ಪ್ರತಿಕ್ರಿಯೆ: ಸಂಬಳ ಏರಿಕೆ ಇಲ್ಲ, ದರ ಏರಿಕೆ ಸಹಿಸೋದು ಹೇಗೆ?

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬಿಎಂಟಿಸಿ ಪ್ರಯಾಣ ದರವನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಸಾರಿಗೆ ಸಂಸ್ಥೆ ಗಳಿಸುವ ಆದಾಯದಲ್ಲಿ ಶೇ.90ರಷ್ಟು ಆದಾಯ ನೌಕರರ ಸಂಬಳ, ಪೆಟ್ರೋಲ್, ಡಿಸೇಲ್ ಗೆ ಖರ್ಚಾಗುತ್ತದೆ. ಈಗ ಕೆಎಸ್ ಆರ್ ಟಿಸಿ 32 ಕೋಟಿ ರೂ. ಕೊರತೆಯಲ್ಲಿದೆ. ಬಿಎಂಟಿಸಿ ಕಳೆದ 6 ತಿಂಗಳಿನಿಂದ 147 ಕೋಟಿ ರೂ. ನಷ್ಟದಲ್ಲಿದೆ.

ವಿಧಾನಸಭೆ ವಿಪಕ್ಷ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಬೆಲೆ ಏರಿಕೆ ವಿರುದ್ಧ ಕಿಡಿ ಕಾರಿದ್ದಾರೆ. ಕಚೇರಿಗೆ ಬಂದು ಒಂದು ತಿಂಗಳಾಗಿಲ್ಲ. ಆಗಲೇ ಬೆಲೆ ಏರಿಕೆ ಮಾಡಿದರೆ, ಕಾಂಗ್ರೆಸ್ ಸರ್ಕಾರ ಜನ ಸಾಮಾನ್ಯರ ಮೇಲೆ ಎಂಥಾ ಹೊರೆ ಹಾಕಲಿದೆ ಎಂಬುದು ತಿಳಿಯಲಿದೆ ಎಂದಿದ್ದಾರೆ.

ತಿಂಗಳ ಬಜೆಟ್ ಖೋತಾ: ಜನ ಸಾಮಾನ್ಯರು ಪ್ರತಿ ತಿಂಗಳು ಹಾಕಿಕೊಳ್ಳುವ ಮನೆ ಬಜೆಟ್ ಈ ಬಾರಿ ಹೆಚ್ಚುಕಮ್ಮಿಯಾಗಿದೆ. ಇಂಧನ ದರ ಏರಿಕೆ, ಸಾರಿಗೆ ಬೆಲೆ ಏರಿಕೆಯಿಂದ ಜೇಬಿಗೆ ಕತ್ತರಿ ಬಿದ್ದಿದೆ. ಜನ ಸಾಮಾನ್ಯರು ಧೈರ್ಯವಾಗಿ ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ ಹಾಕುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಸಂಪುಟದ ಸಚಿವರು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ತೋರಿಸಲು ಆಗದೆ ಏನೇನೋ ಸಬೂಬು ನೀಡುತ್ತಿದ್ದಾರೆ.

ಓದುಗರ ಪತ್ರಿಕ್ರಿಯೆ ಹೇಗಿದೆ ಚಿತ್ರ ಸರಣಿಯಲ್ಲಿ ನೋಡಿ...

ಆಟೋರಿಕ್ಷಾಗಳನ್ನು ಹತ್ತುವಂತಿಲ್ಲ

ಆಟೋರಿಕ್ಷಾಗಳನ್ನು ಹತ್ತುವಂತಿಲ್ಲ

ನಾಗೇಶ್ ಕೆ.ವಿ: ಎಸಿ ರಹಿತ ಬಸ್ ಗಳು ಖರ್ಚು ಕಡಿಮೆಯಾಗಿರುವುದರಿಂದ ಹೆಚ್ಚಿನ ಜನ ಅದನ್ನು ಬಳಸುತ್ತಿದ್ದರು ಈಗ ಬೆಲೆ ಏರಿಕೆಯಾಗಿರುವುದರಿಂದ ಪ್ರಯಾಣಿಕರ ಕಾಲು ಕತ್ತರಿಸಿದ ಹಾಗೆ ಆಗಿದೆ.

ಆಟೋರಿಕ್ಷಾಗಳನ್ನು ಹತ್ತುವಂತಿಲ್ಲ, ಸಾರ್ವಜನಿಕ ವಾಹನಗಳಲ್ಲಿ ಹೆಚ್ಚು ಹಣ ತೆತ್ತು ಓಡಾಡಲು ಶುರು ಮಾಡಲು ಹೇಗೆ ಸಾಧ್ಯ ನಮಗೆ ಬರುವ ಸಂಬಳದಲ್ಲಿ ಓಡಾಟವೇ ಕಷ್ಟ
ದರ ಹೆಚ್ಚಳ ಅನಿವಾರ್ಯ

ದರ ಹೆಚ್ಚಳ ಅನಿವಾರ್ಯ

ಅಸಲಿ ಸಮಸ್ಯೆ ರುಪಾಯಿ ಅಪಮೌಲ್ಯವಾದರೂ ಕೇಂದ್ರ ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳಲಾಗದ ಕಾರಣ ರಾಜ್ಯಗಳ ಮೇಲೆ ಪರಿಣಾಮ ಹೆಚ್ಚಾಗೇ ಬೀರಿದೆ. ಆದರೆ, ರಾಜ್ಯ ಸರ್ಕಾರಗಳು ಸೆಸ್, ವ್ಯಾಟ್ ಇನ್ನಿತರ ಸ್ಥಳೀಯ ತೆರಿಗೆಗಳನ್ನು ಕಡಿಮೆ ಮಾಡುವ ಮೂಲಕ ಸ್ವಲ್ಪಮಟ್ಟಿಗೆ ರಿಲೀಫ್ ನೀಡಬಹುದು. ಇನ್ನೂ ಕಾಲ ಮಿಂಚಿಲ್ಲ..

ಜನರ ಅಭಿಪ್ರಾಯ

ಜನರ ಅಭಿಪ್ರಾಯ

ಬೇಕರಿ ವ್ಯಾಪಾರಿ ಎಸ್ ಮಂಜುನಾಥ್ ಅವರ ಅಭಿಪ್ರಾಯ, ಇಂಧನ ಬೆಲೆ ಏರಿಕೆಯೇ ಬಸ್ ಪ್ರಯಾಣ ದರ ಏರಿಕೆಗೆ ಕಾರಣ. ಜನ ಸಾಮಾನ್ಯರ ಸಂಬಳ ಏನು ಜಾಸ್ತಿಯಾಗಿಲ್ಲ. ನಮ್ಮಲ್ಲಿ ಕೆಲಸ ಮಾಡೋ ಹುಡುಗರು ಸಂಬಳ ಹೆಚ್ಚು ಮಾಡಿ ಎನ್ನುತ್ತಿದ್ದಾರೆ.

ಸಾಫ್ಟ್ ವೇರ್ ಉದ್ಯೋಗಿ ಅನೂಪ್

ಸಾಫ್ಟ್ ವೇರ್ ಉದ್ಯೋಗಿ ಅನೂಪ್

ಬೆಂಗಳೂರಿನಲ್ಲಿ ಬದುಕಲು ಎಷ್ಟು ಹಣ ಇದ್ದರೂ ಸಾಲದು. ಬಾಡಿಗೆ ದರ ಏರುತ್ತಲೇ ಇದೆ. ಬಸ್ ನಲ್ಲಿ ಓಡಾಗಿ ತಿಂಗಳಿಗೆ ಒಂದಿಷ್ಟು ದುಡ್ಡು ಉಳಿಸುವ ಯೋಜನೆಗೂ ಸರ್ಕಾರ ಕಲ್ಲು ಹಾಕಿದೆ. ದಿನಕ್ಕೆ 20 ರಿಂದ 26 ರು ಬಸ್ ದರ ಕೊಡುತ್ತಿದೆ. ಈಗ ಇದು ಇನ್ನೂ ಜಾಸ್ತಿ ಆಗಿರೋದು ಕಷ್ಟವಾಗುತ್ತಿದೆ.ಬಸ್ ಡೇ ಮಹತ್ವವೇ ಕಳೆದುಕೊಳ್ಳಲಿದೆ.

ನಾಗೇಂದ್ರ, ಕಾರ್ಮಿಕ

ನಾಗೇಂದ್ರ, ಕಾರ್ಮಿಕ

ದಿನಗೂಲಿ ಲೆಕ್ಕದಲ್ಲಿ ನಾವು ದುಡಿಯುವುದು, ಬಸ್ ದರ ಏರಿಕೆಯಾಗಿದೆ ದುಡ್ಡು ಜಾಸ್ತಿ ಕೊಡಿ ಎಂದರೆ ನಡೆದುಕೊಂಡು ಬನ್ನಿ ಎನ್ನುತ್ತಾರೆ ನಮ್ಮ ಮೇಸ್ತ್ರಿ, ಆಹಾರ ಸಾರಿಗೆ ಮನೆ ಇದು ಬಡವರಿಗೆ ಸರ್ಕಾರ ನೀಡಬೇಕಲ್ವ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+