ಓದುಗರ ಐದು ಅತ್ಯುತ್ತಮ ಅನಿಸಿಕೆಗಳು ಇಲ್ಲಿವೆ

* ಅಲ್ತಾಫ್ ಹುಸೇನ್
***
ಗಾಂಧೀ, ನೆಹರು ವೈಭವಿಕರಣದಲ್ಲಿ ವೀರ್ ಸಾವರ್ಕರ್, ಚಂದ್ರಶೇಖರ ಆಜಾದ್, ರಾಮ್ ಪ್ರಸಾದ್ ಬಿಸ್ಮಿಲ್ಲಾ, ಚಾಪೇಕರ್ ಸಹೋದರರು, ಲಾಲ್ ಬದದ್ದೂರ್ ಶಾಸ್ತ್ರೀ, ಸುಭಾಸ್ ಚಂದ್ರ ಬೋಸ್ ರಂತಹ ಅಪ್ಪಟ ದೇಶ ಭಕ್ತರು ಎಲೆ ಮರೆಯ ಕಾಯಿ' ಆದದ್ದು ಈ ದೇಶ ಕಂಡ ದೊಡ್ಡ ದುರಂತ. ಸ್ವಾತಂತ್ರ್ಯ ದೊರಕಿದ್ದು ಕೇವಲ ಅಹಿಂಸಾವಾದಿಗಳ ಹೋರಾಟದಿಂದ ಮಾತ್ರ ಎಂದು ಬಿಂಬಿಸಿದ್ದು ಈ ಎಲ್ಲ ಶ್ರೇಷ್ಠ ಜೀವಿಗಳಿಗೆ ಬಗೆದ ದ್ರೋಹ. ಇನ್ನಾದರೂ ಈ ದೇಶದ ತರುಣ ಜನಾಂಗಕ್ಕೆ ಬಾಡಿ' ತೋರಿಸಿ ಕೋಟಿ ಕೋಟಿ ದೋಚುವ ಸಿನಿಮಾ ಹೀರೊಗಳ ಬದಲು ಇವರೆಲ್ಲ ಆದರ್ಶ'ಗಳಾಗಲಿ ಎಂದು ಆಶಿಸೋಣವೇ? ಜೊತೆ ಜೊತೆಗೆ ಈ ಎಲ್ಲ ಮಹನೀಯರ ಬಗ್ಗೆ ತರುಣ ಜನಾಂಗಕ್ಕೆ ತಿಳಿಸಿ ಕೊಡುವ.
* ರಘು, ಬೆಂಗಳೂರು
***
ಹೌದು ನನಗು ಇದು ಸತ್ಯ ಎನಿಸುತ್ತಿದೆ ನಿಮ್ಮ ಅಭಿಪ್ರಾಯ... ರಾಧಿಕ ಒಳ್ಳೆ ನಟಿ. ನಮಗೆ ಸರ್ವ ಕನ್ನಡಿಗರ ಮನ ಗೆದ್ದ ತಂಗ್ಯವ್ವ. ಆದರೆ ಹೀಗೆ ಮಾಡಿದ್ದು ಸ್ವಲ್ಪ ಆ ಗೌರವಕ್ಕೆ ಮರ್ಯಾದೆ ತೇಗೆದ ಹಾಗಾಯಿತು. ಏನೇ ಆಗಲಿ ರಾಧಿಕ ಅಲ್ಲ ಯಾವುದೇ ಒಂದು ಹೆಣ್ಣು ತನ್ನ ಸಂಸಾರದಲ್ಲಿ ರಾಜಕೀಯ, ತಾನು ತನ್ನ ಮನೆಯಲ್ಲಿ ಪರಕೀಯ ಅನ್ನೋ ಹಾಗೆ ಹಾಡುವ ಸಂದರ್ಭ ಬರುವುದು ಸಹಜ. ಆದರೆ ರಾಧಿಕಾಗೆ ಅದು ಬಂದಿದೆ. ಕಾರಣ ಹೇಳಲು ದಾರಿಯಿಲ್ಲ. ನಮಗೆ ಅವಳ ಮೇಲೆ ಕರುಣೆಯಿದೆ ಆದರೆ ಹಾಗೆ ಕೋಪವು ಬರುತ್ತಿದೆ. ಮಾಡಿದ್ದುಣ್ಣೋ ಮಹಾರಾಯ.
* ಲಿಂಗರಾಜು
***
ಧರ್ಮ ಅಧರ್ಮ ಭೋದಿಸುವ ಸ್ವಾಮಿಜಿ ಅವರೇ, ನೀವು ಅದರ ತಿರುಳನ್ನು ಚೆನ್ನಾಗಿ ಅರಿತು ಹೇಳುತ್ತಿದ್ದಿರ? ಅಥವಾ ಅದನ್ನು ಬಿಟ್ಟು ರಾಜಕೀಯ ಮಾಡಬೇಕಂತ್ತಿದ್ದಿರಾ? ತಪ್ಪು ಯಾರೇ ಮಾಡಲಿ ಅದರ ಶಿಕ್ಷೆ ಅನುಭವಿಸ್ಬೇಕಾದ್ದು ಅನಿವಾರ್ಯ. ಒಂದು ವೇಳೆ ಎಡ್ಡಿ ಅವರಿಗೆ ನ್ಯಾಯ ಸಿಕ್ಕರೆ ಅದೆಲ್ಲ ಆ ಮೇಲಿನ ಮಾತು. ತಾವು ನಾಡಿಗೆ ದಾರಿ ದೀಪ ತೋರಿಸುವರು ಇ ರೀತಿ ವ್ಯಾಮೋಹ ಸರಿ ಅಲ್ಲ.
* ಜಿ.ಕೆ. ರಾಜ್
***
ಆಟೋ ದರ ಜಾಸ್ತಿ ಮಾಡೋದೇ ಆದರೆ ಕೆಳಗಿನ ಅ೦ಶಗಳನ್ನು ಪರಿಗಣಿಸಬೇಕು. 1) ಆಟೋದವರು ಕರೆದಲ್ಲಿ ಬರಲೇಬೇಕು, 2) ಹೆಚ್ಚಿನ ದರ ಕೇಳಬಾರದು, 3) ಜಾಸ್ತಿ ಹೊಗೆ (ಪೊಲ್ಯೂಷನ್) ಇರೋ ಆಟೋಗಳು ರಸ್ತೆ ಬರಬಾರದು.
* ಜೋಶಿ












Click it and Unblock the Notifications