ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿಗೆ ಬೇಲ್ ಸಿಗ್ಲಿಲ್ಲ, ಯಡ್ಡಿಗೂ ಟೈಮ್ ಸರಿಯಿಲ್ಲ

By Mahesh
|
Google Oneindia Kannada News

BS Yeddyurappa
"ಜನವರಿ ಮೂವತ್ತರವರೆಗೂ ಕಾದು ನೋಡುತ್ತೇನೆ.ಅಷ್ಟರೊಳಗಾಗಿ ತಮಗೆ ನಿಖರ ಭರವಸೆ ದೊರೆಯದಿದ್ದರೆ ನನ್ನ ದಾರಿ ನನಗೆ ಎಂದು ಯಡಿಯೂರಪ್ಪ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತೀನ್ ಗಡ್ಕರಿ ಅವರಿಗೆ ಗುಟ್ಟಾಗಿ ಹೇಳಿದ್ದಾರೆ" ಎಂಬ ಸುದ್ದಿಗೆ ಮತ್ತೆ ರೆಕ್ಕೆ ಪುಕ್ಕ ಬಲಿತುಕೊಳ್ಳುತ್ತಿದೆ.

ಗಾಲಿ ಜನಾರ್ದನ ರೆಡ್ಡಿಗೆ ಸತತ ನಾಲ್ಕನೇ ಬಾರಿ ಜಾಮೀನು ಸಿಗದಿರುವುದು ಹಾಗೂ ಆರೆಸ್ಸೆಸ್ ಪಡೆ ಎಚ್ಚರಿಕೆ ಎಲ್ಲವೂ ಯಡಿಯೂರಪ್ಪ ಅವರಿಗೆ ಭಾರಿ ಹಿನ್ನೆಡೆ ತಂದಿದೆ. ರೆಡ್ಡಿ ಇಲ್ಲದೆ ಶ್ರೀರಾಮುಲು ಆಗಲಿ, ಯಡಿಯೂರಪ್ಪ ಆಗಲಿ ಪಕ್ಷ ಕಟ್ಟೋದು ಕಷ್ಟ ಎಂಬ ಮಾತು ನಿಜವಾಗುತ್ತಿದೆ.[ವಿವರಗಳಿಗೆ ಓದಿ..]

ಈಗ ಯಡಿಯೂರಪ್ಪ ಹಾಗೂ ಬೆಂಬಲಿಗರ ತಲೆಯಲ್ಲಿ ಓಡುತ್ತಿರುವ ಐಡ್ಯಾ ಬಗ್ಗೆ ಸ್ವಲ್ಪ ವಿಷದಪಡಿಸೋಣ...

ಹೇಗಾದರೂ ಮಾಡಿ ಮತ್ತೆ ಸೀಎಂ ಗದ್ದುಗೆ ಏರಲು ಹರಸಾಹಸ ಪಡುತ್ತಿರುವ ಯಡಿಯೂರಪ್ಪ, ತನ್ನನ್ನು ಆ ಹುದ್ದೆಗೆ ಏರಿಸಿದರೆ, ಅಶೋಕ್ ಮತ್ತು ಶೆಟ್ಟರ್ ಅವರನ್ನು ಉಪಮುಖ್ಯಮಂತ್ರಿಯಾಗಿ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಹೈಕಮಾಂಡ್ ವರಿಷ್ಠರ ಮೇಲೆ ಒತ್ತಡ ಹೇರಲು ಯಡ್ಡಿ ಬಣ ನಿರ್ಧರಿಸಿದೆ. ಮುಖ್ಯಮಂತ್ರಿ ಸದಾನಂದಗೌಡರ ಮೇಲೆ ಪಕ್ಷದ ಬಹುತೇಕ ಶಾಸಕರಿಗೆ ವಿಶ್ವಾಸವಿಲ್ಲ. ಈ ಹಿನ್ನೆಲೆಯಲ್ಲಿ ನೂತನ ಶಾಸಕಾಂಗ ನಾಯಕನ ಆಯ್ಕೆಗಾಗಿ ಚುನಾವಣೆ ನಡೆಯಬೇಕು ಎಂದು ಈಗಾಗಲೇ ಹೈಕಮಾಂಡ್ ವರಿಷ್ಠರಿಗೆ ಯಡ್ಡಿ ಬಣ ಸಂದೇಶ ರವಾನಿಸಿದೆ.

ಲಿಂಗಾಯತ ಸಮುದಾಯದ ಶೆಟ್ಟರ್ ಗಿಂತ ಒಕ್ಕಲಿಗ ವರ್ಗದ ಅಶೋಕ್ ಅವರು ಉಪಮುಖ್ಯಮಂತ್ರಿಗಳಾಗುವಂತೆ ಮಾಡಿದರೆ ನೂತನ ನಾಯಕನ ಆಯ್ಕೆಗಾಗಿ ನಡೆಯುವ ಚುನಾವಣೆಯಲ್ಲಿ ಎಂಬತ್ತಕ್ಕೂ ಹೆಚ್ಚು ಶಾಸಕರು ತಮ್ಮ ಬಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಯಡ್ಡಿ ಬಣದ ಸದ್ಯದ ಲೆಕ್ಕಾಚಾರ.

ಈ ರೀತಿ ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆಯುವ ಮೂಲಕ ರಾಜ್ಯ ಬಿಜೆಪಿ ಹಾಗೂ ಸರ್ಕಾರವನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಯಡಿಯುರಪ್ಪ ಭಾವಿಸಿದ್ದಾರೆ. ವಿಧಾನ ಮಂಡಲ ಅಧಿವೇಶನದ ನಂತರ ಬಿಜೆಪಿ ಸರ್ಕಾರದ ಗತಿ ಬದಲಾಯಿಸುವುದಂತೂ ಗ್ಯಾರಂಟಿ.

English summary
With no option left former CM Yeddyurappa is trying to offer R Ashok DCM post and form government with his dissident. RSS is supporting Sadananda Gowda and Gali Janardhana Reddy still in jail which is major setback to Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X