೂರಕವಾಗಿರುವಂತೆ ಮಂಡಿಸಬೇಕು. ಇಲ್ಲಿ ನೀವು ಹೇಳಿರುವ ಕೆಲವು ವಿಚಾರಗಳು ಬಾಲಿಶ ಎನಿಸುತ್ತವೆ. ಕೆಲವರಿಗೆ ನಗೂ ಬಂದರೂ ಅಚ್ಚರಿ ಪಡಬೇಕಾಗಿಲ್ಲ.

ನಾನೆಲ್ಲೊ ಓದಿದ ನೆನಪು : ಅಂದುಕೊಳ್ಳಿ, ಸಮಾಜದಲ್ಲಿ ಕೆಲವರಿಗೆ ಮನುಷ್ಯನ ಮಾಂಸ ತಿನ್ನುವ ಚಟ ಬಂತೆಂದರೆ... ಅವರ ಸುತ್ತಮುತ್ತಲಿನ ಜನರು ಅದಕ್ಕೆ ಒಪ್ಪುತ್ತಾರೆಯಾ? ಇಲ್ಲಪ್ಪಾ ಅದು ಅವರವರ ಆಹಾರ ಕ್ರಮ ತಿನ್ನುಕೊಳ್ಳಲಿ ಬಿಡಿ ಅಂತ ಬಿಟ್ಟು ಬಿಡುತ್ತಾರೆಯೆ.. ಸಾಧ್ಯವೆ ಇಲ್ಲ ಬಿಡಿ. ಇನ್ನೂ ಕೆಲವರು ಹೇಳುತ್ತಾರೆ ಗೋಮಾಂಸ ಭಕ್ಷಣೆಯ ಕುರಿತು ಪುರಾಣಗಳಲ್ಲೆ ಉಲ್ಲೇಖವಿದೆ ಅಂತ. [ಸತ್ತ ಕರುವಿಗೆ ನ್ಯಾಯ ಕೇಳುತ್ತಿರುವ 'ಪುಣ್ಯಕೋಟಿ'ಯ ಕಥೆ]

Cow slaughter debate : We have to live for the society

ಸರಿ ಇರಲಿ, ಆದರೆ ಆಗಿನ ವಸ್ತು ಸ್ಥಿತಿ, ಸಂದರ್ಭ ಹೇಗಿತ್ತೆಂದು ಬಲ್ಲವರಾರು? ಅಲ್ಲದೆ ಆ ಸಂದರ್ಭದಲ್ಲಿ ಜನರು ಯಾವ ರೀತಿ ವಾಸಿಸುತ್ತಿದ್ದರೊ ಅದೆ ರೀತಿ ನಾವು ಇಂದಿಗೂ ವಾಸಿಸುತ್ತಿದ್ದೇವೆಯಾ? ಋಷಿ ಮುನಿಗಳೆ ತಿನ್ನುತ್ತಿದ್ದರು ಎಂದು ಕೆಲವರು ಹೇಳುತ್ತಾರೆ. ಆ ರೀತಿಯಲ್ಲೆ ಇಂದು ನಾವು ಕಾಡು ಮೇಡುಗಳಲ್ಲಿ ಕುಟಿರ, ಗುರುಕುಲಗಳನ್ನು ಕಟ್ಟಿ, ತಪಸ್ಸು ಮಾಡುತ್ತ ಜೀವನ ಸಾಗಿಸುತ್ತಿದ್ದೇವೆಯಾ? ನಾ ಹೇಳುತ್ತಿರುವ ತಾತ್ಪರ್ಯ ಇಷ್ಟೆ, ಮನುಷ್ಯನ ವಂಶ ಬೆಳೆದಂತೆ ಹೆಚ್ಚೆಚ್ಚು ಮಾನಸಿಕ ವಿಕಸನ ವೃದ್ಧಿಗೊಳ್ಳತೊಡಗುತ್ತದೆ.

ನೀವೆ ನೋಡಿ ಹಿಂದೆ ನಾವು ಹದಿನೈದು ವರ್ಷದವರಿದ್ದಾಗ ನಮಗಿದ್ದ ಬುದ್ಧಿಮತ್ತೆಯನ್ನು ಇಂದು ಹತ್ತು ವಯಸ್ಸಿನ ಮಕ್ಕಳಲ್ಲೆ ಬಹುತೇಕವಾಗಿ ಕಾಣಬಹುದು. ಈ ಅಭಿವೃದ್ಧಿ ಪ್ರಶಂಸಾರ್ಹವಾದರೂ ಇದರಿಂದ ಅವಶ್ಯವಿರಲಾರದ ನೂರೆಂಟು ವಿಚಾರಗಳು ಹೆಚ್ಚೆಚ್ಚು ಹೊರಬಂದು ಸಮಾಜದ ಸ್ವಾಸ್ಥ್ಯವನ್ನು ಕೆಡಸಬಹುದು. ನಾವು ಎಷ್ಟೇ ಬುದ್ಧಿವಂತರಾದರೂ, ವಿಚಾರಶೀಲರಾದರೂ ಕೆಲವೊಮ್ಮೆ ಸಮಾಜದ ಹಿತದೃಷ್ಟಿಯಿಂದ ಮತ್ತು ಎಷ್ಟೋ ಜನರ ನಂಬಿಕೆಗೆ ಧಕ್ಕೆ ತರದಿರುವ ದೃಷ್ಟಿಯಿಂದ ಸುಮ್ಮನಿರಬೇಕಾಗುತ್ತದೆ. [ಶಿವನಹಳ್ಳಿ ಗ್ರಾಮಸ್ಥರಿಗೆ ಹಸು ಖರೀದಿಸಲು ಚೆಕ್ ವಿತರಣೆ]

ಇನ್ನೂ ಹಸುವಿನ ಕಡೆಗೆ ಬಂದರೆ, ಹಿಂದೂ ಧರ್ಮದಲ್ಲಿ ಅದನ್ನು ಕಾಮಧೇನು ಅಂತ ಕರೆಯಲಾಗಿದೆ. ಮನುಷ್ಯರಿರುವ ಕುಟುಂಬದಲ್ಲಿ ಅದಕ್ಕೂ ಕುಟುಂಬದ ಒಬ್ಬ ಸದಸ್ಯನಂತೆಯೆ ಮಾನ್ಯತೆ ನೀಡಲಾಗಿದೆ. ನಿಮಗೆ ಗೊತ್ತಿದೆಯೋ ಇಲ್ಲವೊ ಗೊತ್ತಿಲ್ಲ... ಮನೆಯ ಯಜಮಾನನು ಯಾವುದೇ ದುಃಖಕ್ಕೆ ತುತ್ತಾದಾಗ ಅವನ ಮನೆಯಲ್ಲಿನ ಹಸುವೂ ಸಹ ಕಣ್ಣಿರಿಡುತ್ತದೆಯಂತೆ. ಅದೆಷ್ಟೋ ಮಕ್ಕಳು ತಾಯಿಯನ್ನು ಕಳೆದುಕೊಂಡು ಹಸುವಿನ ಹಾಲಿನಲ್ಲೆ ಬೆಳೆದಿದ್ದಾರೆ. ಅದರ ಸೆಗಣಿಯೂ ಸಹ ಅದೆಷ್ಟೊ ಮನೆಗಳಲ್ಲಿ ಒಲೆಯುರಿಸಿ ಮನೆಯವರೆಲ್ಲರೂ ಎರಡು ಹೊತ್ತಿನ ಊಟ ಮಾಡುವಂತೆ ಮಾಡಿದೆ.

ಅದರಿಂದಾಗುವ ಯಾವುದಾದರೂ ಒಂದು, ಮನುಷ್ಯನ ಜೀವಕ್ಕೆ ಕುತ್ತು ತರುವ ಗುಣಲಕ್ಷಣವಿದೆಯಾ ಹೇಳಿ? ಇದೆಲ್ಲ ಬಿಟ್ಟು ನೀವು ಅದನ್ನ ಕ್ರಿಮಿಕೀಟಕ್ಕೆ ಹೋಲಿಸಿದ್ದು... ತುಂಬ ಕಳವಳಕಾರಿ ವಿಷಯ. ಕ್ರಿಮಿಕೀಟಗಳ ಉಪಯೋಗವಂತೂ ಆಚೆಗಿರಲಿ ಅವು ಬೆಳೆಗಳ ಮೂಲಕ ಮನುಷ್ಯನಿಗೆ ನೂರೆಂಟು ರೋಗಗಳನ್ನೇ ತಂದು ಮನುಷ್ಯನ ಜೀವಕ್ಕೆ ಅಪಾಯಕಾರಿಯಾಗಿವೆ.

ಹಿಂದೂ ಧರ್ಮದಲ್ಲಿ ಗೋವಿಗೆ ಪವಿತ್ರವಾದ ಸ್ಥಾನ ಕೊಟ್ಟು ಅಸಂಖ್ಯಾತ ಹಿಂದೂಗಳು ಪೂಜಿಸುತ್ತಿರಬೇಕಾದರೆ ಅದರ ಸಂಹಾರ ಮಾಡಿ ತಿನ್ನುತ್ತೇವೆ ಅಂದಾಗ ಆ ಜನರಿಗೆ ಎಷ್ಟು ನೋವಾಗಿರಲಿಕ್ಕಿಲ್ಲ. ನಮಗೆ ಬುದ್ಧಿಯಿದೆ ಸ್ವಾತಂತ್ರ್ಯವಿದೆ ಎಂದು ಏನಾಬೇಕಾದರೂ ಮಾಡಲಾದಿತೆ? ಬಹುಸಂಖ್ಯೆಯ ಜನರ ವಿಶ್ವಾಸಕ್ಕೆ, ಗೌರವಕ್ಕೆ ಧಕ್ಕೆ ತರದೆ ಬದುಕುವುದೂ ಸಹ ಮನುಷ್ಯನ ನೆಚ್ಚಿನ ಗುಣಧರ್ಮ.

ಇದರಿಂದ ಗೋಹತ್ಯೆ ನಿಲ್ಲುತ್ತದೆ ಎನ್ನುವುದು ಸುಳ್ಳು... ಎಲ್ಲಿಯವರೆಗೂ ತಿನ್ನುವ ಚಪಲ ಇರುತ್ತದೆಯೋ ಅಲ್ಲಿಯವರೆಗೂ ಇದು ಮುಂದುವರೆಯುತ್ತಲೆ ಇರುತ್ತದೆ. ಇನ್ನೂ ನೀವೆ ಯೋಚಿಸಿ ಮಾನವನಿಂದ ಸದ್ಗುಣಗಳ ಹೊತ್ತ ಮನುಷ್ಯನಂತೆ ಬದುಕುವುದು ಸರಿಯೊ ಅಥವಾ ನನ್ನಿಚ್ಛೆ ಹೆಂಗಾದರೂ ಬದುಕುತ್ತೇನೆ ಎಂದು ಪರರಿಗೆ ನೋವನ್ನುಣಿಸುತ್ತ, ಸಮಾಜದ ಸ್ವಾಸ್ಥ್ಯ ಕೆಡಿಸುತ್ತಾ ಬದುಕುವುದು ಸೂಕ್ತವೋ?

English summary
Being part of society, should we live for the society or causing harm to it by living however we like? Debate on cow slaughter and on eating cow meet continues on Oneindia Kannada. Sneha terms letter by Swarna Kumar as illogical and without stuff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X